ಹಸಿವಾದರೆ ಮಾತ್ರ ತಿನ್ನಿ

ಹಸಿವಾದರೆ ಮಾತ್ರ ತಿನ್ನಿ

ಆರೋಗ್ಯ - 0 Comment
Issue Date : 14.01.2016

ಆಲೂಗಡ್ಡೆ ಚಿಪ್ಸ್, ಬರ್ಗರ್, ಕೂಲ್‌ಡ್ರಿಂಕ್ಸ್ ಮುಂತಾದವುಗಳನ್ನು ಕಂಡಾಗಲೆಲ್ಲ ಹೊಟ್ಟೆ ತುಂಬಿದ್ದರೂ ತಿನ್ನಬೇಕು, ಕುಡಿಯಬೇಕು ಎನ್ನಿಸುತ್ತದೆ. ನಾಲಿಗೆಯ ಚಪಲವನ್ನು ನೀಗಿಸಿಕೊಳ್ಳುವುದಕ್ಕಾಗಿ ಹಸಿವಾಗದಿದ್ದರೂ ಸೇವಿಸುವ ಇಂಥ ಖಾದ್ಯಗಳು ಆರೋಗ್ಯಕ್ಕೆ ಸಿಕ್ಕಾಪಟ್ಟೆ ಮಾರಕ ಎಂಬುದು ಇತ್ತೀಚಿನ ಅಧ್ಯಯನವೊಂದರ ವರದಿ. ಅಷ್ಟೇ ಅಲ್ಲ, ಅವುಗಳಿಂದ ದೇಹದ ಆರೋಗ್ಯಕ್ಕೆ ಯಾವ ಪ್ರಯೋಜನವೂ ಇಲ್ಲ. ಹಸಿವಾದಾಗ ಮಾತ್ರವೇ ತಿನ್ನಬೇಕು. ಹಾಗಂತ ಹಸಿವಾದಾಗ ಎಂತೆಂಥದೋ ಆಹಾರವನ್ನು ಸೇವಿಸುವುದರಿಂದ ಹಿತಕ್ಕಿಂತ ಅಹಿತವೇ ಜಾಸ್ತಿ. ಹೊಟ್ಟೆ ಹಸಿದಾಗ ಪ್ರೊಟೀನ್, ವಿಟಾಮಿನ್‌ಯುಕ್ತ ಆಹಾರ ಸೇವಿಸಿ. ಹಿಂದಿನ ತಲೆಮಾರಿನ ಜನರು ನಾಲಿಗೆಗೆ ಅಗತ್ಯವಿರುವ […]

ಮಾನಸಿಕ ಸಮಸ್ಯೆ ಬ್ರೈನ್ ಟ್ಯೂಮರ್ ಲಕ್ಷಣವೇ?

ಮಾನಸಿಕ ಸಮಸ್ಯೆ ಬ್ರೈನ್ ಟ್ಯೂಮರ್ ಲಕ್ಷಣವೇ?

ಆರೋಗ್ಯ - 0 Comment
Issue Date : 05.01.2016

ಬ್ರೈನ್ ಟ್ಯೂಮರ್ ಹೆಸರು ಕೇಳಿದರೂ ಗಾಬರಿಯಾಗುವವರಿದ್ದಾರೆ. ಮಾರಣಾಂತಿಕ ಕಾಯಿಲೆಯಾಗಿ ಹಲವರನ್ನು ಬಲಿತೆಗೆದುಕೊಂಡ ಬ್ರೈನ್ ಟ್ಯೂಮರ್ ಶ್ರೀಮಂತ ಕಾಯಿಲೆ ಎಂದೇ ಹೆಸರುವಾಸಿ. ಆರಂಭದಲ್ಲೇ ಸಮಸ್ಯೆ ಗೊತ್ತಾದರೆ ಚಿಕಿತ್ಸೆ ಪಡೆಯಬಹುದು. ಆದರೆ ರೋಗಪತ್ತೆಯೇ ನಿಧಾನವಾದರೆ ರೋಗಿಗೆ ಮರಣವೇ ಕಟ್ಟಿಟ್ಟ ಬುತ್ತಿ. ಆದರೆ ಬ್ರೈನ್ ಟ್ಯೂಮರ್ ಸಮಸ್ಯೆ ಗೊತ್ತಾಗುವುದು ಹೇಗೆ? ಕೇವಲ ತಲೆ ನೋವು ಮಾತ್ರವೇ ಅದರ ಲಕ್ಷಣವೇ..? ಖಂಡಿತ ಅಲ್ಲ, ಕೆಲವು ಮಾನಸಿಕ ಸಮಸ್ಯೆಗಳು ಸಹ ಬ್ರೈನ್ ಟ್ಯೂಮರ್‌ನ ಲಕ್ಷಣವಾಗಿರಬಹುದು ಎಂಬ ಅಂಶವನ್ನು ಇತ್ತೀಚಿನ ಸಂಶೋಧನೆಯಿಂದು ಬಯಲು ಮಾಡಿದೆ. ಖಿನ್ನತೆ, […]

