'ವಂದೇ ಮಾತರಂ' ಆತ್ಮಕಥೆ -20

‘ವಂದೇ ಮಾತರಂ’ ಆತ್ಮಕಥೆ -20

ಲೇಖನಗಳು - 0 Comment
Issue Date : 18.10.2014

ಮದನಲಾಲ್‍ ಧಿಂಗ್ರಾ ಆದರೆ ಈ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಧಿಂಗ್ರಾನ ತಂದೆ – ಅಣ್ಣಂದಿರು ನೇಣಿಗೆ ತೂಗುಬಿದ್ದಿರುವ ಶವದೊಂದಿಗೆ ನಮಗೇನೂ ಸಂಬಂಧವಿಲ್ಲ ಎಂದು ಪೊಲೀಸರಿಗೆ ತಿಳಿಸಿದರು. ಮದನ್ ಬಂಧಿತನಾದಗಲೇ ‘ನನಗಂಥ ಮಗನೇ ಇಲ್ಲ’ ಎಂದು ಬ್ರಿಟನ್‍ಗೆ ತಂತಿ ಕಳಿಸಿದ್ದರು. ಮನೆಯವರೆಲ್ಲ ಧಿಂಗ್ರಾನನ್ನು ಉಪೇಕ್ಷಿಸಿದರು. ನೇಣಿನಲ್ಲಿ ನೇತಾಡುತ್ತಿದ್ದ ಶರೀರದಲ್ಲೊಂದು ಮೃತ್ಯುಪತ್ರ ಸಿಕ್ಕಿತ್ತು. ಪತ್ರದ ಕಡೆಯಲ್ಲಿಯೂ ನಾನಿದ್ದೆ – ವಂದೇ ಮಾತರಂ. ಧಿಂಗ್ರಾನ ಮೃತ್ಯುಪತ್ರವನ್ನು ಆತನ ಕ್ರಾಂತಿಕಾರ್ಯ – ಭಾಷಣಕ್ಕಿಂತಲೂ ಅಪಾಯಕಾರಿ ಎಂದುಕೊಂಡು ಪೊಲೀಸ್‍ ಅಧಿಕಾರಿಗಳು ಅದರ ಭ್ರೂಣಹತ್ಯೆ ಮಾಡಿದರು. […]

ತಿಮ್ಮನ ಚಿತ್ರ ಸಾಹಿತ್ಯ

ತಿಮ್ಮನ ಚಿತ್ರ ಸಾಹಿತ್ಯ

ಲೇಖನಗಳು - 0 Comment
Issue Date : 18.10.2014

ತಿಮ್ಮನ ಅಜ್ಜ ಅಶ್ವಧಾಟಿಯ ಹಿಡಿದು ಓದುತಿರೆ ಜೈಮಿನಿಯ ಸರಸತಿಯೆ ಕುಣಿದ ಹಾಗಿತ್ತಂತೆ. ಅಪ್ಪನೂ ಕಡಮೆಯಿಲ್ಲ, ರಾತ್ರೆಯಿಡೀ ಕುಡಿಕುಡಿದು ಹಾಡಿದರೆ ನನ್ನಪ್ಪ ನಮ್ಮೂರ ಕೇರಿಯಿಡೀ ಹೆದರುತಿತ್ತು ಎನ್ನುತ್ತಾನೆ ತಿಮ್ಮ ಹೆಮ್ಮೆಯಿಂದ. ಅವನ ಅಪ್ಪ ಬರೆದೇ ಸತ್ತರಂತೆ, ಆದರೆ ಕಥೆ ಕಾವ್ಯವಲ್ಲ, ಅಡಕೆ ಮಂಡಿ ಸೇಟರ ಅಂಗಡಿ ಲೆಕ್ಕ! ತಿಮ್ಮನಿಗೂ ಅಂಥದೇ ಕೆಲಸ ಸಿಗಲಿ ಅಂತ ಅಮ್ಮನ ಆಸೆ. ಆದರೆ ತಿಮ್ಮ, ಸೇಟರಿಗೆ ಬೇಕಾದ್ದು ಕೂಡೋ ಲೆಕ್ಕ. ನಂಗೆ ಕಳೆಯೋದು ಮಾತ್ರ ಬರುತ್ತೆ, ಕೂಡೋಕೆ ಬರೋದಿಲ್ಲ. ಆದ್ರಿಂದ ಸೇಟರ ಅಂಗಡೀಲಿ […]

ಚಾಮರಾಜನಗರದಲ್ಲಿ ಶ್ರೀ ಯಾದವರಾವ್‌ಜಿ ಅವರು ಹೇಳಿದ್ದೇನು?

