ಬಿಸಿಲಲ್ಲಿ ಮಕ್ಕಳ ರಕ್ಷಣೆ

ಬಿಸಿಲಲ್ಲಿ ಮಕ್ಕಳ ರಕ್ಷಣೆ

ಆರೋಗ್ಯ - 0 Comment
Issue Date : 08.05.2015

ಭೂಮಿಯ ಮೇಲೆ ತಾಪಮಾನ ದಿನೇ ದಿನೇ ಹೆಚ್ಚುತ್ತಲೇ ಇರುವುದರಿಂದ ಬಿಸಿಲಿಂದ ಪಾರಾಗುವುದು ಹೇಗೆ ಎಂಬುದೇ ಬಹುತೇಕ ಎಲ್ಲರ ಸಮಸ್ಯೆಯಾಗಿದೆ. ಫ್ಯಾನ್, ಎಸಿ ಯಾವುದೂ ಸೆಖೆಯ ಧಗೆಯನ್ನು ತಣಿಸುವುದಕ್ಕೆ ಸಫಲವಾಗದೆ ಎಲ್ಲಾದರೂ ತಣ್ಣೀರ ಕೊಳದಲ್ಲಿ ಮುಳುಗೇಳೋಣ ಎಂಬಷ್ಟರ ಮಟ್ಟಿಗೆ ಬೇಸಿಗೆ ಧಗಧಗಿಸುತ್ತಿದೆ. ಚರ್ಮದ ಆರೋಗ್ಯ ಒಂದೆಡೆಯಾದರೆ ಸಂಪೂರ್ಣ ದೇಹದ ಆರೋಗ್ಯವೂ ಹದಗೆಡಬಹುದಾದ ಸಾಧ್ಯತೆ ಈ ಸಮಯದಲ್ಲಿ ಹೆಚ್ಚು. ದೊಡ್ಡವರಾದರೆ ಹೇಗೋ ಸಹಿಸಿಕೊಳ್ಳಬಹುದು. ಆದರೆ ಮಕ್ಕಳನ್ನು ಸೆಖೆಯಿಂದ ಪಾರುಮಾಡುವುದು ಹೇಗೆ? ಬೇಸಿಗೆಯಲ್ಲಿ ದೇಹಾರೋಗ್ಯ ಸ್ವಸ್ಥವಾಗಿರುವಂತೆ ಎಚ್ಚರಿಕೆ ವಹಿಸಲು ಅವರಲ್ಲಿ ಜಾಗೃತಿ […]

ಗಂಡ - ಹೆಂಡತಿ ನಡುವೆ ಒಡಕು ತಂದಿಟ್ಟ  ವಾಟ್ಸ್‌ಆಪ್

ಗಂಡ – ಹೆಂಡತಿ ನಡುವೆ ಒಡಕು ತಂದಿಟ್ಟ ವಾಟ್ಸ್‌ಆಪ್

ಆರೋಗ್ಯ - 0 Comment
Issue Date : 30.04.2015

ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವಂತೆ ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧ ಕ್ಷೀಣಿಸುತ್ತಿದೆ. ಇದಕ್ಕೆ ಪರಿಹಾರವಾಗಿ ವ್ಯಕ್ತಿ ವ್ಯಕ್ತಿಗಳ ನಡುವಣ ಸಂಪರ್ಕ, ತತ್ಪರಿಣಾಮವಾಗಿ ಸಂಬಂಧ ಬೆಳೆಯುವಂತೆ ಮಾಡಲು ಸಾಮಾಜಿಕ ಜಾಲತಾಣಗಳ ಉದ್ಭವವಾಗಿದೆ. ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆಪ್ ನಂತಹ ಸೌಲಭ್ಯಗಳು ವ್ಯಕ್ತಿಗಳನ್ನು ಸಂಪರ್ಕಿಸಲು, ನಮ್ಮೆಲ್ಲ ಅನುಭವವನ್ನು ಹಂಚಿಕೊಳ್ಳಲು ಸುಲಭಗೊಳಿಸುತ್ತವೆ. ಈ ಸೌಲಭ್ಯಗಳು ಹೊಸ ವ್ಯಕ್ತಿಗಳ ಪರಿಚಯ ದೊರಕಿಸುವಷ್ಟೇ ಹಳೇ ಸಂಬಂಧಗಳು ಶಿಥಿಲವಾಗಲೂ, ದುರ್ಬಲ ಸಂಬಂಧಗಳು ಮುರಿದು ಬೀಳಲೂ ಕಾರಣವಾಗುತ್ತವೆ. ಈ ಜಾಲತಾಣಗಳನ್ನು ಜಾಗ್ರತೆಯಿಂದ ಬಳಸಲು ವಿದ್ಯಾವಂತರೂ ಎಡವುತ್ತಿರುವಾಗ, ಅಮಾಯಕರ, ಮುಗ್ಧರ […]

