ಮಾನನೀಯ ಅಪ್ಪಾಸಾಹೇಬ ಜಿಗಜಿನ್ನಿ -ಶ್ರದ್ಧಾಂಜಲಿ

ಅಪ್ಪಾಸಾಹೇಬ-ಜಿಗಜಿನ್ನಿ-ಲೇಖನಗಳು - 0 Comment
Issue Date : 24.11.2014

ಕರ್ನಾಟಕದ ಶ್ರದ್ಧಾಂಜಲಿಪ್ರಾಂತ ಸಂಘಚಾಲಕ ಮಾ. ಅಪ್ಪಾಸಾಹೇಬರ ಮೃತ್ಯುವಿನ ಹದಿಮೂರನೆಯ ದಿನ ಮೇ 30 ರಂದು ಕರ್ನಾಟಕದ ಎಲ್ಲ ಶಾಖೆಗಳಲ್ಲೂ ಘೋಷವಾದನನೊಂದಿಗೆ ಮಾನವಂದನೆ ಮತ್ತು ಸಂಘಚಾಲಕ ಪ್ರಣಾಮಗಳನ್ನು ಸಲ್ಲಿಸಿ ಸ್ವಯಂಸೇವಕರು ತಮ್ಮ ಶ್ರದ್ಧಾಂಜಲಿಯನ್ನು ಸಮರ್ಪಿಸಿದರು.ಬೆಳಗಾಂನಲ್ಲಿ ಮಾನ್ಯ ಡಾ. ಕುಲಕರ್ಣಿ, ಶ್ರೀ ಭಾವೂರಾವ್ ದೇಶಪಾಂಡೆ, ಶ್ರೀ ಸದಾನಂದ ಕಾಕಡೆಯವರೂ, ಬೆಂಗಳೂರಿನಲ್ಲಿ ಶ್ರೀ ಕೊ. ಕೃಷ್ಣಪ್ಪ ಮತ್ತು ಶ್ರೀ ಸು. ನಾ. ಮಲ್ಯರೂ, ಮಂಗಳೂರಿನಲ್ಲಿ ಜಿಲ್ಲಾ ಸಂಘಚಾಲಕ ಮಾ. ಕಾರ್ಕಳ ಸದಾಶಿವರಾವ್ ಜೀಯವರೂ, ಗದುಗಿನಲ್ಲಿ ಪ್ರಾಂತ್ಯದ ನಿಧಿಪ್ರಮುಖ ಮಾ. ಮಾಮಾಸಾಹೇಬ್ ಖರೆಯವರೂ, […]

ಅಪ್ಪಾಸಾಹೇಬ ಜಿಗಜಿನ್ನಿ

ಅಪ್ಪಾಸಾಹೇಬ-ಜಿಗಜಿನ್ನಿ-ಲೇಖನಗಳು - 0 Comment
Issue Date : 24.10.2014

ಮಹಾಪ್ರಸ್ಥಾನ ಪರಮ ಪೂಜನೀಯ ಶ್ರೀ ಗುರೂಜಿಯವರ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಬೆಂಗಳೂರಿನಿಂದ ವಾಪಸು ಬಂದಾಗ ಅಪ್ಪತುಂಬಾ ಖುಷಿಯಾಗಿದ್ದರು. ಆರೋಗ್ಯವು ಅತ್ಯುತ್ತಮವಾಗಿತ್ತು. ಅಷ್ಟರಲ್ಲಿ ಯುಗಾದಿಯು ಬಂದಿತು. ಹೊಸ ವರ್ಷಾರಂಭವೆಂದರೆ ಎಷ್ಟೊಂದು ಉಲ್ಲಾಸ. ಬೆಳಿಗ್ಗೆ ಎದ್ದು ಸ್ನಾನ ಪೂಜೆ ಮುಗಿಸಿಕೊಂಡು ಶಾಖೆಗೆ ಧ್ವಜವಂದನೆಗೆ ಹೋಗುವ ಸಲುವಾಗಿ ಅವರು ಎಷ್ಟೊಂದು ಆತುರ ಮಾಡುತ್ತಿದ್ದರು. ಆದರೆ ಈ ಸಲ ಅವರಿಗೆ ಮುಂಚಿನ ರಾತ್ರಿ ಕಾಲರಾ ಅಂಟಿಕೊಂಡಿತು. ಆಗಿನಿಂದಲೇ ಮೃತ್ಯುವು ಅವರನ್ನು ಬರಮಾಡಿಕೊಳ್ಳುವ ಸಿದ್ಧತೆಯಲ್ಲಿತ್ತು. ಆದರೆ ಅವರ ಬಲವಾದ ಇಚ್ಛಾಶಕ್ತಿಯ ಮೂಲಕ ಆ ಸಂಕಟದಿಂದ […]

