ಎಳ್ಳು ಚಿಕ್ಕದಾದರೂ ಲಾಭ ದೊಡ್ಡದು!

ಎಳ್ಳು ಚಿಕ್ಕದಾದರೂ ಲಾಭ ದೊಡ್ಡದು!

ಆರೋಗ್ಯ - 0 Comment
Issue Date : 15.10.2015

ಹಿಂದು ಸಂಪ್ರದಾಯದಲ್ಲಿ ಎಳ್ಳಿಗೆ ಮಹತ್ವದ ಸ್ಥಾನವಿದೆ. ಅಗಲಿದವರಿಗೆ ತರ್ಪಣ ನೀಡುವಾಗಲೂ ಎಳ್ಳನ್ನು ಬಳಸುತ್ತೇವೆ. ತಿಲೋದಕ ಮೋಕ್ಷಕ್ಕೆ ದಾರಿ ಎಂಬ ನಂಬಿಕೆ ನಮ್ಮದು. ಚಿಕ್ಕದಾದರೂ ಮಹತ್ವದ ಸಾಂಬಾರ ಪದಾರ್ಥವಾಗಿ ಹೆಸರು ಪಡೆದ ಎಳ್ಳು ರುಚಿಗೂ ಸೈ. ಒಗ್ಗರಣೆಗೆ ಚಿಟಕಿ ಎಳ್ಳು ಹಾಕಿದರೆ ಆರೋಗ್ಯಕ್ಕೂ ಒಳ್ಳೆಯದು, ನಾಲಿಗೆಗೂ ಹಿತ! ಇಂಥ ಎಳ್ಳು ಸಾಕಷ್ಟು ಉಪಯೋಗಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ.  ±ಎಳ್ಳಿನಲ್ಲಿರುವ ಮ್ಯಾಗ್ನೇಶಿಯಂ ಮತ್ತು ಇನ್ನಿತರ ಪೋಷಕಾಂಶಗಳು ಮಧುಮೇಹವನ್ನು ಹತೋಟಿಗೆ ತರುವಲ್ಲಿ ಸಹಕಾರಿಯಾಗಿದೆ. ಇದು ಪ್ಲಾಸ್ಮಾ ಗ್ಲುಕೋಸ್‌ಅನ್ನು ಹೆಚ್ಚಿಸುವ ಕಾರಣ ಅಧಿಕ ರಕ್ತದೊತ್ತಡದಿಂದ […]

ಬಾಯಿ ಮೊಸರಾದರೆ ಆರೋಗ್ಯ ಸೊಗಸು!

ಬಾಯಿ ಮೊಸರಾದರೆ ಆರೋಗ್ಯ ಸೊಗಸು!

ಆರೋಗ್ಯ - 0 Comment
Issue Date : 13.10.2015

ಮೊಸರು ಹಲವರು ಇಷ್ಟ ಪಡುವ ಪದಾರ್ಥ. ಕೆಲವರಿಗಂತೂ ಮೊಸರು ಇಲ್ಲದೆ ಊಟವೇ ಇಲ್ಲ ಎಂಬಷ್ಟರ ಮಟ್ಟಿಗೆ ಮೊಸರಂದ್ರೆ ಇಷ್ಟ. ಸಕ್ಕರೆ, ಬೆಲ್ಲ ಬೆರೆಸಿ ಆಗಾಗ ಮೊಸರು ಸೇವಿಸುವವರಿದ್ದಾರೆ. ಹಾಗೆಯೇ ಮೊಸರೆಂದರೆ ಇಷ್ಟವೇ ಇಲ್ಲದವರೂ ಇದ್ದಾರೆ. ಕೊಬ್ಬಿನಂಶ ಹೆಚ್ಚು ಎಂದು ಮೊಸರನ್ನು ಮೂದಲಿಸುವ ಜನರಿಗೇನು ಕೊರತೆಯಿಲ್ಲ. ಆದರೆ ಮೊಸರಿನಲ್ಲಿರುವುದು ಉತ್ತಮ ಕೊಬ್ಬಿನಂಶ, ಅದು ದೇಹಕ್ಕೆ ಹಾನಿಯಾಗುವ ಬದಲು, ದೇಹದ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ ಎನ್ನುವವರೂ ಹಲವರಿದ್ದಾರೆ.  ಬೊಜ್ಜಿನ ಸಮಸ್ಯೆಯಿಂದ ಬಳಲುವವರಿಗೆ ಮೊಸರಿನ ಬಗ್ಗೆ ತಾತ್ಸಾರ ಭಾವವಿರಬಹುದು. ಆದರೆ ಮೊಸರನ್ನು […]

ಕೆಮ್ಮು ಕಾಡುತ್ತಿದೆಯೇ?

