ವನವಾಸಿ ಸಮಾಜದ ಮೇಲೆ ಚರ್ಚ್‌ನ ಕ್ರೂರ ದೃಷ್ಟಿ

ಲೇಖಕರು - 0 Comment
Issue Date :

ಅಧ್ಯಯನ ಪ್ರವಾಸದ

ಅನುಭವ

ಕುರಿಗಳ ಸಂಖ್ಯೆಯನ್ನು ವೃದ್ಧಿಸುವ ಆತುರದಲ್ಲಿ ಚರ್ಚೆ ಭಾರತದಲ್ಲಿ ಮತಾಂತರದ ಹೊಸ ಹೊಸ ನಮೂನೆಗಳನ್ನು ಹುಡುಕಿ ವೇಗವಾಗಿ ತನ್ನ ಕಾರ್ಯ ರೂಪಕೊಡುವಲ್ಲಿ ನಿರತವಾಗಿದೆ. ಆದರೆ ಝಾರ್‌ಖಂಡ ವಿಧಾನಸಭೆಯಲ್ಲಿ ಕೆಲದಿನಗಳ ಹಿಂದೆ ಜಾರಿಗೆ ಬಂದಿರುವ ರಿಲಿಜನ್ ಫ್ರೀಡಮ್ ಬಿಲ್’ ಅದನ್ನು ಮುಖ್ಯ ಚರ್ಚೆಗೆ ತಂದಿದೆ.

ಚರ್ಚ್ ಹಲವಾರು ದಶಕಗಳಿಂದ ಝಾರ್‌ಖಂಡನ್ನು ಮತಾಂತರದ ಅಡ್ಡೆಯನ್ನಾಗಿ ರೂಪಿಸಿದೆ. ರಾಜ್ಯ ಸಕಾರ ರಿಲಿಜನ್ ಫ್ರೀಡಮ್ ಬಿಲ್ನ್ನು ಜಾರಿಗೆ ತಂದದ್ದು ಸಾಹಸದ ಬಲಾತ್ಕಾರದ ಮತಾಂತರಕ್ಕೆ ತಡೆಯಾಗಿದೆ. ಮತಾಂತರಕ್ಕೆ ಎಲ್ಲಾ ಸಮುದಾಯಗಳು ಗುರಿಯಾಗಿದ್ದರೂ ವನವಾಸಿ ಸಮಾಜ ಪ್ರಾರಂಭದಿಂದಲೂ ಬಲಿಪಶುವಾಗಿದೆ. ಈಗ ಜನಜಾತಿ ಸಮುದಾಯಗಳು ಜಾಗೃತಗೊಳ್ಳುತ್ತಿವೆ. ಈ ಮತಾಂತರದ ಪ್ರಕರಣಗಳು ಪ್ರಚಾರಕ್ಕೆ ಬರುತ್ತಿದ್ದಂತೆ ಅದನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ. ರೋಗ ನಿವಾರಣಾ ಕೂಟದಂತಹ ಸಭೆಗಳ ಮುಖಾಂತರ ಜನರನ್ನು ಮೋಸಗೊಳಿಸುವ ಮತಾಂತರಗೊಳಿಸುವ ಕಾರ್ಯಕ್ಕೆ ಈ ಕಾನೂನಿನಿಂದ ತಡೆಯಾಗಿದೆ. ಝಾರ್‌ಖಂಡ್‌ನಲ್ಲಿ ಜಾರಿಯಾದ ರಿಲಿಜನ್ ಪ್ರೀಡಮ್ ಬಿಲ್‌ನ ಕುರಿತು ಚರ್ಚೆ ಪ್ರಾರಂಭವಾಗಿದೆ.

