ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ನಮೋ ನಮೋ

ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ನಮೋ ನಮೋ

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 05.01.2015

ಬದುಕಿನಲ್ಲಿ ಅದೆಷ್ಟೇ ನೋವು-ನಲಿವುಗಳಿರಲಿ, ಕಷ್ಟ-ಸಂಕಟಗಳು ಎದುರಾಗಲಿ, ಸಿರಿತನ-ಬಡತನಗಳೇ ಇರಲಿ ನಂಬಿಕೆಯನ್ನೇ ನೆಚ್ಚಿಕೊಂಡು ಜೀವಿಸುವುದು ಬಹುತೇಕ ಭಾರತೀಯ ಪ್ರಜೆಗಳ ಲಾಗಾಯ್ತಿನ ಮನೋಭಾವ. ನಂಬಿಕೆಯನ್ನೇ ನೆಚ್ಚಿ ಬದುಕುವವರು ಆಸ್ತಿಕರಷ್ಟೇ ಅಲ್ಲ, ನಾಸ್ತಿಕರು ಇದ್ದಾರೆ ಎಂದರೆ ಅದು ಅತಿಶಯೋಕ್ತಿಯಲ್ಲ. ದೇವರಿದ್ದಾನೆ ಎಂಬ ನಂಬಿಕೆಯೋ, ದೇವರಿಲ್ಲ ಎಂಬ ವಿಶ್ವಾಸವೋ ಅಥವಾ ದೇವರಿದ್ದಾನೆಯೋ ಇಲ್ಲವೋ ಎಂಬ ಜಿಜ್ಞಾಸೆಯೋ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯರನ್ನು ಆವರಿಸಿರುವುದು ಗುಟ್ಟೇನಲ್ಲ. ನಾಸ್ತಿಕರೆಂದು ಕೊಚ್ಚಿಕೊಳ್ಳುವ ಕೆಲವರು ಬಹಿರಂಗವಾಗಿ ‘ದೇವರಿಲ್ಲ, ಅದೆಲ್ಲ ಮಿಥ್ಯ’ ಎಂದು ವಾದಿಸಿದರೂ ‘ಅಕಸ್ಮಾತ್ ದೇವರೇನಾದರೂ ಇದ್ದರೆ ನನಗೆ […]

ಮರು ಮತಾಂತರ ತಪ್ಪೆನ್ನುವುದಾದರೆ ಮತಾಂತರ ಸರಿಯೆ?

ಮರು ಮತಾಂತರ ತಪ್ಪೆನ್ನುವುದಾದರೆ ಮತಾಂತರ ಸರಿಯೆ?

Uncategorized ; ಲೇಖನಗಳು - 0 Comment
Issue Date : 05.01.2015

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸುಮಾರು 200 ಮಂದಿ ಮುಸ್ಲಿಮರು ಹಿಂದೂ ಧರ್ಮಕ್ಕೆ ಮತಾಂತರಗೊಂಡ ವಿಷಯದ ಬಗ್ಗೆ (ವಿವರಗಳಿಗೆ ಸಂಬಂಧಿಸಿ ವಿವಾದವೂ ಇದೆ) ಬಹಳಷ್ಟು ಚರ್ಚೆ ನಡೆಯುತ್ತಿದೆ. ಆದರೆ ದುರದೃಷ್ಟವೆಂದರೆ ಈ ವಿಷಯವನ್ನು ಹಿಂದುಗಳ ಮತಾಂತರ (ಮುಖ್ಯವಾಗಿ ಕ್ರೈಸ್ತಮತ ಮತ್ತು ಇಸ್ಲಾಂಗಳಿಗೆ) ಎನ್ನುವ ವಿಶಾಲವಾದ ಸಂದರ್ಭದಲ್ಲಿಟ್ಟು ನೋಡುವ ಬದಲು ಕೇವಲ 200 ಮುಸ್ಲಿಮರು ‘ಘರ್‌ವಾಪಸೀ’ ಎನ್ನುವ ಹೆಸರಿನಲ್ಲಿ ‘ಮರಳಿ ಮಾತೃ ಧರ್ಮಕ್ಕೆ’ ಬಂದುದಕ್ಕೆ ಸೀಮಿತಗೊಳಿಸಲಾಗುತ್ತಿದೆ. ಪರಿಸ್ಥಿತಿ ಹೇಗಿದೆ ಎಂದರೆ ಕ್ರೈಸ್ತರು ನಡೆಸುವ ಮತ ಪ್ರಚಾರದಲ್ಲಿ ನೈಜ ಪಾದ್ರಿಗಳು ತಮ್ಮ […]

