ಅಣ್ಣಾ ಎರಡು ಹೆಜ್ಜೆ ಹಿಂದೆ, ಒಂದು ಹೆಜ್ಜೆ ಮುಂದೆ

ಲೇಖನಗಳು - 0 Comment
Issue Date :

                                                                                    ರಮೇಶ ಪತಂಗೆಅಣ್ಣಾ ಹಜಾರೆ ಉಪವಾಸ ಮುಕ್ತಾಯವನ್ನು ಘೋಷಿಸಿದ್ದಾರೆ. ಅಲ್ಲದೆ ಭ್ರಷ್ಟಾಚಾರ ನಿವಾರಣೆಗೆ ರಾಜಕೀಯ ಪರ್ಯಾಯ ಒದಗಿಸಬೇಕು ಮತ್ತು ಅದಕ್ಕಾಗಿ ಒಂದು ಬೇರೆಯೇ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಗುವುದು, ಎಂದೂ ಘೋಷಿಸಿದ್ದಾರೆ. ಈ ಸುದ್ದಿ ಕೇಳಿದ ಬಳಿಕ ಮನಸ್ಸಿನಲ್ಲಿ ಮೊದಲ ಪ್ರತಿಕ್ರಿಯೆದ್ದಿದ್ದು, ಟೀಮ್ ಅಣ್ಣಾ ಜನರಿಗೆ ನಂಬಿಕೆದ್ರೋಹ ಮಾಡಿದ್ದಾರೆ ಎಂದು. ಜನ ಒಂದು ರಾಜಕೀಯೇತರ ಆಂದೋಲನ ನಡೆಸಲು ಇಚ್ಛಿಸಿದ್ದರು. ಇದು ಪೂರ್ಣವಾಗಿ ಸಾಮಾಜಿಕ ಆಂದೋಲನವಾಗಿರಬೇಕು, ಅದರ ಒತ್ತಡ ಇಡೀ ರಾಜಕಾರಣದ ಮೇಲಿರಬೇಕು. ಹೀಗಿರುವಾಗ ಜನರನ್ನು ಅಣ್ಣಾ ನಿರಾಶೆಗೊಳಿಸಿದ್ದಾರೆ. ಈ […]

ತಾಲಿಬಾನಿಗಳು 9 ಬಾರಿ ಆ ಮಹಿಳೆಯ ಮೇಲೆ ಗುಂಡು ಹಾರಿಸಿದರು

ಲೇಖನಗಳು - 0 Comment
Issue Date :

ಆಕೆ ಮಾಡಿದ ಅಪರಾಧ – ಪರಪುರುಷನ ಸಂಗವಂತೆ ! ಅಫ್ ಘಾನಿಸ್ಥಾನದಲ್ಲಿ ತಾಲಿಬಾನಿಗಳ ಯುಗ ಮುಗಿದಿದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಅಲ್ಲೀಗ ಹಮೀದ್‌ ಕರ್ಜಾಯಿ ನೇತೃತ್ವದ ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆ ಏನೋ ಇದೆ. ಆದರೆ ತಾಲಿಬಾನಿಗಳ ದಮನ ದಬ್ಬಾಳಿಕೆ ಈಗಲೂ ಅಂತ್ಯಗೊಂಡಿಲ್ಲ. ಅದಕ್ಕೊಂದು ನಿದರ್ಶನ ಇಲ್ಲಿದೆ. ಇತ್ತೀಚೆಗೆ ಅಲ್ಲಿನ ಸರ್ಕಾರದ ವಶಕ್ಕೆ ಒಂದು ಭಯಾನಕ ವೀಡಿಯೋ ದೊರಕಿತು. ಅದರಲ್ಲಿ 22 ವರ್ಷದ ಹರೆಯದ ಮಹಿಳೆಯೊಬ್ಬಳನ್ನು ಸಾರ್ವಜನಿಕವಾಗಿ ಸಾಯಿಸುವ ಭಯಾನಕ ದೃಶ್ಯವಿತ್ತು. ಇದನ್ನು ಸರ್ಕಾರ ತೀವ್ರವಾಗಿ […]

ಮಠಗಳು ರಾಜಕೀಯದ ಅಡ್ಡೆಗಳಾಗುತ್ತಿವೆಯೆ?