ಝಾರ್‌ಖಂಡ್, ಛತ್ತೀಸ್‌ಗಡ್, ಮಧ್ಯಪ್ರದೇಶ, ಉತ್ತರಖಾಂಡ, ಒರಿಸ್ಸಾ ರಾಜ್ಯಗಳಲ್ಲಿ ಆಸೆ-ಆಮಿಷಗಳ ಮುಖಾಂತರ ಮತಾಂತರ ಮಾಡುವ ಕಾರ‌್ಯ ಸಾಮಾನ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ ಮತಾಂತರದ ವಿರುದ್ದ ಪ್ರತಿಭಟನೆಗಳು ನಡೆದಿವೆ. ಇದರಿಂದಾಗಿ ಸಮಾಜದಲ್ಲಿ ಜಾಗೃತಿ ಉಂಟಾಗಿದೆ. ಆದರೆ ಮತಾಂತರ ನಿಂತಿಲ್ಲ. ಕೆಲವು ದಿನಗಳ ಹಿಂದೆ ಪ್ರವಾಸದಲ್ಲಿ ಕಂಡಂತೆ ಪಶ್ಚಿಮ ಬಂಗಾಲದ ಹಾಶಿಮ್ ಆರ್ ಝಾರ್‌ಖಾಂಡ್ ಹಾಗೂ ಓರಿಸ್ಸಾದಲ್ಲಿ ವನವಾಸಿ ಸಮಾಜವನ್ನು ಮತಾಂತರಿಸಿ ಅವರಿಗಾಗಿಯೇ ಈ ಕಾಲೋನಿಗಳನ್ನು ನಿರ್ಮಿಸಿ ನೆಲೆಗೊಳಿಸಿದ್ದರು. ಉತ್ತರೀ ಬಂಗಾಲದ ವನವಾಸಿ ಸಮಾಜದ ಮಧ್ಯದಲ್ಲಿ ತಮ್ಮ ನೆಲೆ (ಪ್ರಭಾವ) ಬೆಳೆಸುವುದು ಮತ್ತು ಸ್ಥಾನೀಯ ಜನರಿಗೆ ಕ್ರೈಸ್ತಮತ ಹಾಗೂ ಏಸುಕ್ರಿಸ್ತನ ಮಹಿಮೆ ಕಥೆಗಳನ್ನು ತಿಳಿಸುವುದು ಈ ಮತಾಂತರ ಕಾರ್ಯವಾಗಿತ್ತು. ಕ್ರಿಶ್ಚಿಯನ್ ಪ್ರಭಾವ ಬೆಳೆದಂತೆ ಅವರಿಗೆ ಚಿಕ್ಕ-ಪುಟ್ಟ ಸಹಾಯಗಳನ್ನು ನೀಡಿ ತಮ್ಮ ಕಡೆಗೆ ಸೆಳೆಯುವ ವಿಚಾರ ಅವರದ್ದಾಗಿತ್ತು. ಏಸು ಮೇಲಿನ ವಿಶ್ವಾಸ ಬೆಳೆದಾಗ ಅವರನ್ನು ಚರ್ಚ್‌ಗೆ ಕರೆತರುವುದು ಅವರ ಯೋಜನೆಯಾಗಿತ್ತು. ಚರ್ಚ್‌ನಲ್ಲಿನ ಉಸ್ತುವಾರಿ ಕೆಲಸಗಳಿಗೂ ವನವಾಸಿ ಮತಾಂತರಿತರನ್ನೇ ನಿಯುಕ್ತಿಗೊಳಿಸಲಾಗಿದೆ. ನಮ್ಮ ಪ್ರವಾಸದಲ್ಲಿ ಭೂತಾನಿನ ಗಡಿ ಭಾಗದಲ್ಲಿ ಸಂಚರಿಸಿದ್ದೆವು. ಭೂತಾನಿನ ಗಡಿ ಭಾಗದಲ್ಲಿರುವ ಖೋಖಲಾ ಬಾರಿ ಗ್ರಾಮಗಳಲ್ಲಿ ಮೊದಲು ಗೂರ್ಖಾಗಳಲ್ಲಿ ಮತಾಂತರ ಒತ್ತಾಯದಿಂದ ಆದರೆ ಈಗ ಸಿಹಿಯಾದ ಮಾತುಗಳಿಂದ ಜನರನ್ನು ವಶೀಕರಿಸಿಕೊಂಡು ಹಣದ ಆಮಿಷ ಹಾಗೂ ಅವರ ಸಣ್ಣ ಪುಟ್ಟ ಅಗತ್ಯಗಳನ್ನು ಈಡೇರಿಸಿ ಗೂರ್ಖಾಗಳನ್ನೂ ಕೂಡ ವೇಗವಾಗಿ ಮತಾಂತರಗೊಳಿಸಲಾಗುತ್ತಿದೆ ಎಂದು ಅಲ್ಲಿನವರು ತಿಳಿಸಿದರು. ನೋಡು ನೋಡುತ್ತಿದ್ದಂತೆ ಅವರ ಮನೆಯ ಹತ್ತಿರವೇ 2 ಚರ್ಚ್ ತಲೆ ಎತ್ತಿದೆ. ಅವರ ಬಂಧುಗಳು ಮತಾಂತರಗೊಂಡರು. ಅಲ್ಲಿನ ಉತ್ತಮ ಪ್ರಧಾನ್ ಹೇಳುವಂತೆ ಮತಾಂತರದ ನಂತರ ನಮ್ಮ ಬಂಧುಗಳ ಜೀವನ ಶೈಲಿ ಬದಲಾವಣೆಗೊಂಡದ್ದನ್ನು ಗಮನಿಸಿದೆ. ನಿಶ್ಚಿತವಾಗಿಯೂ ಅವರಿಗೆ ದೊಡ್ಡ ಮೊತ್ತದ ಹಣ ಸಿಕ್ಕಿರುತ್ತದೆ. ಮತಾಂತರ ಪೂರ್ಣ ಭಾರತದಲ್ಲಿ ಎಲ್ಲಾ ಹಂತಗಳಲ್ಲೂ ನಡೆಯುತ್ತದೆ ಎಂಬುದನ್ನು ತಿಳಿಸಬೇಕಾಗುತ್ತದೆ. ನಮ್ಮ ಅರಿವಿಗೆ ಬಂದಿರುವಂತೆ ಕೆಲವು ಪ್ರಖ್ಯಾತರ ಹೆಸರುಗಳು ಹಿಂದುಗಳಾಗಿದ್ದರೂ ಅವರು ಗುಪ್ತವಾಗಿ ಕ್ರೈಸ್ತರಾಗಿರುತ್ತಾರೆ ಮತ್ತು ಅವರು ತಮ್ಮ ನಿಜ ಸ್ವರೂಪವನ್ನು ಮರೆಮಾಚಿ ಕ್ರೈಸ್ತ ಪ್ರಚಾರವನ್ನು ಮಾಡುತ್ತಿದ್ದಾರೆ. ಚರ್ಚಿನ ದೊಡ್ಡ ಶಿಕಾರಿ ವನವಾಸಿಗಳಾದರೂ ಇವರನ್ನು ಹೊರತುಪಡಿಸಿ ಸಮಾಜದ ಇನ್ನಿತರ ವರ್ಗಗಳನ್ನು ಮತಾಂತರಗೊಳಿಸಲು ಮೌಢ್ಯತೆಗಳನ್ನು ರಚಿಸಿ ತೀವ್ರಗತಿಯಲ್ಲಿ ಕಾರ್ಯನಿರತರಾಗಿರುವರು.

