ಕೆಲಸವೊಂದೇ ಅಲ್ಲ, ಆರೋಗ್ಯವೂ ಮುಖ್ಯ

ಕೆಲಸವೊಂದೇ ಅಲ್ಲ, ಆರೋಗ್ಯವೂ ಮುಖ್ಯ

ಆರೋಗ್ಯ - 0 Comment
Issue Date : 18.04.2016

ಪುರುಷರಿಗೆ ಹೋಲಿಸಿದರೆ ಮಹಿಳೆಯರ ದೇಹಕ್ಕೆ ಹೆಚ್ಚು ವಿಟಾಮಿನ್ ಮತ್ತು ಖನಿಜಾಂಶಗಳ ಅಗತ್ಯವಿರುತ್ತದೆ. ಏಕೆಂದರೆ ಪುರುಷರಿಗಿಂತ ಹೆಚ್ಚು ದೈಹಿಕ ಶ್ರಮವನ್ನು ಮಹಿಳೆಯರು ಹಾಕುತ್ತಾರೆ. ಆದರೆ ಅದು ಅರಿವಿಗೆ ಬರುವುದಿಲ್ಲವಷ್ಟೆ. ದೇಹದ ಶಕ್ತಿ ಬೇಗನೆ ಕರಗಿ ಹೋಗುವುದು ಸಹ ಮಹಿಳೆಯರಲ್ಲೇ ಹೆಚ್ಚು. ಹೀಗಿರುವಾಗ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರಿಸಬೇಕಾದ್ದು ಮಹಿಳೆಯರಿಗೆ ಅತ್ಯಂತ ಮುಖ್ಯ. ಯಾವಾಗಲೂ ಕೆಲಸ ಕಡೆಗೇ ಗಮನ ನೀಡುತ್ತ ಆರೋಗ್ಯದ ಕಡೆ ಗಮನವನ್ನೇ ಕೊಡದಿರುವುದು ಮುಂದೊಮ್ಮೆ ಸಮಸ್ಯೆಗೆ ಕಾರಣವಾಗಬಹುದು. ಪುರುಷರಿಗಿಂತ ಹೆಚ್ಚು ಕ್ಯಾಲ್ಷಿಯಂನ ಅವಶ್ಯಕತೆ ಮಹಿಳೆಯರಿಗಿರುತ್ತದೆ. […]

ಆರೋಗ್ಯಕ್ಕೆ ಬೇಕು ಈ ತರಕಾರಿ

ಆರೋಗ್ಯಕ್ಕೆ ಬೇಕು ಈ ತರಕಾರಿ

ಆರೋಗ್ಯ - 0 Comment
Issue Date : 09.04.2016

ಹೆಚ್ಚು ಹೆಚ್ಚು ತರಕಾರಿ ತಿನ್ನಿ ಎಂಬ ಮಾತನ್ನು ಚಿಕ್ಕ ವಯಸ್ಸಿನಿಂದಲೂ ಕೇಳುತ್ತಿದ್ದೇವೆ. ತರಕಾರಿಯಲ್ಲಿ ದೇಹದ ಆರೋಗ್ಯವನ್ನು ಹೆಚ್ಚಿಸುವಂಥ ಉತ್ತಮ ಅಂಶಗಳಿವೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಭಾರತದಲ್ಲಿ ಪ್ರತಿ ಮನೆಯಲ್ಲೂ ಬಳಸುವ ಕೆಲವು ತರಕಾರಿಗಳು ಆರೋಗ್ಯದ ಆಗರವೇ ಆಗಿವೆ. ಅವುಗಳಲ್ಲಿ ಕೆಲವನ್ನು ನಾವು ಬಹುಪಾಲು ಪ್ರತಿದಿನವೂ ಬಳಸುತ್ತೇವೆ.  ಬೆಂಡೇಕಾಯಿ: ಇದರಲ್ಲಿ ಸೋಡಿಯಂ ಅಂಶ ಕಡಿಮೆ ಇರುವುದಲ್ಲದೆ ಇದು ಯಾವುದೇ ರೀತಿಯ ಬೊಜ್ಜಿನಂಶವನ್ನೂ ಹೊಂದಿಲ್ಲದಿರುವುದರಿಂದ ದೇಹದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಫೈಬರ್ ಅಂಶವೂ ಇದರಲ್ಲಿರುವುದರಿಂದ ಮಧುಮೇಹವನ್ನು ಹತೋಟಿಗೆ […]

ಚೆಲುವೆಯ ಅಂದದ ಮೊಗಕೆ ಎಣ್ಣೆ ಕಾರಣ!