ಕೆಮ್ಮು ಕಾಡುತ್ತಿದೆಯೇ?

ಆರೋಗ್ಯ - 0 Comment
Issue Date : 08.10.2015

ಕೆಮ್ಮಿಗೆ ಕಾಲವೆಂಬುದಿಲ್ಲ. ಅದು ಎಲ್ಲಾ ಕಾಲದಲ್ಲಿಯೂ ಬರುತ್ತದೆ. ಕರಿದ ತಿಂಡಿ ಸೇವನೆಗೆ, ಸೋಂಕಿಗೆ, ಶೀತವಾದರೆ, ಕಫವಾದರೆ ಹೀಗೆ ಒಂದಿಲ್ಲೊಂದು ಕಾರಣಕ್ಕೆ  ಕೆಮ್ಮು ಕಾಡುತ್ತದೆ. ಕೆಮ್ಮು ಆರಂಭವಾಗಿ, ಸಮಸ್ಯೆ ತೀವ್ರವಾಗುವ ಮೊದಲೇ ಸಾಕಷ್ಟು ಸೂಚನೆಗಳನ್ನು ಕೊಟ್ಟಿರುತ್ತದೆ. ಆ ಕ್ಷಣದಲ್ಲೇ ನಾವು ಕಾಳಜಿ ತೆಗೆದುಕೊಂಡಿದ್ದೇ ಆದಲ್ಲಿ ಕೆಮ್ಮಿನ ಸಮಸ್ಯೆ ಉಲ್ಬಣವಾಗದೆ ಅಷ್ಟರಲ್ಲೇ ಕಡಿಮೆಯಾಗಿಬಿಡುತ್ತದೆ. ಇದಕ್ಕೆಂದು ವೈದ್ಯರ ಬಳಿ ಓಡುವ ಅಗತ್ಯವೇನಿಲ್ಲ. ಕೆಲವು ಮನೆಮದ್ದುಗಳ ಬಗ್ಗೆ ತಿಳಿದಿದ್ದರೆ ಅದರಿಂದಲೇ ಕೆಮ್ಮಿಗೆ ಪರಿಹಾರ ಕಂಡುಕೊಳ್ಳಬಹುದು. ಚಿಟಕಿಯಷ್ಟು ಕಾಳುಮೆಣಸಿನ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಡನೆ […]

ಖಾಲಿ ಹೊಟ್ಟೆಗೆ ಬೇಕು ನೀರಿನ ಥೆರಪಿ!

ಖಾಲಿ ಹೊಟ್ಟೆಗೆ ಬೇಕು ನೀರಿನ ಥೆರಪಿ!

ಆರೋಗ್ಯ - 0 Comment
Issue Date : 22.09.2015

 – ಅನ್ವಿತಾ ಆರೋಗ್ಯದ ವಿಷಯಕ್ಕೆ ಬಂದಾಗಲೆಲ್ಲ ನೀರಿನ ಮಹತ್ವ ಕಣ್ಮುಂದೆ ಬರುತ್ತದೆ. ಸಮಸ್ಯೆ ಏನೇ ಇರಲಿ ಪರಿಹಾರಗಳಲ್ಲಿ ಮಾತ್ರ ನೀರಿನ ಸೇವನೆಯೂ ಸ್ಥಾನ ಪಡೆಯುತ್ತದೆ. ಅಷ್ಟರ ಮಟ್ಟಿಗೆ ಸಕಲ ಸಮಸ್ಯೆಗಳಿಗೂ ನೀರು ಪ್ರಭಾವಶಾಲಿ ಪರಿಹಾರವಾಗಿ ಪ್ರಸಿದ್ಧಿ ಪಡೆದಿದೆ. ಹೀಗಿರುವಾಗ ಬೆಳಗ್ಗೆ ಎದ್ದೊಡನೆಯೇ ನೀರು ಕುಡಿಯುವ ಮೂಲಕ ದಿನಚರಿ ಆರಂಭಿಸುವ ಪರಿಪಾಠ ಜಪಾನಿನಲ್ಲಿದೆಯಂತೆ. ಪ್ರತಿದಿನವೂ ಎದ್ದೊಡನೆ ಮೂರ‌್ನಾಲ್ಕು ಲೋಟ ನೀರು ಕುಡಿಯುವುದರಿಂದಲೇ ಜಪಾನಿನ ಜನರು ಅಷ್ಟೆಲ್ಲ ಚಟುವಟಿಕೆಯಿಂದಿರಬಲ್ಲರು ಎಂದು ಸಂಶೋಧನೆಯೊಂದು ಹೇಳಿದೆ. ಇದರಿಂದ ನೀರಿನ ಥೆರಪಿ ಎಷ್ಟು ಪ್ರಭಾವಶಾಲಿ […]

