ABVPಯಿಂದ ‘ಸುರಕ್ಷಿತ ಮಹಿಳೆ – ಸ್ವಾಸ್ಥ್ಯ ಸಮಾಜ’ ಎಂಬ ಸಭೆ

ದಕ್ಷಿಣ ಕನ್ನಡ - 0 Comment
Issue Date : 17.01.2014

 ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಂಗಳೂರು ಘಟಕದ ವತಿಯಿಂದ ಜ.11 ಶನಿವಾರ ನಗರದಲ್ಲಿ  ಸುರಕ್ಷಿತ ಮಹಿಳೆ-ಸ್ವಾಸ್ಥ್ಯಸಮಾಜ ಕುರಿತ ದುಂಡು ಮೇಜಿನ   ಸಮಾರಂಭ ನಡೆಯಿತು.  

ಭಾರತದ ಧಾರ್ಮಿಕ ಮತ್ತು ಕೌಟುಂಬಿಕ ಮೌಲ್ಯಗಳು ಮಹಿಳೆಯ ರಕ್ಷಣೆಗೆ  ಪೂರಕವಾಗಿವೆ. ಆ ಮೌಲ್ಯಗಳ ಬಗ್ಗೆ ನಾವು ಹೆಮ್ಮೆಪಡ ಬೇಕು. ವೋಟ್‌ಬ್ಯಾಂಕ್‌ಗಾಗಿ ಆ ಮೌಲ್ಯಗಳನ್ನು ಕಳಚ ಬೇಡಿ, ಒಳ್ಳೆಯ ಕೆಲಸವನ್ನು ಯಾವುದೇ ಪಕ್ಷ, ಸಂಘಟನೆ, ವ್ಯಕ್ತಿ ಕೈಗೊಂಡರೆ ಅದನ್ನು ಬೆಂಬಲಿಸುವ ಮನೋಧರ್ಮ ಬೆಳೆಸಿ ಕೊಳ್ಳೋಣ ಎಂದು ಹೇಳಿದ ತೇಜಸ್ವಿನಿ ಮಹಿಳೆಯರ ಮನೋಬಲ ವೃದ್ಧಿಸುವ ಕೆಲಸ ಆಗ ಬೇಕು ಎಂದರು. ಆಡಳಿತ ವೈಫಲ್ಯ ಕರಾವಳಿ,ಧಾರವಾಡ, ಟಿ.ನರಸೀಪುರ ಹೀಗೆ ರಾಜ್ಯದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ, ಬ್ಲೇಕ್‌ಮೇಲ್ ಪ್ರಕರಣಗಳು ಹೆಚ್ಚುತ್ತಿದೆ. ಡ್ರಗ್ ಮಾಫಿಯಾ, ಫೇಸ್‌ಬುಕ್, ಲವ್ ಜೆಹಾದ್, ಹೆಣ್ಮಕ್ಕಳ ಅಪಹರಣಗಳು ವ್ಯಾಪಕವಾಗಿ ನಡೆಯುತ್ತಿದ್ದರೂ ಸರಕಾರ ಇವುಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಸೋತಿದೆ. ಮಾಫಿಯಾಗಳ ಹೆಡೆಮುರಿ ಕಟ್ಟುವಲ್ಲಿ ಗೃಹ ಇಲಾಖೆ ಸಂಪೂರ್ಣವಾಗಿ ಸೋತಿದೆ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಹೇಳಿದರು.

ಕರಾವಳಿಯಲ್ಲಿ ಹುಡುಗಿಯರು ಇನ್ನೊಬ್ಬರಲ್ಲಿ ಮಾತನಾಡಲಾರದ ಸ್ಥಿತಿ ಇದ್ದರೆ ಆಡಳಿತ ವೈಫಲ್ಯವೇ ಅದಕ್ಕೆ ಕಾರಣ. ಸಮಾಜದ ಶಾಂತಿ, ನಿಮ್ಮದಿ, ಸಾಮರಸ್ಯಕ್ಕೆ ಸರಕಾರವೇ ವೇದಿಕೆ ರೂಪಿಸ ಬೇಕು. ನೈತಿಕ ಪೊಲೀಸ್ ಗಿರಿಯ ಕುರಿತು ಮಾತನಾಡುವ ನಾವು ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಅಗತ್ಯವಾದ ವ್ಯವಸ್ಥೆ ರೂಪಿಸುವಲ್ಲಿ ಸೋತಿದ್ದೇವೆ ಎಂದು ಮಂಜುಳಾ ಅವರು ಅಭಿಪ್ರಾಯ ಪಟ್ಟರು. 

ಉದ್ಘಾಟನಾ ಸಮಾರಂಭದಲ್ಲಿ ಎಸ್‌ಡಿಎಂ ವ್ಯವಹಾರಾಡಳಿತ ಕಾಲೇಜಿನ ಪ್ರಾಚಾರ್ಯೆ ಅರುಣಾ ಪಿ.ಕಾಮತ್, ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್, ನಗರ ಕಾರ್ಯದರ್ಶಿ ಚೇತನ್ ಉಪಸ್ಥಿತರಿದ್ದರು. ರಾಜ್ಯ ಉಪಾಧ್ಯಕ್ಷ ರೋಹಿಣಾಕ್ಷ ಶಿರ್ಲಾಲು ಪ್ರಾಸ್ತಾವಿಕ ಭಾಷಣ ಮಾಡಿದರು. ಕು.ಸುಕನ್ಯಾ ಸ್ವಾಗತಿಸಿದರು. ಕು.ಭಾರತಿ ವಂದಿಸಿದರು. ಬಳಿಕ ಕರಾವಳಿಯಲ್ಲಿನ ಮಹಿಳಾ ನಾಪತ್ತೆ ಪ್ರಕರಣಗಳು, ಕರಾವಳಿಯ ಮಹಿಳೆಯರು ಎಷ್ಟು ಸುರಕ್ಷಿತ? ಮತ್ತು ಮಹಿಳಾ ಸುರಕ್ಷತೆ-ಸಬಲೀಕರಣದಲ್ಲಿ ಸಮಾಜ, ಸರಕಾರಗಳ ಜವಾಬ್ದಾರಿ ಕುರಿತು ವಿಶ್ಲೇಷಣೆ ನಡೆಯಿತು. ಇದರಲ್ಲಿ ವಿವಿಧ ಕ್ಷೇತ್ರಗಳ ತಜ್ಞರು ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡರು.

   

Leave a Reply