ಶಿಷ್ಟ ಮಂಡಳಕ್ಕೆ ಸದ್ಗುರು ಸಂದೇಶ

ಲೇಖನಗಳು - 0 Comment
Issue Date : 22.07.2014

1994ರ ಸಂದರ್ಭದಲ್ಲಿ ಶಿಕ್ಷಣದಲ್ಲಿ ಭಾರತೀಯತ್ವವನ್ನು ತರುವ ಪ್ರಶ್ನೆಯ ವರ್ತುಲದಲ್ಲಿ ಆಗಾಗ ಪರ-ವಿರೋಧ ಚರ್ಚೆ ನಡೆಯುತ್ತಿತ್ತು. ಒಂದೆಡೆ ಸನಾತನ ಸಂಪ್ರದಾಯದ ಪಡಿಯಚ್ಚಿನಲ್ಲೆ ನಡೆದು ಬಂದ ಪರಿವಾರಗಳಲ್ಲೂ ಆಂಗ್ಲಸಂಸ್ಕೃತಿ ಪ್ರಭಾವ ಹೆಚ್ಚುತ್ತಾ ಬಂದ ಪರಿಣಾಮದಿಂದ ಮುಂದಿನ ತಲೆಮಾರಿನಲ್ಲಿ ಆಧುನಿಕವೆಂಬ ಹೆಸರಿನ ಕಾಲೇಜು ಶಿಕ್ಷಣದ ಆಕರ್ಷಣೆ ಹೆಚ್ಚುತ್ತಿತ್ತು. ಸಾಧು, ಸಂತರು, ಅರ್ಚಕರು, ಪೂಜಕರು, ಪಂಡಿತರು ಎಂಬ ತಥಾಕಥಿತ ಆಸ್ತಿಕಮಾರ್ಗದಲ್ಲೇ ಆಂಗ್ಲ ಮಾಧ್ಯಮ, ಇಂಗ್ಲಿಷ್ ವಿದ್ಯೆ, ಯಂತ್ರವಿದ್ಯೆ ಎಂಬ ಉನ್ಮಾದ ಉಮ್ಮಳಿಸಿ ಗುರುಕುಲ, ಪಾಠಶಾಲೆ, ಮುಂತಾದ ಋಷಿವಿದ್ಯಾತಾಣಗಳು ಖಾಲಿಯಾಗತೊಡಗಿದವು. ಅನೇಕ ಮಠ – […]

ವ್ಯಕ್ತಿಪೂಜೆಯನ್ನು ಪರಿಗಣಿಸಬೇಕಾದ ಬಗೆ

ಲೇಖನಗಳು - 0 Comment
Issue Date : 21.07.2014

ವ್ಯಕ್ತಿಪೂಜೆಯ ಬಗ್ಗೆ ಇಲ್ಲಿ ನಡೆದಷ್ಟು ಚರ್ಚೆ ಎಲ್ಲೂ ನಡೆದಿರಲಾರದು.ಚರ್ಚೆಯೇನು ಬಂತು? ವ್ಯಕ್ತಿಪೂಜೆ ಸಲ್ಲದು ಎಂಬುದೇ ಎಲ್ಲರ ನಿರ್ಣಯ ತಾನೆ? ಪೂಜೆಯ ವಿಧಾನವನ್ನು ಒಪ್ಪದೇ ಇರುವವರು ಇರಬಹುದು, ಒಪ್ಪುವವರೇ ಇರಬಹುದು, ಎಲ್ಲರೂ ವ್ಯಕ್ತಿಪೂಜೆಯನ್ನು ವಿರೋಧಿಸುವವರೇ.ಅಷ್ಟೇ ಏಕೆ? ಅನಿವಾರ್ಯವಾಗಿಯೋ ಅಗತ್ಯವಾಗಿಯೋ ಸ್ವತಃ ವ್ಯಕ್ತಿಪೂಜೆಯಲ್ಲಿ ತೊಡಗಿರುವವರೂ ತಾತ್ತ್ವಿಕವಾಗಿ ಅದರ ವಿರೋಧಗೈವವರೇ. ಮತ್ತು ತಾವು ಮಾಡುತ್ತಿರುವುದು ವ್ಯಕ್ತಿಪೂಜೆ ಅಲ್ಲ ಎಂದು ತರ್ಕಿಸುವವರೇ.ಸ್ವಯಂ ಪೂಜಿತನಾಗುವವ ಇನ್ನು ಇದನ್ನು ಮೇಲುನೋಟಕ್ಕಾದರೂ ವಿರೋಧಿಸುತ್ತಾನೆ ಎಂಬುದು ಗ್ರಹೀತವೇ.ಕಳೆದ ಮಹಾ ಚುನಾವಣೆಯಲ್ಲಿ ವ್ಯಕ್ತಿಪೂಜೆ ಬಗೆಗೆ ಚರ್ಚೆ ಬಿರುಸಾಗೇ ನಡೆಯಿತು. ನಮ್ಮಲ್ಲಿಯಂತಹ […]