ಮಾಲಿನ್ಯದಿಂದ ಮಕ್ಕಳನ್ನು ಕಾಪಾಡಿ

ಮಾಲಿನ್ಯದಿಂದ ಮಕ್ಕಳನ್ನು ಕಾಪಾಡಿ

ಆರೋಗ್ಯ - 0 Comment
Issue Date : 02.12.2015

ವಾಯು ಮಾಲಿನ್ಯ ಇಂದು ಎಲ್ಲೆಲ್ಲೂ ಸುದ್ದಿ ಮಾಡುತ್ತಿದೆ. ದೇಶದ ರಾಜಧಾನಿಯಲ್ಲೀಗ ಮಾಲಿನ್ಯದ್ದೇ ಗುಸುಗುಸು. ಡಿಸೆಲ್ ವಾಹನಗಳನ್ನೇ ನಿಷೇಧಿಸುವ, ವಾಹನ ದಟ್ಟಣೆ ಕಡಿಮೆ ಮಾಡುವ, ವಾಹನಗಳ ಹೊಗೆ ಕಡಿಮೆಗೊಳಿಸುವಂಥ ಸಂಶೋಧನೆಗೆ ಉತ್ತೇಜನ ನೀಡುವ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇವೆಲ್ಲವೂ ಸರಿ. ಮಾಲಿನ್ಯವನ್ನು ಸರ್ಕಾರ ನಿಯಂತ್ರಿಸುತ್ತದೆ ಎಂದು ನಾವು ಸುಮ್ಮನಿದ್ದರೆ ಸಾಕೇ? ವಾಯು ಮಾಲಿನ್ಯ ಮಕ್ಕಳ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಒಮ್ಮೆಯಾದರೂ ಯಾರಾದರೂ ಯೋಚಿಸಿದ್ದೀರಾ? ಮಕ್ಕಳ ದೇಹಾರೋಗ್ಯ ಬಹಳ ಸೂಕ್ಷ್ಮ. ನಿರೋಧಕ ಶಕ್ತಿ ಸಹ ಅವರಲ್ಲಿ ಕಡಿಮೆಯೇ. […]

ಚರ್ಮದ ಕಾಂತಿ : ರಕ್ಷಿಸುವುದು ಹೇಗೆ?

ಚರ್ಮದ ಕಾಂತಿ : ರಕ್ಷಿಸುವುದು ಹೇಗೆ?

ಆರೋಗ್ಯ - 0 Comment
Issue Date : 25.12.2015

ಮಾನವನ ಚರ್ಮ ಬಹುಬೇಗ ಸುಕ್ಕಾಗುತ್ತದೆ. ಧೂಮಪಾನ ಮದ್ಯಪಾನ, ಧೂಳು, ಗಬ್ಬು ವಾಸನೆ ಪ್ರತಿದಿನ ಉಸಿರಾಟದೊಂದಿಗೆ ಬೆರೆತು ಹೋಗಿರುವುದರಿಂದ ಚರ್ಮದ ಕಳೆ ಕಂದುತ್ತಾ ಬರುತ್ತದೆ. ನಾನಾ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳು ತಲೆದೋರುತ್ತವೆ. ಚರ್ಮದ ಕಾಂತಿಯನ್ನು ಉಳಿಸಿಕೊಳ್ಳಲು ಇಲ್ಲಿದೆ ಕೆಲವು ಸಲಹೆಗಳು: Ÿ ಧೂಮಪಾನ ಮಾಡಬಾರದು. Ÿ ಮದ್ಯಪಾನ ಮಾಡಬಾರದು. Ÿ ದಿನಕ್ಕೆ 8 ಗಂಟೆಗಳ ಕಾಲ ನಿದ್ರಿಸಬೇಕು. Ÿ ಮಧ್ಯಾಹ್ನದ ಸುಡು ಬಿಸಿಲಿಗೆ ಹೋಗದಿರುವುದು. Ÿ ಸ್ನಾನವಾದ ಕೂಡಲೇ ಅಲವೇರಾ ಮತ್ತು ಸೌತೆಕಾಯಿಯಿಂದ ತಯಾರಾದ ಕ್ರೀಮ್‌ಗಳನ್ನು ಚರ್ಮಕ್ಕೆ […]

