ಗುಲಾಬಿ ಹೂವು ಆರೋಗ್ಯಕ್ಕಾಗಿ...

ಗುಲಾಬಿ ಹೂವು ಆರೋಗ್ಯಕ್ಕಾಗಿ…

ಲೇಖನಗಳು - 0 Comment
Issue Date :

-ಡಾ. ಶ್ರೀವತ್ಸ ಭಾರದ್ವಾಜ್ ಹೂವುಗಳಲ್ಲಿ ಅತ್ಯಂತ ಸುಲಭವಾಗಿ ದೊರಕುವ ಹೂವು ಎಂದರೆ ಗುಲಾಬಿ. ಈ ಹೂವನ್ನು ಕೇವಲ ಅಲಂಕಾರಕ್ಕಾಗಿ ಬಳಸುವುದನ್ನು ಕೇಳಿದ್ದೇವೆ. ಆದರೆ ಈ ಹೂವಿನ ಆರೋಗ್ಯವರ್ಧಕ ಹಾಗೂ ರೋಗನಾಶಕ ಗುಣಗಳ ಬಗ್ಗೆ ತಿಳಿದರೆ ಖಂಡಿತ ಬೆರಗಾಗುವಿರಿ. ಒಂದೊಮ್ಮೆ ಒಬ್ಬರು ನಮ್ಮ ಚಿಕಿತ್ಸಾಲಯಕ್ಕೆ ಕರೆಮಾಡಿ ‘ಡಾಕ್ಟರೇ ನನಗೆ ಮೂತ್ರಕೋಶದ ಸೋಂಕಾಗಿದೆ, ಮೂತ್ರ ಮಾಡಲು ತುಂಬಾ ಉರಿ-ನೋವಾಗುತ್ತಿದೆ. ನಾನು ರಜೆಗೆಂದು ದೂರದ ಊರಿನಲ್ಲಿದ್ದೇನೆ ಏನು ಮಾಡಲಿ. ನಾವಿರುವ ಜಾಗದಲ್ಲಿ ಬರೇ ಗುಲಾಬಿ ಕಾಣಿಸುತ್ತದೆ ಹೊರತು ಬೇರೆ ಯಾವ ಗಿಡ […]

ಹಿಂದು ಚಿಂತನೆಯ ವ್ಯಾಪಕತೆ

ಹಿಂದು ಚಿಂತನೆಯ ವ್ಯಾಪಕತೆ

ಲೇಖನಗಳು - 0 Comment
Issue Date :

– ಜಿ.ವಿ. ಪ್ರಭಾಕರ ರಾವ್ ವಿಶ್ವಕಲ್ಯಾಣವನ್ನು ಕುರಿತು ವಿಚಾರ ಮಾಡುವ ಪದ್ಧತಿ ಲೋಕದಲ್ಲಿ ಇದ್ದರೆ ಅದು ಏಕಮೇವ ‘ಹಿಂದುತ್ವ’ದಲ್ಲಿ ಮಾತ್ರ-ಹಿಂದುತ್ವ ಎಂಬುದು ಒಂದು ಜೀವನ ದರ್ಶನ. ಜೀವನ ಪದ್ಧತಿ. ಇದು ಮಾನವ ಸಮಾಜಕ್ಕೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳನ್ನು ವಿಶ್ಲೇಷಿಸಿ, ಸೂಕ್ತ ಪರಿಹಾರ ನೀಡುವುದು. ಸರ್‌ ಎಸ್. ರಾಧಾಕೃಷ್ಣನ್ ಹೇಳಿದಂತೆ – ಹಿಂದುತ್ವ ಎಂಬುದು ಒಂದು ಜೀವನ ಪದ್ಧತಿ. ಜೀವನವನ್ನು ಸುಂದರ ಹಾಗೂ ಸಂಪದ್‌ಭರಿತವಾಗಿ ಮಾಡಬಲ್ಲ ವಿಚಾರ ಪ್ರವಾಹ. ಒಂದು ಪರಂಪರೆ. ಎಲ್ಲವನ್ನು ಅಂದರೆ, ಮಾನವನಿಂದ ಮೊದಲ್ಗೊಂಡು ಪಶುಪಕ್ಷಿ […]

ದೇವರ ನಾಡಲ್ಲಿ ಕಂಡ ಮನುಷ್ಯರು ಜನರಕ್ಷಾ  ಯಾತ್ರೆ

ದೇವರ ನಾಡಲ್ಲಿ ಕಂಡ ಮನುಷ್ಯರು ಜನರಕ್ಷಾ ಯಾತ್ರೆ

ಲೇಖನಗಳು - 0 Comment
Issue Date :