ಧಾರ್ಮಿಕ ಸಹಿಷ್ಣುತೆಯನ್ನು ನಮಗೆ ಬೇರೊಂದು ಧರ್ಮ ಹೇಳಿಕೊಡಬೇಕಾದ ಅಗತ್ಯವಿಲ್ಲ

ಲೇಖನಗಳು - 0 Comment
Issue Date :

ಖ್ಯಾತ ಇತಿಹಾಸಕಾರ, ಸಂಶೋಧಕ, ಲೇಖಕರಾಗಿರುವ ಡಾ. ಸೂರ್ಯನಾಥ ಕಾಮತ್, ‘ರಾಷ್ಟ್ರೀಯ ಸ್ವಯಂಸೇವಕ ಸಂಘ ೊಂದು ಸಮಾಜಘಾತುಕ ಸಂಘಟನೆ ಎಂದು ಯಾರೆಷ್ಟೇ ಪ್ರಚಾರ ಮಾಡಿದರೂ ಕೇಳಲಿಕ್ಕೆ ಈಗ ಯಾರೂ ತಯಾರಿಲ್ಲ’ ಎನ್ನುತ್ತಾರೆ. ‘ನಾವು ನಮ್ಮ ಭದ್ರತೆಗಾಗಿ ಕವಾಯತು ಮಾಡಿದರೆ ಅದನ್ನು ನಿಮ್ಮನ್ನು ಹೊಡೆಯಲಿಕ್ಕೆ ಎಂದು ಎಣಿಸಿದರೆ ನಾವೇನು ಮಾಡೋಣ?’ ಎಂದು ಸಂಘದ ಬಗ್ಗೆ ಅನುಮಾನಿಸುವ ಕ್ರೈಸ್ತ ಮುಸ್ಲಿಂ ಸಮುದಾಯವನ್ನು ಅವರು ಪ್ರಶ್ನಿಸುತ್ತಾರೆ. ‘ಸಮರಸತಾ ಸಂಗಮ’ ಶಿಬಿರದ ಹಿನ್ನೆಲೆಯಲ್ಲಿ ‘ವಿಕ್ರಮ’ಕ್ಕೆ ಕಾಮತ್ ಅವರು ನೀಡಿದ ಸಂದರ್ಶನದ ವಿವರ ಇಲ್ಲಿದೆ. ಸಂದರ್ಶನ […]

ಅಸಮತೋಲಿತ ಜಗದ್‍ವ್ಯವಸ್ಥೆಗೆ ಉತ್ತರ: ಅಸ್ಖಲಿತ ಸ್ವಾಭಿಮಾನ ಮಾತ್ರ

ಲೇಖನಗಳು - 0 Comment
Issue Date : 22.12.2014

ಇಡೀ ಜಗತ್ತಿನ ಗಮನವೆಲ್ಲ ಈಗ ಭಾರತದ ಮೇಲಿದೆ. ಇದೀಗ  ಭಾರತದ್ದು ಜಗತ್ತಿನಲ್ಲಿಯೇ ಅತ್ಯಂತ ಚೈತನ್ಯಪೂರ್ಣ ಆರ್ಥಿಕತೆಯಾಗಿದೆ.’’ – ಈ ಮಾತನ್ನು  ಆಡಿದವರು ಜಗದ್‍ವ್ಯಾಪಿ ಹಣಹೂಡಿಕೆ ಮತ್ತು ಬ್ರೋಕರೇಜ್ ಸಂಸ್ಥೆಯಾದ  ಡಿ.ಎಸ್‍.ಪಿ. ಮೆರ್ರಿಲ್‍-ಲಿಂಚ್ ಸಂಸ್ಥೆಯ ಉನ್ನತ ಅಧಿಕಾರಿ. ನಾವು ಸ್ವಾಭಿಮಾನ ಮೆರೆದಲ್ಲಿ ಮಾತ್ರ ಅನ್ಯರ  ಗೌರವವನ್ನು ಗಳಿಸಿಕೊಳ್ಳುತ್ತೇವೆ- ಎಂಬ  ಮನವರಿಕೆ ಅಧಿಕಾರಸ್ಥರಿಗೆ  ಏಕೆ ಆಗುವುದಿಲ್ಲವೋ ತಿಳಿಯದು. ಕೇಂದ್ರ ಕಾರ್ಮಿಕ ಸಚಿವ  ಸತ್ಯನಾರಾಯಣ ಜಟಿಯಾ ಇತ್ತೀಚೆಗೆ ಜಿನೀವಾದಲ್ಲಿ ನಡೆದ ಐ.ಎಲ್.ಓ. ಸಮಾವೇಶದಲ್ಲಿ ತಮ್ಮ ಭಾಷಣವನ್ನು ಹಿಂದಿಯಲ್ಲೇ ಮಾಡಿದರು. ಸ್ವಯಂ ಪಿಹೆಚ್‍ಡಿ […]