ದೇಹಾರೋಗ್ಯಕ್ಕೆ ಆಕ್ಯುಪಂಕ್ಚರ್

ದೇಹಾರೋಗ್ಯಕ್ಕೆ ಆಕ್ಯುಪಂಕ್ಚರ್

ಆರೋಗ್ಯ - 0 Comment
Issue Date : 10.12.2015

ಚಿಕ್ಕ ಪುಟ್ಟ ರೋಗ ಬಂದರೂ ಔಷಧಿ, ಇಂಜೆಕ್ಷನ್‌ಗಳಿಲ್ಲದೇ ನಿರ್ವಾಹವಿಲ್ಲ ಎಂಬ ಮನಃಸ್ಥಿತಿ ಇದೆ. ಹಳ್ಳಿ ಕಡೆಯಲ್ಲಿ ಇಂದಿಗೂ ಇಂಜೆಕ್ಷನ್ ಇಲ್ಲದೇ ರೋಗ ಗುಣವಾಗುವುದಿಲ್ಲ ಎಂಬ ನಂಬಿಕೆ ಇದೆ. ಇದನ್ನು ನಗದೀಕರಿಸಿಕೊಳ್ಳಲು ಹಲವು ವೈದ್ಯರು ಭಟ್ಟಿ ಇಳಿಸಿದ ನೀರನ್ನೇ ಇಂಜೆಕ್ಷನ್ ಮೂಲಕ ನೀಡಿ ಹಣ ಗಳಿಸಿಕೊಳ್ಳುವುದೂ ಇದೆ. ತಕ್ಷಣಕ್ಕೆ ಮಾತ್ರೆ, ಇಂಜೆಕ್ಷನ್‌ಗಳಿಂದ ರೋಗ ಗುಣವಾದರೂ ಪದೇ ಪದೇ ಅನುಸರಿಸುವುದರಿಂದ ಆರೋಗ್ಯ ಇನ್ನಷ್ಟು ಹದಗೆಡಬಹುದು. ಮುದ್ರೆಗಳು (ಅಕ್ಯುಪಂಕ್ಚರ್) ಆರೋಗ್ಯ ವೃದ್ಧಿಸುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಿ ಹಲವು ರೋಗಗಳಿಂದ […]

ತಲೆಗೂದಲ ಸಂರಕ್ಷಣೆ ಹೇಗೆ ?

ತಲೆಗೂದಲ ಸಂರಕ್ಷಣೆ ಹೇಗೆ ?

ಆರೋಗ್ಯ - 0 Comment
Issue Date : 10.12.2015

ಕೂದಲ ಸಂರಕ್ಷಣೆಯ ಕಡೆಗೆ ಮಹಿಳೆಯರು, ಪುರುಷರೂ ಸಮಾನ ಆಸಕ್ತಿ ವಹಿಸುತ್ತಾರೆ. ಕೂದಲು ಉದುರಲು ಶುರುವಾದರಂತೂ ಮಹಿಳೆಯರು ಆತಂಕಕ್ಕೊಳಗಾಗುತ್ತಾರೆ. ಯಾಕೆಂದರೆ ಕೂದಲು ಸೌಂದರ್ಯದಲ್ಲಿ  ಪ್ರಮುಖ ಪಾತ್ರ ವಹಿಸುತ್ತದೆ. ಹೀಗಿದ್ದರೂ ಕೂದಲುದುರದಿರಲು ದಿನನಿತ್ಯ ನಾವೇನು ಮಾಡಬಾರದು ಎಂಬುದು ಹಲವರಿಗೆ ತಿಳಿದಿರುವುದೇ ಇಲ್ಲ. ತಪ್ಪಾದ ರೀತಿಯಲ್ಲಿ ಕೂದಲಿನ ಆರೈಕೆ ಮಾಡಿದರೆ ಕೂದಲು ಖಂಡಿತ ಉದುರುತ್ತದೆ. ಆದ್ದರಿಂದ ಕೂದಲ ಸಂರಕ್ಷಣೆಯತ್ತ ನೈಜ ಕಾಳಜಿಯುಳ್ಳವರು ಏನೇನು ಮಾಡಬಾರದು ಎಂಬುದರ ಅರಿವಿರಬೇಕು. ಇಲ್ಲಿದೆ ನೋಡಿ ಕೆಲವೊಂದು ಸಲಹೆಗಳು….  ದಿನನಿತ್ಯ ತಲೆಸ್ನಾನ ಮಾಡುವುದು ಕೂದಲುದುರುವಿಕೆಗೆ ಕಾರಣವಾಗುತ್ತದೆ. ವಾರದಲ್ಲಿ ಎರಡು […]