ಕೇರಳ ರಾಜ್ಯವನ್ನು ‘ದೇವರ ನಾಡು’ ಎಂದು ಹೇಳುತ್ತಾರಾದರೂ ಹಲವು ದಶಕಗಳಿಂದ ಅಲ್ಲಿ ಕೇಳಿ ಬರುತ್ತಿರುವುದು ಹಿಂಸಾಚಾರದ ವಾರ್ತೆಗಳು. ಮುಗ್ಧ ಜನರಲ್ಲಿ ಎಡಪಂಥದ ಮೂಲಭೂತವಾದವನ್ನು ತುಂಬಿ ರಕ್ತದಾಹಿಗಳನ್ನಾಗಿ ಮಾಡುತ್ತಿರುವುದು ವಾಸ್ತವ. ಕಾಂಗ್ರೆಸ್, ಬಿಜೆಪಿ ಮಾತ್ರವಲ್ಲದೇ ತಮ್ಮ ಸರ್ವಾಧಿಕಾರವನ್ನು ಪ್ರಶ್ನಿಸುವ ಪ್ರತಿಯೊಬ್ಬರಿಗೂ ಹಿಂಸೆಯ ಮೂಲಕ ಉತ್ತರಿಸುತ್ತಿರುವ ಕಮ್ಯುನಿಸ್ಟ್ ಮತಾಂಧರನ್ನು ದೂರವಿಡುವಂತೆ ಕೇರಳದ ಜನರನ್ನು ಎಚ್ಚರಿಸುವ ಹೋರಾಟವೇ ‘ಜನರಕ್ಷಾ ಯಾತ್ರೆ’. ಕೈಯಲ್ಲಿ ಉದ್ದನೆಯ ಕೋಲು, ಹೆಗಲಿಗೊಂದು ಚೀಲ, ಕಾಲಲ್ಲಿ ಸ್ಪೋಟರ್‌ಸ್ ಶೂಸ್ ಹಾಕಿಕೊಂಡ ಹಿರಿಯರೊಬ್ಬರು ಆಗಲೇ ನಮ್ಮ ಜೊತೆ 23 ಕಿಲೋ […]

ಸ್ವದೇಶಿ : ಏಕಮಾತ್ರ ಸಾಧನೆ

ಸ್ವದೇಶಿ : ಏಕಮಾತ್ರ ಸಾಧನೆ

ಲೇಖನಗಳು - 0 Comment
Issue Date :

-ಕಾ.ಶ್ರೀ. ನಾಗರಾಜ  ‘ಭಾರತದ ಆತ್ಮವನ್ನು ನಿರ್ವೀರ್ಯಗೊಳಿಸದಿರಿ’  (‘ಸ್ವದೇಶೀ ಜಾಗರಣ ಮಂಚ್’ ಸಂಸ್ಥೆಯು ಚೀನಾ ಮತ್ತಿತರ ವಿದೇಶಗಳ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕರೆ ನೀಡಿರುವುದಲ್ಲದೆ ಸ್ವದೇಶೀ ವಸ್ತುಗಳೇ ಭಾರತಕ್ಕೆ ತಾರಕ ಎಂಬಂಶವನ್ನು ಜನಮಾನಸದಲ್ಲಿ ಬಿತ್ತಲು ವಿಶಾಲ ಪ್ರಮಾಣದ ಚಳುವಳಿಯನ್ನು 2017ರಲ್ಲಿ ಹೂಡಿಕೊಂಡಿದ್ದು 29.10.2017ರಂದು ದೆಹಲಿಯಲ್ಲಿ ಒಂದು ಬೃಹತ್ ರ‌್ಯಾಲಿಯನ್ನು ಹಮ್ಮಿಕೊಂಡಿದೆ. ‘ಸ್ವದೇಶಿ’ ಚೇತನವು ಆರ್ಥಿಕ ರಂಗಕ್ಕೇ ಸೀಮಿತವಾದುದಲ್ಲ ಎಂಬುದನ್ನು ನೆನಪಿಸುವ ಸಲುವಾಗಿ ಈ ಲೇಖನವನ್ನು ಮುಂದಿಡಲಾಗಿದೆ) ಸ್ವದೇಶಿ ಎಂದರೇನು? ಅದರ ಒಳಾರ್ಥ ಮತ್ತು ವಿಶಾಲ ನೈಜ ಸಂಕೇತಗಳೇನು? ಎಂಬುದರ […]

