ಅಡುಗೆ ಕಲಿತು ಸಂಪಾದನೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 05.08.2014

ಬೆಂಗಳೂರು: ಅಬಲಾಶ್ರಮವು ಕಳೆದ ನೂರು ವರ್ಷಕ್ಕೂ ಹೆಚ್ಚು ಕಾಲ (ಸ್ಥಾಪನೆ: 1905) ಅವಕಾಶವಂಚಿತ ಹೆಣ್ಣುಮಕ್ಕಳ ಅಸಹಾಯಕ ಮಹಿಳೆಯರ, ಪುನರ್ವಸತಿ – ಪುನಶ್ಚೇತನ ಕಾರ್ಯ ಕೈಗೊಂಡಿರುವ ಸ್ವಯಂಸೇವಾ ಸಂಸ್ಥೆ. ಸಮಾಜದ ಆರ್ಥಿಕ, ದುರ್ಬಲ ಹೆಣ್ಣು ಮಕ್ಕಳ ಏಳಿಗೆಗಾಗಿ ಮೀಸಲಿರುವ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಅಡುಗೆ ಕಲಿತು ಸಂಪಾದನೆ – ಉಚಿತ ತರಬೇತಿಗೆ ಸೇರಿ, ವಿವಿಧ ರೀತಿಯ ತಿನಿಸುಗಳ ತಯಾರಿಕೆಯನ್ನು ವ್ಯವಸ್ಥಿತವಾಗಿ ಕಲಿತು, ಆದಾಯ ಹೆಚ್ಚಿಸಿಕೊಳ್ಳಬಹುದು. ತರಬೇತಿ ಆಗಸ್ಟ್ 4ರಿಂದ ಪ್ರಾರಂಭವಾಗಿದೆ.

ವಿವರಗಳಿಗೆ: ಅಬಲಾಶ್ರಮ, ಡಾ.ಡಿ.ವಿ.ಜಿ. ರಸ್ತೆ, ಬಸವನಗುಡಿ, ಬೆಂಗಳೂರು – 560 004. ದೂರವಾಣಿ: 94833 34326

   

Leave a Reply