ದಲಿತ ಸಾಧ್ವಿಯ ಸೆಕ್ಯೂಲರ್‍ ಅಪರಾಧ

ಲೇಖನಗಳು - 0 Comment
Issue Date : 23.12.2014

ಕಾಲ ಬದಲಾಗಿದೆ, ಆದರೆ ಸೆಕ್ಯೂಲರ್ ತಾಲಿಬಾನಿಗಳ ಸ್ವಭಾವ ಬದಲಾಗಿಲ್ಲ. ಅಹಂಕಾರ ಮತ್ತು ಸಿಟ್ಟಿನಿಂದ ಪ್ರಹಾರವೆಸಗುವುದಲ್ಲದೆ, ಉಳಿದೆಲ್ಲರೂ ತಿರಸ್ಕಾರಯೋಗ್ಯರಾದ ಸಣ್ಣವರೆಂಬ ಗಾಢ ಭಾವನೆ ಅವರ ಮನಸ್ಸಿನಲ್ಲಿದೆ. ಅಲ್ಲದೆ ತಮ್ಮ ಈ ‘ಯೋಗ್ಯತೆಗಳಿಂದಾಗಿ’ ಜನತೆ ತಮ್ಮನ್ನು ಇಲ್ಲಿಂದ ಅಲ್ಲಿಗೆ ಎತ್ತಿಹಾಕಿದೆಯೆಂಬುದೂ ಅವರಿಗೆ ಅರಿವಾಗುತ್ತಿಲ್ಲ. ಸಾಧ್ವಿ ನಿರಂಜನಾರಿಗೆ ತಮ್ಮ ಆ ಮಾತೇ ನಿಜವೆನಿಸಿದ್ದರೆ ಆಕೆ ಸಂಸತ್ತಿನ ಎರಡೂ ಸದನಗಳಿಗೆ ಬಂದು ವಿಷಾದ ವ್ಯಕ್ತಪಡಿಸುತ್ತಿರಲಿಲ್ಲ, ತಮ್ಮ ಮಾತನ್ನು ಹಿಂತೆಗೆದುಕೊಳ್ಳುತ್ತಿರಲಿಲ್ಲ. ಯಾರೂ ಎಲ್ಲಿಯೂ ಸಹ ಆಕೆಯ ಹೇಳಿಕೆ ಉಚಿತವೆಂದು ಹೇಳಿಲ್ಲ. ಆಕೆ ಆ ಮಾತನ್ನು […]

ಮಕ್ಕಳ ಕಗ್ಗೊಲೆ: ಅಲ್ಲಾಹು ಮೆಚ್ತಾನಾ?

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 22.12.2014

ಮಕ್ಕಳನ್ನು ಹೂವಿಗೆ ಹೋಲಿಸುವವರಿದ್ದಾರೆ. ಮಕ್ಕಳು ಹೂವಿನಷ್ಟೇ ಕೋಮಲ ಸ್ವಭಾವದವರು, ನಿರ್ಮಲ ಮನಸ್ಸಿನವರು ಎಂಬುದಕ್ಕೆ ಈ ವಿಶೇಷಣ ಇರಬಹುದು. ಇನ್ನು ಕೆಲವರು ಮಕ್ಕಳನ್ನು ದೇವರಿಗೆ ಸಮಾನ ಎನ್ನುತ್ತಾರೆ. ಏಕೆಂದರೆ ಆಗಷ್ಟೇ ಅರಳುತ್ತಿರುವ ಮಕ್ಕಳ ಮನಸ್ಸು ನಿಷ್ಕಲ್ಮಶ ಹಾಗೂ ಪವಿತ್ರವಾದುದು. ಆ ಮುಗ್ಧ ಮನಸ್ಸುಗಳಲ್ಲಿ ಯಾವುದೇ ಬಗೆಯ ಕೆಟ್ಟ ಯೋಚನೆಗಳಿರುವುದಿಲ್ಲ. ಎಲ್ಲರನ್ನೂ ಆ ಮನಸ್ಸುಗಳು ಪ್ರೀತಿಯಿಂದ ಕಾಣುತ್ತವೆ. ಇದೇ ಕಾರಣಕ್ಕಾಗಿ ಮಕ್ಕಳನ್ನು ನೋಯಿಸಬಾರದು, ಅವರಿಗೆ ಹೊಡೆಯಬಾರದು ಎಂದು ಹಿರಿಯರು ಹೇಳುತ್ತಾರೆ. ಈಗೀಗ ಶಾಲೆಗಳಲ್ಲಿ ಮಕ್ಕಳು ತಪ್ಪು ಮಾಡಿದರೂ ಹೊಡೆಯಕೂಡದು, ನಿಧಾನವಾಗಿ […]

