ಹಿಂದೂ ದ್ವೇಷ; ನಾನಾ ವೇಷ

ಲೇಖನಗಳು - 0 Comment
Issue Date :

-ಸಂತೋಷ್ ತಮ್ಮಯ್ಯ

ಸಿಕ್ಕಸಿಕ್ಕಲ್ಲಿ ಬಾಂಬು ಸ್ಪೋಟಿಸಿ ಅನಂತರ ಅದರ ಹೊಣೆ ಹೊತ್ತುಕೊಳ್ಳುತ್ತಿದ್ದ  ಸಿಮಿ ಎಂಬ ಉಗ್ರವಾದಿ ಸಂಘಟನೆ ನಿಷೇಧವಾದ ನಂತರ ದೇಶದಲ್ಲಿ ಮುಸಲ್ಮಾನ ಸಂಘಟನೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು. ಸಿಮಿ ನಿಷೇಧವೇನೋ ಆಯಿತು. ಆದರೇನು? ವಿಷ ನಿಷೇಧವಾಗಲಿಲ್ಲ. ಅದು ಹಲವಾರು ರೂಪಗಳಲ್ಲಿ ಹುಟ್ಟಿಕೊಂಡಿತು. ಸಿಮಿ ನಿಷೇಧವಾದಾಗ ಅದರ ಪ್ರಮುಖರು ಹಲವಾರು ಸಂಘಟನೆಗಳಲ್ಲಿ ಚದುರಿಹೋದರು. ಕೆಲವರು ಹೊಸ ಸಂಘಟನೆಯನ್ನು ಕಟ್ಟಿದರು. ಅದರ ನಿಷೇಧದ ಅನಂತರ  ಮತಾಂಧರು ಒಂದು ಪಾಠವನ್ನು ಕಲಿತರು ಎಂದೇ ಹೇಳಬೇಕು. ಅದೆಂದರೆ ಏಕಾಏಕಿ ಬಾಂಬುಸ್ಪೋಟಿಸುವ ಬದಲು ಸಾಮಾಜಿಕ ಮುಖವನ್ನು ಹೊತ್ತು ಕಾರ್ಯಕ್ಕಿಳಿಯುವುದು. ಹಾಗೆ ಕಾರ್ಯಕ್ಕಿಳಿಯಲು ಹೊರಟವರು ಕೆಲವರಾದರೆ ಇನ್ನು ಕೆಲವರಿಗೆ ಬಾಂಬಿನ ನಂಟನ್ನು ಬಿಡಲಾಗಲಿಲ್ಲ. ಅವರೆಲ್ಲರೂ  ಮುಜಾಹಿದ್ದೀನ್ ಸಂಘಟನೆಗಳಿಗೆ ಸೇರಿದರು. ಏನೇ ಆದರೂ ಸಿಮಿಯ ಸ್ಥಾನವನ್ನು ತುಂಬಬೇಕಿತ್ತು. ಅದು ದೇಶಾದ್ಯಂತ ವ್ಯಾಪಿಸಬೇಕಿತ್ತು. ಅದಕ್ಕಾಗಿ ಅದು ಹಲವಾರು ರಾಜ್ಯಗಳಲ್ಲಿ ಹಲವಾರು ಹೆಸರುಗಳಿಂದ ಸಂಘಟನೆಗಳನ್ನು ಸ್ಥಾಪಿಸಿತು. ಹೀಗೆ ಸ್ಥಾಪನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ. ಜಾಗತಿಕವಾಗಿ ಮುಸಲ್ಮಾನರಲ್ಲಿ ಭ್ರಾತೃತ್ವವನ್ನು ತರುವ ಉದ್ದೇಶವನ್ನು ಹೊಂದಿರುವ  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಡೀ ದೇಶದಲ್ಲಿ ವ್ಯಾಪಿಸಿ ಪ್ರಬಲ ಇಸ್ಲಾಮಿಕ್ ಸಂಘಟನೆಯೆಂದು ಹೆಸರು ಪಡೆದಿದೆ. ಒಂದು ಅಂದಾಜಿನ ಪ್ರಕಾರ ದೇಶಾದ್ಯಂತ ಅದಕ್ಕೆ 80,000 ಸದಸ್ಯರಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಈ ಸಂಖ್ಯೆ ಅವಿಭಜಿತ ದ.ಕನ್ನಡ ಜಿಲ್ಲೆಯಲ್ಲಿ ಹೊಂದಿರುವ ಸದಸ್ಯರ ಸಂಖ್ಯೆಗಿಂತಲೂ ಕಡಿಮೆ ಎಂಬುದು ವಾಸ್ತವ. ಮುಸಲ್ಮಾನರ ಬಡತನ, ನಿರುದ್ಯೋಗ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ವಿರುದ್ಧ ಪಿ.ಎಫ್.ಐ  ಹೋರಾಡುತ್ತದೆ ಎಂದು ಮುಸಲ್ಮಾನ ಮುಖಂಡರು ಹೇಳಿಕೊಳ್ಳುತ್ತಾರೆ. ಆದರೆ ಪಿ.ಎಫ್.ಐ ದೇಶಾದ್ಯಂತ  ಹಿಂದುಗಳ ವಿರುದ್ಧವಂತೂ ಹೋರಾಡುತ್ತಲೇ ಬಂದಿದೆ. ಅದರದ್ದು ಹತ್ತಾರು ಮುಖಗಳು, ನೂರಾರು ಉದ್ದೇಶಗಳು. ಆದರೆ ಎಲ್ಲಾ ಉದ್ದೇಶಗಳೂ ಹಿಂದುವನ್ನು ಹೇಗೆ ಮಟ್ಟಹಾಕಬೇಕು ಎನ್ನುವತ್ತಲೇ ಇರುತ್ತವೆ.  ಆಯಾ ರಾಜ್ಯಕ್ಕೆ ತಕ್ಕಂತೆ ಅದು ವೇಷ ಬದಲಿಸುವುದರಲ್ಲೂ ಎತ್ತಿದ ಕೈ. ಕೆಲವು ರಾಜ್ಯಗಳಲ್ಲಿ  National Development Front ಅಂದರೆ ಎನ್.ಡಿ.ಎಫ್ ಹೆಸರಿನಿಂದ, ತಮಿಳುನಾಡಿನಲಿ Manitha Neethi Pasarai ಹೆಸರಿನಿಂದ, ಗೋವಾದಲ್ಲಿ ಸಿಟಿಜನ್ಸ್ ಫೋರಂ, ರಾಜಸ್ಥಾನದಲ್ಲಿ ಕಮ್ಯುನಿಟಿ ಸೋಶಿಯಲ್ ಅಂಡ್ ಎಜುಕೇಶನ್ ಸೊಸೈಟಿ, ಪ.ಬಂಗಾಳದಲ್ಲಿ ನಾಗರಿಕ್ ಅಧಿಕಾರ್ ಸುರಕ್ಷಾ ಸಮಿತಿ, ಮಣಿಪುರದಲ್ಲಿ ಲಿಲೋಂಗ್ ಸೋಶಿಯಲ್ ಫೋರಂ, ಆಂಧ್ರ ಪ್ರದೇಶದಲ್ಲಿ ಅಸೋಸಿಯೇಶನ್  ಆಫ್ ಸೋಷಿಯಲ್ ಜಸ್ಟೀಸ್ ಮುಂತಾಗಿ ನಾನಾ ವೇಷಗಳನ್ನು ಹೊತ್ತು ಕಾರ್ಯಕ್ಕಿಳಿಯಿತು.

