ಸಾಹಿತ್ಯ ಪರಿಷತ್ ವತಿಯಿಂದ ವಾಲ್ಮೀಕಿ ಜಯಂತಿ

ಕಾರ್ಯಕ್ರಮಗಳು - 0 Comment
Issue Date : 12.11.2014

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬೆಂಗಳೂರು ಘಟಕದ ವತಿಯಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಬೆಂಗಳೂರಿನ ರಾಮಾಯಣ ಪ್ರಸರಣ ಕೇಂದ್ರದ ಸುರೇಶ್‌ಕುಮಾರ್ ‘ಕಾವ್ಯವಾಯಿತು ಶಾಪ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಶೇಷಾದ್ರಿಪುರಂನ ಯಾದವಸ್ಮೃತಿಯ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಹಾಗೂ ಸಾಹಿತ್ಯ ಪರಿಷತ್‌ನ ಮಾರ್ಗದರ್ಶಕ ಚಂದ್ರಶೇಖರ ಭಂಡಾರಿ, ಪರಿಷತ್‌ನ ಬೆಂಗಳೂರು ಘಟಕದ ಅಧ್ಯಕ್ಷ ಬಾಬುಕೃಷ್ಣ ಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

   

Leave a Reply