ಸಚಿನ್ ದೇಶದ ಶ್ರೀಮಂತ ಕ್ರಿಕೆಟಿಗ

ಕ್ರಿಕೆಟ್ - 0 Comment
Issue Date : 01.11.2013

ಜಗತ್ತಿನ ಅತ್ಯಂತ ಶ್ರೇಷ್ಠ ಕ್ರಿಕೆಟಿಗ ಎನಿಸಿರುವ ಸಚಿನ್ ತೆಂಡೂಲ್ಕರ್ ಅವರು ದೇಶದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ.

 ಸಚಿನ್ ಅವರ ನಿವ್ವಳ ಆದಾಯವೂ  ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದೋನಿಗಿಂತ ಮೂರು ಪಟ್ಟು ಹೆಚ್ಚು ಎಂಬುದು ಗಮನಾರ್ಹ.

ಜಾಹೀರಾತುಗಳಲ್ಲಿ, ಜನಪ್ರಿಯತೆಯಲ್ಲಿ ಹೊಸ ಆಟಗಾರರ ಮುಂದೆ ಸಚಿನ್ ಡಲ್ ಹೊಡೆದಂತೆ ಕಂಡರೂ ಅವರ ವಾರ್ಷಿಕ ಆದಾಯದಲ್ಲಿ ಯಾವುದೇ ಕುಂಠಿತವಾಗಿಲ್ಲ. ಅಲ್ಲದೇ ಅವರು ಇತರ ಉದ್ಯಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಅವರನ್ನು ಹಣದಲ್ಲಿ ಸೈಡು ಹೊಡೆಯಲು ಹೊಸ ಆಟಗಾರರಿಗೆ ಇದುವರೆಗೆ ಸಾಧ್ಯವಾಗಿಲ್ಲ.

 

   

Leave a Reply