ಸಾರ್ವಜನಿಕ ಕಾರ್ಯಕರ್ತ ಅಪ್ಪಾಸಾಹೇಬ

ಅಪ್ಪಾಸಾಹೇಬ-ಜಿಗಜಿನ್ನಿ-ಲೇಖನಗಳು - 0 Comment
Issue Date : 22.11.2014

ಸಾರ್ವಜನಿಕ ಕಾರ್ಯಕರ್ತ ಶ್ರೀ ಅಪ್ಪಾಸಾಹೇಬರು ಸಾರ್ವಜನಿಕ ಕಾರ್ಯದಲ್ಲಿ ತಮ್ಮ ಪಾಲಿನ ಕೆಲಸ ಮಾಡಿದರು. ಶಹಾಪೂರ ನಗರ ಸಭೆಯಲ್ಲಿ ಚುನಾಯಿತ ಪ್ರತಿನಿಧಿಯಾಗಿ ಅವರು ಜನತೆಯ ಸೇವೆ ಮಾಡಿದರು. ನಿಃಪಕ್ಷಪಾತಿಗಳು, ಸ್ಪಷ್ಟವಕ್ತಾರರು ಮತ್ತು ನಿಶ್ಚಿತ ಅಭಿಪ್ರಾಯವುಳ್ಳವರು ಎಂದು ಸಾಂಗಲಿ ಸಂಸ್ಥಾನದಲ್ಲೆಲ್ಲ ಅವರ ಖ್ಯಾತಿ ಹರಡಿತ್ತು. ಸಂಘಚಾಲಕ ಜಿಗಜಿನ್ನಿ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಶ್ರೀ ಅಪ್ಪಾಸಾಹೇಬರು ಮಾಡಿದ ಕಾರ್ಯವು ಅತುಲನೀಯವಾಗಿದೆ. ಸರಕಾರ ಮತ್ತು ಸಮಾಜದ ಸಂದೇಹ ದೃಷ್ಟಿಯಿದ್ದಾಗ ಅವರು ಸಂಘ ನೌಕೆಯನ್ನು ಕುಶಲ ಕರ್ಣಧಾರನಂತೆ ಸರಿಯಾಗಿ ನಡೆಸಿದರು. ಮೊದಮೊದಲು ಶ್ರೀ ಅಪ್ಪಾಸಾಹೇಬರು […]

ಕರ್ಮಯೋಗಿ ಅಪ್ಪಾಸಾಹೇಬ

ಕರ್ಮಯೋಗಿ ಅಪ್ಪಾಸಾಹೇಬ

ಅಪ್ಪಾಸಾಹೇಬ-ಜಿಗಜಿನ್ನಿ-ಲೇಖನಗಳು - 0 Comment
Issue Date : 15.11.2014

ಸುಮಾರು 20 ವರ್ಷಗಳ ಮುಂಚೆ ನನಗೆ ಶ್ರೀ ಅಪ್ಪಾಸಾಹೇಬರ ಮೊಟ್ಟಮೊದಲ ಪರಿಚಯವಾಯಿತು. ಒಬ್ಬ ಬುದ್ಧಿಶಾಲಿ ವಕೀಲರೆಂದು ನಾವು ಅವರನ್ನು ಕಾಣುತ್ತಿದ್ದೆವು. ಬರಬರುತ್ತ ಅನೇಕ ಕಾರಣಗಳಿಂದ ಪರಿಚಯ ಹೆಚ್ಚುತ್ತಾ ಹೋಯಿತು. ಮತ್ತು ತೀರ ಹತ್ತಿರದಿಂದ ಅವರ ಜೀವನವನ್ನು ನಿರೀಕ್ಷಿಸುವ ಅವಕಾಶ ನನಗೆ ಲಭಿಸಿತು. ವಕೀಲ ಜಿಗಜಿನ್ನಿ, ಸಂಘಚಾಲಕ ಜಿಗಜಿನ್ನಿ, ಹೀಗೇ ಏರಿಕೆಯ ಕ್ರಮದಿಂದ ಒಂದಕ್ಕಿಂತ ಇನ್ನೊಂದು ಕ್ಷೇತ್ರದಲ್ಲಿ ಅವರ ಜೀವನ ಚರಿತ್ರೆಯು ಹೆಚ್ಚು ಅಭ್ಯಾಸ ಮಾಡುವಂತಹುದಾಗಿಯೂ ಆದರಣೀಯವಾಗಿಯೂ ತೋರುತ್ತದೆ. ವಕೀಲ ಜಿಗಜಿನ್ನಿ ಶ್ರೀ ಅಪ್ಪಾಸಾಹೇಬರು ಬೆಳಗಾಂವಿ, ಶಹಾಪೂರ, ಹಿರೆ […]