ಚೆಲುವೆಯ ಅಂದದ ಮೊಗಕೆ ಎಣ್ಣೆ ಕಾರಣ!

ಆರೋಗ್ಯ - 0 Comment
Issue Date : 15.03.2016

ಮುಖಕ್ಕೆ ಎಣ್ಣೆ ಲೇಪಿಸಿಕೊಳ್ಳುವುದೆಂದರೆ ಹಲವರಿಗೆ ಕೋಪ ಬರುತ್ತದೆ. ಎಣ್ಣೆ ಲೇಪಿಸಿಕೊಳ್ಳವುದು ಹಳ್ಳಿ ಗೌರಮ್ಮನ ಲಕ್ಷಣ ಎಂಬುದು ಹಲವರ ಅಭಿಪ್ರಾಯ. ಎಣ್ಣೆ ಲೇಪಿಸಿಕೊಂಡರೆ ಮುಖ ಕಪ್ಪಾಗುತ್ತದೆ ಎಂಬುದು ಮತ್ತಷ್ಟು ಜನರ ಅನಿಸಿಕೆ. ಆದರೆ ಮುಖಕ್ಕೆ ಎಣ್ಣೆ ಲೇಪಿಸಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೆ, ಚರ್ಮದ ಹೊಳಪು ಹೆಚ್ಚುತ್ತದೆ ಎಂಬುದು ಸೌಂದರ್ಯ ತಜ್ಞರ ಅಭಿಮತ. ಸ್ನಾನಕ್ಕೂ ಅರ್ಧಗಂಟೆ ಮೊದಲು ಮುಖಕ್ಕೆ ಎಣ್ಣೆಯನ್ನು ಲೇಪಿಸಿಕೊಂಡು ನಂತರ ಸ್ನಾನ ಮಾಡುವುದರಿಂದ ಸುಕ್ಕುಗಟ್ಟಿದ ಚರ್ಮ ಕಳೆ ಪಡೆಯುತ್ತದೆ. ಅದರಲ್ಲೂ ಒಣ ತ್ವಚೆಯನ್ನು ಹೊಂದಿರುವವರಿಗಂತೂ ಎಣ್ಣೆ ಹಚ್ಚಿಕೊಳ್ಳುವುದು […]

ತಂಗಳು ಪೆಟ್ಟಿಗೆಯೇ ಇಲ್ಲದಿದ್ದರೆ...!

ತಂಗಳು ಪೆಟ್ಟಿಗೆಯೇ ಇಲ್ಲದಿದ್ದರೆ…!

ಆರೋಗ್ಯ - 0 Comment
Issue Date : 08.03.2016

ಇಂದು ಮನೆಯಲ್ಲಿ ತಂಗಳುಪೆಟ್ಟಿಗೆಯಿಲ್ಲವೆಂದರೆ ಆ ಮನೆಯ ಜನರು ತೀರ ನಿರ್ಗತಿಕರು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ತಂಗಳು ಪೆಟ್ಟಿಗೆ ಅಥವಾ ಫ್ರಿಜ್ಡ್ ಮನೆಯ ಅತ್ಯವಶ್ಯಕ ವಸ್ತುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ತಂಗಳು ಪೆಟ್ಟಿಗೆಯಲ್ಲಿ ಆಹಾರವನ್ನಿಟ್ಟು ಅದನ್ನು ಸೇವಿಸುವುದು ಆರೋಗ್ಯಕ್ಕೆ ಬಿಲ್‌ಕುಲ್ ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ಅದರ ಬಳಕೆಯನ್ನು ಮಾತ್ರ ನಾವು ಕಡಿಮೆ ಮಾಡಿಲ್ಲ. ಅನ್ನ ಮಾಡಿದ್ದು ಹೆಚ್ಚಾಯ್ತಾ ಎಂದು ಯೋಚಿಸುವ ಮೊದಲೇ ಮಿಕ್ಕಿದ್ದನ್ನು ಫ್ರಿಜ್‌ನಲ್ಲಿ ಇಟ್ಟರಾಯ್ತು ಎಂಬ ಸಮಜಾಯಿಷಿಯೂ ಸಿದ್ಧವಾಗಿರುತ್ತದೆ. ಆದರೆ ಇಂದಿನ ತಲೆಮಾರು ಅನುಭವಿಸುತ್ತಿರುವ ಹಲವು ಕಾಯಿಲೆಗಳಿಗೆ […]

