ಹೆಲ್ಪ್ ನೇಪಾಳ್

ಪ್ರಚಲಿತ - 0 Comment
Issue Date : 07.05.2015

ನೇಪಾಳದಲ್ಲಿ ಸಂಭವಿಸಿದ ಭೂಕಂಪ ಇಡೀ ಜಗತ್ತನ್ನೂ ತಲ್ಲಣಗೊಳಿಸಿದ್ದು ಸುಳ್ಳಲ್ಲ. ಹಲವು ರಾಷ್ಟ್ರಗಳು ಪರಿಹಾರ ಕಾರ್ಯದಲ್ಲಿ ನೆರವು ನೀಡುತ್ತಿವೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳು ‘ಹೆಲ್ಪ್ ನೇಪಾಳ್’ ಎಂಬ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿ ಸಂತ್ರಸ್ಥರಿಗೆ ಸಹಾಯ ಹಸ್ತ ಚಾಚುವುದಕ್ಕೆ ಮುಂದಾಗಿವೆ. ಇಷ್ಟು ದಿನ ಸಾಕಷ್ಟು ವಿವಾದಗಳಿಂದಲೇ ಹೆಸರಾಗಿದ್ದ ಸಾಮಾಜಿಕ ಜಾಲತಾಣಗಳು ಇಂದು ತಮ್ಮ ನಿಜವಾದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯವೇ ಸರಿ.
ಈ ಆ್ಯಪ್ ಸಂಬಂಧಿಗಳನ್ನು ಕಳೆದುಕೊಂಡವರಿಗೆ ಹುಡುಕುವುದಕ್ಕೂ ಸಹಾಯವಾಗುವುದಲ್ಲದೆ, ಕ್ಷಣ ಕ್ಷಣದ ಮಾಹಿತಿಯನ್ನೂ ನೀಡಲಿದೆ. ಎಲ್ಲೆಲ್ಲಿ ಆಶ್ರಯ ತಾಣಗಳಿವೆ, ಎಲ್ಲಿ ಆಹಾರ ಸೌಲಭ್ಯಗಳು ಲಭಿಸುತ್ತವೆ ಎಂಬಿತ್ಯಾದಿ ಮಾಹಿತಿಯನ್ನೂ ಇದು ನೀಡುತ್ತದೆ. 

   

Leave a Reply