ಜಾಂಬಾಜನೊಂದಿಗೆ ಮದುವೆ ಪ್ರಸಂಗ

ಲೇಖನಗಳು - 0 Comment
Issue Date : 21.07.2014

ವರ್ತಮಾನದಲ್ಲಿಯ ಜನ್ಮದ ರಹಸ್ಯವನ್ನು ಶೋಧಿಸಿ ಕಾಣುತ್ತೇನೆ. ಈ ನವಸೃಷ್ಟಿಯೊಂದಿಗೆ ಅದೆಷ್ಟು ಉಲ್ಲಾಸ – ಉತ್ಸಾಹ ತುಂಬಿ ಬರುತ್ತಿದೆಯೋ ಅದಕ್ಕಿಂತಲೂ ಎಷ್ಟೋ ಪಟ್ಟು ಜಿದ್ದು, ಈರ್ಷ್ಯೆ ಮನಸ್ಸನ್ನೂ ಭರಿಸುತ್ತದೆ. ಪತಿ – ಪತ್ನಿ ಎಂಬುದು ದೈಹಿಕ ವ್ಯವಹಾರದಂತೆ ಕಾಣುತ್ತಿದೆ. ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿದ ಪತಿಯು ಒಬ್ಬಳಿಗೆ ಹೆಚ್ಚು ಜೊತೆಗೂಡಿರುತ್ತಾನೆ, ಇನ್ನೊಬ್ಬಳಿಗೆ ವಂಚನೆಯಾಗುತ್ತದೆ ಎಂದೂ ತೋರುತ್ತಿಲ್ಲ. ಆ ಪತಿಗೆ ಇಬ್ಬರು ಹೆಂಡಿರೊಂದಿಗೂ ತನ್ನ ರಾತ್ರಿಗಳನ್ನು ಹಂಚಿಕೊಳ್ಳುವಂತಾಗುತ್ತಿದೆ – ಎರಡು ರಾತ್ರಿಗಳನ್ನು ಹಿರಿಯ ಹೆಂಡತಿಯೊಂದಿಗೆ, ಎರಡು ರಾತ್ರಿಗಳನ್ನು ಕಿರಿಯ ಹೆಂಡತಿಯೊಂದಿಗೆ! […]

ಎಮ್ಮೆಲ್ಲೆ ಬೇಕಾ ಎಮ್ಮೆಲ್ಲೇ ... ...

ಎಮ್ಮೆಲ್ಲೆ ಬೇಕಾ ಎಮ್ಮೆಲ್ಲೇ … …

ಲೇಖನಗಳು - 0 Comment
Issue Date : 19.07.2014

ನಿಜ. ನಮ್ಮ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಎಮ್ಮೆಲ್ಲೆ ಬೇಕಾ ಎಮ್ಮೆಲ್ಲೇ ಎನ್ನುತ್ತ ಶಾಸಕರ ಮತವನ್ನು ಮಾರಾಟಕ್ಕಿಟ್ಟುಕೊಂಡು ಕುಳಿತಿದ್ದರಂತೆ. ವ್ಯಾಪಾರ ಕೊನೆಗೆ ಎಲ್ಲಿ ಕುದುರಿತು, ಯಾವ ರೇಟು ಎಂದೆಲ್ಲ ತಿಳಿಯಲಿಲ್ಲ. ಇತ್ತೀಚೆಗೆ ಮುಗಿದ ಎಮ್ಮೆಲ್ಸಿ ಚುನಾವಣೆ ಸಮಯದಲ್ಲಿ ಜನತಾ ದಳದ ಶಾಸಕರ ವೋಟಿನ ರೇಟು ಬರೋಬ್ಬರಿ ಒಂದು ಕೋಟಿ ರೂಪಾಯಿಯಿತ್ತಂತೆ. ಆ ಒಂದು ಕೋಟಿಯಲ್ಲಿ ಶಾಸಕರ ಪಾಲೆಷ್ಟು, ಇತರರ ಪಾಲೆಷ್ಟು ಎಂದು ತಿಳಿಯಲಿಲ್ಲ. ವೋಟಿನ ರೇಟಿನ ಬಗ್ಗೆ ಸ್ವತಃ ಕುಮಾರಸ್ವಾಮಿಯವರೇ ಟೇಪಿನಲ್ಲಿ ಹೇಳಿದ್ದಾರೆ. ನಂತರ ಟೇಪಿನಲ್ಲಿ […]