ಲೇಖನಗಳು - 1 Comment
Issue Date :

ಸ್ವಾಮಿ ಅಗ್ನಿವೇಶ್‌ ಥರದವರಿಗೆ ಎಲ್ಲ ವಿಷಯಗಳ ಬಗ್ಗೆ ಮೂಗು ತೂರಿಸುತ್ತಾ ವಿವಾದ ಸೃಷ್ಟಿಸುವುದೆಂದರೆ ಎಲ್ಲಿಲ್ಲದ ಆನಂದ. ಅವರಿಗೂ ಆ ವಿಷಯಗಳಿಗೂ ಸಂಬಂಧವೇ ಇರದಿದ್ದರೂ ಮೂಗು ತೂರಿಸುವ ಅಭ್ಯಾಸ ಬಿಡುವುದೇ ಇಲ್ಲ. ಪಶ್ಚಿಮ ಬಂಗಾಳದ ವಿಶ್ವ ಭಾರತಿ ಹಾಸ್ಟೆಲ್‌ ವಾರ್ಡನ್‌ ಅವರನ್ನು ಸಮರ್ಥಿಸಿಕೊಂಡು ಅಗ್ನಿವೇಶ್‌ ನೀಡಿರುವ ಹೇಳಿಕೆ ಇದಕ್ಕೆ ನಿದರ್ಶನ. ಇತ್ತೀಚೆಗೆ ಆ ಹಾಸ್ಟೆಲ್‌ನಲ್ಲಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡ ಬಾಲಕಿಗೆ ಶಿಕ್ಷೆಯಾಗಿ ಸ್ವಮೂತ್ರಪಾನ ಮಾಡಿಸಲಾಗಿತ್ತು. ಹೀಗೆ ಮಾಡಿದವರು ಅಲ್ಲಿನ ಸಿಬ್ಬಂದಿಯೊಬ್ಬರು. ಇದೊಂದು ಅಮಾನುಷ ಶಿಕ್ಷೆಯೆಂದು ಶಿಕ್ಷಣ ತಜ್ಞರು, ಗಣ್ಯರು […]

ವಂಶಾಡಳಿತ, ಪ್ರಜಾತಂತ್ರ ಮತ್ತು ಜನಾಭಿಪ್ರಾಯ

ಲೇಖನಗಳು - 0 Comment
Issue Date :

ನಿತ್ಯದ ಜೀವನ ಕ್ರಮವು ಬಸ್‌ ಮೂಲಕ ನಿಲ್ದಾಣದವರೆಗೆ ಬರುವುದರಿಂದ ಶುರುವಾಗುತ್ತದೆ. ರಸ್ತೆಯಲ್ಲಿ ಅಲ್ಲಲ್ಲಿ ರಾಜಕೀಯದವರ ಹೋರ್ಡಿಂಗ್‌ ಹಾಕಿರುತ್ತಾರೆ. ನನಗೆ ಇಚ್ಛೆಯಿಲ್ಲದಿದ್ದರೂ ಅದನ್ನು ನೋಡಬೇಕಾಗುತ್ತದೆ. ಅಂತಹದೇ ಒಂದು ಹೋರ್ಡಿಂಗ್‌ ಶಿವಸೇನೆಯ 46ನೇ ವಿಧಿವರ್ಧಂತಿ ದಿನದ ನಿಮಿತ್ತ ಹಾಕಲಾಗಿತ್ತು. ಭಿತ್ತಿಪತ್ರದ ಮೇಲೆ ಶಿವಸೇನಾ ಪ್ರಮುಖ ಬಾಳ ಠಾಕ್ರೆ, ಕಾರ್ಯಾಧ್ಯಕ್ಷ ಉದ್ಧವ ಠಾಕ್ರೆ ಮತ್ತು ಯುವ ಪ್ರಮುಖ ಆದಿತ್ಯ ಠಾಕ್ರೆ ಈ ಮೂವರದ್ದೇ ಭಾವಚಿತ್ರಗಳಿದ್ದವು. ಈ ಮೂವರೆಂದರೆ ಶಿವಸೇನಾ ಎಂದು ಈ ಭಿತ್ತಿಪತ್ರ ಹೇಳುವಂತಿತ್ತು. ಅರಿವಿಲ್ಲದಂತೆಯೇ ನನ್ನ ಮನಸ್ಸು ಭೂತಕಾಲದ ಕಡೆ […]

ಮಿಂಚಿನ ಮಾತಿಗೆ ಕುಂಚದ ಉತ್ತರ

ಲೇಖನಗಳು - 0 Comment
Issue Date :

