2005ರ ಮುಂಚಿನ ನೋಟುಗಳನ್ನು ಬಳಸದಿರಿ

ವಾಣಿಜ್ಯ - 0 Comment
Issue Date : 25.01.2014

 ಅರ್ಥ ವ್ಯವಸ್ಥೆಯಲ್ಲಿ ಚಲಾವಣೆ­ಯಲ್ಲಿ ಇರುವ 2005ಕ್ಕಿಂತ ಮುಂಚೆ ಮುದ್ರ­ಣಗೊಂಡಿರುವ  ರೂ. 5 ರಿಂದ ರೂ. 1,000 ವರೆಗಿನ ಮುಖ ಬೆಲೆಯ ಎಲ್ಲ ನೋಟು­ಗಳ ಬಳಕೆಯನ್ನು ಹೊಸ ಹಣಕಾಸು ವರ್ಷದ ಆರಂಭ­ದಿಂದ (2014­ರ ಏಪ್ರಿಲ್‌ 1ರಿಂದ) ಕೈಬಿಡುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರ್ಧಾ­ರವು ಅಚ್ಚರಿ ಮೂಡಿಸಿದೆ.

ಮಾರುಕಟ್ಟೆಯಲ್ಲಿ ಹಣದ ಚಲಾವಣೆಗೆ ಪರ್ಯಾ­ಯವಾಗಿ ಕಾರ್ಯ ನಿರ್ವಹಿ­ಸುತ್ತ ಅರ್ಥ ವ್ಯವಸ್ಥೆಗೆ ತೀವ್ರ ಬೆದರಿಕೆ ಒಡ್ಡಿ­ರುವ  ಕಪ್ಪು ಹಣ ಮತ್ತು ನಕಲಿ ನೋಟುಗಳ ಸಮಸ್ಯೆಗೆ  ಒಂದೇ ಏಟಿಗೆ ಕೊನೆ ಹಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳ­ಲಾಗಿದೆ ಎನ್ನಲಾಗಿದೆ.  ದೇಶ­ದಲ್ಲಿ ಸದ್ಯಕ್ಕೆ ಚಲಾವಣೆ­ಯಲ್ಲಿ ಇರುವ ನಕಲಿ ನೋಟುಗಳಲ್ಲಿ ಹೆಚ್ಚಿನವು 2005­ಕ್ಕಿಂತ ಮುಂಚೆ ಮುದ್ರಣ­ಗೊಂಡಿರುವುದೇ ಕೇಂದ್ರೀಯ ಬ್ಯಾಂಕ್‌ ಈ ನಿರ್ಧಾ­ರಕ್ಕೆ ಬರಲು ಮುಖ್ಯ ಕಾರಣವಾಗಿದೆ.

ಇದು, ಹಣದ ವಹಿವಾಟಿನಲ್ಲಿ ತೊಡ­ಗಿದವರಲ್ಲಿ ದಿಗಿಲು ಮೂಡಿಸಿರು­ವುದು ನಿಜವಾ­ದರೂ ಯಾರೊ­ಬ್ಬರೂ ಆತಂಕಪಡ­ಬೇಕಾಗಿಲ್ಲ. 2005­ಕ್ಕಿಂತ ಮುಂಚೆ ಮುದ್ರಣ­ಗೊಂಡಿರುವ ನೋಟುಗಳು ಮಾರ್ಚ್‌ 31ರ ನಂತರ ಚಲಾವಣೆಗೆ ಅನರ್ಹ­ಗೊಳ್ಳ­ಲಿರುವು­ದರಿಂದ  ಅಂತಹ ನೋಟುಗಳನ್ನು ಬ್ಯಾಂಕ್‌ ಶಾಖೆಗಳಿಗೆ ತೆರಳಿ ಬದಲಿಸಿ­ಕೊಳ್ಳ­ಬಹು­ದಾಗಿದೆ.

  ಬ್ಯಾಂಕ್‌ಗಳು ಇಂತಹ ನೋಟು ಸ್ವೀಕರಿಸಿ ಬದಲಿ ನೋಟು­ ನೀಡ­ಲಿವೆ. ಈ ವಿನಿಮಯ ಪ್ರಕ್ರಿಯೆ ಉಚಿತ. 

ಕಪ್ಪು ಹಣದ ಸಾಧ್ಯತೆ
ದೊಡ್ಡ ಮೊತ್ತದ ನಗದು ಲಾಕರ್‌ಗಳಲ್ಲಿ ಕಪ್ಪುಹಣವಾಗಿ ಶೇಖರಿಸಿಟ್ಟಿರುವ ಸಾಧ್ಯತೆ ಇದೆ. ಆರ್‌ಬಿಐನ ನಡೆಯಿಂದಾಗಿ ಲೆಕ್ಕಕ್ಕೆ ಸಿಗದ ಈ ಹಣ ಚಲಾವಣೆಗೆ ಬರುವ ನಿರೀಕ್ಷೆ ಇದೆ.

ಪರಿಣಾಮವೇನು?
ಲಾಕರ್‌ಗಳನ್ನು ತೆರೆಯಲು ಬ್ಯಾಂಕ್‌ಗಳಲ್ಲಿ ಮನವಿ ಹೆಚ್ಚಬಹುದು. ಹಳೆಯ ನೋಟುಗಳನ್ನು ಇಟ್ಟಿರುವವರು ಹೊರತೆಗೆಯಬಹುದು.

   

Leave a Reply