ಆಹಾರದ ಪ್ರಮಾಣವಲ್ಲ, ಗುಣಮಟ್ಟ ಮುಖ್ಯ

ಆಹಾರದ ಪ್ರಮಾಣವಲ್ಲ, ಗುಣಮಟ್ಟ ಮುಖ್ಯ

ಆರೋಗ್ಯ - 0 Comment
Issue Date : 22.02.2016

ಇತ್ತೀಚೆಗಂತೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಮತ್ತು ನಿರ್ದಿಷ್ಟ ತೂಕವನ್ನು ಕಾಯ್ದುಕೊಳ್ಳುವುದು ಒಂದು ಸವಾಲಿನ ಕೆಲಸ ಎಂಬಂತಾಗಿದೆ. ಇಷ್ಟವಿಲ್ಲದಿದ್ದರೂ ಬೆಳಗ್ಗೆ ಬೇಗ ಎದ್ದು ವಾಕಿಂಗ್‌ಗೆ ತೆರಳುವ, ಬಾಯಲ್ಲಿ ನೀರೂರಿಸುವ ಜಂಕ್ ಫುಡ್‌ಗಳನ್ನು ನೋಡಿಯೂ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಹಲವರಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುವ ಆಸೆಗಿಂತ ಹೆಚ್ಚಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಉದ್ದೇಶವಿರುತ್ತದೆ. ಹೀಗೆ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು ಸುಂದರವಾಗಿ ಕಾಣಲು ಏನೆಲ್ಲ ಮಾಡುವುದಕ್ಕೂ ತಯಾರಿರುವ ಜನರು ಜಾಹೀರಾತುಗಳಲ್ಲಿ ಬರುವ ತೂಕ ಕಡಿಮೆ ಮಾಡಿಕೊಳ್ಳುವ ಔಷಧಗಳ ಮೊರೆಹೋಗುವುದನ್ನೂ […]

ಆರೋಗ್ಯ ಖನಿ ಸೀಬೆ

ಆರೋಗ್ಯ ಖನಿ ಸೀಬೆ

ಆರೋಗ್ಯ - 0 Comment
Issue Date : 16.02.2016

ನಾಲ್ಕು ಭಾಗ ಸೀಳಿ, ಮಧ್ಯೆ ಸ್ವಲ್ಪ ಖಾರದ ಪುಡಿ-ಉಪ್ಪು ಸೇರಿಸಿ ಸೀಬೆ ಬೇಕಾ ಸೀಬೆ ಎನ್ನುತ್ತ ರಸ್ತೆಯಲ್ಲೊಬ್ಬ ತಾತ ಕೂಗುತ್ತ ಬಂದರೆ ಆ ಹಣ್ಣನ್ನು ನೋಡದಿದ್ದರೂ ಹಣ್ಣಿನ ಬುಟ್ಟಿ ನೋಡಿಯೇ ಬಾಯಲ್ಲಿ ನೀರೂರುತ್ತದೆ. ಹಾಗೆ ತನ್ನ ರುಚಿಯ ಮೂಲಕ ಎಲ್ಲರನ್ನೂ ಹಿಡಿದಿಡುವ ಶಕ್ತಿ ಸೀಬೆಗಿದೆ. ಕೇವಲ ರುಚಿಗಷ್ಟೇ ಅಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಸೀಬೆ ಉಪಕಾರಿ. ವಿಟಾಮಿನ್ ಸಿ, ಮೆಗ್ನೇಶಿಯಂಗಳು ಸೀಬೆಯಲ್ಲಿ ಹೇರಳವಾಗಿದೆ.  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಸೀಬೆ ಹಣ್ಣಿಗಿದೆ. ಕಿತ್ತಳೆಗಿಂತ ಹೆಚ್ಚು ವಿಟಾಮಿನ್ ಸಿ […]

ಕ್ಷೀರದೊಳು ಅರಿಶಿಣ ಸೇರಲು...