ಈಗ ಗುಪ್ತಕ್ರೈಸ್ತನಾಗಿರುವ ಕಾಂಚ ಇಲೈಯಾನ ಬಗ್ಗೆ ಹೇಳುವುದಾದರೆ ಅವರು ಹಲವರಿಗೆ ಈ-ಮೇಲ್ ಕಳಿಸಿ ತಮ್ಮ ಪುಸ್ತಕ ಹಿಂದುತ್ವ ಮುಕ್ತ ಭಾರತ’ದ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಜನರಿಗೆ ಜೆ.ಎನ್.ಯು.ಗೆ ಆಮಂತ್ರಿಸಿದ್ದರು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಆದರೆ ಈ ಕಾರ್ಯಕ್ರಮದ ಆಯೋಜನೆಯಿಂದ ಯಾವುದೇ ಪ್ರಗತಿಶೀಲರಿಗೆ ಆತಂಕವಾಗಲಿಲ್ಲ. ಒಂದು ವೇಳೆ ಇಸ್ಲಾಂ ಮುಕ್ತ ಭಾರತ, ಕ್ರೈಸ್ತ ಮುಕ್ತ ಭಾರತ ಎಂದು ಕಾರ್ಯಕ್ರಮ ಆಯೋಜಿಸಿದ್ದರೆ ಎಡಪಂಥೀಯರು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದರು. ಈ-ಮೇಲ್‌ನಲ್ಲಿ ಅವರು ಕಾಂಚ ಶೆಫರ್ಡ್ ಎಂದು ಬರೆದಿದ್ದರು. ಆಶ್ಚರ್ಯದ ಸಂಗತಿಯೇನೆಂದರೆ ಅವರು ಹಿಂದುತ್ವಮುಕ್ತ ಭಾರತ ಮಾಡಲು ದಿಲ್ಲಿಯಲ್ಲಿ ನೆಲೆಸಿದ್ದರು ಎಂದು ತಿಳಿಯುವುದು ಅವಶ್ಯವಾಗಿದೆ. ಕ್ರೈಸ್ತ ಮಿಶನರಿಗಳ ಜೊತೆ ಸಂಪರ್ಕದಲ್ಲಿರುವ ಮತಾಂತರದ ಗುತ್ತಿಗೆದಾರನಾಗಿರುವ ಸುನೀಲ್ ಸರದಾರರ ಸೌತ್ ಎಕ್ಸ್‌ಟೆನ್‌ಷನ್ ದಿಲ್ಲಿಯ ಭವ್ಯ ಭಂಗಲೆಯಲ್ಲಿ ಅವರು ನೆಲೆಸಿದ್ದರು. ಒಬ್ಬ ದಲಿತ ಸ್ಕಾಲರ್ ಎಂಬ ಬಿರುದುಳ್ಳ ಅವರು ಚರ್ಚ್‌ನ ಕಾರ್ಯವನ್ನು ಬೆಳೆಸುತ್ತಿರುವರು. ಅವರು ಭಾರತದಲ್ಲಿ ತಮ್ಮನ್ನು ಅಂಬೇಡ್ಕರ್ ವಾದಿ, ವಾಮ ಪಂಥೀಯರೆಂದು ಮತ್ತು ಉದಾರ ವಾದಿಗಳೆಂದು ಸೋಗು ಹಾಕುವರು. ಚರ್ಚ್ ಅವರನ್ನು ಈ ರೂಪದಲ್ಲೇ ಮಾರಾಟದ ಸರಕನ್ನಾಗಿ ಬ್ರಾಂಡ್ ಮಾಡುವುದೆಂದು ಅವರಿಗೆ ಗೊತ್ತಿದೆ. ಕಾಂಚ ಇಲೈಯ್ಯಾ ಜಗತ್ತಿನ ಎಲ್ಲಾ ವೇದಿಕೆಗಳಲ್ಲಿ ಹಿಂದುತ್ವವೇ ಎಲ್ಲ ಸಮಸ್ಯೆಗಳ ಮೂಲ. ಇದಕ್ಕೆ ಪರಿಹಾರ ಕ್ರೈಸ್ತರಾಗುವುದು ಎಂದು ಭಾಷಣ ಮಾಡುವರು. ಸುನೀಲ್ ಸರದಾರರ ದಿಲ್ಲಿಯಲ್ಲಿನ ಬಂಗ್ಲೆ ಅನೇಕ ವಿವಾದಾಸ್ಪದ ವ್ಯಕ್ತಿಗಳು ಬಂದು ಹೋಗುವ ಕೇಂದ್ರ. ಅವರುಗಳು ಗುಪ್ತ ಕ್ರೈಸ್ತರಾಗಿದ್ದು ಭಾರತದಲ್ಲಿ ಜಾತಿಯ ಆಧಾರದ