ಕಾರ್ಪೊರೇಟ್ ಕಂಪನಿಗಳಿಗೆ ಸಿಲುಕದಿರಲಿ ದೇಶೀಯ ವ್ಯಾಪಾರ

ಕಾರ್ಪೊರೇಟ್ ಕಂಪನಿಗಳಿಗೆ ಸಿಲುಕದಿರಲಿ ದೇಶೀಯ ವ್ಯಾಪಾರ

ಲೇಖನಗಳು - 0 Comment
Issue Date :

-ಮಹದೇವಯ್ಯ ಕರದಳ್ಳಿ ಪಾರಂಪರಿಕ ವೈಶಿಷ್ಟ್ಯಪೂರ್ಣ ದೇಶೀಯ ವ್ಯಾಪಾರವನ್ನು ಸರ್ಕಾರ ಕಾರ್ಪೋರೇಟ್ ಕಂಪನಿಗಳಿಂದ ರಕ್ಷಿಸಬೇಕು. ನಗರ, ಗ್ರಾಮಗಳ ಓಣಿಗಳಲ್ಲಿ, ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಪ್ರವೇಶ ಮಾಡಿದರೆ ಬಹುತೇಕ ಅಂಗಡಿಗಳಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿಯಲ್ಲಿರುವ ದೇವರ ಭಾವಚಿತ್ರದ ಮುಂದೆ ದೀಪ, ಊದುಬತ್ತಿ ಹಚ್ಚಿ ಕೈಮುಗಿದು ವ್ಯಾಪಾರ ಆರಂಭಿಸುವ ದೃಶ್ಯ ಕಾಣುತ್ತಿತ್ತು. ತಮ್ಮ ಅಂಗಡಿಗೆ ಬರುವ ಗ್ರಾಹಕರ ಹೆಸರಿನ ಜೊತೆ ಮಾಮಾ, ಕಾಕಾ, ಅಣ್ಣ, ಅಕ್ಕ, ಅವ್ವ ಅಂತ ವಯಸ್ಸಿಗೆ, ಸ್ಥಾನಮಾನಕ್ಕೆ ತಕ್ಕಂತೆ ಸಂಬಂಧಸೂಚಕ ಪ್ರತ್ಯಯ ಹಚ್ಚಿ ಕರೆದು […]

ನಂಬಲಾಗದ್ದು  ಆದರೆ ಸತ್ಯ

ನಂಬಲಾಗದ್ದು  ಆದರೆ ಸತ್ಯ

ಲೇಖನಗಳು - 0 Comment
Issue Date :

-ಮುಜಫ್ಫರ್ ಹುಸೇನ್ ಚೀನದಲ್ಲಿ ‘ಮೊಹಮ್ಮದ್’ ಮತ್ತು ‘ಜಿಹಾದ್’ ಶಬ್ದಗಳಿಗೆ ನಿಷೇಧ ಪಶ್ಚಿಮ ರಾಜ್ಯ ಸಿಂಕ್ಯಾಂಗ್‌ನಲ್ಲಿ ವೈಷಮ್ಯಕ್ಕೆ ಪ್ರತ್ಯೇಕತಾವಾದಿಗಳು ಹೊಣೆಯೆಂದು ಚೀನ ಭಾವಿಸಿದೆ. ಕಳೆದ ವರ್ಷ ಈ ಘರ್ಷಣೆಯಲ್ಲಿ ಅನೇಕ ಜನರನ್ನು ಹತ್ಯೆಮಾಡಲಾಗಿದೆ. ಇತ್ತೀಚೆಗೆ ಪಶ್ಚಿಮ ಸಿಂಕ್ಯಾಂಗ್‌ನಲ್ಲಿ ಹಿಂಸಾಚಾರದ ತಾಂಡವವೆದ್ದಿದೆ. ಇದಕ್ಕೆ ಚೀನಾವು ಪೂರ್ವ ತುರ್ಕಿಸ್ತಾನದ ಜನರನ್ನು ಹೊಣೆಯಾಗಿಸಿದೆ. ಪ್ರತ್ಯೇಕತಾವಾದಿಗಳು ಈ ಪ್ರದೇಶದಲ್ಲಿ ಒಂದು ನೂತನ ದೇಶವನ್ನು ನಿರ್ಮಿಸುವ ಕನಸು ಕಾಣುತ್ತಿದ್ದಾರೆಂದು ಅದು ಭಾವಿಸಿದೆ. ಇಸ್ಲಾಂ ಮತದ ಪ್ರವರ್ತಕ ಪೈಗಂಬರ್ ಹಜರತ್ ಮೊಹಮ್ಮದ್ ಅವರ ಪವಿತ್ರ ಹೆಸರನ್ನು ಯಾವುದೇ […]