ಚಾಮರಾಜನಗರದಲ್ಲಿ ಶ್ರೀ ಯಾದವರಾವ್‌ಜಿ ಅವರು ಹೇಳಿದ್ದೇನು?

ಲೇಖನಗಳು - 0 Comment
Issue Date : 18.10.2014

ಮೊದಲು ದಿನಾಂಕ 14-02-1965, ಭಾನುವಾರ. ಈ ಬಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಾಮರಾಜನಗರ ಶಾಖೆಯ ವಾರ್ಷಿಕೋತ್ಸವದ ದಿನ. ವರ್ಷವೂ ನಡೆಯುವ ಸಮಾರಂಭ ಇದು. ಇದರ ಅಂಗವಾಗಿ, ದೇಶದ ಎಲ್ಲೆಡೆಯ ಪದ್ಧತಿಯಂತೆ ಸಂಜೆ 4 ಘಂಟೆಗೆ ಘೋಷವಾದ್ಯಗಳ ಸಹಿತ ಸಂಘದ ಸ್ವಯಂಸೇವಕರ ಶಿಸ್ತುಬದ್ಧ ಮೆರವಣಿಗೆ ಹೊರಟಿತು. ಊರಿನ ಪ್ರಮುಖ ಮಾರ್ಗಗಳ ಮೂಲಕ ಹಾದು ನಂತರ ಶಾಂತರೀತಿಯಿಂದ ಸಮಾರಂಭದ ಸ್ಥಾನ ತಲುಪಿತು. ಸಮಾರಂಭ ಪೂರ್ವ ಸೂಚನೆಯಂತೆ ಸಂಜೆ 6 ಘಂಟೆಗೆ ಸರಿಯಾಗಿ ಸಮಾರಂಭ ಪ್ರಾರಂಭವಾಯಿತು. ಸಂಘದ ಜಿಲ್ಲಾ ಸಂಘಚಾಲಕರೂ, ಮೈಸೂರು […]

ಶ್ರದ್ಧಾಂಜಲಿ

ಶ್ರದ್ಧಾಂಜಲಿ

ಪಂಡಿತ್.ದೀನದಯಾಳ್ ಲೇಖನಗಳು - 0 Comment
Issue Date : 17.10.2014

ನನ್ನ ಸಹಯೋಗಿಯೇ, ಶ್ರದ್ಧಾಂಜಲಿಯನ್ನು ಸ್ವೀಕರಿಸು. ನೀನು ಬದುಕಿದ್ದಾಗ ಒಂದೆರಡು ಪ್ರಶಂಸೆಯ ಶಬ್ದಗಳನ್ನು ಬರೆಯುವುದಂತಿರಲಿ, ಮುಖದಿಂದ ಆಡಲೂ ಇಲ್ಲ. ಕಲ್ಲಿಕೋಟೆ ಅಧಿವೇಶನದಲ್ಲಿ ನೀನು ಜನಸಂಘದ ಅಧ್ಯಕ್ಷನಾದಾಗ, ಆ ಗೌರವ ಸಿಕ್ಕಿದುದಕ್ಕಾಗಿ ನಿನ್ನ ಮಿತ್ರ ಮತ್ತು ನಿಕಟ ಸಹವರ್ತಿಯಾಗಿದ್ದುದರಿಂದ ಪ್ರಶಂಸೆಯ ಒಂದೆರಡು ಶಬ್ದಗಳನ್ನು  ಬರೆಯೋಣವೆಂದೆನ್ನಿಸಿತು. ಆದರೆ  ಇದು ನಮ್ಮ ನಡುವೆ ಔಪಚಾರಿಕತೆಯ ವಿಷಯವಾಗಿ ತೋರಿ ನಿನಗೆ  ಹಿಡಿಸುವುದಿಲ್ಲವೆಂದು ತಕ್ಷಣ ಅನ್ನಿಸಿತು. ಬರೆಯುವ ವಿಚಾರ ಬಿಟ್ಟುಬಿಟ್ಟೆ. ಆದರೆ ಈಗ  ನನ್ನ ಮಾತುಗಳನ್ನು  ಕೇಳಲು ನೀನಿಲ್ಲ. ಇದನ್ನು  ನೀನು ಓದಲಾರೆ. ಆದ್ದರಿಂದ ಅಶ್ರುಪೂರ್ಣ […]