ಒಲಿಂಪಿಕ್‌ಕೂಟ: ಭಾರತದ್ದೇಕೆ ಕಳಪೆ ಸಾಧನೆ

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 20.12.2014

139 ಕೋಟಿ ಜನ ಸಂಖ್ಯೆಯ ಚೀನಾ ಈಚೆಗೆ ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಗಳಿಸಿದ ಪದಕಗಳು: 151 ಚಿನ್ನ, 108 ಬೆಳ್ಳಿ ಹಾಗೂ 83 ಕಂಚು- ಒಟ್ಟು 342 ಪದಕಗಳು. ಕೇವಲ 17 ಕೋಟಿ ಜನ ಸಂಖ್ಯೆಯ ಕಝಕಸ್ಥಾನ ಗಳಿಸಿದ ಪದಕಗಳು: 28 ಚಿನ್ನ, 23 ಬೆಳ್ಳಿ ಹಾಗೂ 33 ಕಂಚು- ಒಟ್ಟು 84 ಪದಕಗಳು. ಆದರೆ 127 ಕೋಟಿ ಜನಸಂಖ್ಯೆಯ ಭಾರತ ಗಳಿಸಿದ ಪದಕಗಳು ಕೇವಲ 11 ಚಿನ್ನ, 10 ಬೆಳ್ಳಿ […]

ಸುರಕ್ಷಾ ಸ್ವಾಭಿಮಾನ, ಸ್ವದೇಶೀ ವಿಕಾಸ ಅತಿಅಗತ್ಯ

ಲೇಖನಗಳು - 0 Comment
Issue Date : 22.12.2014

ಇಂದು ವಿಶ್ವದ ಎಲ್ಲೆಡೆ ಅಸುರೀ ಪ್ರವೃತ್ತಿಯು ಆತಂಕವಾದದ ರೂಪದಲ್ಲಿ ಪ್ರಕಟವಾಗಿದೆ. ಸೆಪ್ಟೆಂಬರ್ 11 ರಂದು ಯಾತ್ರಿಕ ವಿಮಾನವು ನ್ಯೂಯಾರ್ಕ್‍ನ ವ್ಯಾಪಾರ ಕೇಂದ್ರ ಮತ್ತು ವಾಷಿಂಗ್‍ಟನ್‍ನಲ್ಲಿ ಅಮೆರಿಕಾದ ಸೈನ್ಯಶಕ್ತಿ ಕೇಂದ್ರ ಪೆಂಟಗನ್‍ನ ಕಟ್ಟಡಕ್ಕೆ ಡಿಕ್ಕಿ ಹೊಡೆಯುವುದರ ಮೂಲಕ, ತನ್ನ ಭೀಭತ್ಸ ರೂಪವನ್ನು ಪ್ರದರ್ಶಿಸಿ, ಜಗತ್ತನ್ನು ತಲ್ಲಣಗೊಳಿಸಿದೆ. ಅಮೆರಿಕೆಯ ಆತಂಕವಾದದ ವಿರುದ್ಧ ಹೋರಾಡಿ, ಕೆಲವು ಭಾಗ ಯಶಸ್ವಿಯೂ ಆಗಿದೆ. ಇದನ್ನು ಕೊಂಚ ಆಳವಾಗಿ ವಿಚಾರ ಮಾಡಿದಲ್ಲಿ, ಯಾವ ಭಸ್ಮಾಸುರನಿಗೆ ವರದಾನ ಮಾಡಿದ್ದರೋ, ಅದೇ, ಅವರ ತಲೆಯಮೇಲೆ ಕೈಯಿಡಲು ಬರುತ್ತಿದೆ. ಶ್ರೀಮತಿ […]