ಹಸನಾಗಲಿ ಹಬ್ಬ

ಹಸನಾಗಲಿ ಹಬ್ಬ

ಆರೋಗ್ಯ - 0 Comment
Issue Date : 16.09.2015

ಶ್ರಾವಣ ಮಾಸದ ನಂತರ ಹಬ್ಬಗಳದ್ದೇ  ಜಾತ್ರೆ. ಹಬ್ಬ ಅಂದರಂತೂ ಭಾರತೀಯರ ಮನೆಯಲ್ಲಿ ಕಜ್ಜಾಯಗಳದ್ದೇ ದರ್ಬಾರು. ಯಾವುದು ತಿನ್ನುವುದು ಯಾವುದು ಬಿಡುವುದು ಎಂದು ಗೊಂದಲವಾಗುವ ಮಟ್ಟಿಗೆ ನಮ್ಮವರು ಖಾದ್ಯಗಳನ್ನು ತಯಾರಿಸುವಲ್ಲಿ  ಎತ್ತಿದ ಕೈ. ಹಬ್ಬ ಬೇಕು, ಖಾದ್ಯವೂ ಬೇಕು. ಆದರೆ ಹಬ್ಬದಂದು ಇಷ್ಟಪಟ್ಟು ತಿಂದ ಖಾದ್ಯಗಳಿಂದಾಗಿ ಆರೋಗ್ಯ ಹದಗೆಟ್ಟರೆ ಎಂಬ ಭಯವೂ ತಪ್ಪಿದ್ದಲ್ಲ. ಏಕೆಂದರೆ ಹಬ್ಬದ ದಿನ ಸಾಕಷ್ಟು ತಿಂಡಿ-ತಿನಿಸುಗಳು ಇರುವುದರಿಂದ ಆಹಾರಗಳು ಜೀರ್ಣವಾಗುವುದಿಲ್ಲ . ಒಂದು ದಿನದ ಹಬ್ಬದ ಮೋಜು ತಿಂಗಳಾನುಗಟ್ಟಲೆ ನಿಮ್ಮನ್ನು ಮಲಗಿಸಬಹುದು. ಆದ್ದರಿಂದ ಇಂಥ […]

ಮನುಷ್ಯ ದೇಹದ ಭದ್ರತಾ ಪಡೆ

ಆರೋಗ್ಯ - 0 Comment
Issue Date : 12.09.2015

-ಶಶಿಕಲಾ ಮನುಷ್ಯನ ದೇಹವೆಂದರೆ ಕೌತುಕದ ಪ್ರಪಂಚ. ದೇಹದ ಯಾವೊಂದು ಭಾಗ ತನ್ನ ಕೆಲಸವನ್ನು ಮರೆತರೂ ಅಪಾಯ ತಪ್ಪಿದ್ದಲ್ಲ. ದೇಹದೊಳಗಿನ ಪ್ರತಿಯೊಂದು ಅಂಗಕ್ಕೂ ತಮ್ಮದೇ ಆದ ಜವಾಬ್ದಾರಿಗಳಿವೆ. ದೇಹವನ್ನು ರೋಗಾಣುಗಳಿಂದ ರಕ್ಷಿಸುವ ಕೆಲಸವನ್ನು ಮಾಡುವುದು ಬಿಳಿರಕ್ತ ಕಣ. ದೇಹದ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಇದರ ಕೊಡುಗೆ ಅಪಾರ. ಬಿಳಿರಕ್ತ ಕಣಗಳ ಸಂಖ್ಯೆ ನಿರ್ದಿಷ್ಟ ಪ್ರಮಾಣ ಕ್ಕಿಂತ ಕಡಿಮೆಯಾದರೆ ದೇಹ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗ ಬೇಕಾಗುತ್ತದೆ. ಮತ್ತೆ ಮತ್ತೆ ಜ್ವರ, ನೆಗಡಿ, ಅಲರ್ಜಿ ಮುಂತಾದ ಸಮಸ್ಯೆಯಾಗುತ್ತ ದಾದರೆ ಅದಕ್ಕೆ ಕಾರಣ ಬಿಳಿರಕ್ತಕಣ […]