ಕಟ್ಟಾ ಸ್ವಯಂಸೇವಕ

ಲೇಖನಗಳು - 0 Comment
Issue Date : 17.10.2014

ಶ್ರೀ ಜಗನ್ನಾಥರಾಯರು ಬರುತ್ತಾರೆ ಎಂದು ತಿಳಿಯುವುದೇ ತಡ ಎಲ್ಲೆಲ್ಲಿಯೂ ಸಂತೋಷ ಉತ್ಸಾಹ ಸಂಚರಿಸುತ್ತಿತ್ತು. ಅವರ ಸಹವಾಸದಲ್ಲಿಯಂತೂ, ಅಲ್ಲಿ ಉಕ್ಕುವ ಹಾಸ್ಯ ವಿನೋದದ ವಾತಾವರಣದಲ್ಲಿ ನಿರಾಶನಾದ ವ್ಯಕ್ತಿಯು ಸಹ ತನ್ನೆಲ್ಲ ದುಃಖವನ್ನು ಮರೆಯುತ್ತಿದ್ದ ಎನ್ನುವುದು ಎಲ್ಲರ ಅನುಭವ. ಅವರ ಮನಸ್ಸು ಮುಗ್ದ ಬಾಲಕನಂತೆ. ಯಾರ ಬಗ್ಗೆಯೂ ಅವರ ಮನಸ್ಸಿನಲ್ಲಿ ದೀರ್ಘಕಾಲ ದ್ವೇಷಭಾವನೆ ಇರಲಿಲ್ಲ . ಯಾರಾದರೂ ಮಾಡಬಾರದ ಕೆಲಸವನ್ನು ಮಾಡಿದರೆ ಅವರ ತೀವ್ರ ಕೋಪಕ್ಕೆ ಮತ್ತು ಕಟುಮಾತುಗಳಿಗೆ ತಕ್ಷಣ ಬಲಿಯಾಗುತ್ತಿದ್ದುದು ನಿಜ. ಆದರೆ ಸಿಟ್ಟಿನ ಆ ಕ್ಷಣ ಕಳೆದ […]

ಭಾರತೀಯ ಸಂಸ್ಕೃತಿ- ರಾಜಧರ್ಮ ಸ್ವರೂಪ

ಭಾರತ ; ಲೇಖನಗಳು - 0 Comment
Issue Date : 17.10.2014

(ಭಾರತೀಯ ಸಂಸ್ಕೃತಿಯು ರಾಜಧರ್ಮವು ಉದಾತ್ತ ಮನೋವೈಶಾಲ್ಯವನ್ನು  ಸೂಚಿಸಿದೆ.  ರಾಜನಿಂದ ಅಧಿಕಾರವು ಪ್ರಜೆಗಳ ಕೈಗೆ ಬಂದೊಡನೆ ಪ್ರಜಾಸತ್ತೆಯು ಆಚರಣೆಗೆ  ಬಂತೆಂದು ಹೇಳಲಾಗುವುದಿಲ್ಲ. ಪ್ರಾಚೀನ ಭಾರತದಲ್ಲಿಯೂ ರಾಜರು ಪ್ರಜಾಪ್ರೇಮದ  ಮೇಲೆಯೇ ಅಧಿಕಾರಾರೂಢರಾಗಿ ಕರ್ತವ್ಯವನ್ನು  ಪಾಲಿಸುತ್ತಿದ್ದರು. ಭಾರತೀಯ ರಾಜಧರ್ಮ ಸೂತ್ರವೇ ಪ್ರಜಾಸತ್ತಾತ್ಮಕವಾಗಿದೆ. ಈ ಶ್ರೇಷ್ಠ ಸಿದ್ಧಾಂತವು ಜಗತ್ತಿನ  ಯಾವ ರಾಷ್ಟ್ರದಲ್ಲಿಯೂ ಇಲ್ಲದೆ, ಭಾರತದಲ್ಲಿ ಆದರ್ಶ ರಾಜಧರ್ಮ ಪಾಲಿಸಲ್ಪಟ್ಟ ಸಜೀವ  ಉದಾಹರಣೆಗಳನ್ನು  ಪ್ರಸಿದ್ಧ ಸಾಹಿತಿಗಳೂ, ಮೈಸೂರು ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರ ಇಲಾಖೆಯ ಡೈರೆಕ್ಟರರೂ ಆಗಿರುವ  ಶ್ರೀ ಸಿ. ಕೆ. ವೆಂಕಟರಾಮಯ್ಯನವರು […]