ಯೌವ್ವನವನ್ನು ದೇಶಕ್ಕಾಗಿ ಮುಡುಪಿಡಬೇಕು

ಲೇಖನಗಳು - 0 Comment
Issue Date : 22.12.2014

ಆರೋಗ್ಯವಂತನಾಗಿರುವಾಗ ರಾಷ್ಟ್ರಭಗವಾನನನ್ನು ಪೂಜಿಸಬೇಕು ಎಂದು ಅಭಿಪ್ರಾಯಪಟ್ಟರು. 1969ರ ಏಪ್ರಿಲ್ 13 ರಂದು ವಾನಪ್ರಸ್ಥಾಶ್ರಮ ತೆಗೆದುಕೊಂಡ ದಿಲೀಪ್ ಚಂದ್ ಅವರನ್ನು ಅಭಿನಂದಿಸುತ್ತಾ ರಘು ವಂಶದವರು ಕೂಡಾ ಜೀವನವನ್ನು ಪ್ರಜೆಗಳಿಗೋಸ್ಕರ ಜ್ಞಾನ, ಶಕ್ತಿ, ಐಶ್ವಯ‍್ ಸಂಪಾದನೆಗೆ ಮತ್ತು ಸಮಾಜ ರೂಪದ ದೇವರನ್ನು ಪೂಜಿಸಲು ಎರಡು ಭಾಗ ಮಾಡಿಕೊಂಡಿದ್ದರು ಎಂದು ಹೇಳಿದರು. “ದಿಲೀಪಚಂದರೊಡನೆ ನಾನು ಪಾಟಿಯಾಲ ಮತ್ತು ಚಂಡೀಘಡದಲ್ಲಿ ಸಹವಾಸ ಮಾಡಿದ್ದೇನೆ. ಅವರ ಆತಿಥ್ಯಕ್ಕಿಂತಲೂ ಆತ್ಮೀಯತೆಯನ್ನು ಹೆಚ್ಚು ಅನುಭವಿಸಿದ್ದೇನೆ. ಅವರು ವಕೀಲಿ ವೃತ್ತಿಯನ್ನು ಕೈಗೊಂಡು ಧಾರ್ಮಿಕ ಜೀವನ ನಡೆಸಿದ್ದಾರೆ. ನಾನು ಸಹ […]

ತಾಯಿ-ಮಗನ ನೆಹರೂ ಪುರಾಣ

ತಾಯಿ-ಮಗನ ನೆಹರೂ ಪುರಾಣ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 10.12.2014

ಭಾರತದ ಪ್ರಥಮ ಪ್ರಧಾನಿ ಪಂ. ಜವಾಹರಲಾಲ್ ನೆಹರೂ ಅವರ 125ನೆ ಜಯಂತಿಯನ್ನು ಕಾಂಗ್ರೆಸ್ಸು ನವೆಂಬರ್ 14ರಂದು ಆಚರಿಸಿತು. ‘ಕಾಂಗ್ರೆಸ್ಸು’ ಎಂದು ಉದ್ದೇಶಪೂರ್ವಕ ಹೇಳಲು ಕಾರಣವಿದೆ, ಜನತೆಯ ಸ್ತರದಲ್ಲಿ ಪಂ. ನೆಹರೂ ಜಯಂತಿಗೆ ಏನೂ ಪ್ರತಿಕ್ರಿಯೆಯಿರಲಿಲ್ಲ. ಡಾ. ಅಂಬೇಡ್ಕರರ ಜಯಂತಿಯನ್ನು ದೇಶದೆಲ್ಲೆಡೆ ಆಚರಿಸುವ ಆ ಉತ್ಸಾಹ, ಪಂ. ನೆಹರೂ ಜಯಂತಿಯ ಸಮಯದಲ್ಲಿ ಎಂದೂ ಇರುವುದಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೆಹರೂ ಜಯಂತಿಯು ಸರ್ಕಾರದ ಕಾರ್ಯಕ್ರಮವಾಗಿರುತ್ತಿತ್ತು. ನರೇಂದ್ರ ಮೋದಿ ಸರ್ಕಾರವು ನೆಹರೂ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸದೆ ಇದ್ದುದರಿಂದ ಕಾಂಗ್ರೆಸ್ಸು ಕೆರಳಿತು. […]