ಹಾಸಿಗೆ ಒದ್ದೆಯಾಗುವುದು ಸಹಜವೇ?

ಹಾಸಿಗೆ ಒದ್ದೆಯಾಗುವುದು ಸಹಜವೇ?

ಆರೋಗ್ಯ - 0 Comment
Issue Date : 31.08.2015

ಚಿಕ್ಕ ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದು ಅಸಹಜ ವಿಷಯವೇನಲ್ಲ. ಸುಮಾರಾಗಿ 5 ನೇ ವರ್ಷದವರೆಗೂ ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ನಿದ್ರೆಯ ಸಮಯದಲ್ಲಿ ಮಕ್ಕಳಲ್ಲಿ ನಿಗ್ರಹ ಶಕ್ತಿ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ. 5 ರಿಂದ 6 ವರ್ಷದ ನಂತರವೂ ಮಕ್ಕಳು ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಆ ಬಗ್ಗೆ ಪಾಲಕರು ಸ್ವಲ್ಪ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ. ಏಕೆಂದರೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸ್ವಾಸ್ಥ್ಯದ ಲಕ್ಷಣವಲ್ಲ. ಮಕ್ಕಳ ಮೆದುಳು ಆರು ವರ್ಷದ ನಂತರ […]

ಏನನ್ನು ತಿನ್ನಬೇಕು?

ಆರೋಗ್ಯ - 0 Comment
Issue Date : 24.08.2015

ಚೆನ್ನಾಗಿ ತಿನ್ನುತ್ತೇನೆ, ತೂಕವೂ ಇದೆ. ಆದರೂ ಆಗಾಗ ಹುಷಾರು ತಪ್ಪುತ್ತದೆ. ಇದು ಹಲವರ ಸಮಸ್ಯೆ. ಹೆಚ್ಚು ತೂಕವಾಗಲಿ, ಹೆಚ್ಚು ತಿನ್ನುವುದಾಗಲಿ ಉತ್ತಮ ಆರೋಗ್ಯದ ಲಕ್ಷಣ ಖಂಡಿತ ಅಲ್ಲ. ಎಷ್ಟು ತಿನ್ನುತ್ತೇವೆ ಎಂಬುದಕ್ಕಿಂತ ಏನನ್ನು ತಿನ್ನುತ್ತೇವೆ ಎಂಬುದು ಮುಖ್ಯ. ನಾವು ಸೇವಿಸುವ ಆರೋಗ್ಯಪ್ರೋಟಿನ್‌ಯುಕ್ತವಾಗಿದ್ದರೆ ಮಾತ್ರವೇ ದೇಹ ಸ್ವಾಸ್ಥ್ಯದಿಂದಿರುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಸಹ ಅಂಥ ಆಹಾರವೇ. ಇಂದು ಯುವ ಜನಾಂಗ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದೆ. ಅದಕ್ಕೂ ಕಾರಣ ಪ್ರೋಟಿನ್‌ಯುಕ್ತ ಆಹಾರದ ಕೊರತೆ. ತಿನ್ನುವ ಆಹಾರವನ್ನು ಪ್ರಮಾಣದಲ್ಲಿ ಅಳೆಯವ […]

ಜೇನು ಆರೋಗ್ಯಕ್ಕೂ ಸಿಹಿ!

ಜೇನು ಆರೋಗ್ಯಕ್ಕೂ ಸಿಹಿ!