ಕಷ್ಟಗಳನ್ನು ಗೆಲ್ಲೋ ಶಕ್ತಿ ನಮ್ಮಲ್ಲೂ ಇದೆ

ಲೇಖನಗಳು - 0 Comment
Issue Date : 19.07.2014

ಸಂಸಾರ ಸಾಗರದಲ್ಲಿ ಆನಂದದ ಹುಡುಕಾಟದಲ್ಲಿ ಹೊರಟಿರುವ ನಮ್ಮನ್ನು ಗುರಿ ಸೇರಿಸಬಲ್ಲದು ಮನವೆಂಬ ನಾವೆ. ಈ ಸಾಗರ ಪಯಣದಲ್ಲಿ ಹೈವೇಗಳಿಲ್ಲ , ಟ್ರಾಫಿಕ್ ಲೈಟುಗಳಿಲ್ಲ. ಬೋರ್ಡುಗಳಿಲ್ಲ. ಅವರಿವರನ್ನು ಕೇಳುತ್ತಾ, ಮುಂದಿನವರನ್ನು ಹಿಂಬಾಲಿಸುತ್ತಾ, ನಕ್ಷತ್ರಗಳನ್ನು ಗಮನಿಸಿ ದಿಕ್ಕು ಲೆಕ್ಕ ಹಾಕುತ್ತಾ ಸಾಗಬೇಕು. ಎದುರಾಗುವ ಬಿರುಗಾಳಿ, ಸುನಾಮಿಗಳಿಂದ ತಪ್ಪಿಸಿಕೊಳ್ಳುತ್ತಾ ಪ್ರತಿ ಕ್ಷಣವೂ ಜಾಗೃತರಾಗಿ ದಿಕ್ಕು ತಪ್ಪದೇ ನಾವೆಯನ್ನು ಸಂಭಾಳಿಸಿದರೆ ಆನಂದವೆಂಬ ಗುರಿ ತಲುಪಲು ಸಾಧ್ಯ. ಅಜ್ಞಾನ, ಅಜಾಗರೂಕತೆ, ನಿರ್ಲಕ್ಷ್ಯ, ತಪ್ಪು ಮಾರ್ಗದರ್ಶನ ಹಾಗೂ ಅನೇಕ ಬಾರಿ ಪ್ರಕೃತಿಯ ಮುನಿಸಿನಿಂದ ನಾವೆ ದಿಕ್ಕೂ […]

‘ವಂದೇ ಮಾತರಂ’ ಆತ್ಮಕಥೆ – 16

ಲೇಖನಗಳು - 0 Comment
Issue Date : 18.07.2014

ಎಪ್ರಿಲ್ 14, ಶನಿವಾರ! ಬಿಷು ಹಬ್ಬದ ದಿನ. ಮಧ್ಯಾಹ್ನ 2 ಗಂಟೆ ಸಮಯ. ಸಮ್ಮೇಳನ ಸ್ಥಾನ ತಲುಪಲು ಮೆರವಣಿಗೆ ಹೊರಡಲೋಸುಗ ಎಲ್ಲ ಪ್ರತಿನಿಧಿಗಳು ರಾಯ್‍ಬಹದ್ದೂರ್ ಮೈದಾನದಲ್ಲಿ ಬಂದು ಸೇರಿದರು. ಪ್ರತಿಯೊಬ್ಬರ ಎದೆಯ ಮೇಲೆ ವಂದೇ ಮಾತರಂ ಬ್ಯಾಡ್ಜ್ ಇತ್ತು.  ಕೆಲವರಂತೂ ವಂದೇ ಮಾತರಂನ ಅಡ್ಡಪಟ್ಟಿಧರಿಸಿದರು. ಕೆಲವರು ಭಿತ್ತಿಪತ್ರ ಹಿಡಿದಿದ್ದರು. ರಾಷ್ಟ್ರೀಯ ಆಂದೋಲನದಲ್ಲಿ ತಾವೂ ಒಂದಾಗಿರುವುದನ್ನು ವ್ಯಕ್ತಪಡಿಸುತ್ತಾ ನೂರಾರು ಮಹಿಳೆಯರೂ ಭಾಗವಹಿಸಿದ್ದರು. ಅವರಲ್ಲೂ ಧ್ವಜ ಇತ್ಯಾದಿ ಶೋಭೆ ಹೆಚ್ಚಿಸುವ ಪರಿಕರಗಳಿದ್ದವು. ಅರ್ಜುನನ ಬಾಯಲ್ಲಿ ಕೃಷ್ಣ ಜಪವಿದ್ದಂತೆ ಎಲ್ಲರ ತುಟಿಯಲ್ಲಿ […]