ಕ್ಷೀರದೊಳು ಅರಿಶಿಣ ಸೇರಲು…

ಆರೋಗ್ಯ - 0 Comment
Issue Date : 06.02.2015

ಅರಿಶಿಣಕ್ಕೆ ಹಿಂದು ಸಂಪ್ರದಾಯದಲ್ಲಿ ಮಹತ್ವದ ಸ್ಥಾನವಿದೆ. ಎಲ್ಲ ಮಂಗಳ ಕಾರ್ಯಗಳಲ್ಲೂ ಅರಿಶಿಣದ ಉಪಸ್ಥಿತಿ ಇರಲೇಬೇಕು ಎಂಬಷ್ಟರ ಮಟ್ಟಿಗೆ ಅರಿಶಿಣ ಪ್ರಸಿದ್ಧಿ. ಕೇವಲ ಮಂಗಳಕಾರ್ಯಕ್ಕಷ್ಟೇ ಸೀಮಿತವಾಗದೆ ಆರೋಗ್ಯ ದೃಷ್ಟಿಯಿಂದಲೂ ಇದರ ಉಪಯೋಗ ಅಷ್ಟಿಷ್ಟಲ್ಲ.ರೋಗ ನಿರೋಧಕ ಶಕ್ತಿಯ ಆಗರವೇ ಆಗಿರುವ ಅರಿಶಿಣ ಮತ್ತು ಪ್ರೊಟೀನಿನ ಆಗರವೇ ಆಗಿರುವ ಹಾಲು ಇವೆರಡೂ ಒಟ್ಟಾದರೆ ಆರೋಗ್ಯದ ದೃಷ್ಟಿಯಿಂದ ಎಷ್ಟು ಉಪಯುಕ್ತವಾಗಬಹುದು? ಅರಿಶಿಣ ಮಿಶ್ರಿತ ಹಾಲನ್ನು ಪ್ರತಿದಿನ ಸೇವಿಸುವುದರಿಂದ ಮನುಷ್ಯನ ಆರೋಗ್ಯವು ಗಣನೀಯ ಪ್ರಮಾಣದಲ್ಲಿ ಸುಧಾರಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ. 1. ಉಸಿರಾಟದ ಸಮಸ್ಯೆಗೆ […]

ಊಟವಾದ ಮೇಲೆ ಹೀಗೆ ಮಾಡದಿರಿ

ಊಟವಾದ ಮೇಲೆ ಹೀಗೆ ಮಾಡದಿರಿ

ಆರೋಗ್ಯ - 0 Comment
Issue Date : 12.02.2016

ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸಲು ಆಹಾರ ಬೇಕೇ ಬೇಕು. ಅಗತ್ಯವಿರುವಷ್ಟು ಆಹಾರ ಸೇವನೆ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ಆದರೆ ನಾವು ಸೇವಿಸುವ ಆಹಾರದಲ್ಲೇ ಕೊಂಚ ಹೆಚ್ಚು ಕಮ್ಮಿಯಾದರೂ ದೇಹಕ್ಕೆ ತೊಂದರೆ ತಪ್ಪಿದ್ದಲ್ಲ. ಕ್ರಮಬದ್ಧವಾದ ಆಹಾರ ಶೈಲಿ ವ್ರತವೇ ಸರಿ. ಆಹಾರ ಸೇವಿಸುವುದು ಎಷ್ಟು ಮುಖ್ಯವೋ ಅದನ್ನು ಜೀರ್ಣಿಸಿಕೊಳ್ಳುವುದೂ ಅಷ್ಟೇ ಮುಖ್ಯ. ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೂ ಸಮಸ್ಯೆಯೇ. ತಿಂದ ಆಹಾರ ಜೀರ್ಣವಾಗುವುದಕ್ಕೆ ಅದಕ್ಕೆ ಸಮಯ ಬೇಕು. ಒಮ್ಮೆಲೇ ಹೊಟ್ಟೆ ಬಿರಿಯುವಷ್ಟು ತಿನ್ನುವುದರಿಂದ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ಆಹಾರ ಸೇವಿಸಿದ ನಂತರ […]