ಕರ್ನಾಟಕದಲ್ಲಿ ಪಿಎಫ್‌ಐ Karnataka Forum for Dignity (KFD) ಹೆಸರಿನಿಂದ ಕಾರ್ಯಕ್ಕಿಳಿಯಿತು. ಹಫ್ತಾವಸೂಲಿ, ಗೂಂಡಾಗಿರಿ, ಅಪಹರಣ, ಕೊಲೆ, ಜೈಲುಭರೋ ಹೆಸರಿನಲ್ಲಿ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡುವುದು, ಕೋಮು ಗಲಭೆಗಳನ್ನು ಸೃಷ್ಟಿಸುವುದು ಇತ್ಯಾದಿ ಚಟುವಟಿಕೆಗಳನ್ನು ಕರ್ನಾಟಕದಲ್ಲಿ ಮಾಡುತ್ತಾ ಬಂದಿರುವ ಕೆ.ಎಫ್.ಡಿ  ಆರಂಭದಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ  ತನ್ನ ಚಟುವಟಿಕೆಗಳನ್ನು ವಿಸ್ತಾರ ಮಾಡುವತ್ತ ಗಮನ ಹರಿಸಿತು. ಅದರ ಪರಿಣಾಮವಾಗಿ ಕೊಡಗಿನ ಸೋಮವಾರಪೇಟೆಯಲ್ಲಿ ಭಯೋತ್ಪಾದಕ ತರಬೇತಿಯನ್ನು ನೀಡಲಾರಂಬಿಸಿತು. ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಕೋಮುಗಲಭೆೆಯನ್ನು ವ್ಯವಸ್ಥಿತವಾಗಿ ಮಾಡಿ ಮುಗಿಸಿತ್ತು. ಹುಣಸೂರಿನ ಇಬ್ಬರು ಶಾಲಾ ಮಕ್ಕಳನ್ನು ಅಪಹರಿಸಿ ಕೊಲೆ ಮಾಡಿತು. ಅಷ್ಟಾಗುವ ಹೊತ್ತಿಗೆ ರಾಜ್ಯದಲ್ಲಿ ಕೆ.ಎಫ್.ಡಿಯನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬರತೊಡಗಿತು. ಅದರ ನಂತರ ಕೆ.ಎಫ್.ಡಿ ತನ್ನ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. ಆದರೇನು? ಪಿ.ಎಫ್.ಐ ಹೆಸರಿನಲ್ಲಿ ‘ಚಳುವಳಿ‘ ಗಳು ಜೋರಾಗಿ ನಡೆಯುತ್ತಿವೆ. ಅಳಿಯ ಅಲ್ಲ ಮಗಳ ಗಂಡ ಎನ್ನುವಂತೆ ಪಿ.ಎಫ್.ಐ.ಯೇ ಕೆ.ಎಫ್.ಡಿಯ ಕೆಲಸವನ್ನು ಮುಂದುವರಿಸುತ್ತಿದೆ.

