ಪಾಕಿಸ್ತಾನ ಧ್ವಜ ಪ್ರಕರಣದ ತನಿಖೆಗೆ ಮಠಾಧೀಶರ ಒತ್ತಾಯ

ಬಿಜಾಪುರ - 0 Comment
Issue Date : 17.12.2013

ನಾಲ್ಕು ವರ್ಷಗಳ ಹಿಂದೆ ನಗರದ ಟಿಪ್ಪು ಸುಲ್ತಾನ್‌ ಚೌಕ್‌ನಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸುವಂತೆ ಒತ್ತಾಯಿಸಿ ಮಠಾಧೀಶರ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳವರು ಪ್ರತಿಭಟನೆ ನಡೆಸಿದರು.

ಶಿರಾತ–ಎ-ಮುಸ್ತಖಿಮ್, ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡ ಳಿಯ ಸಹಯೋಗದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಟಿಪ್ಪು ಸುಲ್ತಾನ್‌ ಚೌಕ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ರಿತ್ವಿಕ್‌ ಪಾಂಡೆ ಅವರಿಗೆ ಮನವಿ ಸಲ್ಲಿಸಲಾಯಿತು.

ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ‘ಪಾಕಿಸ್ತಾನ ಧ್ವಜ ಹಾರಿಸಿದ ಕಿಡಿಗೇಡಿಗಳನ್ನು ಇಲ್ಲಿಯ ವರೆಗೂ ಬಂಧಿಸದಿರುವುದು ನೋವಿನ ಸಂಗತಿ. ಕೂಡಲೇ ರಾಜ್ಯ ಸರ್ಕಾರ ಈ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಕೊಲ್ಹಾರ ದಿಗಂಬರೇಶ್ವರ ಸಂಸ್ಥಾನ ಮಠ ಕಲ್ಲಿನಾಥ ದೇವರು, ಬುರಣಾ ಪುರ ಸಿದ್ದಾರೂಢ ಮಠದ ಯೋಗೇಶ್ವರಿ ಮಾತಾ, ಶಿವಬಸವ ಆಶ್ರಮದ ಶಂಭುಲಿಂಗ ಸ್ವಾಮೀಜಿ, ಚಿಕ್ಕಲಕಿಯ ಭಗೀರಥ ಪೀಠದ ಶಿವಾನಂದ ಶಿವಾ ಚಾರ್ಯರು, ಸುರೇಶ ಗೊಣಸಗಿ, ಬಸೀರ್‌ ಲಾಹೋರಿ, ಕೆಂಚಪ್ಪ ಬಿರಾ ದಾರ, ಬಂದೇನವಾಜ ಮಹಾಬರಿ, ಅಡಿವೆಪ್ಪ ಸಾಲಗಲ್‌, ಅಶೋಕ ಚಲ ವಾದಿ, ಅಜೀಂ ಇನಾಮದಾರ, ಡಾ.ದಸ್ತಗೀರ ಮುಲ್ಲಾ, ಕಮಾಲಸಾಬ್ ಇನಾಮದಾರ, ರಮಾನಂದ ಸಾಗರ ಮಾತನಾಡಿದರು.

 

 

   

Leave a Reply