ರಕ್ತಹೀನತೆಯ ಬಗ್ಗೆ ಎಚ್ಚರದಿಂದಿರಿ

ರಕ್ತಹೀನತೆಯ ಬಗ್ಗೆ ಎಚ್ಚರದಿಂದಿರಿ

ಆರೋಗ್ಯ - 0 Comment
Issue Date : 04.02.2016

ರಕ್ತಹೀನತೆ ಅಥವಾ ಅನೀಮಿಯಾ ಮೊದ ಮೊದಲು ತೀರಾ ದೊಡ್ಡ ಸಮಸ್ಯೆಯೆಂದೆನ್ನಿಸದಿದ್ದರೂ ಕ್ರಮೇಣ ಜೀವಕ್ಕೆ ಕುತ್ತು ತರಬಹುದಾದ ಸಾಧ್ಯತೆ ಉಂಟಾಗುತ್ತದೆ. ಅನೀಮಿಯದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ. ದೇಹದಲ್ಲಿ ಕೆಂಪು ರಕ್ತಕಣಗಳು ಕಡಿಮೆಯಾಗುವುದನ್ನೇ ಅನೀಮಿಯಾ ಎಂದು ಕರೆಯಲಾಗುತ್ತದೆ. ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುವುದು ಅನೀಮಿಯಾಕ್ಕೆ ಇದಕ್ಕೆ ಮುಖ್ಯ ಕಾರಣ. ಇದರಿಂದ ದೇಹ ರಕ್ತ ಹೀನತೆಯಿಂದ ಬಳಲುತ್ತದೆ. ತಲೆ ಸುತ್ತುವುದು, ನಿಶ್ಶಕ್ತಿ, ಸುಸ್ತು, ಅತಿಯಾದ ನಿದ್ದೆ ಮುಂತಾದವು ಅನೀಮಿಯಾದ ಲಕ್ಷಣಗಳು. ಸಣ್ಣ ಪುಟ್ಟ ಕೆಲಸವನ್ನೂ ಮಾಡಲಾಗದಂತೆ ನೀವು […]

ಮಕ್ಕಳ ಆರೋಗ್ಯಕ್ಕೆ ತರಕಾರಿ ಬೇಕು

ಮಕ್ಕಳ ಆರೋಗ್ಯಕ್ಕೆ ತರಕಾರಿ ಬೇಕು

ಆರೋಗ್ಯ - 0 Comment
Issue Date : 28.01.2016

ಇಂದಿನ ಮಕ್ಕಳಿಗೆ ಯಾವ್ಯಾವ ಗಲ್ಲಿಯಲ್ಲಿ ಮ್ಯಾಕ್ ಡೊನಾಲ್ಡ್ ಇದೆ, ಪಿಜ್ಜಾ ಹಟ್ ಇದೆ ಎಂಬುದು ಸುಲಭವಾಗಿ ತಿಳಿದಿರುತ್ತದೆ. ತರಕಾರಿಗಳ ಹೆಸರೇ ಗೊತ್ತಿಲ್ಲದಿದ್ದರೂ ಬೇಕರಿ ತಿನಿಸುಗಳ ಪೂರ್ವಾಪರವೆಲ್ಲ ತಿಳಿದಿರುತ್ತದೆ. ಯಾವುದರ ರುಚಿ ಹೇಗೆ, ಹೆಸರೇನು, ಯಾವುದರಿಂದ ಮಾಡೋದು, ಎಲ್ಲಿ ರುಚಿಯಾದ ಖಾದ್ಯ ಸಿಗುತ್ತದೆ ಎಂಬೆಲ್ಲ ಬಗ್ಗೆ ಅವರಲ್ಲಿ ಮಾಹಿತಿ ಇರುತ್ತದೆ. ಅದೇ ಕಾರಣಕ್ಕೆಂದೇ ಇಂದಿನ ಮಕ್ಕಳು ಬೊಜ್ಜಿನ ಸಮಸ್ಯೆಯಿಂದ ಬಳಲುವುದು ಮಾಮೂಲೆನ್ನಿಸಿದೆ. ಈ ಸಮಸ್ಯೆಗೆ ಪರಿಹಾರವೇನು ಎಂದು ಯೋಚಿಸುವಾಗೆಲ್ಲ ಮಕ್ಕಳನ್ನು ಜಂಕ್ ಫುಡ್‌ಗಳಿಂದ ದೂರವಿಡಿ ಎಂಬ ಸಲಹೆ ಬಂದೇ […]