ಭಜನೋತ್ಸವದ ಪ್ರಶಸ್ತಿ ಪ್ರದಾನ

ಜಿಲ್ಲೆಗಳು ; ಬೆಂಗಳೂರಿನ ಸುದ್ದಿಗಳು - 0 Comment
Issue Date : 13.10.2014

ಬೆಂಗಳೂರು: ಸತ್ಸಂಗ ಭಜನ ಮಹಾಮಂಡಳಿ ಸಭಾ ಮತ್ತು ವಿಶ್ವ ಹಿಂದು ಪರಿಷತ್ತಿನ ಸಹಯೋಗದಿಂದ ಆ. 21ರಂದು ಶ್ರೀ ಮಧುಸೂಧನಾನಂದಪುರಿ ಮಹಾಸ್ವಾಮೀಜಿ, ಓಂಕಾರ ಆಶ್ರಮ ಮಹಾಸಂಸ್ಥಾನ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಗಾಯನ ಸಮಾಜದಲ್ಲಿ ಭಜನೋತ್ಸವ ಸಮಾರೋಪ ಸಮಾರಂಭ ನಡೆಯಿತು.

ಸಂಸ್ಥೆಯ ಅಧ್ಯಕ್ಷರಾದ ವೆಂಕಟರಾಮಯ್ಯನವರು ಸಭೆಗೆ ಎಲ್ಲರನ್ನು ಸ್ವಾಗತಿಸುತ್ತಾ-ಸಂಸ್ಥೆಯು ಹಮ್ಮಿಕೊಂಡಿರುವ ಈ ಭಜನೋತ್ಸವ ಸ್ಫರ್ಧೆಯು 8 ತಿಂಗಳ ಕಾಲ ಬೆಂಗಳೂರಿನ ವಿವಿಧ ಬಡಾವಣೆಯ ದೇವಾಲಯಗಳಲ್ಲಿ ನಡೆದು 85 ಭಜನಾ ತಂಡಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಯಶಸ್ವಿಗೊಳಿಸಿ ರುವುದಾಗಿ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಟಿ.ಎಸ್. ಮಲ್ಲಿಕಾರ್ಜುನ ರವರು ಸಂಸ್ಥೆಯ ವಿವಿಧ ಕಾರ್ಯಕ್ರಮಗಳ ವಿವರಗಳ ಪ್ರಸ್ತಾವನೆಯನ್ನು ಮಾಡಿ ಬಹುಮಾನ, ಪ್ರಶಸ್ತಿಯನ್ನು ಪಡೆದ ತಂಡಗಳ ಪರಿಚಯವನ್ನು ಸಭೆಗೆ ಮಾಡಿಕೊಟ್ಟರು.
ಮುತ್ತಾಂಜನೇಯಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀಮತಿ ಮಂಗಳಾ ಭಾಸ್ಕರ್‌ರವರು ಸ್ಪರ್ಧೆಯನ್ನು ನಡೆಸಿದ ಮತ್ತು ಭಾಗವಹಿಸಿದ ಭಜನಾ ತಂಡಗಳ ಬಗ್ಗೆ ವಿವರಗಳನ್ನು ಸಮಾರಂಭದಲ್ಲಿ ನೀಡಿದರು.
ಧರ್ಮಸ್ಥಳದ ಶ್ರೀ ಮಂಜುನಾಥ ಭಜನಾ ತರಬೇತಿ ಕೇಂದ್ರದ ಮುಖ್ಯಸ್ಥ ಜಯರಾಮ ನೆಲ್ಲಿತ್ತಾಯ ಹಾಗೂ ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಸಂಪರ್ಕ ಪ್ರಮುಖರಾದ ಬಿ.ಎಸ್. ಮಂಜುನಾಥ ಸ್ವಾಮಿ ಮತ್ತು ಪ್ರಸಿದ್ಧ ಗಾಯಕರಾದ ಶಶಿಧರ ಕೋಟೆಯವರು ಆಗಮಿಸಿದ್ದರು.
ಜಯರಾಮ ನೆಲ್ಲಿತ್ತಾಯರವರು ಭಜನೋತ್ಸವವನ್ನು ಈ ರೀತಿ ಯಶಸ್ವಿಯಾಗಿ ನಡೆಸಿ ತಂಡಗಳನ್ನು ಪ್ರೋತ್ಸಾಹಿಸಿ ಸಂಸ್ಕಾರಯುಕ್ತ ಭಕ್ತಿ ಸಮಾರಂಭ ಏರ್ಪಡಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ಮಂಜುನಾಥ ಸ್ವಾಮಿಯವರು ವಿ.ಹಿಂ. ಪ.ನ ಸ್ವರ್ಣ ಜಯಂತಿ ಮಹೋತ್ಸವದ ಈ ವರ್ಷದಲ್ಲಿ ಇಂತಹ ಭಜನೋತ್ಸವವನ್ನು ಹಮ್ಮಿಕೊಂಡಿದ್ದಕ್ಕಾಗಿ ಕಾರ್ಯಕ್ರಮ ನಿರ್ವಾಹಕರನ್ನು ಅಭಿನಂದಿಸಿ ದರು. ಪ್ರಶಸ್ತಿ ವಿಜೇತ ಮತ್ತು ಬಹುಮಾನ ಪಡೆದ ಬೆಂಗಳೂರು ಮಹಾನಗರದ ಎಲ್ಲಾ 85 ಭಜನಾ ತಂಡಗಳು ಭಾಗವಹಿಸಿದ್ದವು. ಮೊದಲಿಗೆ ಭಜನಾ ಕೀರ್ತನೆಗಳನ್ನು ತಂಡ ತಂಡವಾಗಿ ಹಾಡಿದರು.

ಅಧ್ಯಕ್ಷತೆ ವಹಿಸಿದ್ದ ಸ್ವಾಮೀಜಿಗಳು ಕಾರ್ಯಕ್ರಮ ಸಂಘಟಕರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ, ವಿಜೇತರಿಗೆ ಶಾಲು ಹೊದಿಸಿ ಹಾರಗಳನ್ನು ಹಾಕಿ ಪ್ರಶಸ್ತಿ ಪತ್ರ, ಬಹುಮಾನ ನೀಡಿ ಆಶೀರ್ವದಿಸಿದರು.

   

Leave a Reply