ಗುರುಕುಲ ಚಿಂತನೆ ದೇಶವ್ಯಾಪಿಯಾಗಲಿ

ಗುರುಕುಲ ಚಿಂತನೆ ದೇಶವ್ಯಾಪಿಯಾಗಲಿ

ಲೇಖನಗಳು - 0 Comment
Issue Date :

ಸಂದರ್ಶನ – ನ. ನಾಗರಾಜ   ಕಾಲ್ನಡಿಗೆಯಲ್ಲಿ ದೇಶಪರ್ಯಟನೆ ನಡೆಸಿ ದೇಶಾದ್ಯಂತ ಭಾರತೀಯ ಮೂಲ ಚಿಂತನೆಗಳನ್ನು ಪಸರಿಸಿದ ಸೀತಾರಾಮ ಕೆದಿಲಾಯರು ಸಂಘದ ಹಿರಿಯ ಪ್ರಚಾರಕರು. ಪ್ರಾಚೀನ ಗುರುಕುಲ ಪದ್ಧತಿಯನ್ನು ಯುಗಾನುಕೂಲಗೊಳಿಸಿ ಸುಸಂಸ್ಕೃತ ವ್ಯಕ್ತಿ ನಿರ್ಮಾಣದ ಮೂಲಕ ಸಮರ್ಥ ಭಾರತ ನಿರ್ಮಿಸುವ ಕಾರ್ಯದ ಕುರಿತು ತಮ್ಮ ಅನಿಸಿಕೆಗಳನ್ನು ವಿಕ್ರಮದೊಂದಿಗೆ ಹಂಚಿಕೊಂಡಿದ್ದಾರೆ.     ಗುರುಕುಲ ಮಾದರಿ ಶಿಕ್ಷಣವನ್ನು ಕರ್ನಾಟಕದಲ್ಲಿ ಪುನಃ ಪ್ರಾರಂಭ ಮಾಡಿ ಈಗಾಗಲೆ ಅರ್ಧ ಮಂಡಲ (24 ವರ್ಷ)ವನ್ನು ಪೂರೈಕೆ ಮಾಡಿರುವ ಈ ಸಂದರ್ಭದಲ್ಲಿ ಪ್ರಾರಂಭದ ದಿನಗಳಿಂದಲೂ […]

ಗುರುಕುಲ ಪ್ರವೇಶಕ್ಕೆ ಮುನ್ನ

ಗುರುಕುಲ ಪ್ರವೇಶಕ್ಕೆ ಮುನ್ನ

ಲೇಖನಗಳು - 0 Comment
Issue Date :

ಶ್ರೀಮಿತ ಕವಿತಾ – ನಾನು ಉಡುಪಿಯ ಒಂದು ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಎಳವೆಯಿಂದಲೂ ಕಲೆಗಳು, ಅದರಲ್ಲೂ ಭರತನಾಟ್ಯವೆಂದರೆ ನನಗೆ ಅಚ್ಚುಮೆಚ್ಚು. ಆದರೆ ನನ್ನ ವೈಯಕ್ತಿಕ ಆರೋಗ್ಯದ ಕಾರಣದಿಂದಾಗಿ ಅದಾಗಲೇ ಕಲಿಯತೊಡಗಿದ್ದ ಭರತನಾಟ್ಯವನ್ನು ಪ್ರಾಥಮಿಕ ಹಂತದಲ್ಲೇ ನಿಲ್ಲಿಸುವಂತಾಗಿತ್ತು. ಹೀಗಾಗಿ ಅದರಲ್ಲಿದ್ದ ಆಸಕ್ತಿ, ಹಂಬಲಗಳೆಲ್ಲವೂ ಮನಸ್ಸಿನಲ್ಲಿಯೇ ಮುದುಡಿದ್ದುವು. ಸಂಸ್ಕೃತವೆಂದರೂ ನನಗೆ ಬಲು ಪ್ರೀತಿ. ಬೇಸಗೆ ರಜೆಯಲ್ಲಿ ಸಂಭಾಷಣಾ ಶಿಬಿರಗಳಿಗೆ ಹೋಗುತ್ತಿದ್ದರೂ ಅದನ್ನು ಕಲಿಯುವ ಅವಕಾಶಗಳು ಕಡಿಮೆಯಿದ್ದುವು.   ‘ತರಂಗ’ ವಾರಪತ್ರಿಕೆಯಲ್ಲಿ ಗುರುಕುಲದ ಬಗ್ಗೆ ಒಂದು ಲೇಖನ ಬಂದಿತ್ತು. ಯೋಗ, […]