‘ಜಾತ್ಯತೀತತೆ’ಯಿಂದ ದೇಶ ಛಿದ್ರ

ಲೇಖನಗಳು - 3 Comments
Issue Date :

ರಾಷ್ಟ್ರಪತಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಾಗ, ಇನ್ನು 2 ವರ್ಷದ ಬಳಿಕ ದೇಶದ ಪ್ರಧಾನಿ ಯಾರಾಗಿರಬೇಕೆಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವುದು ಆಶ್ಚರ್ಯಕರ. ಜಾತ್ಯತೀತ ಮನೋಭಾವದ ವ್ಯಕ್ತಿಯೇ ಎನ್ಡಿಎ ಪ್ರಧಾನಿ ಅಭ್ಯರ್ಥಿ ಆಗಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿಡಿಸಿರುವ ಬಾಂಬ್ ದೇಶದಲ್ಲಿ ಪರ-ವಿರೋಧದ ಕಾವೇರಿದ ಚರ್ಚೆಯನ್ನು ಹುಟ್ಟುಹಾಕಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಆಗಲಿದ್ದಾರೆ ಎಂಬ ಊಹಾಪೋಹದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಇಂತಹದೊಂದು ಹೇಳಿಕೆಯನ್ನು ನೀಡಿರುವುದು ಸ್ಪಷ್ಟ. ಬಿಜೆಪಿ ಮೋದಿಯನ್ನು ಎನ್ಡಿಎ ಪ್ರಧಾನಿ […]

ಮಾರ್ಗದರ್ಶಕ ರಾಷ್ಟ್ರಪತಿ ಆಯ್ಕೆಯಾಗಲಿ

ಲೇಖನಗಳು - 0 Comment
Issue Date :

ಜುಲೈ 19ರಂದು ನಡೆಯಲಿರುವ 13ನೇ ರಾಷ್ಟ್ರಪತಿಯ ಆಯ್ಕೆಗೆ ಈಗ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಸಾಗಿವೆ. ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಪ್ರಣಬ್ ಮುಖರ್ಜಿ ಅವರನ್ನು ಅಂತಿಮವಾಗಿ ಆಯ್ಕೆ ಮಾಡಿದಾಗ ಉಳಿದೆಲ್ಲ ಪಕ್ಷಗಳೂ ಅವರನ್ನೇ ಬೆಂಬಲಿಸಬಹುದೆಂಬ ವಾತಾವರಣವಿತ್ತು. ಕಾಂಗ್ರೆಸ್ನ ಹಿರಿಯ ಮುಖಂಡ ಪ್ರಣಬ್ ಮುಖರ್ಜಿ ಒಬ್ಬ ನಿಷ್ಕಳಂಕ, ಸಮರ್ಥ ರಾಜಕಾರಣಿ ಎಂಬುದು ಅದಕ್ಕೆ ಕಾರಣವಾಗಿತ್ತು. ಆದರೆ ಇದೀಗ ಸಮಾಜವಾದಿ ಪಕ್ಷ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸದೆ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸೋಮನಾಥ ಚಟರ್ಜಿ – […]

ಕಾರ್ಯಕರ್ತರ ಕುರಿತು ಕಾಳಜಿವಹಿಸಿ; ದಿಲ್ಲಿಯ ಗದ್ದುಗೆ ನಿಮಗೆ ದಕ್ಕೀತು!

ಲೇಖನಗಳು - 0 Comment
Issue Date :

-ರಮೇಶ ಪತಂಗೆ ನಿತಿನ್ ಗಡ್ಕರಿಯವರು ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆಗೊಂಡಿರುವುದಕ್ಕೆ ಹಾರ್ದಿಕ ಅಭಿನಂದನೆ. ಮೂರು ವರ್ಷಗಳ ಹಿಂದೆ ಅವರು ಬಿಜೆಪಿ ಅಧ್ಯಕ್ಷ ಸ್ಥಾನದ ಹೊಣೆಗೆ ಹೆಗಲು ಕೊಟ್ಟಾಗಿನ ಪರಿಸ್ಥಿತಿ ಬಹು ನಾಜೂಕಾಗಿತ್ತು. ಬಿಜೆಪಿಯೊಳಗೆ ಭಾರೀ ಗೊಂದಲದ ವಾತಾವರಣವಿತ್ತು. ಅರುಣ್ ಶೌರಿಯವರಂತಹ ಬಿಜೆಪಿ ನಾಯಕರು ತಮ್ಮದೇ ಪಕ್ಷವನ್ನೂ, ವಿಶೇಷವಾಗಿ ಪಕ್ಷದ ಅಧ್ಯಕ್ಷರನ್ನೂ ಬಹಿರಂಗವಾಗಿ ಟೀಕಿಸುತ್ತಿದ್ದರು. ‘ಅಲಿಸ್ ಇನ್ ವಂಡರ್ಲ್ಯಾಂಡ್’ ಎಂಬ ಶೀರ್ಷಿಕೆಯ ಅವರ ಲೇಖನವು ಓದುಗರಿಗೆ ನೆನಪಿರಬಹುದು. ‘ಅಲಿಸ್ ಇನ್ ವಂಡರ್ಲ್ಯಾಂಡ್’ ಎಂಬುದು ಒಂದು ಪ್ರಸಿದ್ಧವಾದ ಅಪ್ಸರೆ ಕಥೆ. […]

