ಹೊ.ವೆ.ಶೇಷಾದ್ರಿ ಸ್ಮಾರಕ ಕ್ರೀಡಾಂಗಣ ಉದ್ಘಾಟನೆ

ಬೆಂಗಳೂರು - 0 Comment
Issue Date : 26.11.2014

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ನ.17ರಂದು ಇಲ್ಲಿಗೆ ಸಮೀಪದ ಜಿಗಣಿಯಲ್ಲಿರುವ ಪ್ರಶಾಂತಿ ಕುಟೀರಂ ಆವರಣದಲ್ಲಿ ನೂತನವಾಗಿ ನಿರ್ಮಿತವಾಗಿರುವ ಹೊ.ವೆ.ಶೇಷಾದ್ರಿ ಸ್ಮಾರಕ ಕ್ರೀಡಾಂಗಣವನ್ನು ಉದ್ಘಾಟಿಸಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು, ‘ಹೊ.ವೆ.ಶೇಷಾದ್ರಿಯವರು ಸಂಘದ ಹಿರಿಯ ಪ್ರಚಾರಕರಾಗಿದ್ದರು. ಸಂಘದ ಸರಕಾರ್ಯವಾಹರಾಗಿ ಕಾರ್ಯನಿರ್ವಹಿಸಿದ ಅವರು, ವಿಶೇಷವಾಗಿ ಬುದ್ಧಿಜೀವಿಗಳ ವಲಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಜೊತೆಗೆ ಸ್ವಯಂಸೇವಕರಿಗೆ ತಮ್ಮ ಕೌಶಲ್ಯವನ್ನು ಸುಧಾರಿಸಿಕೊಳ್ಳಲು ಉತ್ತಮ ಮಾರ್ಗದರ್ಶಕರಾಗಿದ್ದರು. ಸಂಘದಲ್ಲಿ ಯೋಗವನ್ನು ತನ್ನ ಶಾರೀರಿಕ ಚಟುವಟಿಕೆಯ ಭಾಗವಾಗಿ ಅಳವಡಿಸಿಕೊಳ್ಳುವಲ್ಲಿ ಶೇಷಾದ್ರಿಗಳ ಕೊಡುಗೆ ಸದಾ ಸ್ಮರಣೀಯ’ ಎಂದು ಹೇಳಿದರು.
ವೇದಿಕೆಯಲ್ಲಿ ಡಾ.ಆರ್. ನಾಗರತ್ನ, ಡಾ. ಹೆಚ್.ಆರ್. ನಾಗೇಂದ್ರ, ಡಾ. ರಾಮಚಂದ್ರ ಭಟ್ ಕೋಟೆಮನೆ, ಡಾ. ಟಿ. ಮೋಹನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಪ್ರಚಾರಕರಾದ ಮದನ್‌ದಾಸ್ ದೇವಿ, ಕ್ಷೇತ್ರೀಯ ಕಾರ್ಯವಾಹ ರಾಮಕೃಷ್ಣ ರಾವ್, ಕ್ಷೇತ್ರೀಯ ಪ್ರಚಾರಕ್ ಮಂಗೇಶ್ ಭೇಂಡೆ, ಕ್ಷೇತ್ರೀಯ ಬೌದ್ಧಿಕ್ ಪ್ರಮುಖ್ ವಿ. ನಾಗರಾಜ್, ಬೆಂಗಳೂರು ಮಹಾನಗರ ಸಂಘಚಾಲಕ್ ಡಾ. ಬಿ.ಎನ್. ಗಂಗಾಧರ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಮೋಹನ್ ಭಾಗವತ್ ಅವರು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಖ್ಖ್ಗಅಖಅ) ದ ಅನ್ವೇಷಣಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಂಶೋಧಕ ತಂಡದೊಂದಿಗೆ ಚರ್ಚಿಸಿದರು. ಗ್ರಾನೈಟ್ ವ್ಯವಹಾರಕ್ಕೆ ಪ್ರಸಿದ್ಧವಾಗಿರುವ ಜಿಗಣಿಯಲ್ಲಿ ಸ್ಥಳೀಯ ಗ್ರಾನೈಟ್ ವ್ಯಾಪಾರಿಗಳ ಸಂಘ ಭಾಗವತ್ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿತು

   

Leave a Reply