ಭಾರತ ಪರಿಕ್ರಮಯಾತ್ರೆಗೆ 962ನೇ ದಿನ- ಅಸ್ಸಾಂ ರಾಜ್ಯಕ್ಕೆ ಪ್ರವೇಶ

ಪ್ರಚಲಿತ - 0 Comment
Issue Date : 20.04.2015

ಶ್ರೀರಾಮಪುರ(ಕೊಕ್ರಾಜಾರ್ ಜಿಲ್ಲೆ, ಅಸ್ಸಾಂ): ಆರೆಸ್ಸೆಸ್‌ನ ಹಿರಿಯ ಪ್ರಚಾರಕರಾದ ಸೀತಾರಾಮ ಕೆದಿಲಾಯ ನೇತೃತ್ವದ ಭಾರತ ಪರಿಕ್ರಮ ಯಾತ್ರೆಯು ಇದೀಗ ಅಸ್ಸಾಂ ರಾಜ್ಯಕ್ಕೆ ಪ್ರವೇಶಿಸಿದ್ದು, ಯಾತ್ರೆ ಪರಿಕ್ರಮಿಸಿದ 15ನೇ ರಾಜ್ಯ ಇದಾಗಿದೆ. ಮಾ. 30ರಂದು ಯಾತ್ರೆ ಇಲ್ಲಿಗೆ ಆಗಮಿಸಿತು. ಪ. ಬಂಗಾಳದ ಅಲಿಪುರ್‌ವಾರ್ ಜಿಲ್ಲೆಯ ಪಕಡಿಗುಡಿ ಗ್ರಾಮದಿಂದ ಯಾತ್ರೆ ಅಸ್ಸಾಂಗೆ ಪ್ರವೇಶಿಸಿತು.
ನಿಗದಿತ ಕಾರ್ಯಕ್ರಮದ ಪ್ರಕಾರ, ಭಾರತ ಪರಿಕ್ರಮ ಯಾತ್ರೆಯು ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ಪ್ರದೇಶದ ಎಲ್ಲ ರಾಜ್ಯಗಳಲ್ಲಿ ಡಿಸೆಂಬರ್ 2015ರವರೆಗೆ ಸಂಚರಿಸಲಿದೆ. 2016ರ ಜನವರಿಯಲ್ಲಿ ಯಾತ್ರೆಯು ಮತ್ತೆ ಪಶ್ಚಿಮ ಬಂಗಾಳ ಪ್ರಾಂತಕ್ಕೆ ವಾಪಾಸಾಗಲಿದ್ದು, ದಕ್ಷಿಣ ಬಂಗ ಪ್ರಾಂತದಲ್ಲಿ ಸಂಚರಿಸಲಿದೆ. ಅನಂತರ ಒಡಿಶಾಗೆ ತೆರಳಲಿದೆ.

67ರ ಹರೆಯದ ಸೀತಾರಾಮ ಕೆದಿಲಾಯ ಅವರು ಇದುವರೆಗೆ 11,300 ಕಿ.ಮೀ ದೂರವನ್ನು ಕಾಲ್ನಡಿಗೆಯಿಂದ ಕ್ರಮಿಸಿದ್ದಾರೆ. ಈ ಯಾತ್ರೆಯು 2012ರ ಆಗಸ್ಟ್ 9ರಂದು ಕನ್ಯಾಕುಮಾರಿಯಿಂದ ಆರಂಭವಾಗಿತ್ತು.

   

Leave a Reply