ಬೊಜ್ಜು... ಮಕ್ಕಳನ್ನೂ ಕಾಡೀತು, ಹುಷಾರು..!

ಬೊಜ್ಜು… ಮಕ್ಕಳನ್ನೂ ಕಾಡೀತು, ಹುಷಾರು..!

ಆರೋಗ್ಯ - 0 Comment
Issue Date : 13.11.2013

  ಪುಟ್ಟ ಮಕ್ಕಳಂದ್ರೆ ಎಲ್ಲರಿಗೂ ಇಷ್ಟ. ಅವರ ತೊದಲು ಮಾತು, ಹಾಲ್ಗಲ್ಲದ ನಗು, ಹುಸಿ ಹಠ, ಅಂಬೆಗಾಲಿಡುವ ಪರಿ… ಎಲ್ಲವೂ ಚೆಂದವೇ. ಅದರಲ್ಲೂ ಗುಂಡಗೆ, ಮುದ್ದು ಮುದ್ದಾಗಿರುವ ಮಕ್ಕಳನ್ನು ನೋಡಿದೊಡನೆ ಒಮ್ಮೆ ಕೆನ್ನೆ ಗಿಲ್ಲಬೇಕೆನ್ನಿಸದಿರದು. ಆದರೆ ಇತ್ತೀಚಿನ ವರದಿಯೊಂದು ಆಘಾತಕಾರಿ ಸತ್ಯವೊಂದನ್ನು ಹೊರಗೆಡವಿದೆ. ಅದೇನೆಂದರೆ ಮಕ್ಕಳು ಅಗತ್ಯಕ್ಕಿಂತ ಹೆಚ್ಚು ತೂಕವಿದ್ದರೆ ಅದು ಮಗುವಿನ ಆರೋಗ್ಯಕ್ಕೆ ಅಪಾಯ ತಂದೊಡ್ಡಬಹುದಾದ ಸಂಗತಿ ಎಂಬುದು ಈ ವರದಿ. ಮಕ್ಕಳು ಹೆಚ್ಚು ತೂಕ ಹೊಂದಿದ್ದರೆ ನೋಡುವುದಕ್ಕೇನೋ ಚೆಂದ. ಆದರೆ ಕೆಲವೊಮ್ಮೆ ಅದು ಬೊಜ್ಜೂ […]

ಪಾರ್ಶವಾಯು ನಿವಾರಣೆ ಹೇಗೆ?

ಆರೋಗ್ಯ - 0 Comment
Issue Date : 08.11.2013

ಹೊಸ ತಲೆಮಾರಿನ ಜನರು ಅನುಭವಿಸುತ್ತಿರುವ ಪ್ರಮುಖ ಕಾಯಿಲೆಗಳಲ್ಲಿ ಪಾರ್ಶ್ವವಾಯು ಮೂರನೇ ಸ್ಥಾನದಲ್ಲಿದೆ. ಹೃದಯ ಸಮಸ್ಯೆ ಮತ್ತು ಕ್ಯಾನ್ಸರ್ ನ ನಂತರದ ಸ್ಥಾನದಲ್ಲಿರುವ ಪಾರ್ಶ್ವವಾಯು ಕಾಯಿಲೆ ಮಾರಣಾಂತಿಕವೇನಲ್ಲ. ಆದರೆ ಮನುಷ್ಯನನ್ನು ಬದುಕಿರುವಾಗಲೇ ನಿಷ್ಕ್ರಿಯನನ್ನಾಗಿ ಮಾಡುವ ತಾಕತ್ತು ಇದಕ್ಕಿದೆ. ಆದರೆ ತಜ್ಞರನ್ನು ಕೇಳಿದರೆ ಪಾರ್ಶ್ವವಾಯು ಸಂಭವಿಸಿದ ನಾಲ್ಕರಿಂದ ಐದು ಗಂಟೆಯೊಳಗೆ ಚಿಕಿತ್ಸೆ ನೀಡಿದರೆ ಪಾರ್ಶ್ವವಾಯುವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎನ್ನುತ್ತಾರೆ. ತಕ್ಷಣದ ಚಿಕಿತ್ಸೆಯೇ ಪಾರ್ಶ್ವವಾಯುವಿಗೆ ಮೊದಲ ಪರಿಹಾರ. ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅಧಿಕ ರಕ್ತದೊತ್ತಡದಿಂದ ಉಂಟಾಗುವ […]