ತಂಗಳು ಪೆಟ್ಟಿಗೆಯ  ಅವಾಂತರ

ತಂಗಳು ಪೆಟ್ಟಿಗೆಯ ಅವಾಂತರ

ಆರೋಗ್ಯ - 0 Comment
Issue Date : 30.04.2015

ನಗರಗಳಲ್ಲಿ ಹೋಗಲಿ, ಇತ್ತೀಚೆಗೆ ಹಳ್ಳಿಯಲ್ಲಿಯೂ ಪ್ರತಿ ಮನೆಯಲ್ಲೂ ಫ್ರಿಡ್ಜ್‌ಗಳು ಸಾಮಾನ್ಯ ಎನ್ನಿಸಿವೆ. ಅಳತೆ-ಅಂದಾಜಿಲ್ಲದೆ ಎಷ್ಟೋ ತಿಂಡಿ ತಯಾರಿಸಿ ಆನಂತರ ಅದನ್ನೇ ಫ್ರಿಡ್ಜಿನಲ್ಲಿಟ್ಟು ಎರಡು ದಿನದ ನಂತರವೂ ತಿನ್ನುತ್ತಿರುವುದು ಇತ್ತೀಚೆಗೆ ಮಾಮೂಲೆನ್ನಿಸಿದೆ. ಅದರಲ್ಲೂ ಬೇಸಿಗೆ ಬಂತೆಂದರೆ ಸಾಕು ಕುಡಿಯುವುದಕ್ಕೂ ಫ್ರೀಡ್ಜ್‌ನಲ್ಲಿರುವ ನೀರೇ ಆಗಬೇಕು. ಎಷ್ಟೋ ಜನ ಫ್ರಿಡ್ಜಿನಲ್ಲಿರುವ ಆಹಾರವನ್ನು ಬಿಸಿ ಮಾಡದೆ ಹಾಗೆಯೇ ತಿನ್ನುವುದನ್ನೂ ಕಾಣಬಹುದು. ಆದರೆ ವಾಸ್ತವವೆಂದರೆ ಹೀಗೆ ಫ್ರಿಡ್ಜಿನಲ್ಲಿರುವ ಆಹಾರವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಖಂಡಿತ ಒಳ್ಳೆಯದಲ್ಲ. ಫ್ರಿಡ್ಜಿನಲ್ಲಿಟ್ಟ ಆಹಾರದಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆ ನಾವು […]

ಮಧ್ಯ ವಯಸ್ಸಿನಲ್ಲೂ ಕಾಡುವ ಬಾಲ್ಯದ ಗಾಯಗಳು

ಮಧ್ಯ ವಯಸ್ಸಿನಲ್ಲೂ ಕಾಡುವ ಬಾಲ್ಯದ ಗಾಯಗಳು

ಆರೋಗ್ಯ - 0 Comment
Issue Date : 29.04.2015

ಮಾನವ ಜೀವನದಲ್ಲಿ ‘ಬಾಲ್ಯ’ ಅತೀ ಮುಖ್ಯ ಘಟ್ಟ. ಈ ಮಾತು ಮನೋ ವಿಜ್ಞಾನ ಕ್ಕಂತೂ ನೂರಕ್ಕೆ ನೂರು ಸತ್ಯ. ‘ಆರರಲ್ಲಿ ಕಲಿತದ್ದು ಅರವತ್ತರವರೆಗೆ’ ‘ಗಿಡವಾಗಿ ಒಗ್ಗದ್ದು ಮರವಾಗಿ ಬಗ್ಗೀತೆ?’ ಎಂಬ ಗಾದೆಗಳು ಬಾಲ್ಯದ ಬೆಳವಣಿಗೆಯ ಮಹತ್ವವನ್ನು ವಿವರಿಸುತ್ತವೆ. ಬಾಲ್ಯದ ಬೆಳವಣಿಗೆಗೆ ಮಹತ್ವವಾದದ್ದು – ಮನೆಯ ವಾತಾವರಣ. ತಂದೆ – ತಾಯಿಗಳ ವಾತ್ಸಲ್ಯ, ಒಡಹುಟ್ಟಿದವರ ಆತ್ಮೀಯ ಒಡನಾಟ, ಬಂಧುಮಿತ್ರರ ವಿಶ್ವಾಸ ಈ ವಾತಾವರಣದಲ್ಲಿ ಬೆಳೆದವರ ಮನಃಸ್ಥಿತಿಯೇ ಬೇರೆ. ಬಡತನ, ಇಕ್ಕಟ್ಟು, ವಾತ್ಸಲ್ಯ ರಹಿತ ತಂದೆ – ತಾಯಿ, ವಿಶ್ವಾಸಘಾತುಕ […]

ವಿಟಾಮಿನ್ ಇ ಕೊರತೆಯಿಂದ ಅಲ್ಜಮೈರ್!