 ಮುಖ್ಯವಾಗಿ ಪಿ.ಎಫ್.ಐ  ಮಾನವ ಹಕ್ಕುಗಳ ಹಣೆಪಟ್ಟಿಯೊಂದಿಗೆ  ವೇದಿಕೆಗಳನ್ನು ಸೃಷ್ಟಿಸಿಕೊಂಡಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುತ್ತಾರಲ್ಲಾ ಹಾಗೆ. ಅದು ಬೋಧಿಸುವ ಮಾನವ ಹಕ್ಕುಗಳಾದರೂ ಎಂಥದ್ದೆಂದರೆ ಗೋದ್ರಾದಲ್ಲಿ ಮುಸಲ್ಮಾನರನ್ನು ಕೊಲ್ಲಲಾಯಿತು ಎಂಬುದರಿಂದ ಹಿಡಿದು ಇರಾಕಿನಲ್ಲಿ ಸದ್ದಾಂ ಹುಸೇನನನ್ನು  ಸರ್ವಾಧಿಕಾರಿ ದೇಶ ಅಮೆರಿಕಾ ಗಲ್ಲಿಗೇರಿಸಿತು ಎಂಬ ಅದೇ ಹಳಸಲು ಭಾಷಣ ಮಾಡುವ ಮಾನವ ಹಕ್ಕುಗಳು. ಬಾಂಬು ಇಡುವಷ್ಟೇ ಲಾಭಕರವಾದ ಕೆಲವು ಮಾರ್ಗಗಳನ್ನು ಪಿ.ಎಫ್.ಐ ಕಂಡುಕೊಂಡಿದೆ. ರಾಜೇಂದ್ರ ಸಾಚಾರ್ ವರದಿ ಮತ್ತು ರಂಗನಾಥ ಮಿಶ್ರಾ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎನ್ನುವ ಕೂಗನ್ನು ದೇಶಾದ್ಯಂತ ಎಬ್ಬಿಸಿದ್ದೇ ಈ ಪಿ.ಎಫ್.ಐ. ದೇಶಾದ್ಯಂತ  ಮುಸಲ್ಮಾನರಿಗೆೆ ‘ಸ್ಕೂಲ್ ಚಲೋ’ ಅಭಿಯಾನ, ವರದಕ್ಷಿಣೆ ವಿರೋಧಿ ಚಳವಳಿಗಳನ್ನು ಮಾಡುತ್ತಾ ಮಾಡುತ್ತಾ ಪಿ.ಎಫ್.ಐಗೆ ದೇಶದ ಪ್ರಮುಖ ಸಾಮಾಜಿಕ ಚಳುವಳಿಕಾರನ ಪಟ್ಟ ಸಿಕ್ಕೇಬಿಟ್ಟಿತು. ಇದು ಯೋಗ ತರಗತಿಗಳನ್ನೂ ನಡೆಸಿತು! ‘ಎಜುಕೇಶನ್ ಫಾರ್ ಎಂಪ್ಲಾಯ್‌ಮೆಂಟ್’ ಎಂದು  ಹೋರಾಟ ನಡೆಸಿತು. ಯುಪಿಎ ಸರಕಾರ ಆ ಹೋರಾಟಕ್ಕೆ ಎಷ್ಟೊಂದು ಬೆಲೆ ಕೊಟ್ಟಿತು ಎಂದರೆ, ಪ್ರತ್ಯೇಕ ಮುಸಲ್ಮಾನ ವಿಶ್ವವಿದ್ಯಾಲಯವನ್ನೇ ತೆರೆಯುತ್ತೇವೆ ಎಂದಿತು. ಪರಿಸರ ಹೋರಾಟಗಾರನ ವೇಷ ಹಾಕಿತು, ಆರೋಗ್ಯ ರಕ್ಷಣೆ ಎಲ್ಲರ ಹೊಣೆ ಎಂದು ಘೋಷಣೆ ಹಾಕಿತು. ಎಲ್ಲದಕ್ಕೂ ಕೇಂದ್ರ ಸರಕಾರ ಬಗ್ಗಿತು. ವಿಶೇಷವೆಂದರೆ ಪಿ.ಎಫ್.ಐ.ನ ಎಲ್ಲಾ ಬೇಡಿಕೆಗಳನ್ನು ಸರಕಾರ ಮುಸಲ್ಮಾನರ ಆವಶ್ಯಕತೆ ಎಂದೇ ಪರಿಗಣಿಸಿತು. ಅಂದರೆ ಸರಕಾರ ಹಿಂದುಗಳ ಕೈಯಿಂದ ಕಿತ್ತುಕೊಂಡು ಅವರ ಕಣ್ಣೆದುರೇ  ಸವಲತ್ತುಗಳನ್ನು ಮುಸಲ್ಮಾನರಿಗೆ ಕೊಟ್ಟಿತು.