ಆರೋಗ್ಯ - 0 Comment
Issue Date : 10.08.2015

ಜೇನು ನೈಸರ್ಗಿಕವಾಗಿ ಸಿಗುವ ಔಷಧೀಯ ದ್ರವ. ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ಮನುಷ್ಯನಿಗೆ ಜೇನುನೋಣಗಳ ರೀತಿಯಲ್ಲಿ ಜೇನನ್ನು ಶೇಖರಿಸುವ, ಅವಕ್ಕೆ ವಿಭಿನ್ನ ರುಚಿ ನೀಡುವ ತಂತ್ರಜ್ಞಾನವನ್ನು ಮಾತ್ರ ಕಂಡುಹಿಡಿಯಲಿಕ್ಕಾಗಲಿಲ್ಲ. ಒಂದೊಂದು ಹೂವಿನಿಂದಲೂ ಸಾಸಿವೆ ಗಾತ್ರದ ಮಕರಂದ ಹೀರಿಕೊಂಡು ಹಗಲಿರುಳೆನ್ನದೆ ಅವು ಜೇನನ್ನು ತಯಾರಿಸುವ ಪರಿ, ಅವು ಕಟ್ಟುವ ಒಪ್ಪವಾದ ಗೂಡು ಇವೆಲ್ಲ ದೈವೀಸೃಷ್ಟಿಯ ಬಗ್ಗೆ ಅಚ್ಚರಿ ಮೂಡಿಸದಿರದು. ಹಲವು ಸಹಸ್ರಮಾನಗಳಿಂದಲೂ ಜೇನು ಒಂದು ಉತ್ತಮ ಔಷಧೀಯ ವಸ್ತುವಾಗಿ ಪ್ರಸಿದ್ಧಿ ಪಡೆದಿದೆ. ಚರ್ಮದ ಸಮಸ್ಯೆ, ರಕ್ತ ಶುದ್ಧಿ, ಜೀರ್ಣಶಕ್ತಿ ಮುಂತಾದ ವಿಷಯಗಳಲ್ಲಿ […]

ಆರೋಗ್ಯವೆಂದರೆ ಅಷ್ಟೆಲ್ಲ ಉಡಾಫೆಯೆ...?

ಆರೋಗ್ಯವೆಂದರೆ ಅಷ್ಟೆಲ್ಲ ಉಡಾಫೆಯೆ…?

ಆರೋಗ್ಯ - 0 Comment
Issue Date : 06.08.2015

– ಪೂರ್ಣಿಮಾ ಆರೋಗ್ಯ ಭಾಗ್ಯವೆಂಬ ಮಾತನ್ನು ಅದೆಷ್ಟು ಬಾರಿ ಕೇಳಿದ್ದೇವೋ, ಆಡಿದ್ದೇವೋ ದೇವರಿಗೇ ಗೊತ್ತು! ಅನ್ನಭಾಗ್ಯದಂತೆ ಆರೋಗ್ಯ ಭಾಗ್ಯ ನೀಡುವುದಕ್ಕೆ ನಮ್ಮನ್ನಾಳುವವರಿಗೆ ಸಾಧ್ಯವಿಲ್ಲವೆಂಬುದೂ ನಮಗೆ ತಿಳಿಯದ ವಿಷಯವಲ್ಲ. ಆದರೂ ನಾವು ಆರೋಗ್ಯದ ಬಗ್ಗೆ ಉಡಾಫೆ ಮನೋಭಾವವನ್ನು ಹೊಂದಿರುವುದು ಸುಳ್ಳಲ್ಲ. ನಮ್ಮ ಬದುಕಿನ ಶೈಲಿಯಿಂದಾಗಿ ಆರೋಗ್ಯ ಕೆಡುತ್ತಿದೆ, ನಮ್ಮ ಆಹಾರ ಕ್ರಮದಿಂದಾಗಿ ಆರೋಗ್ಯ ಕೆಡುತ್ತಿದೆ ಎಂಬೆಲ್ಲ ವಿಷಯಗಳೂ ನಮಗೆ ಗೊತ್ತು. ಹಾಗಂತ ಅವನ್ನೆಲ್ಲ ಬದಲಿಸಿಕೊಳ್ಳಲು ನಮಗೆ ಇಷ್ಟವಿಲ್ಲ. ನಮ್ಮಂಥ ಉಡಾಫೆ ಜನರಿಗಾಗಿಯೇ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ತರಹೇವಾರಿ ಮಾತ್ರೆಗಳಿಗೆ ದಾಸರಾಗಿ […]