ವಿಟಾಮಿನ್ ಇ ಕೊರತೆಯಿಂದ ಅಲ್ಜಮೈರ್!

ಆರೋಗ್ಯ - 0 Comment
Issue Date : 28.04.2015

ನಮ್ಮ ಚರ್ಮ, ಕಣ್ಣಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿಟಾಮಿನ್ ಇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಮಹತ್ವ ಪಡೆದಿದೆ. ವಿಟಾಮಿನ್ ಇ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಜೀವಸತ್ವವೂ ಹೌದು. ಅಕಸ್ಮಾತ್ ನಮ್ಮ ದೇಹದಲ್ಲಿ ಈ ಜೀವಸತ್ವದ ಕೊರತೆ ಉಂಟಾದದ್ದೇ ಆದಲ್ಲಿ ಅಲ್ಜಮೈರ್‌ನಂಥ ಅಪಾಯಕಾರಿ ಕಾಯುಲೆಗಳು ಉಂಟಾಗಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ. ಹೆಚ್ಚು ಹೆಚ್ಚು ವಿಟಾಮಿನ್ ಇ ಅಂಶವಿರುವ ಪದಾರ್ಥವನ್ನು ತಿನ್ನುವುದರಿಂದ ಈ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸಬಹುದು ಎಂದು ತಜ್ಞರು ಹೇಳುತ್ತಾರೆ. ಪ್ರತಿದಿನ ಬಾದಾಮಿ ಬೀಜವನ್ನು […]

ಕ್ಯಾನ್ಸರ್ ನಿಯಂತ್ರಣ ಹೇಗೆ?

ಆರೋಗ್ಯ - 0 Comment
Issue Date : 14.04.2015

ಹೊಸ ತಲೆಮಾರಿನ ಅಪಾಯಕಾರಿ ರೋಗಗಳ ಪೈಕಿ ಕ್ಯಾನ್ಸರ್ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ವೈದ್ಯಕೀಯ ಜಗತ್ತಿನ ನಿದ್ದೆ ಕೆಡಿಸಿರುವ ಈ ರೋಗಕ್ಕೆ ನಿರ್ದಿಷ್ಟ ಔಷಧವಿಲ್ಲ. ರೋಗಿಯ ಮಾನಸಿಕ ಸ್ಥೈರ್ಯ ಕಳೆದು ವೈದ್ಯರು ನೀಡಿದ ಗಡುವಿಗಿಂತ ಮೊದಲೇ ಆತ ಸಾವನ್ನಪ್ಪುವಂತೆ ಮಾಡಬಲ್ಲ ಶಕ್ತಿ ಈ ರೋಗಕ್ಕಿದೆ. ಇಂದು ಈ ರೋಗದ ಪರಿಹಾರಕ್ಕೆ ಹಲವು ಔಷಧಗಳು ಬಂದಿವೆ. ಆದರೆ ಅವೆಲ್ಲ ಸಂಪೂರ್ಣವಾಗಿ ರೋಗ ಪರಿಹರಿಸುವಲ್ಲಿ ಶಕ್ತವಾಗಿಲ್ಲ. ಕಿಮೋಥೆರಪಿ ಎಂಬ ತಂತ್ರಜ್ಞಾನ ಸಹ ರೋಗಿಯ ದೇಹದ ಕ್ಯಾನ್ಸರ್ ಕಣಗಳನ್ನು ಸಾಯಿಸುವಲ್ಲಿ ಯಶಸ್ವಿಯಾಗಿದ್ದರೂ, ದೇಹದಲ್ಲಿರುವ ಆರೋಗ್ಯಕರ […]