 ಇಂಥಾ  ಪಿ.ಎಫ್.ಐ ಹೋರಾಟಗಳನ್ನು, ಮೆರವಣಿಗೆಗಳನ್ನು ನಡೆಸುತ್ತಾ ಇದ್ದುಬಿಟ್ಟಿತೇ? ಖಂಡಿತಾ ಇಲ್ಲ. ಮುಸ್ಲಿಂ ಮತೀಯ ಹೆಸರಿನ ಸಂಘಟನೆ ರಕ್ತ ಹರಿಸದೇ ಬದುಕಲಾರದು ಎಂಬುದನ್ನು ಆಗಾಗ್ಗೆ  ಸಿದ್ಧಪಡಿಸುತ್ತಾ ಬಂತು. ಕೇರಳದ ಕಣ್ಣೂರಿನಲ್ಲಿ ಭಯೋತ್ಪಾದನಾ ತರಬೇತಿ ಶಿಬಿರವನ್ನು ನಡೆಸಿತು. ಪೊಲೀಸರು ಆ ಶಿಬಿರದ ಮೇಲೆ ದಾಳಿ ಮಾಡಿದಾಗ ನಾಡ ಬಾಂಬುಗಳು, ತಲವಾರುಗಳು, ಕಚ್ಚಾ ಬಾಂಬುಗಳು, ತಾಲೀಬಾನ್ ಪರವಾದ ಕರಪತ್ರಗಳು, ವಿದೇಶಿ ಫೋನ್ ನಂಬರುಗಳು ಪತ್ತೆಯಾದವು. ಕೇರಳದಲ್ಲಿ ಆರೆಸ್ಸೆಸ್ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಹಲವು ಕಾರ್ಯಕರ್ತರ ಹತ್ಯೆಗಳನ್ನು ಆರಂಭಿಸಿತು. ಎಸ್‌ಎಂಎಸ್ ಮೂಲಕ ಸುಳ್ಳು ಸುದ್ದಿಗಳು ಮತ್ತು ಹಿಂದೂ ದ್ವೇಷದ ಸುದ್ಧಿಗಳನ್ನು ಹರಡಲು ತೊಡಗಿತು. ಪಾಠ ಮಾಡಿದ ಮೇಷ್ಟ್ರ ಕೈಯನ್ನೇ ಕತ್ತರಿಸಿತು.