ಅಧಿಕ ಸಿಹಿ : ಮಕ್ಕಳಿಗೆ ಆಗಲಿದೆ ಮಾರಕ

ಅಧಿಕ ಸಿಹಿ : ಮಕ್ಕಳಿಗೆ ಆಗಲಿದೆ ಮಾರಕ

ಆರೋಗ್ಯ - 0 Comment
Issue Date : 03.12.2015

ಸಕ್ಕರೆ ಹಾಗೂ ಸಿಹಿ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಅಂಶವೇ. ಆದರೆ ಇದು ನಿಜವೇ ಸುಳ್ಳೇ ಎಂಬ ಬಗ್ಗೆ ಅನೇಕ ತರ್ಕಗಳಿದ್ದವು. ಇದೇ ಗೊಂದಲಕ್ಕೆ ಸಿಲುಕಿ, ಕಳೆದ ವಾರ ಅಧ್ಯಯನ ಕೈಗೊಂಡ ರಾಷ್ಟ್ರೀಯ ಆರೋಗ್ಯ ಸಂಸ್ಥೆಗೆ ಈಗ ಉತ್ತರ ದೊರಕಿದೆ. ಈ ಅಧ್ಯಯನದ ನಂತರ ಅಧಿಕ ಸಕ್ಕರೆ ಸೇವಿಸುವ ಮಕ್ಕಳು ಅನಾರೋಗ್ಯ ಪೀಡಿತರಾಗುವುದು ದಿಟ ಎಂಬ ಅಂಶವನ್ನು ಅಧ್ಯಯನ ಬಹಿರಂಗಪಡಿಸಿದೆ.  ಈಗ ಮಕ್ಕಳಲ್ಲಿಯೂ ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ […]

ಆರೋಗ್ಯಕ್ಕೆ ತಲೆಯನ್ನು ಶಾಂತವಾಗಿಡಿ

ಆರೋಗ್ಯಕ್ಕೆ ತಲೆಯನ್ನು ಶಾಂತವಾಗಿಡಿ

ಆರೋಗ್ಯ - 0 Comment
Issue Date : 03.12.2015

ಆರೋಗ್ಯವನ್ನು ಸಂರಕ್ಷಿಸಲು ಏನೋ ಮಾಡಬೇಕು ಎನ್ನುವುದಕ್ಕೆ ಬೇರೆ ಬೇರೆ ದೇಶಗಳ ಜನ ತಮ್ಮದೇ ಆದ ಸೂತ್ರಗಳನ್ನು ಹೆಣೆದಿದ್ದಾರೆ. ರಷ್ಯಾದವರು ರೂಪಿಸಿದ ಮೂರು ಸೂತ್ರಗಳ ಗಾದೆ ತುಂಬ ಅರ್ಥವತ್ತಾಗಿದೆ. ‘‘ಆರೋಗ್ಯಕ್ಕೆ ತಲೆಯನ್ನು ಶಾಂತವಾಗಿಡಿ, ಹೊಟ್ಟೆಯನ್ನು ಖಾಲಿಯಾಗಿಡಿ, ಪಾದಗಳನ್ನು ಬೆಚ್ಚಗಿಡಿ’’ ದೇಹದ ಮೂರು ಪ್ರಮುಖ ಭಾಗಗಳನ್ನು ಹೇಗಿರಿಸಿಕೊಳ್ಳಬೇಕೆಂದು ರಷ್ಯನ್ ಸೂತ್ರತ್ರಯವು ಸಮರ್ಪಕವಾಗಿ ತಿಳಿಸಿಕೊಡುತ್ತದೆ. ಮೇಲ್ನೋಟಕ್ಕೆ ಇದು ಕೊಂಚ ವಿಚಿತ್ರವಾಗಿ ತೋರಬಹುದಾದರೂ ಒಳಹೊಕ್ಕು ನೋಡಿದಾಗ ಅಲ್ಲಿನ ಹಳಬರ ಅನುಭವವು ಇಲ್ಲಿ ಹರಳಗಟ್ಟಿರುವುದು ಸ್ಪಷ್ಟವಾಗುತ್ತದೆ. ತಲೆಯನ್ನು ತಣ್ಣಗಾಗಿಡುವುದು ಹೇಗೆ? ನಾನಾ ಬಗೆಯ (ವೈಯಕ್ತಿಕ, ಆರ್ಥಿಕ, […]

ಉಪವಾಸ ಮಾಡಿ ಆರೋಗ್ಯ ಕಾಪಾಡಿ!

