ನೈಸರ್ಗಿಕ ಕೃಷಿ

ಕೃಷಿ - 0 Comment
Issue Date : 03.12.2013

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಖಡಕಲಾಟ ಗ್ರಾಮದಲ್ಲಿ ಭೂಮಿಗೆ ರಸಗೊಬ್ಬರ ಹಾಕದೆ, ಸ್ವಲ್ಪವೂ ಕೀಟನಾಶಕ ಸಿಂಪಡಿಸದೆ  ಗೃಹೋಪಯೋಗಕ್ಕೆ ಬೇಕಾದ ಸತ್ವಯುತ ತರಕಾರಿ, ಆಹಾರಧಾನ್ಯಗಳನ್ನು ಸಮೃದ್ಧವಾಗಿ ಬೆಳೆಯುತ್ತಿರುವ ದಿವಾಕರ ಹರಿದಾಸರ ಸಾಧನೆ ಕೃಷಿಯನ್ನು ಅವಲಂಬಿಸಿರುವವರಿಗೆ ಮಾದರಿಯಾಗಿದೆ.  ಸುಮಾರು 30 ವರ್ಷಗಳಿಂದ  ಶೂನ್ಯ ಬಂಡವಾಳದಿಂದ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು ಅಲ್ಪ ನೀರಿನಲ್ಲಿ ಬಂಪರ್ ಬೆಳೆ ಬೆಳೆಯುತ್ತಿದ್ದಾರೆ. ನೈಸರ್ಗಿಕ ಕೃಷಿ ಪುಸ್ತಕಗಳನ್ನು ಓದಿ ಮೂರು ಎಕರೆ ಭೂಮಿಯಲ್ಲಿ ಸುಮಾರು 50 ಜಾತಿಯ ವಿವಿಧ ಗಿಡಮರಗಳಾದ ಸೋಯಾ, ಅವರೆ, ಬಿಳಿಜೋಳ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮೊದಲಾದ ಬೆಳೆಗಳನ್ನು ನೆಟ್ಟು ‘ಕಾಡು ಇದ್ದರೆ ನಾಡು’ ಎಂಬುದನ್ನು ಸಾಬೀತುಪಡಿಸಿದ್ದಾರೆ.

 ರೈತರು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಲಾಭದಾಯಕ ಬೇಸಾಯ ಮಾಡಬಹುದು ಮತ್ತು ಭವಿಷ್ಯದಲ್ಲಿ ಸದೃಢ ಮಾನವ ಸಂಪನ್ಮೂಲ, ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬಹುದು ಎಂಬುದು ನೈಸರ್ಗಿಕ ಕೃಷಿಕ ದಿವಾಕರ ಹರಿದಾಸ ಅವರ ಆಶಯ.

   

Leave a Reply