 ಇಂಥ ಪಿ.ಎಫ್.ಐ ಕರಾವಳಿ ಕರ್ನಾಟಕದಲ್ಲಿ ಪ್ರಬಲವಾಗಿದೆ. ಕರಾವಳಿಯ ಸಕಲ ಮತಾಂಧ ಆಟಾಟೋಪಗಳಿಗೂ ಬೆನ್ನೆಲುಬು ಈ ಪಿ.ಎಫ್.ಐ. ಏಳು ವರ್ಷದ ಹಿಂದೆ ದೇಶದ ಆಯ್ದ ನಾಲ್ಕು ನಗರಗಳಲ್ಲಿ ‘ಫ್ರೀಡಂ ಪೆರೇಡ್’ ಹೆಸರಿನಲ್ಲಿ ರ‌್ಯಾಲಿಗಳನ್ನು ಪಿ.ಎಫ್.ಐ ಆಯೋಜಿಸಿತ್ತು.  ಅದರಲ್ಲಿ ಕರ್ನಾಟಕದ ಎರಡು  ಸ್ಥಳಗಳಿದ್ದವು. ಒಂದು ಮಂಗಳೂರು ಮತ್ತೊಂದು ಉಡುಪಿ. ಕರಾವಳಿಯಲ್ಲಿ ರಕ್ತ ಹರಿಸಲು ಅಂದೇ ಅಡಿಗಲ್ಲು ಬಿದ್ದಿತ್ತು.

 2008ರ ಆಗಸ್ಟ್ 15. ಮಂಗಳೂರಿನಲ್ಲಿ ಫ್ರೀಡಂ ಪೆರೇಡ್ ಎಂಬ ಹೆಸರಿನಲ್ಲಿ ಪಿ.ಎಫ್.ಐ  ಶಕ್ತಿ ಪ್ರದರ್ಶನವನ್ನು ನಡೆಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಂಗಳೂರು ನಗರಾದ್ಯಂತ ಸೈನಿಕರಂತೆ ಸಮವಸ್ತ್ರ ಧರಿಸಿದ ಪಿ.ಎಫ್.ಐ. ಯುವಕರು ಪಥಸಂಚಲನ ನಡೆಸಿ ಮಂಗಳಾ ಸ್ಟೇಡಿಯಂನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸುವ ಉದ್ದೇಶವಿತ್ತು. ಹಿಂದೂ ಸಂಘಟನೆಗಳ ವಿರೋಧದಿಂದ ನಗರದ ರಸ್ತೆಗಳಲ್ಲಿ ಪಥಸಂಚಲನ ನಡೆಸಲು ಆಡಳಿತ ಅವಕಾಶವನ್ನು ಕೊಡಲಿಲ್ಲ. ಆದರೆ ಮಂಗಳಾ ಸ್ಟೇಡಿಯಂನಲ್ಲಿ ಕಾರ್ಯಕ್ರಮ-ಸಂಚಲನ ಎಲ್ಲವೂ ಸಾಂಗವಾಗಿ ನೆರವೇರಿದವು. ‘ಶಹೀದ್ ಭಗತ್ ಸಿಂಗ್ ವೇದಿಕೆ ಸಿದ್ಧಗೊಂಡಿತು. ಹೊರಜಿಲ್ಲೆಗಳಿಂದ ಮಂಗಳೂರಿಗೆ ಉದ್ದಗಡ್ಡದವರು, ಉರ್ದು ಮಾತಾಡುವವರು ಬಂದರು. ಭಾಷಣ ಮಾಡಲು ಉತ್ತರದ ರಾಜ್ಯದಿಂದ ಒಬ್ಬ ಬಂದಿದ್ದ. ಆತ ಕಾರಣವೇ ಇಲ್ಲದೆ ಹಿಂದೂಗಳನ್ನೂ, ಹಿಂದೂ ಸಂಘಟನೆಗಳನ್ನೂ ಬಾಯಿಗೆ ಬಂದಂತೆ ಬಯ್ಯಲಾರಂಭಿಸಿದ. ಸತ್ತು ಸ್ವರ್ಗದಲ್ಲಿರುವ ಸಾವರ್ಕರ್ ಅವರನ್ನೂ ಬಯ್ದ. ಊರಿನ ಬ್ಯಾರಿಗಳೆಲ್ಲರೂ ನೆಮ್ಮದಿ ಪಟ್ಟರು. ಮನಸೋ ಇಚ್ಛೆ ಚಪ್ಪಾಳೆ ತಟ್ಟಿದರು.