ಛಲವೊಂದಿದ್ದರೆ ಸಾಕಲ್ಲವೇ ಸಾಧಿಸುವುದಕ್ಕೆ

ಛಲವೊಂದಿದ್ದರೆ ಸಾಕಲ್ಲವೇ ಸಾಧಿಸುವುದಕ್ಕೆ

ಲೇಖನಗಳು - 0 Comment
Issue Date :

-ಮನೋಜ್ ಕುಮಾರ್ ಕೆ.ಬಿ. ತನ್ನ ಏಳನೇ ವರ್ಷದಲ್ಲಿ ಹೈ ಫಿವರ್ ಜ್ವರ ಬಂದು, ಪೆನ್ಸಿಲಿನ್ ಇಂಜಕ್ಷನ್‌ನಿಂದ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ರಾಘವೇಂದ್ರರವರು ಇಂದು ‘ಬಾಡಿ ಬಿಲ್ಡರ್’ ಆಗಿ ಹಾಗೂ ‘ಪ್ಯಾರಾ ಒಲಿಂಪಿಕ್ ಅಥ್ಲೆಟಿಕ್ಸ್’ನಲ್ಲಿ ‘ಏಷಿಯನ್ ಗೇಮ್’ಗೆ ಸೆಲೆಕ್ಟ್ ಆಗಿ ಯಾರ ಹಣಕಾಸಿನ ಬೆಂಬಲ ಇಲ್ಲದೇ ಮುನ್ನುಗ್ಗುತ್ತಿದ್ದಾರೆ. ರಾಘವೇಂದ್ರ ಪಿ.ರವರು 1984 ಜ. 4ರಂದು, ಲೇ. ಪುಟ್ಟಸ್ವಾಮಯ್ಯ ಹಾಗೂ ಶಾಂತಮ್ಮನವರ ಎರಡನೇ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ಇವರದು ಮಧ್ಯಮವರ್ಗದ ಕುಟುಂಬ. ಇವರ ತಂದೆ ಸರ್ಕಾರದ ‘ಡ್ರಗ್ಸ್ ಕಂಟ್ರೋಲ್ […]

ಉಲ್ಲಾಳ ಮತ್ತು ಉಪ್ಪಳ ಕಡಲ ತೀರದ ಮಾಫಿಯಾ ಕೇಂದ್ರಗಳು

ಉಲ್ಲಾಳ ಮತ್ತು ಉಪ್ಪಳ ಕಡಲ ತೀರದ ಮಾಫಿಯಾ ಕೇಂದ್ರಗಳು

ಲೇಖನಗಳು - 0 Comment
Issue Date :

-ಸಂತೋಷ್ ತಮ್ಮಯ್ಯ  ಕಾಸರಗೋಡು ಕೇರಳದ ಪಾಲಾದರೂ ಇಂದಿಗೂ ಕಾಸರಗೋಡು ಕನ್ನಡಿಗರ ಮನಸ್ಸು ಬೇರೂರಿರುವುದು ತುಳುನಾಡಿನಲ್ಲೇ. ಇಂಥ ತುಳುನಾಡಿನಲ್ಲಿ ಪೋರ್ಚುಗೀಸರ ಕಾಲದಲ್ಲಿ ಒಂದು ಸಣ್ಣ ವ್ಯಾಪಾರ ಕೇಂದ್ರವಾಗಿದ್ದ ಪೇಟೆ ಉಪ್ಪಳ. ಮಂಗಳೂರು-ಕಾಸರಗೋಡು ಮಧ್ಯದ ಕುಂಬ್ಳೆಯ ಸಮೀಪದ ಊರು ಈ ಉಪ್ಪಳ. ಮಂಗಳೂರಿನ ಮುಖಾಂತರ ಕೇರಳವನ್ನು ಪ್ರವೇಶಿಸುವಾಗ ಸಿಗುವ ಮೊದಲ ಪೇಟೆ ಮಂಜೇಶ್ವರವಾದರೂ, ಕೇರಳ ರಾಜಕೀಯದ ಬಹುತೇಕ ರ‌್ಯಾಲಿಗಳು, ಯಾತ್ರೆಗಳು ಪ್ರಾರಂಭವಾಗುವುದು ಇದೇ ಉಪ್ಪಳದಿಂದ. ಹೀಗೆ ಉಪ್ಪಳ ಪೇಟೆ ಸಾಕಷ್ಟು ರಾಜಕೀಯ ಯಾತ್ರೆಗಳು, ಕಾಲ್ನಡಿಗೆಗಳು, ಭಾಷಣಗಳನ್ನು ಕಂಡಿದೆ. ಒಂದು ಕಾಲದಲ್ಲಿ […]

