ಸೇವಾಭಾರತಿ ಟ್ರಸ್ಟ್

ಶಿವಮೊಗ್ಗ - 0 Comment
Issue Date : 04.03.2014

ಸೇವಾಭಾರತಿ ಟ್ರಸ್ಟ್(ರಿ) ತೀರ್ಥಹಳ್ಳಿ ಹಿಂದು ಸೇವಾ ಪ್ರತಿಷ್ಠಾನದ ಸೇವಾವ್ರತಿಗಳ ಮೂಕ ಪಶ್ಚಿಮ ಘಟ್ಟದ ಗ್ರಾಮೀಣ ಪ್ರದೇಶಗಳಾದ ಕುಂದಾಪುರ ತಾಲೂಕಿನ ಅಮಾಸ್ಯೆಬೈಲು, ಹೊಸನಗರ ತಾಲೂಕಿನ ನಿಟ್ಟೂರು, ತೀರ್ಥಹಳ್ಳಿ ತಾಲೂಕಿನ ಆರಗ, ತೀರ್ಥಹಳ್ಳಿ, ಆಗುಂಬೆ, ಬಿದರಗೋಡು, ನರಸಿಂಹರಾಜಪುರ ತಾಲೂಕಿನ ನರಸಿಂಹರಾಜಪುರ, ಕೊಪ್ಪ ತಾಲೂಕಿನ ಅಗಳಗಂಡಿ, ಶೃಂಗೇರಿ ತಾಲೂಕಿನ ಕಿಗ್ಗಗಳಲ್ಲಿ ಸಂಸ್ಕಾರ ಪ್ರಧಾನ ಅನೇಕ ಸೇವಾ ಚಟುವಟಿಕೆಗಳನ್ನು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.

ಮುಖ್ಯವಾಗಿ ದುರ್ಬಲ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರು ಮತ್ತು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಸೇವಾ ಚಟುವಟಿಕೆಗಳನ್ನು ಯೋಜಿಸಲಾಗಿದೆ. ಮಹಿಳೆಯರ ಮಾನಸಿಕ ಒತ್ತಡ ನೀಗಿಸುವ ದೇಶ ಸಂಸ್ಕೃತಿಗಳ ಬಗೆಗೆ ಅರಿವು ಮೂಡಿಸುವ ಮತ್ತು ಮಕ್ಕಳಲ್ಲಿ ಉತ್ಸಾಹ ಕ್ರಿಯಾಶೀಲತೆಯನ್ನು ಉದ್ದೀಪನಗೊಳಿಸುವ ದೇಶಭಕ್ತಿ ಮತ್ತು ಉತ್ತಮ ಸಂಸ್ಕಾರ ಮೂಡಿಸುವಂತ ವಿಷಯಗಳಿಗೆ ಹೆಚ್ಚಿನ ಒತ್ತು ಕೊಟ್ಟು ಕಾರ್ಯಯೋಜನೆ ರೂಪಿಸಲಾಗಿದೆ.

ಸೇವಾಚಟುವಟಿಕೆಗಳಲ್ಲಿ ಶಿಕ್ಷಣ, ಸಂಸ್ಕಾರ, ಆರೋಗ್ಯ ಮತ್ತು ಸ್ವಾವಲಂಬನೆ ಮುಂತಾದ ವಿಷಯಗಳು ಒಳಗೊಂಡಿದೆ.


1) ಶಿಕ್ಷಣ :- ಶಿಕ್ಷಣದಲ್ಲಿ ಮಾದರಿ ಶಿಶುಮಂದಿರ ಮತ್ತು ಮನೆಪಾಠ ಒಳಗೊಂಡಿದೆ.
ಅ) ಮಾದರಿ ಶಿಶುಮಂದಿರ:
ಆ)ಮನೆಪಾಠ : ಸೇವಾವ್ರತಿಗಳು ಹಿಂದುಳಿದ ದುರ್ಬಲ ವರ್ಗಗಳ ಮಕ್ಕಳಿಗೆ, ಕೂಲಿ ಕಾರ್ಮಿಕ ಮಕ್ಕಳಿಗೆ, ಅಲೆಮಾರಿ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ಏಳನೇ ತರಗತಿವರೆಗೆ ಪಾಠವನ್ನು ನಿತ್ಯ ತಮ್ಮ ವಸತಿಯಲ್ಲೇ ಉಚಿತವಾಗಿ ಮಾಡುತ್ತಾರೆ.

