ಭುಜಂಗಾಸನ

ಅಷ್ಟಾಂಗ ಯೋಗ - 0 Comment
Issue Date : 26.03.2014

ಭುಜಂಗ ಎಂದರೆ ಸರ್ಪ ಎಂದರ್ಥ. ಈ ಆಸನದಲ್ಲಿ ಹೆಡೆ ಎತ್ತಿದ ಸರ್ಪದ ಆಕಾರವನ್ನು ಶರೀರವು ಹೋಲುವುದರಿಂದ, ಇದಕ್ಕೆ ‘ಭುಜಂಗಾಸನ’ ಎಂಬ ಹೆಸರು ಅನ್ವರ್ಥವಾಗಿದೆ.

ಮಾಡುವ ಕ್ರಮ:

1)    ಎರಡೂ ಪಾದಗಳನ್ನು ಒಟ್ಟಿಗೇ ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ ನಿಲ್ಲಬೇಕು.

2)   ಕಾಲುಗಳನ್ನು ಸ್ವಲ್ಪವೂ ಬದಲಿಸದೆ ಉಸಿರನ್ನು ಒಳಕ್ಕೆ ತೆಗೆದುಕೊಳ‍್ಳುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ನೇರವಾಗಿಡಬೇಕು.

3)    ಉಸಿರನ್ನು ಹೊರಕ್ಕೆ ಬಿಡುತ್ತಾ ಕಾಲುಗಳನ್ನು ಬಗ್ಗಿಸದೇ ಮುಂದಕ್ಕೆ ಬಗ್ಗಿ ಕೈಗಳನ್ನು ನೆಲದ ಮೇಲೆ ಇಡಬೇಕು.

4)   ಅನಂತರ ಯಾವುದಾದರೂ ಒಂದು ಕಾಲನ್ನು ಉದಾ: ಬಲಗಾಲನ್ನು ಹಿಂದೆ ಚಾಚಿ, ಇನ್ನೊಂದು ಕಾಲನ್ನು ಎರಡು ಕೈಗಳ ಮಧ್ಯೆ ಇಟ್ಟು, ಆದಷ್ಟೂ ಸೊಂಟವನ್ನು ಕೆಳಕ್ಕೆ ಒತ್ತಿ, ಬೆನ್ನನ್ನು ಹಿಂದಕ್ಕೆ ಬಗ್ಗಿಸಿ, ತಲೆ ಎತ್ತಿ ಆಕಾಶವನ್ನು ನೋಡಬೇಕು.

5)   ಅನಂತರ ಎಡಗಾಲನ್ನು ಬಲಗಾಲಿಗೆ ಸೇರಿಸಿ ಇದೇ ದೇಹವನ್ನು ನೇರವಾಗಿ ಇಡಬೇಕು.

6)   ಕೈ ಮತ್ತು ಕಾಲುಗಳ ಸ್ಥಿತಿಯನ್ನು ಸ್ವಲ್ಪವೂ ಬದಲಿಸದೆ ಸೂರ್ಯನಮಸ್ಕಾರ ಸ್ಥಿತಿ 6ರಲ್ಲಿ ವಿವರಿಸಿದಂತೆ ಅಷ್ಟಾಂಗಗಳನ್ನು ಮಾತ್ರ ನೆಲಕ್ಕೆ ತಗಲಿಸಿ ‘ಸಾಷ್ಟಾಂಗ ಪ್ರಣಿಪಾತಾಸನ ಮಾಡಿಬೇಕು. ಆ ಮೇಲೆ ಸಾಷಾಂಗ ಪ್ರಜಪಾತಾಸನದಿಂದ ಶರೀರವನ್ನು ಸ್ವಲ್ಪ ಮುಂದಕ್ಕೆ ತಂದು ಚಿತ್ರದಲ್ಲಿ ತೋರಿಸಿರುವಂತೆ ಇಡೀ ಶರೀರದ ಭಾರವನ್ನು ಅಂಗೈಗಳು ಮತ್ತು ಕಾಲ ಬೆರಳುಗಳ ಮೇಲೆ ಹೊರಿಸಿ ಬೆನ್ನನ್ನು ಸಾಧ್ಯವಾದಷ್ಟೂ ಹಿಂದಕ್ಕೆ ಬಗ್ಗಿಸಬೇಕು. ಇದೇ ಸ್ಥಿತಿಯಲ್ಲಿ ಒಂದೆರಡು ನಿಮಿಷಗಳಾದರೂ ಇರುವಂತೆ ಅಭ್ಯಾಸ ಮಾಡಬೇಕು.

ಲಾಭಗಳು:

ಭುಜಂಗಾಸನದಿಂದ ಕೈಗಳು ಮತ್ತು ಸೊಂಟ ಬಲಶಾಲಿಯಾಗುವವು. ಮೇರುದಂಡವೂ ಹೆಚ್ಚು ಸುದೃಢವಾಗುವುದು. ಸೊಂಟ ಮತ್ತು ತೊಡೆಗಳಲ್ಲಿನ ದುರ್ಬಲತೆ ಹಾಗೂ ನೋವು ದೂರವಾಗುವುದು. ಶಾಸಕೋಶದಲ್ಲಿನ ತೊಂದರೆ ನಿವಾರಣೆಯಾಗುವುದು. ಉದರದ ಅನೇಕ ದೋಷಗಳೂ ಇಲ್ಲವಾಗುವವು.

   

Leave a Reply