 ಮಂಗಳೂರು ಮುಂದೆ ಭಯಾನಕ ವಾತಾವರಣಕ್ಕೆ ತೆರೆದುಕೊಳ್ಳುತ್ತದೆ ಎಂಬುದಕ್ಕೆ ಮುನ್ಸೂಚನೆಯೂ ಆಗಲೇ ಸಿಕ್ಕಿಬಿಟ್ಟಿತ್ತು. ಅದಾದ ಕೆಲವು ತಿಂಗಳ ನಂತರ ನಗರದಾದ್ಯಂತ ಉದ್ದ ಗಡ್ಡದ ಅಜಾನುಬಾಹು ಮುಸಲ್ಮಾನರು ವಿಪರೀಪ ಕಂಡುಬರತೊಡಗಿದರು. ರಾಷ್ಟ್ರೀಯವಾದಿ ಜನಗಳಿಗೆ ಇದೇಕೆ ಎಂಬ ಸಂಶಯ ಹುಟ್ಟುತ್ತಿದ್ದಂತೆಯೇ ಆ ಸಂಶಯಕ್ಕೆ ಉತ್ತರವೂ ಸಿಕ್ಕಿತ್ತು. ಉಲ್ಲಾಳ ಸಮೀಪದ ಚೆಂಬುಗುಡ್ಡೆ ಎಂಬಲ್ಲಿ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದರು. ಅದಾಗಲೇ ಖಾಲಿಮಾಡಿದ್ದ ಆ ಮನೆಯಲ್ಲಿ ಬಾಂಬು ತಯಾರಿಸಲಾಗುತ್ತಿತ್ತು. ದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳನೇ ಅಲ್ಲಿ ವಾಸವಾಗಿದ್ದ ಎಂಬುದು ತಿಳಿದುಬಂದಿತ್ತು. ಇಡೀ ಮಂಗಳೂರು ಬೆಚ್ಚಿಬಿದ್ದಿತು.

 ಅಂದು ಪಿ.ಎಫ್.ಐ ಹಾಕಿದ ಅಡಿಗಲ್ಲಿನ ಮೇಲೆ ಇಂದು ಕಟ್ಟಡವೆದ್ದಿದೆ. ಅನಂತರ ಪಿ.ಎಫ್.ಐ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದೆ. ಸಣ್ಣಪುಟ್ಟ ಸಂಗತಿಗಳಿಗೂ ಅದು ಸಮ್ಮೇಳನಗಳನ್ನು ಮಾಡುತ್ತಿವೆ. ಕರಾವಳಿ ಜಿಲ್ಲೆಯಾದ್ಯಂತ ಜನರು ಉಚ್ಚೆ ಹುಯ್ಯುವ ಜಾಗಗಳಲ್ಲಿ, ಫುಟ್‌ಪಾತುಗಳ ಬದಿಗಳಲ್ಲೆಲ್ಲಾ ಅಮೆರಿಕಾ ಮತ್ತು ಇಸ್ರೇಲುಗಳನ್ನು ಬಯ್ಯುವ ಪೋಸ್ಟರುಗಳು ಕಾಣಿಸಿಕೊಳ್ಳಲಾರಂಭಿಸಿದವು.  ವರದಕ್ಷಿಣೆ ವಿರೋಧಿ ಸಮಾವೇಷಗಳು ಸಾಮಾನ್ಯವಾದವು. ಕರಾವಳಿಯ ಬುದ್ದಿಜೀವಿಗಳು ಅದಕ್ಕೆ ಮುಖ್ಯ ಅತಿಥಿಗಳಾಗಿ ಹೋಗಿ ಬ್ಯಾರಿಗಳು ಕೊಟ್ಟ ಬಿರಿಯಾನಿಯನ್ನು ತಿಂದು ಬಂದರು. ಇಷ್ಟೆಲ್ಲಾ ಮಾಡುವ ಪಿ.ಎಫ್.ಐ ಕರಾವಳಿಯಲ್ಲಿ ಹಲವಾರು ಪರಿವಾರ ಸಂಘಟನೆಗಳನ್ನು ಕೂಡ ಹುಟ್ಟಿಸಿದೆ.  ಅವು ಕೂಡಾ ಹುಟ್ಟಿಸಿದಾತನನ್ನೇ ಮೀರಿಸುವಂಥಾ ಮತಾಂಧ ಸಂಘಟನೆಗಳು. ರಾಜಕೀಯ ಪಕ್ಷವಾಗಿ ಎಸ್.ಡಿ.ಪಿ.ಐ, ಸುನ್ನಿ ವಿದ್ಯಾರ್ಥಿಗಳ ಸಂಘಟನೆ  ಎಸ್.ಎಸ್.ಎಫ್, ಅನಂತರ ಅದರಿಂದ ಸಿಡಿದು ಬಂದ  ಎಸ್.ಕೆ.ಎಸ್.ಎಫ್, ಕಾಲೇಜು ವಿದ್ಯಾರ್ಥಿಗಳ ಸಂಘಟನೆ ಕ್ಯಾಂಪಸ್  ಫ್ರಂಟ್ ಆಫ್ ಇಂಡಿಯಾ, ಮುಸಲ್ಮಾನರ ಶ್ರೇಯೋಭಿವೃದ್ದಿಯ ಹೆಸರಲ್ಲಿ  ಜಮಾತೆ ಇಸ್ಲಾಂ-ಇವೆಲ್ಲವೂ ಕರಾವಳಿಯಲ್ಲಿ ಸಕ್ರಿಯವಾಗಿವೆ.