ಮೇಲೆ ಹಿಂದು ಸಮಾಜದಲ್ಲಿ ಭೇದ ಭಾವವನ್ನು ನಿರ್ಮಾಣ ಮಾಡಿ ಸುನೀಲ್ ಸರದಾರ ರೀತಿಯ ಜನರಿಗೆ ಮತಾಂತರಕ್ಕೆ ಸುಲಭವಾಗುವಂತೆ ವಾತಾವರಣ ನಿರ್ಮಿಸುವರು. ಸುನೀಲ್ ಸರದಾರರಂಥವರಿಗೆ ಹಣ ಎಲ್ಲಿಂದ ಬರುತ್ತದೆ ಎಂಬುದು ದೇಶದ ಸುರಕ್ಷೆಯಲ್ಲಿ ನಿರತರಾಗಿರುವ ಏಜೆನ್ಸಿಗಳಿಗೆ ವಿಚಾರಣೆಗೆ ಮುಖ್ಯ ವಿಷಯ.

ಜಾರ್ಖಂಡ್ನಲ್ಲಿನ ವಾಮಪಂಥೀಯ ಲೇಖಕರೊಬ್ಬರ ಭೇಟಿ ಈ ಹಿಂದೆ ಬೋಪಾಲ್‌ನಲ್ಲಾಯಿತು. ಅವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅಪಾಯಕಾರಿ ವಿಷಯವನ್ನು ತಿಳಿಸಿದರು. ತಾವು ಭೂಮಿಗಾರ ಸಮುದಾಯದಿಂದ ಬಂದವರೆಂದು ಹೇಳಿ ಒಬ್ಬ ವನವಾಸಿ ಮಹಿಳೆಯನ್ನು ಮದುವೆಯಾಗಿದ್ದು ನಿರಂತರ ಚರ್ಚಿನ ಸಂಪರ್ಕದಲ್ಲಿರುತ್ತೇವೆ ಎಂದು ತಿಳಿಸಿದರು. ಅದು ಯಾವಾಗ ಬೇಕಾದರೂ ಪರಿವರ್ತಿತವಾಗಲಿದೆ ಎಂಬ ಸ್ಪೋಟಕ ವಿಚಾರ ಹೊರಗೆಡಹಿದರು.

ಕಾರಣವೇನೆಂದರೆ, ಚರ್ಚ್ ಈ ದಿನಗಳಲ್ಲಿ ಬಹಳ ದೊಡ್ಡ ತೊಂದರೆಗೆ ಸಿಲುಕಿಕೊಂಡಿದೆ. ಆ ಪ್ರಕರಣವನ್ನು ಮಾಧ್ಯಮಕ್ಕೂ ಹೇಳಲಾಗದೆ, ಸುಮ್ಮನಿರಲೂ ಆಗದೆ ಒದ್ದಾಡುತ್ತಿದೆ. ಅವರ ಈ ಹೇಳಿಕೆಯಿಂದ ನನ್ನ ಮೊದಲ ಅಭಿರುಚಿ ಜಾಗೃತಗೊಂಡು ವಿಸ್ತಾರವಾಗಿ ಬಿಡಿಸಿ ಹೇಳುವಂತೆ ಕೇಳಿದೆ. ಕಾಮ್ರೇಡ್ ಲೇಖಕನ ಪ್ರಕಾರ ಚರ್ಚ್ ದೀರ್ಘಕಾಲದಿಂದ ತುಂಬಾ ಪರಿಶ್ರಮಪಟ್ಟು ವನವಾಸೀ ಸಮಾಜವನ್ನು ಮೋಸಗೊಳಿಸಿ ಜಾರ್ಖಂಡ್ನಲ್ಲಿ ಕ್ರೈಸ್ತರನ್ನಾಗಿ ಮತಾಂತರಗೊಳಿಸಿದೆ.