ಪಂಚಮುಖಿ ಶಿಕ್ಷಣದ ಕಿರು ಪರಿಚಯ

ಪಂಚಮುಖಿ ಶಿಕ್ಷಣದ ಕಿರು ಪರಿಚಯ

ಲೇಖನಗಳು - 0 Comment
Issue Date :

ಶೃತಿ ಕೆ.ಎಸ್. – ಭಾವ ಸಂವತ್ಸರದ ಆಷಾಢ ಶುದ್ಧ ಗುರುಪೂರ್ಣಿಮೆ (ದಿ.24.07.1994) ರಂದು ಆರಂಭಗೊಂಡ ಗುರುಕುಲಕ್ಕೆ ಈಗ 24 ವರ್ಷಗಳು ಸಂದಿವೆ. ಮಂಗಳೂರಿನಿಂದ 45 ಕಿ.ಮೀ ಮತ್ತು ಪುತ್ತೂರಿನಿಂದ 15 ಕಿ.ಮೀ ದೂರದಲ್ಲಿರುವ ಮೂರುಕಜೆ ಎಂಬ ಗ್ರಾಮದ ಸುಂದರ ಪ್ರಶಾಂತ ಪರಿಸರದಲ್ಲಿ ಗುರುಕುಲ ರೂಪುಗೊಂಡಿದೆ. ಪ್ರಸ್ತುತ 6 ರಾಜ್ಯಗಳ 97 ವಿದ್ಯಾರ್ಥಿನಿಯರು 15 ಜನ ಆಚಾರ್ಯ ಮಾತೃಶ್ರೀಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ. ಸ್ವಸ್ಥ ಸಮಾಜ ನಿರ್ಮಾಣ ಎಂಬ ಉದ್ದೇಶದ ಸಫಲತೆಗಾಗಿ ತನ್ನದೇ ಆದಂತಹ ಪಂಚಮುಖೀ ಶಿಕ್ಷಣ ಪದ್ಧತಿಯನ್ನು ಗುರುಕುಲ […]

ಪ್ರತ್ಯೇಕ ರಿಲಿಜನ್ ಹೆಸರಿನಲ್ಲಿ ಪರಿಶಿಷ್ಟರಿಗೆ ಮೋಸ?

ಪ್ರತ್ಯೇಕ ರಿಲಿಜನ್ ಹೆಸರಿನಲ್ಲಿ ಪರಿಶಿಷ್ಟರಿಗೆ ಮೋಸ?

ಲೇಖನಗಳು - 0 Comment
Issue Date :

-ಶ್ರೀಧರ ಪ್ರಭು  ಬಸವ ಕಲ್ಯಾಣದಿಂದ ಮೈಸೂರಿನವರೆಗೂ ರಾಜ್ಯದಾದ್ಯಂತ ಉರಿಲಿಂಗ ಪೆದ್ದಿ ಸಂಸ್ಥಾನ ಮಠಗಳಿವೆ. ದಲಿತ ಸಮುದಾಯದ ಪೆದ್ದಣ್ಣ ಮತ್ತವರ ಸತಿ, ಸುಪ್ರಸಿದ್ಧ ಶರಣೆ ಹಾಗೂ ವಚನಕಾರ್ತಿಯಾದ ಕಾಳವ್ವೆ ಗುರು ಉರಿಲಿಂಗರಿಂದ ವೀರಶೈವ ದೀಕ್ಷೆ ಪಡೆದು ಸ್ಥಾಪಿಸಿದ ಮಠವಿದು. ದಲಿತ ಸಮುದಾಯಕ್ಕೆ ಸೇರಿದ ಸತಿ-ಶರಣರನ್ನು ಮಠಾಧಿಪತಿಗಳನ್ನಾಗಿ ನೇಮಿಸಿದ ಕ್ರಾಂತಿಕಾರಿ ಸಂಪ್ರದಾಯದ ಈ ಮಠಕ್ಕೆ ನಡೆದುಕೊಳ್ಳುವ ಮತ್ತಿತರ ದಲಿತ ಸಮುದಾಯದ ಲಿಂಗಾಯತರು ಕರ್ನಾಟಕದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ.  ಒಂದು ಅಂದಾಜಿನ ಪ್ರಕಾರ ಲಿಂಗಾಯತರ 99 ಜಾತಿಗಳಲ್ಲಿ ಸುಮಾರು 20 ಜಾತಿಗಳು ದಲಿತ […]

ಗುರುಕುಲಗಳ ಮುನ್ನಡೆಯ ಹೆಜ್ಜೆ ಗುರುತುಗಳು...

ಗುರುಕುಲಗಳ ಮುನ್ನಡೆಯ ಹೆಜ್ಜೆ ಗುರುತುಗಳು…

ಲೇಖನಗಳು - 0 Comment
Issue Date :

ಪ್ರೊ. ರಾಮಚಂದ್ರ ಜಿ. ಭಟ್ –  ಪ್ರಾಚೀನ ಕಾಲದಲ್ಲಿ ಓರ್ವ ವ್ಯಕ್ತಿಯ ಸರ್ವಾಂಗೀಣ ವಿಕಾಸವೇ ಶಿಕ್ಷಣದ ಮುಖ್ಯ ಧ್ಯೇಯವಾಗಿತ್ತು. ಇದನ್ನೇ ನಾವು ಸ್ವಸ್ಥ ವ್ಯಕ್ತಿ ನಿರ್ಮಾಣ ಎಂದು ಕರೆದಿದ್ದೇವೆ. ಸಂಘದ ಸರಸಂಘಚಾಲಕರಾದ ಶ್ರೀ ಗುರೂಜಿಯವರು ಅಂದು ಗೀತಾ ವಿಶ್ವವಿದ್ಯಾಲಯದ ಉದ್ಘಾಟನೆ ಸಂದರ್ಭದಲ್ಲಿ ಭಗವದ್ಗೀತೆಯ ಆಧಾರದಲ್ಲಿ ಶಿಕ್ಷಣ ಹೇಗಿರಬೇಕು? ಎಂಬುದರ ಬಗ್ಗೆ ಹೇಳುತ್ತ, ‘ತದ್ಬುದ್ಧಯಃ ತದಾತ್ಮಾನಃ ತನ್ನಿಷ್ಠಾಃ ತತ್ಪರಾಯಣಾಃ ಎಂಬ ಗೀತಾ ಶ್ಲೋಕವನ್ನು ಉದಾಹರಿಸಿದ್ದಾರೆ. ಅಂದರೆ ಶಿಕ್ಷಕರಾದವರು ತನ್ಮಯರು, ನಿಷ್ಠರು, ಉತ್ತಮರು ಆಗಿರಬೇಕು. ಇಂತಹ ಗುರುಗಳಿದ್ದರೆ ಅದು ಗುರುಕುಲವಾಗುತ್ತದೆ […]

ಸುಸಂಸ್ಕೃತ ಜೀವನಕ್ಕೆ ಗುರುಕುಲ ಮಾದರಿ

ಸುಸಂಸ್ಕೃತ ಜೀವನಕ್ಕೆ ಗುರುಕುಲ ಮಾದರಿ

ಲೇಖನಗಳು - 0 Comment
Issue Date :

ಶ್ರೀಮತಿ ಶಾರ್ವರಿ ಶ್ಯಾಮ ಕಾನತ್ತಿಲ –  ಗುರುಕುಲದ ಪೂರ್ವಛಾತ್ರೆ  1999ರ ದಿನಗಳು….. ಮೂರ್ಕಜೆಯ ಒಂದು ಹಳೆಯ ಮನೆಯ ಪರಿಸರವದು. ಅಲ್ಲಿ ಇಲ್ಲಿ ಕುಳಿತು  ತಮ್ಮ ತಂದೆ ತಾಯಿಯರನ್ನು, ಮನೆ ಮಂದಿಯನ್ನು ನೆನೆಯುತ್ತಾ ಕಣ್ಣೀರಿಡುತ್ತಿದ್ದ ಒಂದಷ್ಟು ಪುಟ್ಟ ಪುಟ್ಟ ಬಾಲಕಿಯರು, ನಾನು ಹೊತ್ತು ನನ್ನ ಮನೆಯಲ್ಲಿ ಇರುತ್ತಿದ್ದರೆ. ಎಂದು ಯೋಚಿಸುತ್ತಾ ಶಾಲೆ-ಮನೆ, ಅಪ್ಪ-ಅಮ್ಮ, ಆ ನನ್ನ ಗೆಳತಿಯರು, ಅವರೊಂದಿಗಿನ ಆಟ-ಪಾಠ,  ಅಹಾ….. ಎಂತಹ ಸುಂದರ ದಿನಗಳು. ಎಂಬಿತ್ಯಾದಿ ನೆನಪುಗಳ ಸಾಲಿನಲ್ಲಿ ಕಣ್ಣಹನಿಗಳು ಮೂಡುತ್ತಿದ್ದವು. ಆಗ ಒಬ್ಬೊಬ್ಬರನ್ನು ಸಮಾಧಾನಿಸಲು ಧಾವಿಸುತ್ತಿದ್ದ […]

