ಅಂಡಮಾನ್ ದ್ವೀಪದಲ್ಲಿ ಎಬಿವಿಪಿ ಸಮ್ಮೇಳನ

ಅ.ಭಾ.ವಿ.ಪ - 0 Comment
Issue Date : 28.04.2015

ಪೋರ್ಟ್‌ಬ್ಲೇರ್:  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಲ್ಲಿನ ಪಥೇರ್ ಗುಡ್ಡದಲ್ಲಿ ತನ್ನ 5ನೇ ವಿದ್ಯಾರ್ಥಿ ಸಮ್ಮೇಳನವನ್ನು ಮಾ. 29ರಂದು ಹಮ್ಮಿಕೊಂಡಿತ್ತು. ಸಂಘದ ಕ್ಷೇತ್ರ ಪ್ರಚಾರಕ್ ಪ್ರಮುಖ್ ರಾಮಪಾದ ಪೌಲ್ ಅವರು ಉದ್ಘಾಟಿಸಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ವೀರ ಸಾವರ್ಕರ್ ಕೇಂದ್ರೀಯ ವಿಶ್ವವಿದ್ಯಾಲಯ, ನೇತಾಜಿ ಸುಭಾಷ್‌ಚಂದ್ರ ಬೋಸರ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳ ನಿರ್ಮಾಣ ಹಾಗೂ ಇಲ್ಲಿನ ಪದವಿ ಕಾಲೇಜುಗಳಲ್ಲಿ ಮೂಲ ಸೌಲಭ್ಯಗಳನ್ನು ಹೆಚ್ಚಿಸುವುದು, ಪದವಿ ಕಾಲೇಜುಗಳಲ್ಲಿ ಶಿಕ್ಷಕರು ಹಾಗೂ ಪ್ರಾಂಶುಪಾಲ ಹುದ್ದೆಗಳ ಖಾಯಮಾತಿ ಸೇರಿದಂತೆ ಹಲವು ಕ್ರಮಗಳನ್ನು […]

ಜಮ್ಮು-ಕಾಶ್ಮೀರ ಸಂತ್ರಸ್ತರಿಗೆ ಎಬಿವಿಪಿ ನೆರವು

ಅ.ಭಾ.ವಿ.ಪ - 0 Comment
Issue Date : 12.11.2014

ಜಮ್ಮು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಜಮ್ಮು-ಕಾಶ್ಮೀರ ಸಂತ್ರಸ್ತರಿಗೆ ನೆರವು ನೀಡಲು ಇಲ್ಲಿನ ಕುಗ್ರಾಮ ಪ್ರದೇಶವಾಗಿರುವ ಅವಂತಿಪುರ ತಾಲೂಕಿನ ಗುಲ್ಜಾರ್‌ಪುರಕ್ಕೆ ಅ. 28ರಂದು ತೆರಳಿದರು. ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಹರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪವನ್‌ಶರ್ಮಾ ಅವರು ಗುಲ್ಜಾರ್‌ಪುರದ ಹಿರಿಯ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿ, 26 ವಿದ್ಯಾರ್ಥಿಗಳಿಗೆ ನಗದು ಹಣ ವಿತರಿಸಿದರು. ಈ ವಿದ್ಯಾರ್ಥಿಗಳು ಇತ್ತೀಚಿನ ಪ್ರವಾಹದಲ್ಲಿ ತೀವ್ರ ತೊಂದರೆಗೀಡಾಗಿದ್ದರು. ಸ್ಥಳೀಯರು, ಶಾಲೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪರಿಷತ್ತಿನ ಈ ಕಾರ್ಯವನ್ನು ಕೊಂಡಾಡಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಘೋಷಣೆ

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಘೋಷಣೆ

ಅ.ಭಾ.ವಿ.ಪ - 0 Comment
Issue Date : 30.11.2013

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನೂತನ ರಾಷ್ಟ್ರೀಯ ಅಧ್ಯಕ್ಞರಾಗಿ ಹೈದರಾಬಾದಿನ  ಪ್ರೊ. ಮುರಳಿ ಮನೋಹರ್ ಮತ್ತು ನೂತನ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ್ ಬೊರಿಕಾರ್ ಅವರು 2013-14ನೇ ಸಾಲಿಗೆ ಆಯ್ಕೆಯಾಗಿದ್ದಾರೆ.                                       ಪ್ರೊ.ಪಿ.ಮುರಳಿ ಮನೋಹರ್              ಶ್ರೀಹರಿ ಬೋರಿಕರ್ ಮುರಳಿ ಮನೋಹರ್ ಅವರು ಮೆಹಬೂಬ್ ನಗರ […]