ಸದ್ಯ ಜಾರ್ಖಂಡ್ನಲ್ಲಿ ಮುಸ್ಲಿಂ ಯುವಕರು ಈ ಮತಾಂತರಿತ ವನವಾಸಿ ಸಮಾಜದ ಹುಡುಗಿಯರನ್ನು ಪ್ರೇಮ ಪಾಶದಲ್ಲಿ ಸಿಲುಕಿಸಿ ಮದುವೆಯಾಗುತ್ತಿರುವರು. ಈಗ ಚರ್ಚ್ ಈ ವಿಚಾರ ಕುರಿತಂತೆ ವಿರೋಧಮಾಡಲು ಸಾಧ್ಯವಾಗುತ್ತಿಲ್ಲ ಕಾರಣ ಚರ್ಚ್ ಮತ್ತು ಮೌಲ್ವಿ ಮಧ್ಯೆ ಘರ್ಷಣೆಯಾದರೆ ಇಬ್ಬರ ಬಂಡವಾಳವೂ ಹೊರಬೀಳುವುದು. ಆದರೆ ಚರ್ಚ್ ಈ ಘಟನೆಗಳ ಕುರಿತು ಸುಮ್ಮನಿರಲೂ ಆಗುತ್ತಿಲ್ಲ. ಏಕೆಂದರೆ ಅವರ ದಶಕಗಳ ಪ್ರಯತ್ನದ ಮೇಲೆ ನೀರು ಸುರಿದಂತಾಗಿ ವ್ಯರ್ಥವಾಗುತ್ತಿದೆ.

ರಾಂಚಿಯ ಪತ್ರಕಾರ ದಿವ್ಯಾಂಶುವಿನ ಪ್ರಕಾರ ಛತ್ತೀಸಘಡದಲ್ಲಿ ಮತಾಂತರ ಕುರಿತಂತೆ ಕಾನೂನು ಇದೆ ಹಾಗೂ ದೇಶಾದ್ಯಂತ ಒಂದು ಸಶಕ್ತ ಕಾನೂನು ಇದೆ. ಜಾರ್ಖಂಡ್‌ನ ರಿಲೀಜಿಯಸ್ ಫ್ರೀಡಮ್ ಬಿಲ್ ನಲ್ಲಿ ಕೇವಲ 3 ವರ್ಷಗಳ ಸೆರೆಮನೆವಾಸ ಅಥವಾ 50,000 ದಂಡ ಕೆಲವೊಮ್ಮೆ ಎರಡನ್ನೂ ವಿಧಿಸಬಹುದಾಗಿದೆ. ಒಂದುವೇಳೆ ಈ ಅಪರಾಧ ಅಪ್ರಾಪ್ತ ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯಾವುದೇ ವ್ಯಕ್ತಿಯ ಜೊತೆ ನಡೆದದ್ದೇ ಆದರೆ ಈ ಶಿಕ್ಷೆ 3ರ ಸ್ಥಾನದಲ್ಲಿ ನಾಲ್ಕು ವರ್ಷ ಮತ್ತು ದಂಡವು ಕೂಡ ಹೆಚ್ಚಾಗಿ ಒಂದು ಲಕ್ಷ ರೂಪಾಯಿವರೆಗೆ ಕೊಡಬೇಕಾಗುವುದು. ವಿಶೇಷವೆಂದರೆ ವಿರೋಧಪಕ್ಷವೂ ಈ ವಿಧೇಯಕವನ್ನು ವಿರೋಧಿಸಲಿಲ್ಲ.