2) ಸಂಸ್ಕಾರ :- ಸಂಸ್ಕಾರದಲ್ಲಿ ಬಾಲಗೋಕುಲ, ಕಿಶೋರ ಭಾರತಿ, ಮಾತೃಮಂಡಳಿ, ಭಜನಾ ಕೇಂದ್ರ ಮುಂತಾದ ಚಟುವಟಿಕೆಗಳು ಒಳಗೊಂಡಿವೆ.
ಅ) ಬಾಲಗೋಕುಲ : ಸೇವಾವ್ರತಿಗಳು ತಮ್ಮ ಕಾರ್ಯವ್ಯಾಪ್ತಿಯ ಅಂಗನವಾಡಿಗಳಿಗೆ ನಿಯಮಿತ ದಿನದಂದು ಭೇಟಿಯಿತ್ತು ಅಲ್ಲಿನ ಮಕ್ಕಳಿಗೆ ಸ್ವಾತಂತ್ರ್ಯಯೋಧರ, ದೇಶಭಕ್ತರ ಕಥೆಗಳು, ಪೌರಾಣಿಕ ಕಥೆಗಳನ್ನು ಹೇಳುವುದು. ದೇಶಭಕ್ತಿ ಗೀತೆಗಳು, ಭಜನೆ, ಸ್ತೋತ್ರ, ಶ್ಲೋಕ, ಸುಭಾಷಿತಗಳನ್ನು ಹೇಳಿಕೊಡುವುದು. ಚಿತ್ರರಚನೆ ಕಲಿಸುವುದು, ಆಟ ಆಡಿಸುವುದು ಮುಂತಾದ ಚಟುವಟಿಕೆಗಳನ್ನು ನಡೆಸುವರು.
ಆ) ಕಿಶೋರಭಾರತಿ : ಐದನೇ ತರಗತಿಗೆ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಸೇರಿಸಿ ಮೇಲಿನ ಚಟುವಟಿಕೆಗಳ ಜೊತೆಗೆ ಯೋಗಾಸನ, ಮೋಜಿನ ಗಣಿತ, ಭಗವದ್ಗೀತೆ ಕಂಠಪಾಠ ಹಾಗೂ ಚರ್ಚೆ ಮುಂತಾದವುಗಳನ್ನು ಜೋಡಿಸಿದೆ.
ಇ) ಮಾತೃಮಂಡಳಿ : ತಮ್ಮ ಕಾರ್ಯವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಮಹಿಳೆಯರನ್ನು ನಿಯಮಿತ ದಿನದಂದು ಒಂದೆಡೆ ಸೇರಿಸಿ ಹಾಡು,ಹಬ್ಬಗಳ ಆಚರಣೆ ರಾಮಾಯಣ, ಮಹಾಭಾರತದ ಕಥೆಗಳ ಅವಲೋಕನ ನಡೆಸುವರು. ಯೋಗಾಸನಗಳನ್ನೂ ಹೇಳಿಕೊಡುವರು.
ಈ) ಭಜನಾಕೇಂದ್ರ : ಸರತಿಯಂತೆ ಒಂದೊಂದು ದಿನ ಒಬ್ಬೊಬ್ಬರ ಮನೆಯಲ್ಲಿ ಗ್ರಾಮದ ಮಹಿಳೆಯರು ಸೇರಿ ಭಜನೆ ಮಾಡುವರು. ಜೊತೆಗೆ ಭಗವದ್ಗೀತೆ, ಸೌಂದರ್ಯಲಹರಿ ಅಭ್ಯಾಸ ಮಾಡುವರು.

3) ಆರೋಗ್ಯ :- ಶಾಲೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿನಿಲಯಗಳಲ್ಲಿ ನಿತ್ಯ ಯೋಗಾಸನ ತರಬೇತಿ.

4) ಸ್ವಾವಲಂಬನೆ :- ಹೊಲಿಗೆ ತರಬೇತಿ.

ನಿಯಮಿತವಾಗಿ ನಡೆಸುವ ಈ ಚಟುವಟಿಕೆಗಳ ಜೊತೆಗೆ ಶಾಲೆಗಳ ಮಧ್ಯಾವಧಿರಜೆ, ಬೇಸಿಗೆ ರಜೆಗಳಲ್ಲಿ ಏಳು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರ, ಸಂಸ್ಕೃತ ಸಂಭಾಷಣಾ ಶಿಬಿರ, ಯೋಗಾಸನ ಶಿಬಿರಗಳನ್ನು ನಡೆಸುವರು. ಸಂಸ್ಕೃತ ಸಂಭಾಷಣಾ ಮತ್ತು ಯೋಗಾಸನ ಶಿಬಿರಗಳಲ್ಲಿ ವಯಸ್ಕರೂ ಪಾಲ್ಗೊಳ್ಳಬಹುದು. ಜೊತೆಗೆ ಮಾತೆಯರ ಶಿಬಿರ, ಬೇದ ಭಾವ ಅಳಿಸುವ ಎಲ್ಲಾ ವರ್ಗದ ಮಹಿಳೆಯರೂ ಸೇರಿ ವರ್ಷಕ್ಕೊಮ್ಮೆ ಸಾಮೂಹಿಕವಾಗಿ ಮಾಡುವ ದೀಪಪೂಜನಾ, ಭಾರತ ಮಾತೆ ಪೂಜೆ, ರಕ್ಷಾಬಂಧನಾ, ಸಂಕ್ರಾಂತಿ ಉತ್ಸವಗಳನ್ನು ಆಚರಿಸುವರು. ಕೃಷ್ಣವೇಷ ಸ್ಪರ್ಧೆ ಏರ್ಪಡಿಸುವರು.

   

Leave a Reply