ಶೆಕ್ಷಣಿಕ ಗುಣಮಟ್ಟ ಗುರುಕುಲಗಳಿಂದ ಮಾತ್ರ ಸಾಧ್ಯ

ಶೆಕ್ಷಣಿಕ ಗುಣಮಟ್ಟ ಗುರುಕುಲಗಳಿಂದ ಮಾತ್ರ ಸಾಧ್ಯ

ಲೇಖನಗಳು - 0 Comment
Issue Date :

ಸಂಪಾದಕೀಯ, ವೃಷಾಂಕ – ದೇಶದ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ದೊರೆಯಬೇಕು ಎಂಬುದು ಆಧುನಿಕ ಶಿಕ್ಷಣ ಪದ್ಧತಿಯ ಆಶಯ. ಆದರೆ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ನೀಡುವುದರಿಂದ ಒಂದೇ ಗುಣಮಟ್ಟದ ಮತ್ತು ಸಾಮರ್ಥ್ಯದ ತಲೆಮಾರನ್ನು ಕಟ್ಟಿಕೊಡಬಹುದೇ ವಿನಃ ದೇಶಕ್ಕೆ ಬೇಕಾಗುವ ವಿವಿಧ ವಿದ್ಯೆಗಳನ್ನು ಕಲಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗೆ ಆಸಕ್ತಿಯಿದ್ದರೂ ಇಲ್ಲದಿದ್ದರೂ ನಿರ್ದಿಷ್ಟ ಪಠ್ಯಕ್ರಮವನ್ನು ಕಲಿಯುವ ಶಿಕ್ಷೆಯೂ ಸರಿಯಲ್ಲ. ಮಗುವಿನ ಗುಣಧರ್ಮಗಳಿಗೆ ಅನುಗುಣವಾಗಿ ಆತನ ಶಿಕ್ಷಣವಾಗಬೇಕು. ಕುಸ್ತಿಯಲ್ಲಿ ಆಸಕ್ತಿಹೊಂದಿದವನಿಗೆ ಸಂಗೀತ ಹೇಳಿಕೊಡಲು ಕೂರಿಸಿಕೊಂಡರೆ ಏನಾಗಬಹುದೋ, ಆಧುನಿಕ ಶಿಕ್ಷಣ […]

ಗುರುಕುಲ ಶಿಕ್ಷಣ ನಡೆದು ಬಂದ ದಾರಿ

ಗುರುಕುಲ ಶಿಕ್ಷಣ ನಡೆದು ಬಂದ ದಾರಿ

ಲೇಖನಗಳು - 0 Comment
Issue Date :

ಸಾವಿತ್ರಿ ಹೆಚ್‍.ಕೆ. –  ಶಾಲೆಗೆ ಹೋಗುವಾಗ ಬೆನ್ನುಮೂಳೆ ಮುರಿಯುವಷ್ಟು ಪುಸ್ತಕಗಳ ಹೊರೆ, ಶಾಲೆಯಲ್ಲಿ ಗಿಳಿಪಾಠ, ಮನೆಗೆ ಬಂದರೆ ಮನೆಪಾಠದ ಕಿರಿಕಿರಿ, ವರ್ಷದ ಕೊನೆಯಲ್ಲಿ ಪರೀಕ್ಷೆಯ ಭಯ, ರ‌್ಯಾಂಕ್ ಬಾರದಿದ್ದಾಗ ಪಾಲಕರಿಂದ  ಬೈಗುಳ, ಮಕ್ಕಳಿಗೆ ಆನಂದದಿಂದ ಆಟ ಆಡಲು ಸಮಯವಿಲ್ಲ, ಪಾಲಕರಿಗೆ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಲೂ ಅವಕಾಶವಿಲ್ಲ, ಇವೆಲ್ಲವೂ ಅನೇಕ ವರ್ಷಗಳಿಂದಲೂ ಮಕ್ಕಳು ಅನುಭವಿಸುತ್ತಿರುವ ಗೋಳು – ಯಾತನೆ.   ಮಕ್ಕಳ ನೈಜ ಸ್ವಭಾವವನ್ನು ಅರಿತ ಅನೇಕ ಶಿಕ್ಷಣ ತಜ್ಞರ, ಭವ್ಯ ಭಾರತದ ಕನಸನ್ನು ಹೊತ್ತ ಅನೇಕ ಹಿರಿಯರ […]