ಜಾರ್ಖಂಡ್‌ನ ತಿರುಗಾಟದ ನಂತರ ಜಾಮಾ ದುಮಾಕಾನಲ್ಲಿ ವನವಾಸಿ ನಾಯಕ ಸುರೇಶ್ ವರ್ಮನ ಭೇಟಿಯಾಯಿತು. ಸುರೇಶ ಹೇಳುವಂತೆ ನಾನು ನಮ್ಮ ತಾಯಿಯ ಜೊತೆ ಚರ್ಚಿಗೆ ಹೋಗುತ್ತಿದ್ದೆ. ಚರ್ಚಿನಲ್ಲಿ ಪಾದ್ರಿ ರಾ.ಸ್ವ. ಸಂಘದ ಸದಸ್ಯರಿಂದ ದೂರವಿದ್ದು ಬಚಾವಾಗುವಂತೆ ತಿಳಿಸುತ್ತಿದ್ದರು. ಈ ಹಿಂದುತ್ವವಾದಿ ಜನರು ಕ್ರೈಸ್ತರ ವಿರೋಧಿಗಳೆಂದು ತಿಳಿಸುತ್ತಿದ್ದರು. ಯಾವಾಗ ನಾನು ಈ ಮಾತುಗಳನ್ನು ಕೇಳಿದೆನೋ ನನಗೆ ಸಂಘದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಬೆಳೆಯಿತು ಮತ್ತು ನಾನು ಸಂಘದ ಸಂಪರ್ಕಕ್ಕೆ ಬಂದೆ. ಹಿಂದುಗಳ ಒಳಿತಿಗಾಗಿ ಕೆಲಸ ಮಾಡಲು ಕೆಲವರಾದರೂ ಇದ್ದಾರಲ್ಲಾ ಎಂಬ ಭರವಸೆ ಮೂಡಿತು. ಆದರೆ ಚರ್ಚಿನಲ್ಲಿ ಪಾದ್ರಿ ಸಂಘದ ಕುರಿತು ಹೀಗೇಕೆ ಹೇಳಿದನೆಂಬ ಸಂಗತಿ ತಿಳಿಯದಾಯಿತು. ಸಂಘದಲ್ಲಿ ಇಲ್ಲಿಯವರೆಗೂ ಚರ್ಚ್ ಅಥವಾ ಕ್ರೈಸ್ತರ ಕುರಿತು ಒಂದೇ ಒಂದು ಕೆಟ್ಟ ಶಬ್ದ ನನಗೆ ಕೇಳಲು ಸಿಕ್ಕಿಲ್ಲ’. ರಾಂಚಿಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ದಿವಾಕರ ಮಿಂಚೆಯ ಪ್ರಕಾರ ಪರಿಶಿಷ್ಟ ಜನಾಂಗದವರನ್ನು ಚರ್ಚ್ ತಾನು ಗುತ್ತಿಗೆದಾರನಂತೆ ವರ್ತಿಸುತ್ತಿದೆ. ಈ ವಿಷಯವು ಇಲ್ಲಿನ ಮುಗ್ದ ವನವಾಸಿಗಳ ಅರಿವಿಗೆ ಬರುತ್ತಿಲ್ಲ. ಜಾರ್ಖಂಡ್ ಅಥವಾ ಛತ್ತೀಸ್‌ಘಡ ಚರ್ಚಿನ ಹಿಡಿತದಲ್ಲಿಲ್ಲ. ಆದರೆ ತಮ್ಮ ಕ್ರೈಸ್ತ ವನವಾಸಿ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆ ಬೆಳೆಸಿಕೊಳ್ಳಲು ಹೊಸ ಹೊಸ ವಿಧಾನಗಳನ್ನು ಅನುಸರಿಸಿ ಜನರನ್ನು ಮತಾಂತರ ಮಾಡುತ್ತಿರುವರು. ಒರಿಸ್ಸಾದಲ್ಲಿ ಇದೇರೀತಿ ಕ್ರೈಸ್ತ ಮಿಶಿನರಿಗಳು. ಈ ರೀತಿ ಮತಾಂತರಕ್ಕೆ ಹೊಸ ಕಾರ್ಯವಿಧಾನಗಳನ್ನು ರೂಪಿಸಿರುವರು. ಪ್ರತ್ಯೇಕವಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಯೋಜನೆಗಳನ್ನು ಕ್ರಿಶ್ಚಿಯನ್ ಡೇಟಿಂಗ್ ಸೈಟ್ ಎಂಬ ಹೆಸರಿನಲ್ಲಿ ತಯಾರು ಮಾಡಿರುವರು. ಉದಾ: ಬಾಲಸೋರ್ ಕ್ರಿಶ್ಚಿಯನ್ ಡೇಟಿಂಗ್ ಸಾಯಿಟ್.

