ಮಳೆ ಮಾಪನ ಕೇಂದ್ರ

ಗ್ರಾಮೀಣ - 0 Comment
Issue Date : 13.12.2013

ರೈತರಿಗೆ, ಜನಸಾಮಾನ್ಯರಿಗೆ ಗ್ರಾಮಗಳ ಮಟ್ಟದಲ್ಲಿಯೇ ಮಳೆ ಮಾಹಿತಿ ಒದಗಿಸಲು ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಮಳೆ ಮಾಪನ ಕೇಂದ್ರ ಅಳವಡಿಸುತ್ತಿದೆ.  ಪ್ರತಿ 15 ನಿಮಿಷಕ್ಕೊಮ್ಮೆ ಮಾಹಿತಿ ನೀಡುವ ಮಳೆ ಮಾಪನ ಯಂತ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಕೆಲವು ದಿನಗಳಲ್ಲೇ ರಾಜ್ಯದ ಯಾವುದೇ ಭಾಗದ ಜನ ತಾವಿರುವ ಜಾಗದಲ್ಲಿಯೇ ಕುಳಿತು ತಮ್ಮ ಗ್ರಾಮದ ಮಳೆ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಬಹುದು.

ಹಾವೇರಿ, ಕೊಪ್ಪಳ, ಚಿತ್ರದುರ್ಗ, ಗುಲ್ಬರ್ಗ ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಎಲ್ಲ ಗ್ರಾಮಪಂಚಾಯತಿಗಳಲ್ಲೂ ಮಳೆ ಮಾಪನ ಕೇಂದ್ರಗಳನ್ನು ಈಗಾಗಲೇ ಅಳವಡಿಸಲಾಗಿದೆ.

ಪ್ರಯೋಜನ: ರೈತರಿಗೆ ಸ್ಥಳೀಯ ಮಟ್ಟದಲ್ಲಿಯೇ ಮಾಹಿತಿ ನೀಡಬೇಕು ಎನ್ನುವ ಉದ್ದೇಶದಿಂದ ಹೋಬಳಿವಾರು ಮಳೆಮಾಪನ ಯಂತ್ರಗಳನ್ನು ಸ್ಥಾಪಿಸಿ ಮಾಹಿತಿ ನೀಡಲಾಗುತ್ತಿದೆ. ಗ್ರಾಮಪಂಚಾಯತಿಗಳಲ್ಲಿ ಅಳವಡಿಸುವ ಮಳೆ ಮಾಪನ ಕೇಂದ್ರಗಳಿಂದ ಪ್ರತಿ 15 ನಿಮಿಷಕ್ಕೊಮ್ಮೆ ಸ್ವಯಂ ಚಾಲಿತವಾಗಿ ಬೆಂಗಳೂರಿನ ಯಲಹಂಕದಲ್ಲಿರುವ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಸರ್ವರ್ ಗೆ ಮಾಹಿತಿ ರವಾನೆಯಾಗುತ್ತದೆ.  ಅಲ್ಲಿ ರಾಜ್ಯದ ಎಲ್ಲ ಕಡೆಗಳಿಂದ ಬರುವ ಮಾಹಿತಿ ವಿಶ್ಲೇಷಿಸಿ ಪ್ರಕಟಿಸಲಾಗುತ್ತದೆ.

ಮಳೆ ಮಾಪನ ಯಂತ್ರವನ್ನು ಪ್ರಾಕೃತಿಕ ವಿಕೋಪ ನಿರ್ವಹಣ ಕೇಂದ್ರವೇ ಅಭಿವೃದ್ಧಿಪಡಿಸಿದೆ.  ವಿಶ್ವದಲ್ಲಿಯೇ ಅತ್ಯಂತ ಕಡಿಮೆ ವೆಚ್ಚದ ಜಿಪಿಎಸ್ ಆಧಾರಿತ ಮಳೆ ಮಾಪನ ಯಂತ್ರ ಎಂಬ ಮೆಚ್ಚುಗೆಯನ್ನು ಪಡೆದಿದೆ.  ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ ಯಂತ್ರಕ್ಕೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗುತ್ತದೆ.

 

   

Leave a Reply