 ಮುಸಲ್ಮಾನರು ಯಾವ ಕ್ಷೇತ್ರವನ್ನೇ ಪ್ರವೇಶಿಸಲಿ ಮತಾಂಧತೆ ಅವರ ಹುಟ್ಟುಗುಣ ಎಂಬುದು ಜಗತ್ತಿಗೇ ತಿಳಿದಿದೆ. ಮಂಗಳೂರಿನಲ್ಲಿ ಅವರು ಪ್ರವೇಶಿಸದ ಕ್ಷೇತ್ರವಿಲ್ಲ. ಅಲ್ಲೆಲ್ಲಾ ಮತಾಂಧತೆಯ ವಾಸನೆ ಮೂಗಿಗೆ ಬಡಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸಲ್ಮಾನರದ್ದೇ ಒಡೆತನದ ದಿನಪತ್ರಿಕೆಯೊಂದಿದೆ. ಅದರಲ್ಲಿ ದಿನಂಪ್ರತಿ ಜಿಹಾದ್ ಉರಿಯುತ್ತದೆ. ಎರಡು ಮೂರು ವಾರಪತ್ರಿಕೆಗಳಿವೆ. ಎರಡು ಮಾಸ ಪತ್ರಿಕೆಗಳಿವೆ. ಶಾಂತಿಯ ಹೆಸರಿನಲ್ಲಿ ಅಶಾಂತಿಗೆ ಬೇಕಾದ ಎಲ್ಲವನ್ನೂ ಪ್ರಕಾಶಿಸುವ ಪ್ರಕಾಶನ ಸಂಸ್ಥೆಯೂ ಒಂದಿದೆ. ಅಲ್ಲೆಲ್ಲಾ ಮತಾಂಧತೆಯ ಬೆಂಕಿ ಮತ್ತು ಅಕ್ಷರ ಭಯೋತ್ಪಾದನೆ ಸಾಮಾನ್ಯ ಸಂಗತಿ. ಮುಸ್ಲಿಮರಲ್ಲದವರಿಗೆಲ್ಲಾ ಏಕೆ ಹೀಗೆಲ್ಲಾ ಬರೆಯಲು ಸಾಧ್ಯವಾಗುವುದಿಲ್ಲ. ಮುಸ್ಲಿಮರಿಗೆ ಮಾತ್ರ ಹೇಗೆ ಸಾಧ್ಯವಾಗುತ್ತವೆ.

 ಅಲ್ಲೇ ಇಸ್ಲಾಮಿನ ಅಸಲಿಯತ್ತು ಇದೆ.

 ಅದಕ್ಕೇ ಕರಾವಳಿ ಹೀಗಿದೆ.

 

   

Leave a Reply