ಅವಳು ಕನಸು ಕಂಡಳು

ಅವಳು ಕನಸು ಕಂಡಳು

ಕಥೆಗಳು ; ಲೇಖನಗಳು - 0 Comment
Issue Date : 16.10.2014

ಗುಡಿಸಲಲ್ಲಿ ಮಕ್ಕಳು ಅಸ್ತವ್ಯಸ್ತವಾಗಿ ಮಲಗಿದ್ದವು. ಒಂದೊಂದು ಆಕೃತಿ ಒಂದೊಂದು ತರ. ಎಲ್ಲರೂ ಅವಳ ಮಕ್ಕಳೆ, ಒಂದರ ಬಣ್ಣ ಇನ್ನೊಂದರ ತರವಿಲ್ಲ; ಒಂದರ ಗಾತ್ರ ಬೇರೆ. ಎಲ್ಲರೂ ಅವಳ ಮಕ್ಕಳೆ. ತಾಯಿ ಆ ಮಕ್ಕಳನ್ನೆಲ್ಲ ನೋಡಿದಳು. ಒಮ್ಮೆಲೆ ಗುಡಿಸಲಕ್ಕೆ ಬೆಂಕಿ ಹತ್ತಿತು. ನಿಟ್ಟುಸಿರನ್ನು ಹಾಕಿದಳು. ತಾಯಿ ಗಡಬಡಿಸಿ ಕೂಗಿದಳು. “ಮನೆಗೆ ಬೆಂಕಿ ಬಿದ್ದಿದೆ !” ಮಕ್ಕಳೆಲ್ಲ ಕಣ್ಣುತೆರೆದು ನೋಡಿದರು. ಆ ಮನೆಯ ಉತ್ತರದ ಕಡೆಗೆ ಬೆಂಕಿ ಬಿದ್ದುದು ನಿಜವಾಗಿತ್ತು. ಬೆಂಕಿ ! ಬೆಂಕಿ !! ಎಲ್ಲರೂ ಕೂಗಿದರು. ಆದರೆ, […]

ಹೀಗಿದ್ದರು ನಮ್ಮ ದೀನದಯಾಳ್

ಹೀಗಿದ್ದರು ನಮ್ಮ ದೀನದಯಾಳ್

ಲೇಖನಗಳು - 0 Comment
Issue Date : 16.10.2014

ಒಂದು ಸಲ ನಾವು ಕೆಲವರು ಮುಂಬಯಿಯಿಂದ ನಾಗಪುರಕ್ಕೆ ರೈಲಿನಲ್ಲಿ ಹೋಗುತ್ತಿದ್ದೆವು. ಪಂಡಿತ ದೀನದಯಾಳಜಿಯವರೂ ನಮ್ಮ ಜೊತೆಗಿದ್ದರು. ನಾವೆಲ್ಲ ಮೂರನೆ ತರಗತಿಯಲ್ಲಿದ್ದೆವು. ಮೊದಲನೆ ತರಗತಿಯಲ್ಲಿದ್ದ ಪೂಜನೀಯ ಗುರೂಜಿಯವರು ದೀನದಯಾಳಜಿಯವರೊಡನೆ ಯಾವುದೋ ವಿಷಯದ ಬಗ್ಗೆ ಚರ್ಚಿಸಲು ಅವರನ್ನು ತಮ್ಮ ಬಳಿಗೆ ಕರೆದರು. ದೀನದಯಾಳಜಿ ಗುರೂಜಿಯವರ ಡಬ್ಬಿಯಲ್ಲಿ ಸ್ವಲ್ಪ ಹೊತ್ತು ಕಳೆದ ನಂತರ ನಮ್ಮ ಡಬ್ಬಿಗೆ ವಾಪಸ್ಸಾದರು. ಬಂದ ಮೇಲೆ ಟಿ.ಟಿ.ಇ.ಗಾಗಿ ಹುಡುಕಲು ಪ್ರಾರಂಭಿಸಿದರು. ನಮಗೆ ಅದೇಕೆಂದು ಅರ್ಥವಾಗಲಿಲ್ಲ. ಕೊನೆಗೆ ದೀನದಯಾಳಜಿ ಟಿ.ಟಿ.ಇ.ನನ್ನು ಕಂಡುಹಿಡಿದು, ತಾವು ಎರಡು ನಿಲ್ದಾಣಗಳವರೆಗೆ ಮೂರನೇ ತರಗತಿ […]