ಹೇಡಿತನದ ಪರಮಾವಧಿ

ಲೇಖನಗಳು - 0 Comment
Issue Date :

ಉಗ್ರರ ನಿಗ್ರಹಕ್ಕಾಗಿ ನಮ್ಮ ಸೈನಿಕರ ದಾಳಿ ಮುಂದುವರಿಯಲಿದೆ ಎಂದು ಹೇಳಿದವರು ಮನಮೋಹನಸಿಂಗ್ ಖಂಡಿತ ಅಲ್ಲ. ಪಾಪ, ಸಿಂಗ್ ಇಂತಹ ಹೇಳಿಕೆಯನ್ನು ನೀಡುವ ಜಾಯಮಾನದವರೇ ಅಲ್ಲ. ಅವರೇನಿದ್ದರೂ ಆಸ್ಟ್ರೇಲಿಯಾದಲ್ಲಿ ಶಂಕಾಸ್ಪದ ಬಂಧನಕ್ಕೊಳಗಾದ ಭಾರತದ ಡಾ.ಹನೀಫ್ ಬಿಡುಗಡೆಗಾಗಿ ಕಣ್ಣೀರು ಸುರಿಸುವ ಸ್ವಭಾವದವರು! ಆದರೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಿಯೋನ್ ಪನೆಟ್ ಪಾಕಿಸ್ಥಾನದಲ್ಲಿರುವ ಅಲ್ ಖೈದಾ ಉಗ್ರರ ನಿಗ್ರಹಕ್ಕಾಗಿ ಡ್ರೋನ್ ದಾಳಿ ಮುಂದುವರಿಯಲಿದೆ ಎಂದು ಗುಡುಗಿದ್ದಾರೆ. ಪಾಕಿಸ್ಥಾನದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ದಾಳಿಯಲ್ಲಿ ಅಲ್ ಖೈದಾ ನಂ.2 ನಾಯಕ ಅಬುಯಾಹ್ಯ ಅಲ್-ಲಿಬಿ […]

ಇನ್ನು ಬದುಕು ಬಲು ದುಬಾರಿ

ಲೇಖನಗಳು - 0 Comment
Issue Date :

ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಕಳೆದ 8 ವರ್ಷಗಳಲ್ಲಿ ಇಂತಹ ದುಃಸ್ಥಿತಿ ಬಂದಿರುವುದು ಇದೇ ಮೊದಲ ಸಲ ಎಂದು ಪ್ರಧಾನಿ ಮನಮೋಹನಸಿಂಗ್ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿರುವುದು ಇದೇ ಕಾರಣಕ್ಕೆ. ಇಂತಹ ದುಃಸ್ಥಿತಿಯಿಂದ ಪಾರಾಗಲು ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರೀ ಸುಧಾರಣೆ ತಂದು, ಆ ಕ್ಷೇತ್ರಕ್ಕೆ 2 ಲಕ್ಷ ಕೋಟಿ ರೂ. ಬಂಡವಾಳ ಹರಿದುಬರುವಂತೆ ಮಾಡಬೇಕು. ತನ್ಮೂಲಕ ದೇಶದ ಅಭಿವೃದ್ಧಿ ದರವನ್ನು ಶೇ.9ಕ್ಕೆ ತಲುಪಿಸಬೇಕೆನ್ನುವುದು ಡಾ.ಸಿಂಗ್ ಅವರ ಕರೆ. ಕೇಳುವುದಕ್ಕೇನೋ ಇದು […]