ಬ್ಯಾಂಕ್ ಖಾತೆ ಇಲ್ಲದವರೂ ಎಟಿಎಂ ಬಳಸಲು ಸಾಧ್ಯ

ವಾಣಿಜ್ಯ - 0 Comment
Issue Date : 13.02.2014

ದೇಶದ ಬ್ಯಾಂಕ್ ಖಾತೆ ಇಲ್ಲದವರಿಗೆ ಆರ್ ಬಿಐ ಒಂದು ಸಿಹಿ ಸುದ್ದಿ ನೀಡಿದೆ. ಬ್ಯಾಂಕ್ ಖಾತೆ ಇಲ್ಲದವರು ಸಹ ಎಟಿಎಂ ನಿಂದ ಇನ್ನು ಮುಂದೆ ಹಣ ಪಡೆದುಕೊಳ್ಳುವ ಸೌಲಭ್ಯ ನೀಡಲಾಗುವುದು. ಮೊಬೈಲ್ ತಂತ್ರಜ್ಞಾನದ ಬಳಕೆಯಿಂದ ಈ ಸೇವೆ ನೀಡಲು ಸಾಧ್ಯವಾಗಿದೆ ಎಂದು ಆರ್ ಬಿಐ ಗವರ್ನರ್  ರಘರಾಮ್ ರಾಜನ್ ಫೆ. 12ರಂದು ತಿಳಿಸಿದ್ದಾರೆ.

ಪ್ರಸ್ತುತ ಬ್ಯಾಂಕ್ ಖಾತೆ ಹೊಂದಿರುವವರು ಮಾತ್ರ ತಮ್ಮ ಎಟಿಎಂ ಕಾರ್ಡ್ ಬಳಕೆ ಮಾಡಿ ದುಡ್ಡು ಪಡೆದುಕೊಳ್ಳಬಹುದಾಗಿದೆ. ಇತಂಹ ಮತ್ತಷ್ಟು ವಿನೂತನ ಸೌಲಭ್ಯಗಳ ಅಗತ್ಯವಿದೆ ಎಂದು ರಾಜನ್ ಹೇಳಿದ್ದಾರೆ. 

ಮೊಬೈಲ್ ಮೂಲಕ ಹಣ ಕಳಿಸುವ ಈ ವಿಧಾನ ಅತ್ಯಂತ ಸುಲಭದ್ದಾಗಿದೆ. ಆದರೂ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕಿದೆ.  ಮೊಬೈಲ್ ವ್ಯಾಲೆಟ್ ಗಳನ್ನು ನಗದೀಕರಣಗೊಳಿಸುವುದು ಮತ್ತು ಬ್ಯಾಂಕ್ ಖಾತೆ ಹಾಗೂ ಮೊಬೈಲ್ ವ್ಯಾಲೆಟ್ ಮಧ್ಯೆ ಸಂಪರ್ಕ ಕಲ್ಪಿಸುವ ಸುರಕ್ಷಿತ ವಿಧಾನಗಳನ್ನು ನಾವು ಕಂಡುಕೊಂಡರೆ ನಗದು ವಹಿವಾಟು ಪ್ರಕ್ರಿಯೆಯಲ್ಲಿ  ಮಹತ್ವದ ಸಾಧನೆಯಾಗಲಿದೆ. 

ಹಣ ಪಡೆಯುವ ವಿಧಾನ ಹೀಗಿದೆ:

  • ಹಣ ಕಳುಹಿಸಲು ಗ್ರಾಹಕ ಬ್ಯಾಂಕಿನ ಖಾತೆಯಿಂದ ಎಟಿಎಂ ಮೂಲಕ ಹಣ ಹಿಂಪಡೆಯಬೇಕು.
  • ನಿರ್ದಿಷ್ಟ ಮೊತ್ತವನ್ನು ಪಾವತಿ ಮಾಡಬೇಕಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಒಂದು ಕೋಡ್ ರವಾನಿಸಲ್ಪಡುತ್ತದೆ.
  • ಆ ಕೋಡ್ ನ್ನು ಸಮೀಪದ ಎಟಿಎಂನಲ್ಲಿ ನಮೂದಿಸಿ ಹಣವನ್ನು ಪಡೆಯಬಹುದು.
   

Leave a Reply