ಚಿಕಿತ್ಸೆ ಅರಸಿ ಬಂದ ರಾಜಸ್ಥಾನಿ ಯುವಕ

ಚಿಕಿತ್ಸೆ ಅರಸಿ ಬಂದ ರಾಜಸ್ಥಾನಿ ಯುವಕ

ಆರೋಗ್ಯ - 0 Comment
Issue Date : 06.04.2015

ಭಾರತದಲ್ಲಿ ಮನೋರೋಗಿಗಳ ಸಂಖ್ಯೆ ಎಷ್ಟು? ಮನೋ ರೋಗಿಗಳಿಗೆಲ್ಲಾ ಚಿಕಿತ್ಸೆ ಕೊಡಲು ಬೇಕಾದಷ್ಟು ಸಂಖ್ಯೆಯಲ್ಲಿ ಮನೋವೈದ್ಯರು ಇದ್ದಾರೆಯೇ? ವಿವಿಧ ಸಂಶೋಧನೆಗಳ ಪ್ರಕಾರ ಭಾರತದಲ್ಲಿ ಪ್ರತಿಶತ 20 ಜನರಿಗೆ ಮನೋರೋಗವಿದೆ. ಅಂದರೆ ಸುಮಾರು 20 ಕೋಟಿ ಜನರು! ಮನೋವೈದ್ಯರ ಸಂಖ್ಯೆ ಸುಮಾರು ಐದಾರು ಸಾವಿರ. ಮನೋವೈದ್ಯರ ಲಭ್ಯತೆಗೂ, ಅವರಿರಬೇಕಾದ ಸಂಖ್ಯೆಗೂ ಅಜಗಜಾಂತರ. ಹೀಗಿರುವಾಗ, ಮನೋವೈದ್ಯರು ಲಭ್ಯವಿಲ್ಲದ ಊರುಗಳಲ್ಲಿ ಮನೋರೋಗಿಗಳ ಪಾಡೇನು ಸಾಧಾರಣವಾಗಿ ಅಂತಹವರು ವಿವಿಧ ತೀರ್ಥಕ್ಷೇತ್ರಗಳಿಗೋ, ಮಾಂತ್ರಿಕ – ತಾಂತ್ರಿಕರಲ್ಲಿಗೋ ಹೋಗುತ್ತಾರೆ. ದೇವರ ಕೃಪೆಯಿಂದಲೋ, ಮಂತ್ರ – ತಂತ್ರಗಳಿಂದಲೋ ಸಮಸ್ಯೆ […]

ಹಿತ್ತಲು ಎಂಬ ಆಸ್ಪತ್ರೆ!

ಆರೋಗ್ಯ - 0 Comment
Issue Date :

ಮನೆಗೊಂದು ಹಿತ್ತಲಿದ್ದರೇನೇ ಭೂಷಣ ಎಂಬ ಮಾತು ಹಿಂದಿನ ಕಾಲದಲ್ಲಿತ್ತು. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಹಿತ್ತಲನ್ನು ಕಾಣಬಹುದು. ಕೇವಲ ಹೂ-ಗಿಡಗಳಿಗಷ್ಟೇ ಅದು ನೆಲೆಯಾಗದೆ ಹಲವಾರು ಔಷಧಿ ಸಸ್ಯಗಳೂ ಅಲ್ಲಿ ಜಾಗ ಪಡೆದಿರುತ್ತಿದ್ದವು. ಮುಖ್ಯವಾಗಿ ಅವೆಲ್ಲ ದಿನನಿತ್ಯದ ಅಡುಗೆಯಲ್ಲೂ ಬಳಕೆಯಾಗಿ ಮನೆ ಜನರ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಆದರೆ ಇಂದು ನಗರ ಪ್ರದೇಶಗಳಲ್ಲಂತೂ ಔಷಧಿ ಸಸ್ಯ ನೆಡುವುದಕ್ಕೆ ಜಾಗವೂ ಇಲ್ಲ, ಜಾಗವಿದ್ದರೂ ಗಿಡ ಬೆಳೆಸುವ ವ್ಯವಧಾನ ಯಾರಿಗೂ ಇಲ್ಲ. ಆದರೆ ಕೆಲವು ಸಸ್ಯಗಳನ್ನು ಇರುವ ಜಾಗದಲ್ಲೇ ಹೂಕುಂಡ […]

ಆತ್ಮಹತ್ಯೆಗೆ ಪ್ರಯತ್ನಿಸಿದ ಭಕ್ತ

ಆತ್ಮಹತ್ಯೆಗೆ ಪ್ರಯತ್ನಿಸಿದ ಭಕ್ತ

ಆರೋಗ್ಯ - 0 Comment
Issue Date :