ವ್ಯಾಯಾಮದಿಂದ ಸಂಧಿವಾತ ದೂರ

ಆರೋಗ್ಯ - 0 Comment
Issue Date : 21.10.2013

ಸಂಧಿವಾತ (ಆರ್ಥ್ರೈಟಿಸ್‌)ಈ ತಲೆಮಾರಿನ ಜೀವನ ಶೈಲಿಯಿಂದ ಬರುವ ಕಾಯಿಲೆಗಳಲ್ಲೊಂದು. ಇತ್ತೀಚೆಗೆ 30-35 ವರ್ಷ ದಾಟಿದ ಯಾರನ್ನೇ ಕೇಳಿದರೂ ಸಂಧಿವಾತವೆಂದು ಅಲವತ್ತುಕೊಳ್ಳುವುದನ್ನು ನೋಡುತ್ತೇವೆ. ಅದರಲ್ಲೂ ಭಾರತದಲ್ಲಿ 2.5 ಮಿಲಿಯನ್‌ನಷ್ಟು ಜನರು ಸಂಧಿವಾತದಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಇದಕ್ಕೆ ಪ್ರಮುಖ ಕಾರಣ ದೈಹಿಕ ಶ್ರಮ ಕಡಿಮೆಯಾಗಿರುವುದು ಎಂಬುದನ್ನು ಇತ್ತೀಚೆಗಿನ ಸಂಶೋಧನೆಯೊಂದು ಸಾಬೀತುಪಡಿಸಿದೆ. ಸಂಧಿವಾತವೆಂದರೆ ಯಾವುದೋ ಒಂದು ನಿರ್ದಿಷ್ಟ ಅಂಗಕ್ಕೆ ಬರುವ ಕಾಯಿಲೆಯಲ್ಲ. ಅದು ದೇಹದ ಕೀಲುಗಳಲ್ಲಿ ಎಲ್ಲಿಯಾದರೂ ಕಾಣಿಸಿಕೊಳ್ಳಬಹುದು. ಇದಕ್ಕೆ ದೇಹವನ್ನು ಹೆಚ್ಚು ಶ್ರಮದ ಕೆಲಸಗಳಿಗೆ ದೂಡದಿರುವುದೇ ಕಾರಣ […]

ಅರಿಶಿನ

ಅರಿಶಿನ

ಆರೋಗ್ಯ - 0 Comment
Issue Date : 18.10.2013

ಅರಿಶಿನವು ಚರ್ಮದ ಕಾಂತಿವರ್ಧಕವಾಗಿ ಬಳಸಲ್ಪಡುತ್ತದೆ.   ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.   ನೆಗಡಿ, ಕೆಮ್ಮು, ಗಂಟಲು ನೋವುಗಳಲ್ಲಿ ಅರಿಶಿನದ ಪುಡಿಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಸಕ್ಕರೆ ಹಾಕಿ ಕೊಡಬೇಕು. ಅರಿಶಿನದಲ್ಲಿ ಗಾಯವನ್ನು ಗುಣಪಡಿಸುವ ಶಕ್ತಿಯಿದೆ.  ಇದೊಂದು ಅತ್ಯುತ್ತಮ ರೋಗನಿರೋಧಕವಾಗಿದೆ.   ಚರ್ಮವ್ಯಾಧಿಗಳಿಗೆ ಅರಿಶಿನವನ್ನು ತೇಯ್ದು ಬಳಸಲಾಗುತ್ತದೆ. 

ಕ್ಯಾರೆಟ್‌ನಿಂದ ಕ್ಯಾನ್ಸರ್ ಮಾಯ!

ಕ್ಯಾರೆಟ್‌ನಿಂದ ಕ್ಯಾನ್ಸರ್ ಮಾಯ!

ಆರೋಗ್ಯ - 0 Comment
Issue Date : 17.10.2013

ಕ್ಯಾರೆಟ್ ಎಂದಿಗೂ ಬೇಡಿಕೆಯಲ್ಲೇ ಇರುವ ತರಕಾರಿ. ಪಲಾವ್, ಬಿಸಿಬೇಳೆ ಬಾತ್… ಹೀಗೆ ಹಲವಾರು ರುಚಿ ರುಚಿಯ ಖಾದ್ಯಗಳಿಗೂ ಕ್ಯಾರೆಟ್ ಬೇಕು. ಕೇವಲ ರುಚಿಗಷ್ಟೇ ಅಲ್ಲ, ಕ್ಯಾರೆಟ್ ದೇಹದ ಆರೋಗ್ಯದಲ್ಲೂ ಅತ್ಯಂತ  ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಕಾರಣಕ್ಕಾಗಿಯೇ ಸದ್ಯಕ್ಕೆ ಅದಕ್ಕೆ ಎಲ್ಲಿಲ್ಲದ ಬೇಡಿಕೆ. ವೈದ್ಯಕೀಯ ರಂಗವೂ ಕ್ಯಾರೆಟ್ ಬಗ್ಗೆ ಹೆಚ್ಚಿನ ಒಲವು ತಾಳಿದೆ. ಇವಕ್ಕೆಲ್ಲ ಪ್ರಮುಖ ಕಾರಣ ಇತ್ತೀಚೆಗೆ ಬೆಳಕಿಗೆ ಬಂದ ಕ್ಯಾರೆಟ್ ಗುಣ. ಕ್ಯಾರೆಟ್‌ನಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧೀ ಸಮಸ್ಯೆಗಳನ್ನು ನಿವಾರಿಸಬಹುದಂತೆ! ಕ್ಯಾರೆಟ್ ದೇಹದಲ್ಲಿರುವ ಕ್ಯಾನ್ಸರ್ […]

