ಹತ್ಯೆಯನ್ನು ಸಮರ್ಥಿಸಿಕೊಳ್ಳುವವರು

ಪ್ರಚಲಿತ - 0 Comment
Issue Date : 19.04.2015

ಕೆಲವರ ವಿಕೃತ ಮನಸ್ಥಿತಿಯ ಬಗ್ಗೆ ಅಧ್ಯಯನ ಮಾಡಿದರೆ ಅಚ್ಚರಿಯಾಗಬಹುದು. ಅಂಥವರ ಮನಸ್ಸಿನಲ್ಲಿ ಆ ಮಟ್ಟಿನ ಕ್ರೌರ್ಯ ಹುಟ್ಟಿದ್ದು ಯಾಕೆಂದು ಪ್ರಶ್ನೆ ಏಳಬಹುದು. ತಮ್ಮ ಪ್ರತಿಯೊಂದು ಕೆಲಸವನ್ನೂ ಸಮರ್ಥಿಸಿಕೊಳ್ಳುವ ಅವರೆಲ್ಲ ತಾವು ಮಾಡಿದ ಹತ್ಯೆಯನ್ನೂ ಸರಿ ಎಂದೇ ವಾದಿಸುತ್ತಾರೆ. ಅದರಲ್ಲಿ ತಪ್ಪಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಅವರಲ್ಲಿರುವುದಿಲ್ಲ. ಈ ಕುರಿತಂತೆ ಇತ್ತೀಚೆಗೆ ಆಸ್ಟ್ರೇಲಿಯದ ಮೆಲ್ಬರ್ನ್‌ನಲ್ಲಿ ನಡೆದ ಸಂಶೋಧನೆಯೊಂದು ಅಧ್ಯಯನ ನಡೆಸಿದೆ. 

ಈ ಸಂಶೋಧನೆಯಿಂದ ತಿಳಿದು ಬಂದ ಸಂಗತಿಯೆಂದರೆ ಕೆಲವರ ಮೆದುಳಿನ ಸ್ವರೂಪವೇ ವಿಕೃತಿಯನ್ನು ಪ್ರೋತ್ಸಾಹಿಸುವಂತಿರುತ್ತದೆಯಂತೆ. ಭಾವನೆಗಳನ್ನು ಸೃಷ್ಟಿಮಾಡುವ ಭಾಗಗಳು ನಿಷ್ಕ್ರಿಯಗೊಂಡು, ಹಿಂಸೆ, ಕ್ರೌರ್ಯವನ್ನು ಪ್ರಚೋದಿಸುವ ಅಂಶಗಳು ಹೆಚ್ಚು ಚಟುವಟಿಕೆಯಿಂದಿರುತ್ತವೆಯಂತೆ. ನೈತಿಕತೆಯನ್ನು ಉದ್ದೀಪನಗೊಳಿಸುವ ಲಾಟರಲ್ ಆರ್ಬಿ ಟೋಫ್ರಂಟಲ್ ಕಾರ್ಟೆಕ್ಸ್ ಎಂಬ ಭಾಗವು ಹೆಚ್ಚು ಚಟು ವಟಿಕೆಯಿಂದಿದ್ದರೆ ಮನುಷ್ಯ ಮಾನವೀಯ ಗುಣವುಳ್ಳ ವನಾಗಿರುತ್ತಾನೆ. ಆ ಭಾಗ ಚಟುವಟಿಕೆದ ಇರದಿದ್ದರೂ ಮನುಷ್ಯ ಕ್ರೂರಿಯಾಗುತ್ತಾನೆ.
ಮನುಷ್ಯ ಬದುಕುತ್ತಿರುವ ವಾತಾವರಣ ಸಹ ಅವನ ಮೆದುಳು ಯಾವ ಕೆಲಸದೆಡೆಗೆ ಹೆಚ್ಚು ಒತ್ತುಕೊಡಬೇಕು ಎಂಬುದನ್ನು ಕಲಿಸುತ್ತದಾದ್ದರಿಂದ ಪರಿಸರವೂ ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಟುಕನ ಮನೆಯ ಗಿಣಿ ಕೊಲ್ಲು, ಹೊಡಿ ಎಂದರೆ ಸಜ್ಜನನ ಮನೆಯ ಗಿಣಿ ಬನ್ನಿ, ಕುಳಿತುಕೊಳ್ಳಿ… ಎನ್ನುತ್ತದಲ್ಲವೇ? ಹಾಗೆಯೇ ನಮ್ಮ ಮೆದುಳೂ ನಮ್ಮ ಪರಿಸರದ ಪ್ರಭಾವದಿಂದಲೇ ಒಳಿತಿಗೋ, ಕೆಡುಕಿಗೂ ಮಹತ್ವ ನೀಡತೊಡಗುತ್ತದೆ.

   

Leave a Reply