ನಿದ್ದಿ ಯಾಕ ಮಾಡುತೀಯ

ನಿದ್ದಿ ಯಾಕ ಮಾಡುತೀಯ

ಲೇಖನಗಳು - 0 Comment
Issue Date : 16.10.2014

ಪ್ರಯಾಣದ ಸಮಯದಲ್ಲಿ ನಿಮ್ಮ ಸುತ್ತ ಒಮ್ಮೆ ಕಣ್ಣು ಹಾಯಿಸಿ ಮೊಬೈಲ್‌ನಲ್ಲಿ ಮಾತನಾಡುವ ಸಮಯವನ್ನು ಬಿಟ್ಟರೆ, ಉಳಿದಂತೆ ಬಹಳಷ್ಟು ಜನ ನಿದ್ದೆ ಮಾಡುತ್ತಿರುತ್ತಾರೆ. ನಿದ್ದೆಗೆ ಹಗಲು-ರಾತ್ರಿಯ ಭೇದವೂ ಇರುವಂತಿಲ್ಲ. ಹಿಂದೆ ಹಗಲು ಪ್ರಾಣಿಗಳಿಗೆ ಕೆಲಸದ ಕಾಲವೆಂದೂ, ರಾತ್ರಿಯು ಅವಿರತ ಕಾರ್ಯಜನಿತ ಶ್ರಮ ಪರಿಹಾರಾರ್ಥವಾಗಿ ಭಗವಂತನಿಂದ ಸೃಷ್ಟವಾದ ವಿಶ್ರಾಂತಿಕಾಲವೆಂದೂ ಹೇಳುತ್ತಿದ್ದರು. ಈಗ ಅಂತಹ ವ್ಯವಸ್ಥೆಯೇನೂ ಇರುವಂತೆ ಕಾಣುವುದಿಲ್ಲ. ಮಧ್ಯಾಹ್ನ ಊಟದ ನಂತರ ಗಡದ್ದು ನಿದ್ದೆ ಮಾಡುತ್ತಾರೆ. ರಾತ್ರಿ ಟಿ.ವಿ. ನೋಡುತ್ತಾ ಅರ್ಧರಾತ್ರಿಯವರೆಗೆ ಮಜಾ ಮಾಡುತ್ತಾರೆ. ಕೆಲವು ಜನ ಇನ್ನೂ ಒಂದು […]

‘ಸ್ವದೇಶಿ’ಯ ಪ್ರೇರಣೆ

ಕರ್ನಾಟಕ ; ಲೇಖನಗಳು - 0 Comment
Issue Date : 15.10.2014

(“ಸ್ವದೇಶಿ”ಯು “ಸ್ವದೇಶ ಭಕ್ತಿ”ಯಂತೆ  ಅಂತಃಪ್ರೇರಿತ ಭಾವನೆ. ಕೇವಲ ಈ ಭಾವನೆಯೇ  ಒಂದು ರಾಷ್ಟ್ರವನ್ನು  ಜೀವಂತವಾಗಿಡಬಲ್ಲದು.  ಬ್ರಿಟಿಷರೊಡನೆ  ಹೋರಾಡುವಾಗ  “ಸ್ವದೇಶಿ”ಯನ್ನು  ಕೇವಲ ಬ್ರಿಟಿಷರನ್ನು ವಿರೋಧಿಸುವ ಸಾಧನವಾಗಿ ನಾವು ಉಪಯೋಗಿಸಿದೆವು. ಈಗ ದೇಶದಲ್ಲಿ “ಸ್ವದೇಶಿ”ಯ ಸ್ಥಾನದಲ್ಲಿ ಸ್ವಾರ್ಥಪೂರಿತ “ವಿದೇಶಿ”ಯು ಸ್ಥಿರವಾಗಿದೆ. ಇದನ್ನು ದೂರಮಾಡಿ ನೈಜ ಸ್ವದೇಶಭಕ್ತಿಯುಳ್ಳ “ಸ್ವದೇಶಿ” ಜೀವನ ಧಾರಣೆಯು ಹೇಗೆ ಸಾಧ್ಯ, ಅದರ ಮೂಲವೆಲ್ಲಿ? ಎಂಬುದನ್ನು  ಶ್ರೀ ಅಗ್ನಿಹೋತ್ರಿಯವರು ತಮ್ಮ ವಿಚಾರಪೂರಿತ ಲೇಖನದಲ್ಲಿ ವಿವರಿಸಿದ್ದಾರೆ.) ‘ಸ್ವದೇಶ ಭಕ್ತಿ’ಯಂತೆ ‘ಸ್ವದೇಶಿ’ಯೂ ಒಂದು ಭಾವನೆ. ಭಾವನೆಯ ಸಂಬಂಧವು ಹೃದಯದೊಡನೆ ಇರುವುದು; ಬುದ್ಧಿಯೊಡನಲ್ಲ. […]