ಅಬಲಾಶ್ರಮದಲ್ಲಿ ವಾಲ್ಮೀಕಿ ಜಯಂತಿ

ಬೆಂಗಳೂರಿನ ಸುದ್ದಿಗಳು - 0 Comment
Issue Date : 13.10.2014

ಬೆಂಗಳೂರು: ರಾಮಾಯಣ ಮಹಾಕಾವ್ಯದ ಕರ್ತೃ ಆದಿಕವಿ ವಾಲ್ಮೀಕಿಯನ್ನು ಸ್ಮರಿಸಿದರೆ ಜೀವನ ಪಾವನವಾಗುವುದರ ಜತೆಗೆ ಸ್ವಚ್ಛವಾಗುತ್ತದೆ ಎಂದು ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಮೈ.ಚ. ಜಯದೇವ ಅವರು ಅಭಿಪ್ರಾಯಪಟ್ಟರು.

ಅ. 8ರಂದು ಬಸವನಗುಡಿಯ ಅಬಲಾಶ್ರಮದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡು ಪ್ರಥಮಗಳಿಗೆ ಕಾರಣರಾದವರು ವಾಲ್ಮೀಕಿ ಮಹರ್ಷಿ. ಒಂದು, ಅವರು ಆದಿಕಾವ್ಯ ರಚಿಸಿದ್ದು. ಇನ್ನೊಂದು ಈ ಮೂಲಕ ಅವರು ಆದಿಕವಿಯಾದದ್ದು. ಈ ಎರಡು ಪ್ರಥಮಗಳಿಗೆ ಕಾರಣರಾದ ವಾಲ್ಮೀಕಿಯವರದ್ದು ಅಸಾಮಾನ್ಯ ವ್ಯಕ್ತಿತ್ವ ಎಂದವರು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಸ್ವಾಮಿ ಮಂಗಲಾನಾಥನಂದಜೀ ಮಹಾರಾಜ್, ವಿ.ಹಿಂ.ಪ.ದ ಅ.ಪ. ಸುರೇಶ್‌ಕುಮಾರ್, ಅಬಲಾಶ್ರಮದ ಕಾರ್ಯದರ್ಶಿ ಬಾ.ವೆಂ. ಶೇಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

   

Leave a Reply