ಎಬಿವಿಪಿ ವತಿಯಿಂದ ವಿವೇಕಾನಂದರ 150ನೇ ವರ್ಷಾಚರಣೆ:ವಿವೇಕೋತ್ಸವ-2014

ದಕ್ಷಿಣ ಕನ್ನಡ - 0 Comment
Issue Date : 09.01.2014

ಮಂಗಳೂರು: ಮಹಿಳಾ ಸುರಕ್ಷತೆಯ ಕತ್ತಲು, ಭ್ರಷ್ಟಾಚಾರಯುಕ್ತ ಆರ್ಥಿಕ ಅಸಮಾನತೆ, ಆಂತರಿಕ ಹಾಗೂ ಬಾಹ್ಯ ಗಡಿಸಮಸ್ಯೆ ದೇಶದ ಮುಂದಿರುವ ಸವಾಲುಗಳಿವೆ.  ಈ ನಿಟ್ಟಿನಲ್ಲಿ ದೇಶದ ಭವಿಷ್ಯಕ್ಕಾಗಿ ಯುವಸಮೂಹ ವಿವೇಕಾನಂದರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದು ಎಬಿವಿಪಿಯ ರಾಜ್ಯಾಧ್ಯಕ್ಕಷ ಡಾ| ಬಿ.ವಿ. ವಸಂತ ಕುಮಾರ್ ಕರೆ ನೀಡಿದ್ದಾರೆ. ಜ.7 ರಂದು ನಗರದ ಪುರಭವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾಮೀ ವಿವೇಕಾನಂದರ 150ನೇ ವರ್ಷಾರಣೆಯ ಸಮಾರೋಪದ ನಿಮಿತ್ತ ಆಯೋಜಿಸಿದ್ದ ವಿವೇಕೋತ್ಸವ-2014ರಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

 ಮಂಗಳಾಂಬಿಕೆಯ ತವರಿನಲ್ಲಿ ಇತ್ತೀಚೆಗೆ ದೇರಳಕಟ್ಟೆಯ ಘಟನೆಯಿಂದ ಮಹಿಳೆಯರು ಸುರಕ್ಷಿತವಾಗಿಲ್ಲ.  ಮಾತೃಸ್ಥಾನದಲ್ಲಿರುವ ಹೆಣ್ಣಿಗೆ ಸ್ಥಾನಮಾನ ಸಿಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಮಹಿಳೆಯರು, ಜನಸಾಮಾನ್ಯರ ಕಡೆಗಣನೆಯಿಂದ ದೇಶ ಪತವಾಗುತ್ತದೆ ಎನ್ನುವುದ ಬಲವಾಗಿ ನಂಬಿದ್ದ ವಿವೇಕಾನಂದರು ದೇಶನ ಉನ್ನತಿಗೆ ಶ್ರಮಿಸಿದ್ದರು.  ಸ್ವಾಭಿಮಾನದಿಂದ ಹೆಣ್ಣಿನಲ್ಲಿ ಜಗನ್ಮಾತೆಯನ್ನು ಕಾಣುವ ಪುರಷರು ಜನಿಸಿದಾಗ ದೇಶದಲ್ಲಿ ಮಹಿಳೆಗೆ ಸ್ಥಾನಮಾನ ದೊರೆಯುತ್ತದೆ.  ದೇಶ, ಮನೆಯಲ್ಲಿ ಬದಲಾವಣೆ ತರುವ ಸಂಕಲ್ಪ ತೊಡಬೇಕು.  ಮಹಿಳೆಯರ ಸುರಕ್ಷತೆಯೇ ದೇಶದ, ಪರಿಸರದ ಸಂರಕ್ಷಣೆಯಾಗಿದೆ ಎಂದರು.

 ಸಾವಿರಾರು ವಿದ್ಯಾರ್ಥಿಗಳು ವಿವಿಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ  ಪಾಲ್ಗೊಂಡರು.  

   

Leave a Reply