ಸಾರಾ ಕಾಮ್ ಅಲ್ಲಾ ಕೇ ನಾಮ್

ಸಾರಾ ಕಾಮ್ ಅಲ್ಲಾ ಕೇ ನಾಮ್

ಲೇಖನಗಳು - 0 Comment
Issue Date :

ಕರ್ನಾಟಕ ವಕ್ಫ್ ಬೋರ್ಡ್‌ನಲ್ಲಿ ಬಹುಕೋಟಿ ಹಗರಣ? ಪ್ರತಿಷ್ಠಿತ ರಾಜಕಾರಣಿಗಳು ಭಾಗಿ? 2012ನೇ ಇಸವಿ ಮಾರ್ಚ್ 26ರಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ, ರಾಜ್ಯದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸದಾನಂದ ಗೌಡರನ್ನು ಅವರ ಗೃಹಕಚೇರಿಯಲ್ಲಿ ಭೇಟಿಯಾಗಿ ಒಂದು ವರದಿಯನ್ನು ಸಲ್ಲಿಸಿದರು. ಸುಮಾರು 7000 ಪುಟಗಳಷ್ಟು ಬೃಹತ್ತಾಗಿದ್ದ ಆ ದಾಖಲೆಯಲ್ಲಿ ಅಷ್ಟೇ ಬೃಹತ್ತಾದ ಒಂದು ಹಗರಣದ ಬಗ್ಗೆ ವಿವರಗಳಿದ್ದವು. ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ ಮೇಲೆ ಪತ್ರಿಕಾ ಪ್ರತಿನಿಧಿಗಳ ಜೊತೆ ಮಾತಾಡಿದ ಮಾಣಿಪ್ಪಾಡಿಯವರು ಆ ವರದಿ ರಾಜ್ಯದ […]

ತನಗೆ ಕಣ್ಣು ಕಾಣದೇ ಇದ್ದರೂ  ನೂರಾರು ಜನರಿಗೆ ಕಣ್ಣಾಗಿದ್ದಾರೆ

ತನಗೆ ಕಣ್ಣು ಕಾಣದೇ ಇದ್ದರೂ ನೂರಾರು ಜನರಿಗೆ ಕಣ್ಣಾಗಿದ್ದಾರೆ

ಲೇಖನಗಳು - 0 Comment
Issue Date :

-ಮನೋಜ್ ಕುಮಾರ್ ಕೆ.ಬಿ. ದೇವರೆಡ್ಡಿ ಎನ್. ಚಿಂಚಳಿಯವರು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಯಲವಟ್ಟಿ ಗ್ರಾಮದಲ್ಲಿ 1968 ಜೂ.10ರಂದು ಬಡ ರೈತಕುಟುಂಬದಲ್ಲಿ ನಾಲ್ಕನೇ ಮಗನಾಗಿ ಜನಿಸಿದರು. ಹುಟ್ಟಿನಿಂದಲೇ ಅಂಧರಾದ ಇವರು ಮನೆಯವರ ಪಾಲಿಗೆ ಬೇಡವಾಗಿದ್ದರು. ಇತ್ತ ಇವರಿಗೆ ಒಂಭತ್ತು ವರ್ಷವಾಗಿದ್ದಾಗ, ಇವರ ತಾಯಿಯೂ ಕಾಲವಾದರು. ನಂತರ ದೇವರೆಡ್ಡಿಯವರ ಪಾಡು ಕಾಲಕಸವಾದಂತಾಯಿತು. ಊಟ-ತಿಂಡಿ ಇಲ್ಲದೆ ಇವರ ಯೋಗಕ್ಷೇಮವನ್ನು ಯಾರೂ ಗಮನಿಸುವವರೇ ಇಲ್ಲದೆ ಬಡವಾದರು. ಈ ಮಗುವಿನ ಗೋಳನ್ನು ಯಾರೂ ಕೇಳುವವರೇ ಇರಲಿಲ್ಲ. ಮುಂದೆ ಯಾರದೋ ಪರಿಚಯದಿಂದ 10ನೇ ವರ್ಷದಲ್ಲಿ […]