ಉಪವಾಸ ಮಾಡಿ ಆರೋಗ್ಯ ಕಾಪಾಡಿ!

ಆರೋಗ್ಯ - 0 Comment
Issue Date : 03.11.2015

ಉಪವಾಸ ಇರುವುದೆಂದರೆ ಹಲವರಿಗೆ ಅಸಾಧ್ಯದ ಮಾತು. ಒಂದು ದಿನವಿರಲಿ, ಒಂದು ಗಂಟೆ ಉಪವಾಸ ಮಾಡುವುದು ಸಹ ಸಾಧ್ಯವಿಲ್ಲ ಎನ್ನುವವರಿದ್ದಾರೆ. ತಿಂಗಳಲ್ಲಿ ಯಾವುದಾದರೊಂದು ದಿನ ಉಪವಾಸ ಮಾಡುವ ನಮ್ಮ ಸಂಪ್ರದಾಯವನ್ನು ಕೆಲವರು ಮೂಢನಂಬಿಕೆಯೆಂದು ಹೀಗಳೆಯುವುದಿದೆ. ಆದರೆ ವಾಸ್ತವವೇ ಬೇರೆ. ತಿಂಗಳಲ್ಲಿ ಒಂದು ದಿನವಾದರೂ ಉಪವಾಸ ಮಾಡುವುದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ ಎಂಬುದು ತಜ್ಞ ವೈದ್ಯರ ಮಾತು.  ಉಪವಾಸದಿಂದ ದೇಹದಲ್ಲಿ ರಕ್ತಸಂಚಾರ ಸರಾಗವಾಗುವುದಲ್ಲದೆ ರಕ್ತಶುದ್ಧಿಯೂ ಆಗುತ್ತದೆ. ಬೊಜ್ಜನ್ನು ಕಡಿಮೆ ಮಾಡುವಲ್ಲಿ ಉಪವಾಸದ ಪಾತ್ರ ಮಹತ್ವದ್ದು. ತಿಂಗಳಿಗೊಮ್ಮೆ ಉಪವಾಸ ಮಾಡುವುದರಿಂದ ದೇಹದ […]

 ನಾವು ಸೇವಿಸುವ ಆಹಾರ ಅದೆಷ್ಟು ಪರಿಶುದ್ಧ?!

ನಾವು ಸೇವಿಸುವ ಆಹಾರ ಅದೆಷ್ಟು ಪರಿಶುದ್ಧ?!

ಆರೋಗ್ಯ - 0 Comment
Issue Date : 30.10.2015

ದೇಹಕ್ಕೆ ಯಾವುದೇ ಸಮಸ್ಯೆಯಾದರೂ ಅದಕ್ಕೆ ಹೆಚ್ಚಿನ ಕಾರಣವೆಂದರೆ ನಾವು ಸೇವಿಸುವ ಆಹಾರ. ನಮ್ಮ ಆಹಾರ ಕ್ರಮದಲ್ಲಿ ಸ್ವಲ್ಪವೇ ವ್ಯತ್ಯಯ ವಾದರೂ ನಾವು ಊಟ ನಿದ್ದೆ ಬಿಟ್ಟು ಹೆಣಗಬೇಕಾಗುತ್ತದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶ ಸಿಕ್ಕಿಲ್ಲವೆಂದರೂ ದೇಹ ಬಳಲುತ್ತದೆ. ಆರೋಗ್ಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿ ಪೌಷ್ಟಿಕ ಆಹಾರಗಳನ್ನೇ ಸೇವಿಸದೆ ಇರುವುದರಿಂದ ಮುಂದೊಮ್ಮೆ ನಾವು ತೀರಾ ಕಷ್ಟಪಡಬೇಕಾಗುತ್ತದೆ. ಅನಾರೋಗ್ಯ ಉಂಟಾದಾಗ ನಾವು ವೈದ್ಯರ ಬಳಿ ಹೋದರೆ ಅವರು ನೀಡುವ ಮೊದಲ ಸಲಹೆ ಎಂದರೆ ಪೌಷ್ಟಿಕ ಆಹಾರ ಸೇವಿಸಿ ಎಂಬುದೇ ಆಗಿರುತ್ತದೆ. […]