ಯುವಕ ಯುವತಿಯರು ಮಾಹಿತಿಯಿರುವ ಈ ಸೈಟ್ ಒಳಹೊಕ್ಕು ತಮ್ಮ ಮನಸ್ಸಿಗೆ ಒಪ್ಪುವ ಪುರುಷ ಅಥವಾ ಮಹಿಳೆಯರ ಜೊತೆ ಸ್ನೇಹ ಹೊಂದಬಹುದು. ತಮ್ಮ ಸಂಖ್ಯೆ ಬೆಳೆಸಲು ತೊಡಗಿರುವ ಚರ್ಚ್ ಯಾವುದೇ ವಿಧಾನವನ್ನು ಅನುಸರಿಸಿ ಭಾರತದ ವನವಾಸಿ ಪ್ರದೇಶಗಳಲ್ಲಿ ಹೊಸ ಹೊಸ ಷಡ್ಯಂತ್ರಗಳೊಂದಿಗೆ ತನ್ನ ಮತಾಂತರದ ಕಾರ್ಯಕ್ಕೆ ಒಂದು ನಿಶ್ಚಿತ ರೂಪ ಕೊಡಲು ಹೊರಟಿದೆ.

ಹಿಂದುಗಳನ್ನು ಕ್ರೈಸ್ತರನ್ನಾಗಿ ಮತಾಂತರಿಸುವ ಎಲ್ಲಾ ಸಾಧ್ಯತೆಗಳನ್ನು ಯೋಜನಾ ತಂತ್ರಗಳನ್ನು ರೂಪಿಸುತ್ತಿದೆ. ಆದರೆ ಕೇಂದ್ರದಲ್ಲಿ ಸರ್ಕಾರದ ಬದಲಾವಣೆಯಿಂದ ಅದರ ಕೆಲಸದಲ್ಲಿ ಸ್ವಲ್ಪ ಸಮಸ್ಯೆ ಖಂಡಿತ ಬಂದಿರುತ್ತದೆ. ಈ ಕಾರಣದಿಂದ ಭಾರತದ ಚರ್ಚ್‌ಗಳಲ್ಲಿ ಒಂದು ರೀತಿಯ ಕ್ಷೋಭೆಯುಂಟಾಗಿದೆ.
ಆದರೆ ವಿಚಾರ ಮಾಡುವ ಸಂಗತಿಯೆಂದರೆ, ಕಾನೂನು ರಚನೆಯ ನಂತರವೂ ಮತಾಂತರ ನಿಯಂತ್ರಿಸಲು ಸಾಧ್ಯವೇ? ಆಸಾಧ್ಯವೇ? ಎಂಬುದು.
ಅನುವಾದ : ಗ.ರಾ. ಸುರೇಶ್

   

Leave a Reply