ಗುರುಕುಲದ ಬಗ್ಗೆ ಅನುಭವ

ಗುರುಕುಲದ ಬಗ್ಗೆ ಅನುಭವ

ಲೇಖನಗಳು - 0 Comment
Issue Date :

 ಶ್ರುತಕೀರ್ತಿ ಪ್ರಭು – ಏನಿದು ಗುರುಕುಲ? ಗುರುಕುಲವೆಂದರೆ 130 ಎಕರೆ ವಿಸ್ತೀರ್ಣದ ಜಾಗವಲ್ಲ, ಕಟ್ಟಡಗಳಲ್ಲ, ಗುರುಕುಲವೆಂದರೆ ಆಚಾರ್ಯ-ಆಚಾರ್ಯೆಯರ ನಿಕಟ ಸಂಬಂಧದಲ್ಲಿ ನಿರಂತರವಾಗಿ ಅರಳುತ್ತಾ ಬೆಳೆಯಲು ಅವಕಾಶವಿರುವ ಅತಿ ಅದ್ಭುತವಾದ ಸ್ಥಾನ. ನನ್ನ ದೃಷ್ಟಿಯಲ್ಲಿ ಗುರುಕುಲವಾಸ ಎಂದರೆ ಒಂದು ತಪಸ್ಸು. ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಮೀನಿಗೆ ತನ್ನ ದಿಕ್ಕನ್ನು ಬದಲಿಸಿ ಈಜಲು ಅದಮ್ಯ ಕಸುವು ಬೇಕು. ಆಧುನಿಕ ಜೀವನದ ಆಕರ್ಷಣೆಯೆಂಬ ಪ್ರವಾಹದ ಸೆಳೆವು ಅತ್ಯಂತ ಬಲಿಷ್ಠವಾಗಿದೆ. ಇದರ ವಿರುದ್ಧ ಈಜಿ ಗುರಿ ಮುಟ್ಟಲು ಅಮಿತವಾದ ಕಸುವು ಬೇಕೇಬೇಕು. ಗುರುಕುಲ […]

ಲೇಖನಗಳು - 0 Comment
Issue Date :

ಸಂದರ್ಶನ ಡಾ. ಜಿ.ಹೆಚ್. ಪಾಂಡುರಂಗ ವಿಠಲ ಮೈಸೂರಿನಲ್ಲಿ ನೆಲೆಸಿರುವ ಸಿದ್ಧವೈದ್ಯ ಪಿ.ಎಸ್. ನರಸಿಂಹಸ್ವಾಮಿ ಅವರು ಕಳೆದ 25 ವರ್ಷಗಳಿಂದ ಪ್ರಾಚೀನ ಸಿದ್ಧರ ಜ್ಞಾನದ ಅಧ್ಯಯನ, ರಕ್ಷಣೆ, ಪ್ರಚಾರ ಹಾಗೂ ಆಚರಣೆಯಲ್ಲಿ ತೊಡಗಿದ್ದಾರೆ.  ವಂಶಪಾರಂಪರ್ಯವಾಗಿ ಹದಿನಾಲ್ಕು ತಲೆಮಾರುಗಳಿಂದ ಸಿದ್ಧವೈದ್ಯದಲ್ಲಿ ತೊಡಗಿದ್ದ ಮನೆತನದಿಂದ ಬಂದ ಇವರು ರೋಗಿಗಳಿಗೆ ಸೇವೆ ಸಲ್ಲಿಸುವುದಲ್ಲದೆ, ವಿವಿಧ ಭಾಷೆಗಳಲ್ಲಿರುವ ಪ್ರಾಚೀನ ಸಿದ್ಧ ಸಾಹಿತ್ಯವನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುತ್ತಿದ್ದಾರೆ.  ಅಗಸ್ತ್ಯ ಸಿದ್ಧ ಚಾರಿಟಬಲ್ ಟ್ರಸ್ಟ್’ ಮೂಲಕ ಬಡವರಿಗೆ ಔಷಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಕೆಲವು ವರ್ಷಗಳು ಇವರು ಹರ್ಬಲ್ […]