ಕವಿಗೋಷ್ಠಿಯ ರಾಮಾಯಣ

ಕವಿಗೋಷ್ಠಿಯ ರಾಮಾಯಣ

ಲೇಖನಗಳು - 0 Comment
Issue Date : 18.07.2014

ದೂರದ ಊರಿನಿಂದ ದೂರವಾಣಿ ಕರೆಯೊಂದು ಬಂದಿತ್ತು. ‘ಸಾರ್, ನಮ್ಮೂರ್ನಲ್ಲಿ ಬುಡಾನ್‌ಸಾಬರ ಉರುಸು ನಡೀತಾ ಇದೆ. ಅದಕ್ಕೆ…’ ಎಂಬ ದನಿ ಕೇಳಿಸಿತು. ತಕ್ಷಣವೇ ಕರೆಯನ್ನು ತುಂಡರಿಸಿ; ‘ಇಲ್ರೀ, ಉರುಸಿಗೆ ದೇವಸ್ಥಾನಕ್ಕೆ ಇದಕ್ಕೆಲ್ಲ ನಾನು ಸಹಾಯಧನ ಕೊಡೋದಿಲ್ಲ’ ಎಂದೆ. ನಿಮ್ಮ ಹಣ ಯಾರಿಗೆ ಬೇಕು?ನಾನು ಅದಕ್ಕಲ್ಲ ಫೋನು ಮಾಡಿದ್ದು. ಈ ಸಲುವಾಗಿ ಇಲ್ಲೊಂದು ಕವಿಗೋಷ್ಠಿ ಮಾಡ್ತಾ ಇದ್ದೇವೆ. ಅದಕ್ಕೆ ತಾವು ಅಧ್ಯಕ್ಷರಾಗಿ ಬರಬಹುದೆ? ಅವರು ಕೇಳಿದರು. ಕವಿಗೋಷ್ಠಿಯ ಅಧ್ಯಕ್ಷತೆ! ಯಾರಿಗೆ ಬೇಡ? ಆದರೆ ತೋರಿಸಿಕೊಳ್ಳದೆ; ಅಧ್ಯಕ್ಷತೆಗೆ ನಾನೆಂಥದ್ದಕ್ಕೆ? ದೊಡ್ಡ ಕವಿಗಳು […]

ಚೋಳ ರಾಜ್ಯದಲ್ಲಿದ್ದ ಬೌದ್ಧ ವಿಹಾರಕ್ಕೆ ದುರ್ಗತಿ

ಚೋಳ ರಾಜ್ಯದಲ್ಲಿದ್ದ ಬೌದ್ಧ ವಿಹಾರಕ್ಕೆ ದುರ್ಗತಿ

ಲೇಖನಗಳು - 0 Comment
Issue Date : 16.07.2014

ದಕ್ಷಿಣ ಭಾರತದಲ್ಲಿ ರಾಜ್ಯವಾಳಿದ ಪ್ರಮುಖ ರಾಜ ಮನೆತನಗಳಲ್ಲಿ ತಂಜಾವೂರಿನ ಚೋಳರು ಹೆಸರುವಾಸಿಯಾಗಿದ್ದಾರೆ. ತಂಜಾವೂರಿನ ಚೋಳ ರಾಜವಂಶ ವಿಜಯಾಲಯನಿಂದ (850-871) ಪ್ರಾರಂಭವಾಯಿತು. ಚೋಳರಲ್ಲಿ ಅತ್ಯಂತ ಪ್ರಸಿದ್ಧರಾದವರು ರಾಜರಾಜ ಚೋಳ (985-1014) ಮತ್ತು ರಾಜೇಂದ್ರ ಚೋಳರಾಗಿದ್ದಾರೆ (1014-1044) ಸಾಮ್ರಾಜ್ಯ ವಿಸ್ತಾರ, ಕಲೆ ಮತ್ತು ವಾಸ್ತುಶಿಲ್ಪ, ಹಾಗೂ ಆಡಳಿತ ವ್ಯವಸ್ಥೆಗಳಲ್ಲಿ ಆ ಈರ್ವರೂ ಪ್ರಸಿದ್ಧರಾಗಿದ್ದರು. ಚೋಳ ರಾಜರಡಿಯಲ್ಲಿ ವೈಷ್ಣವ, ಶೈವ, ಕಪಾಲಿಕ, ಕಾಲಮುಖ, ಪಾಶುಪತ ಮೊದಲಾದ ಪಂಥಗಳು ಬೆಳವಣಿಗೆ ಕಂಡವು. ಅವರು ಹೆಚ್ಚಾಗಿ ಶೈವ ಪಂಥದ ಅನುಯಾಯಿಗಳಾಗಿದ್ದರೂ ಬೌದ್ಧ ಮತ್ತು ಜೈನ […]

ಇಲ್ಲದ ಜಗಳವ ಮಾಡುವಿರೇಕೆ?

