ಬಜರಂಗದಳದಿಂದ 200 ಗೋವುಗಳ ರಕ್ಷಣೆ

ಮಂಡ್ಯ - 0 Comment
Issue Date : 06.10.2014

ಮಂಡ್ಯ: 200ಕ್ಕೂ ಹೆಚ್ಚು ಗೋವುಗಳನ್ನು ಇಲ್ಲಿನ ಬಜರಂಗದಳ ಹಾಗೂ ಸಂಘದ ಕಾರ್ಯಕರ್ತರು ರಕ್ಷಿಸಿದ್ದಾರೆ. ಈ ಗೋವುಗಳನ್ನು ಕಾನೂನು ಬಾಹಿರವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಬಜರಂಗದಳ ಕಾರ್ಯಕರ್ತರು ಗೋವುಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳನ್ನು ತಡೆದರು. ಅನಂತರ ಪೊಲೀಸರಿಗೆ ಸುದ್ದಿ ತಲುಪಿಸಿದ ಬಳಿಕ ಅವರು ಈ ಟ್ರಕ್‌ಗಳನ್ನು ತಮ್ಮ ವಶಕ್ಕೆ ಪಡೆದರು. ಆಮೇಲೆ ಗೋವುಗಳನ್ನು ಹತ್ತಿರದ ಒಂದು ಫಾರ್ಮ್‌ಗೆ ಸಾಗಿಸಲಾಯಿತು. ಇವುಗಳನ್ನು ಸಮೀಪದ ಗೋ ಶಾಲೆಗೆ ಸೇರಿಸಲಾಗುವುದೆಂದು ಪೊಲೀಸರು ಹೇಳಿದ್ದಾರೆ.

ಬಜರಂಗದಳದ ಮುಖಂಡ ಮಂಜುನಾಥ ನೇತೃತ್ವದಲ್ಲಿ ಸಂಘ ಪರಿವಾರದ ಹಲವು ಕಾರ್ಯಕರ್ತರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

   

Leave a Reply