ಮನೆ ಮದ್ದು

ಮನೆ ಮದ್ದು

ಆರೋಗ್ಯ - 0 Comment
Issue Date : 16.10.2013

ಬೆಳ್ಳುಳ್ಳಿಯು ನಮ್ಮ ಅಡುಗೆ ಮನೆಯಲ್ಲಿಸಿಗುವ ಔಷಧಿಗಳಲ್ಲಿ ಒಂದು. ಬೆಳ್ಳುಳ್ಳಿಯಿಂದ ನಿವಾರಣೆಯಾಗುವ ರೋಗಗಳು 1 ಪಾರ್ಶ್ವವಾಯು : ಅರ್ಧ ತೊಲೆ ಬೆಳ್ಳುಳ್ಳಿ ಅರೆದು ಒಂದು ಲೋಟ ಹಾಲಿನೊಡನೆ ಕಾಯಿಸಿ ರಾತ್ರಿ ಮಲಗುವಾಗ ಕುಡಿಯುವುದು.2 ರಕ್ತದ ಒತ್ತಡ, ವಾಯುರೋಗ, ಕೆಮ್ಮು, ದಮ್ಮು : ಪ್ರತಿದಿನ ಆಹಾರದೊಡನೆ ಸೇವಿಸುವುದು.3 ಕೀವು ಸೋರುವ ಹುಣ್ಣುಗಳು : ಬೆಳ್ಳುಳ್ಳಿಯ ಕಷಾಯದಿಂದ ತೊಳೆದು ಎಣ್ಣೆಯಲ್ಲಿ ಕುದಿಸಿ ತಯಾರಿಸಿದ ಬೆಳ್ಳುಳ್ಳಿಯ ಸಾರವನ್ನು ಹುಣ್ಣುಗಳಿಗೆ ಹಚ್ಚಬೇಕು.4 ಉಬ್ಬಸ : ಈ ರೋಗಿಗಳು ಪ್ರತಿದಿನ ರಾತ್ರಿ ಮಲಗುವುದಕ್ಕೆ ಮುಂಚೆ ಒಂದು […]

ಔಷಧಿರಹಿತ ಪ್ರಕೃತಿ ಚಿಕಿತ್ಸೆ

ಆರೋಗ್ಯ - 0 Comment
Issue Date : 15.10.2013

ಶುದ್ಧವಾದ ಗಾಳಿ, ಬೆಳಕು, ನೀರು ಮತ್ತು ಆಹಾರ ಆರೋಗ್ಯ ರಕ್ಷಣೆಗೆ ಅತ್ಯವಶ್ಯಕ.  ಗಾಳಿಯಲ್ಲಿರುವ ಆಮ್ಲಜನಕ ಪ್ರಾಣಾಧಾರ.  ಶುದ್ಧವಾದ ಗಾಳಿಯ ಅಭಾವವಿದ್ದಲ್ಲಿ ಆರೋಗ್ಯ ಕೆಡುವುದು ಖಂಡಿತ.  ಆದುದರಿಂದ ವಾತಾವರಣ ಕಲುಷಿತವಾಗಿರುವ ಪ್ರದೇಶದಲ್ಲಿ ವಾಸಮಾಡುವುದು ಉಚಿತವಲ್ಲ.  ಸೂರ್ಯರಶ್ಮಿ ದೇಹದ ಬೆಳವಣಿಗೆಗೆ ಅತ್ಯಾವಶ್ಯಕ, ಸದಾಕಾಲ ನೆರಳಿನಲ್ಲೇ ಇರುವವರ ಮುಖ ಬಿಳಚಿಕೊಂಡು ಕಳಾಹೀನವಾಗುವುದು; ಬಿಸಿಲಿಗೆ ಮೈಯೊಡ್ಡಿ ದುಡಿಮೆ ಮಾಡುವ ವ್ಯಕ್ತಿಯ ದೇಹ ಕಾಂತಿಯುತವಾಗಿರುವುದು.  ಸೂರ್ಯರಶ್ಮಿ ನಮ್ಮ ದೇಹಕ್ಕೆ ‘ಡಿ’ ಜೀವಸತ್ವವನ್ನು ಒದಗಿಸುವುದು; ಈ ಜೀವಸತ್ವವು ಎಲುಬುಗಳ ರಚನೆಗೆ ಮತ್ತು ದೇಹ ದಾರ್ಢ್ಯತೆಗೆ ಅತ್ಯವಶ್ಯಕ.  […]