ಲೇಖನಗಳು - 0 Comment
Issue Date : 16.07.2014

ಹಿಂದಿ ಹೇರಿಕೆ ಎಂಬ ಕೂಗು ಸ್ವಾತಂತ್ರ್ಯ ಸಿಕ್ಕಾಗಿನಿಂದ ಕೇಳಿಬರುತ್ತಿದೆಯಷ್ಟೆ. ಇಂಗ್ಲಿಷನ್ನು ಹೇರಿಕೊಳ್ಳುವಲ್ಲಿ ಆನಂದ ಪಡುತ್ತ ನಮ್ಮದೇ ನೆಲದ ಸೋದರ ಭಾಷೆಗಳನ್ನು ದ್ವೇಷಿಸುವ ಪ್ರವೃತ್ತಿ ಬಂತೆಲ್ಲಿಂದ? ಈ ಪ್ರವೃತ್ತಿ ಭಾಷೆಯಿಂದ ಪ್ರಾರಂಭಗೊಂಡದ್ದೂ ಅಲ್ಲ. ಅಲ್ಲಿಗೇ ನಿಲ್ಲುವಂಥದ್ದೂ ಅಲ್ಲ. ಸೋದರ ರಾಜ್ಯಗಳ ಬಗ್ಗೆ ತಗಾದೆ ಎತ್ತಲು ನಮ್ಮನ್ನು ಜೋಡಿಸಬಲ್ಲ ಎಲ್ಲ ಸಂಗತಿಗಳೂ ಸಾಧನಗಳಾಗುತ್ತಿವೆ. ಇದೊಂದು ರಾಷ್ಟ್ರವಾಗಿರಲಿಲ್ಲ, ನಾವು ಮಾಡಿದೆವೆಂದರು ಆಂಗ್ಲರು. ಅವರೇ ಹೇಳಿದ ಮೇಲೆ ನಂಬದಿರುವುದೆಂತು? ಗುಲಾಮ ಒಡೆಯನ ಮಾತನ್ನು ನಂಬತಕ್ಕದ್ದು, ಹಾಗಿದ್ದಾಗ ಮಾತ್ರ ತಾನೇ ವ್ಯವಹಾರ ಸಲೀಸಾಗುವುದು? ರಾಜ್ಯ […]

ಬಾಲ್ಯದ ನೆನಪುಗಳು

ಲೇಖನಗಳು - 0 Comment
Issue Date : 16.07.2014

‘ಏನು? ಪಠಿಸುವುದಿಲ್ಲವೇ? ಅಬ್ಬಾ ನಿನಗೆಷ್ಟು ಧೈರ್ಯ?’– ಹೀಗೆ ಹೇಳಿದ ಅವರು ನನ್ನ ಕೆನ್ನೆಗೆ ಏಟುಕೊಟ್ಟರು. ಒದ್ದರು.‘ಹೇಳು! ಆ ಪವಿತ್ರ ವಾಕ್ಯ ಹೇಳುತ್ತೀಯೂ ಇಲ್ಲವೋ? ಹೇಳು – ಲಾ ಇಲ್ಲಾಹ ಬಿಸ್ಮಿಲ್ಲಾಹ, ರಹಮಾನ್ – ಏ – ರಹೀಮ್. ಲಾ-ಇಲ್ಲಾಹ – ಇಲ್ಲೆಲಾ – ಮುಹಮ್ಮದೀನ್ – ರಸೂಲ್ – ಅಲ್ಲಾಹ್…!’ ‘ಊಹೂಂ. ಹೇಳುವುದಿಲ್ಲಾ – ಹೇಳುವುದಿಲ್ಲ. ನಾನು ನಿಮ್ಮಿಂದ ಕಲಿಸಿಕೊಂಡು ಹೇಳುವುದೇ ಇಲ್ಲ. ನಾನೇನು ಒಂದು ಗಿಳಿಯೋ, ಮೈನಾ ಹಕ್ಕಿಯೋ ಅಲ್ಲ. ನೀವು, ನಿಮ್ಮನ್ನು ತಾವೇ ವೌಲಾನಾ […]