ಅರಳುತ್ತಿರುವ ಪ್ರತಿಭೆ

ಸಾಧನೆ - 0 Comment
Issue Date : 14.05.2015

ಚಿಕ್ಕಬಳ್ಳಾಪುರ: ಬೆಳೆಯುವ ಪೈರು ಬಗ್ಗೆ ಮೊಳಕೆಯಲ್ಲೇ ತಿಳಿಯಬಹುದೆಂದು ಹಿರಿಯರು ಹೇಳುತ್ತಾರೆ ಇದು ಇಲ್ಲಿನ ಪ್ರತಿಭೆ ಚಿನ್ಮಯಿ ಶಂಕರ್ ಮಠದ್‌ಗೆ ಸಲ್ಲುತ್ತದೆ.
17 ವರ್ಷದ ಚಿನ್ಮಯಿ ಶಂಕರ್ ಮಠದ್ ಅವರ ತಂದೆ ಪ್ರಸಿದ್ಧ ಗಾಯಕರು ಹಾಗೂ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾದ ಮಹಾಲಿಂಗಯ್ಯ, ಮಠದ್ ತಾಯಿ ತ್ರಿವೇಣಿ ಈರ‌್ವರೂ ಸಂಗೀತ ಆರಾಧಕರು. ಇನ್ನು ಮಗನ ಬಗ್ಗೆ ಹೇಳಬೇಕೆ? ಇದರೊಂದಿಗೆ ಆತ ಹಲವಾರು ರೀತಿಯ ಪ್ರತಿಭಾವಂತ. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿ, ಎನ್‌ಸಿಸಿಯಲ್ಲಿ ಈತನ ಸೇವೆ ಅಪ್ರತಿಮ. ಬೆಂಗಳೂರಿನ ಬಿ ತಂಡದ ಚಿನ್ಮಯಿ ಶಂಕರ್ ಎನ್‌ಸಿಸಿಯಲ್ಲಿ ಎ, ಬಿ, ಗ್ರೇಡ್ ಪ್ರಶಸ್ತಿ ಭಾಜಕ, ಅಲ್ಲದೆ ಆರ್.ಡಿ.ಸಿ. ಪುರಸ್ಕೃತ. ಒಟ್ಟು 8 ಕ್ಯಾಂಪ್‌ಗಳಲ್ಲಿ ಈತ ಪಾಲ್ಗೊಂಡು ಪ್ರತಿಭೆ ಸಾರಿದ್ದಾನೆ. ದೊಡ್ಡಬಳ್ಳಾಪುರ, ಬೆಂಗಳೂರು, ಮುಳಬಾಗಿಲು, ಬೆಂಗಳೂರು, ಮೈಸೂರು ಮತ್ತು ಬೆಂಗಳೂರು ಕ್ಯಾಂಪ್‌ನಲ್ಲಿ ಪ್ರತಿಭೆ ತೋರಿದ್ದಾನೆೆ. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಪಾಲ್ಗೊಂಡ ಕೀರ್ತಿ ಈತನದು.
ಇದರ ಜೊತೆಗೆ ಹಲವಾರು ವಾದ್ಯಗಳನ್ನು ನುಡಿಸುವ ಕಲಾವಿದ. ತಬಲ, ಹಾರ್ಮೋನಿಯಂ, ಗಿಟಾರ್, ಕಾಂಗ್ಯೋ, ತಮಟೆ, ಕೀಬೋರ್ಡು ಅಲ್ಲದೆ ಅತ್ಯುತ್ತಮ ಕಂಠ ಪಡೆದು ತನ್ನ ಸಾಧನೆಗೆ ಶಾಲೆಯ ನಾರೆಪ್ಪರೆಡ್ಡಿ, ವೆಂಕಟೇಶ್, ಬಸವರಾಜ್ ಶಿಕ್ಷಕರೇ ಕಾರಣ ಎಂದು ವಿನಮ್ರನಾಗಿ ಸ್ಮರಿಸುತ್ತಾನೆ. ಇದೂ ಅಲ್ಲದೆ ಎನ್.ಸಿ.ಸಿ. ತಂಡದಲ್ಲಿ ದೆಹಲಿಯಲ್ಲಿ ಕರ್ನಾಟಕ ಪರವಾಗಿ ಪಾಲ್ಗೊಂಡ ಕೀರ್ತಿ ಇದೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಗಳು, ರಾಜ್ಯಪಾಲರಿಂದ ಪ್ರಶಂಸೆ ಪಡೆದವ. ಜನ ಜಾಗೃತಿ ಶಿಬಿರದಲ್ಲಿಯೂ ಸಹ ಈತ ಪಾಲ್ಗೊಂಡಿದ್ದಾನೆ. ದೆಹಲಿಯಲ್ಲಿನ ಕ್ಯಾನ್ಸರ್ ವಿರುದ್ಧ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷ.
ಇದರ ಜೊತೆಗೆ ತಂದೆಯವರಿಂದ ಬಂದ ಬಳುವಳಿ ಗಾಯನ. ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತದಲ್ಲಿ ಪರಿಣತ ಉತ್ತಮ ಗಾಯಕ. ಹೀಗಾಗಿ ಹಲವಾರು ಕಾರ‌್ಯಕ್ರಮದಲ್ಲಿ ಸಂಗೀತ ಕಾರ‌್ಯಕ್ರಮ ನೀಡಿರುವುದು ಈತನ ನಮ್ರತೆಗೆ, ಪ್ರತಿಭೆಗೆ ಸಾಕ್ಷಿ. ಇವರದೇ ಆದ ಗಾನ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಈತ ಸಂಗೀತ, ವಾದ್ಯಗಳನ್ನು ನುಡಿಸುವ ಶಿಕ್ಷಕನೂ ಸಹ. ಸಂಗೀತ ಕಾರ‌್ಯಕ್ರಮದಲ್ಲಿ ತಂದೆಯವರೊಂದಿಗೆ ಸಂಗೀತ ಕಾರ‌್ಯಕ್ರಮ ನೀಡುವ ಪ್ರತಿಭಾವಂತ. ಈತನ ಪ್ರತಿಭೆ ಮತ್ತಷ್ಟು ಅರಳಿ, ಪುರಸ್ಕೃತನಾಗಲಿ. ಈ ಕಾರಣಕ್ಕಾಗಿ ಇತ್ತೀಚೆಗೆ ಈತನನ್ನು ಶಾಸಕರು ಪುರಸ್ಕರಿಸಿದರು.

   

Leave a Reply