ಸಸ್ಯಾಹಾರಿಗಳಾದರೆ ಮಾತ್ರ 10 ಬಂಪರ್ ಲಾಭ!

ಸಸ್ಯಾಹಾರಿಗಳಾದರೆ ಮಾತ್ರ 10 ಬಂಪರ್ ಲಾಭ!

ಆರೋಗ್ಯ - 0 Comment
Issue Date : 09.10.2013

    ಸಸ್ಯಾಹಾರ ಮಾತ್ರ ತಿಂದರೆ ಸೌಂದರ್ಯ ಹೆಚ್ಚಾಗುತ್ತದೆ ಎಂದು ಅನೇಕ ಸೆಲೆಬ್ರಿಟಿಗಳು ಹೇಳುವುದನ್ನು ಕೇಳಿರಬಹುದು. ಹೌದು, ಮಾಂಸಾಹಾರಕ್ಕಿಂತ ಸಸ್ಯಾಹಾರ ಆರೋಗ್ಯಕ್ಕೆ ಮತ್ತು ದೇಹದ ಸೌಂದರ್ಯಕ್ಕೆ ಒಳ್ಳೆಯದು. ಯಾವ ರೀತಿಯಲ್ಲಿ ಒಳ್ಳೆಯದು ಎಂಬುದನ್ನು ಇಲ್ಲಿ ಹೇಳಲಾಗಿದೆ ನೋಡಿ. 1. ಹಣ್ಣುಗಳು, ನಾರಿನಂಶವಿರುವ ಪದಾರ್ಥಗಳು ಹಾಗೂ ತರಕಾರಿಗಳು ಕೊಲೆಸ್ಟ್ರಾಲ್ ನ ಹಾಗೂ  ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. 2. ಒಬೆಸಿಟಿ ಹೆಚ್ಚಾದರೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಒಬೆಸಿಟಿಗೆ ಕೊಬ್ಬಿನಂಶವಿರುವ ಪದಾರ್ಥಗಳು ಕಾರಣವಾಗಿದೆ. ತರಕಾರಿಗಳಿಗೆ […]

ಆರೋಗ್ಯವೇ ಮಹಾಭಾಗ್ಯ

ಆರೋಗ್ಯ - 0 Comment
Issue Date : 05.10.2013

 ನಮ್ಮೆಲ್ಲರ ಮನೆಗಳಿಗೆ ಒಂದಲ್ಲ ಒಂದು ರೀತಿಯ ರಕ್ಷಣಾ ವ್ಯವಸ್ಥೆ ಇರುತ್ತದೆ. ಅದರಲ್ಲೂ ಅಮೂಲ್ಯವಾದ ವಸ್ತುಗಳ ರಕ್ಷಣೆಗೆ ವಿಶೇಷ ರಕ್ಷಣಾ ವ್ಯವಸ್ಥೆ ಇರುತ್ತದೆ. ಅದೇ ರೀತಿ ನಮ್ಮ ಶರೀರ ಎಂಬ ಮನೆಯ ಆರೋಗ್ಯದ ರಕ್ಷಣೆಗೂ ಒಂದು ರಕ್ಷಣಾ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯ ಹೆಸರೇ ‘ರೋಗನಿರೋಧಕ ಶಕ್ತಿ’. ನಾವು ಆರೋಗ್ಯವಾಗಿರಲು ಈ ರೋಗನಿರೋಧಕ ಶಕ್ತಿಯ ರಕ್ಷಣೆ, ಪೋಷಣೆ ಅತ್ಯಗತ್ಯ. ನಮ್ಮ ಶರೀರದ ರೋಗನಿರೋಧಕ ಶಕ್ತಿಯ ವ್ಯವಸ್ಥೆ ಒಂದು ಸಂರ್ಪೂಣ ಹಾಗೂ ಸಮಗ್ರ ವ್ಯವಸ್ಥೆಯಾಗಿದೆ.  ಇದು ಕೆಲಸ ಮಾಡುವ ರೀತಿ […]