‘ಮನವೆಂಬ ನಾವೆ’ ಈ ಲೇಖನ ಮಾಲೆಯಲ್ಲಿ ಮನೋ ರೋಗ ವಿವಿಧ ರೀತಿಯಲ್ಲಿ ಪ್ರಕಟವಾಗುವುದನ್ನೂ, ಮನೋವೈದ್ಯರ ಔಷಧೋಪಾರ, ಆಪ್ತ ಸಮಾಲೋಚನೆಗಳ ಮೂಲಕ ವಿವಿಧ ಮನೋರೋಗಿಗಳನ್ನು ಗುಣಪಡಿಸುವ ಪ್ರಯತ್ನಗಳನ್ನೂ ಸಹೃದಯ ಓದುಗರು ಗಮನಿಸಿರಬಹುದು. ಉಳಿದೆಲ್ಲಾ ವೈದ್ಯಕೀಯ ವಿಭಾಗಗಳಿಗೂ, ಮನೋ ವೈದ್ಯಕೀಯ ವಿಭಾಗಕ್ಕೂ ಒಂದು ಪ್ರಮುಖ ವ್ಯತ್ಯಾಸವಿದೆ. ಮಾನವನ ಶರೀರದ ಉಳಿದೆಲ್ಲ ಅಂಗಾಂಗಗಳನ್ನೂ ವಿವಿಧ ಉಪಕರಣಗಳ ಮೂಲಕ ‘ನೋಡ’ಬಹುದಾಗಿದೆ. ಅಂಗಾಂಗಗಳನ್ನೇ ಬಗೆದು ಒಳಗೆ ಹುದುಗಿರುವ ರೋಗ ಮೂಲಗಳನ್ನು ಪತ್ತೆಹಚ್ಚಬಹುದಾಗಿದೆ. ಈ ಸೌಲಭ್ಯ ಮನೋವೈದ್ಯರಿಗಿಲ್ಲ. ಮನುಷ್ಯನೊಬ್ಬನ ಭಾವನೆ, ಚಿಂತನೆಗಳನ್ನು ನಿಖರವಾಗಿ ‘ಕಂಡುಹಿಡಿಯಬಲ್ಲ’ ಉಪಕರಣ […]

ಅಳಲೆಕಾಯಿ ಪಂಡಿತ !

ಆರೋಗ್ಯ - 0 Comment
Issue Date : 10.04.2015

 ಡಾ॥ಎಂ. ಗೋಪಾಲಕೃಷ್ಣರಾವ್  ಸಾವಿರಾರು ವರ್ಷಗಳಿಂದ ಪ್ರಚಾರದಲ್ಲಿದ್ದು ದೇಶ ವಿದೇಶಗಳಲ್ಲೆಲ್ಲ ರೋಗ ಪರಿಹಾರವನ್ನೂ ದೀರ್ಘಾಯು ಸಾಧನವನ್ನೂ ಕಲಿಸಿಕೊಟ್ಟ ಆಯುರ್ವೇದ ಸಾಹಿತ್ಯದಲ್ಲಿ ಜ್ಞಾನಿಗಳಾದ ಋಷಿಮುನಿಗಳು ಅಳಲೆಕಾಯಿಯನ್ನು ಇಷ್ಟು ಅದ್ಭುತವಾಗಿ ಹೊಗಳಿದುದು ಕೇವಲ ಅತಿಶಯೋಕ್ತಿಯ ಭ್ರಮೆಯಲ್ಲ.  ಇತ್ತೀಚೆ ಪತ್ರಿಕೆಗಳಲ್ಲಿ ಅಳಲೆಕಾಯಿ ಪಂಡಿತ ಎಂಬ ಶಬ್ದವು ಆಗಾಗ ಬರೆಯಲ್ಪಡುತ್ತಿದ್ದುದನ್ನು ಎಲ್ಲರೂ ಬಲ್ಲರು. ಮತ್ತೆ ಅದನ್ನು ದುರ್ವೈದ್ಯರು ಎಂಬ ಅರ್ಥದಲ್ಲಿಯೇ ಹೆಚ್ಚಾಗಿ ಬಳಸುತ್ತಿದ್ದುದು ಕಂಡುಬಂದಿದೆ. ಕೇಂದ್ರದ ಮಾಜಿ ಆರೋಗ್ಯ ಮಂತ್ರಿಗಳಾದ ಶ್ರೀ ರಾಜನಾರಾಯಣರು ಸದುದ್ದೇಶದಿಂದಲೇ ಪ್ರಚಾರಕ್ಕೆ ತರಬೇಕೆಂದಿದ್ದ ಪ್ರವಾಸಿ ಗ್ರಾಮವೈದ್ಯರು  (ಪಾದಚಾರಿ ವೈದ್ಯರು) ಎಂಬ […]