ಪಿ.ಜಿ.ಆರ್.ಸಿಂಧ್ಯಾ ನಿಮಗೇಕೆ ಚೀನಾ ಪ್ರೀತಿ?

ಪಿ.ಜಿ.ಆರ್.ಸಿಂಧ್ಯಾ ನಿಮಗೇಕೆ ಚೀನಾ ಪ್ರೀತಿ?

ಲೇಖನಗಳು - 0 Comment
Issue Date :

-ವೃಷಾಂಕ ಕಳೆದ ಶನಿವಾರ, ಎಂದರೆ 9ನೇ ತಾರೀಖಿನಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಇಂಡೋ-ಚೈನಾ ಫ್ರೆಂಡ್‌ಶಿಪ್ ಅಸೋಸಿಯೇಶನ್ (ICFO) ಎಂಬ ಸಂಸ್ಥೆಯು ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಪಿ.ಜಿ.ಆರ್.ಸಿಂಧ್ಯಾ ಉಪಸ್ಥಿತರಿದ್ದರು. ಸಿಂಧ್ಯಾ ಅವರೇ ಸಂಸ್ಥೆಯ ಅಖಿಲ ಭಾರತೀಯ ಅಧ್ಯಕ್ಷರು! ಆರೋಗ್ಯ ಸಚಿವ ರಮೇಶ್ ಕುಮಾರ್ ಭಾಗವಹಿಸುವುದಾಗಿ ತಿಳಿಸಿದ್ದರೂ ಅವರು ಬಂದಿರಲಿಲ್ಲ! ಮುಂಬೈನಲ್ಲಿರುವ ಚೀನಾ ರಾಯಭಾರ ಕಚೇರಿಯ ಅಧಿಕಾರಿಗಳೂ ವೇದಿಕೆಯಲ್ಲಿದ್ದರು. ಇವರೆಲ್ಲ ಸೇರಿರುವುದು ಉಭಯ ದೇಶಗಳ ಸ್ನೇಹ ಬೆಸೆಯಲು ಎಂದುಕೊಂಡರೆ ನಮ್ಮ ಮೂರ್ಖತನವಾದೀತು. ಭಾರತದ ಸುರಕ್ಷತೆಗೆ ಧಕ್ಕೆಯುಂಟುಮಾಡುತ್ತದೆ ಎಂದು […]

ಸತ್ಕಾರ್ಯಕ್ಕೆ ದೇಹವೇ ಮಾಧ್ಯಮ

ಸತ್ಕಾರ್ಯಕ್ಕೆ ದೇಹವೇ ಮಾಧ್ಯಮ

ಲೇಖನಗಳು - 0 Comment
Issue Date :

-ಡಾ. ಹೆಚ್. ಪಾಂಡುರಂಗ ವಿಠಲ ಮೈಸೂರಿನಲ್ಲಿ 1941ರಲ್ಲಿ ಸ್ಥಾಪಿತವಾಗಿ ಇನ್ನೂ ನಡೆದುಕೊಂಡು ಬರುತ್ತಿರುವ ಅಪೋಲೋ ವ್ಯಾಯಾಮಶಾಲೆಯ ಮಾಲೀಕರು ಶ್ರೀ ವೈ. ನಾಗೇಶರಾವ್.  ತನ್ನಲ್ಲಿಗೆ ಬಂದ ಎಲ್ಲರ ದೇಹರಚನೆ, ಬಿಎಂಐ, ಮೂಳೆಯ ಗಟ್ಟಿತನ ಎಲ್ಲವನ್ನೂ ಗಮನಿಸಿ, ವೈಜ್ಞಾನಿಕವಾಗಿ ವ್ಯಾಯಾಮ ಕಲಿಸುವ ಅಪರೂಪದ ವ್ಯಕ್ತಿ ಇವರು.  ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಸ್ವಂತದ ಹಳೆಯ ಕಟ್ಟಡವೊಂದರಲ್ಲಿ ದಿನವೂ ಬೆಳಿಗ್ಗೆ ಐದರಿಂದ ಒಂಬತ್ತು ಗಂಟೆಯ ವರೆಗೆ, ಸಂಜೆ ಐದರಿಂದ ಎಂಟರವರೆಗೆ ಎಂಬತ್ತು ವರ್ಷದ ಶ್ರೀ ನಾಗೇಶರಾಯರು ಅವರವರ ದೇಹದ ಅಗತ್ಯಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ವ್ಯಾಯಾಮ […]

ವಿಶಿಷ್ಟ ಸಂವಿಧಾನ

ವಿಶಿಷ್ಟ ಸಂವಿಧಾನ

ಲೇಖನಗಳು - 0 Comment
Issue Date :

-ಮಾ.ಕೆ. ಶಂಕರ್ ದಿ. 26.11.2017 ರಂದು ಭಾರತದ ಎಲ್ಲ ಕಡೆಗಳಲ್ಲಿ ಸಂವಿಧಾನ ಕುರಿತು ಕಾರ್ಯಕ್ರಮಗಳು ನಡೆದವು. ವಿಶ್ವದ ಎಲ್ಲರಿಗೂ ಅನ್ವಯವಾಗುವ ಅಂಶಗಳನ್ನು ಭಾರತದ ಸಂವಿಧಾನವು ಒಳಗೊಂಡಿದೆ. ಎಲ್ಲಾ ಸಮಯಗಳಲ್ಲಿ ಸೂಕ್ತವಾದ ಮಾರ್ಪಾಟು ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸರ್ವಮಾನ್ಯ, ಸರ್ವಸಮಾವೇಶಕ ಸಂವಿಧಾನದ ವಿಶೇಷತೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ’ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪಾಲಿಗೆ ಬಂದ ಕರ್ತವ್ಯ ಅಥವಾ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದರೆ ಅವನು ಜೀವನದಲ್ಲಿ ಸಾಫಲ್ಯವನ್ನು ಪಡೆಯುತ್ತಾನೆ. (ಭಗವದ್ಗೀತೆ – […]

ಲವ್ ಜಿಹಾದ್ ಇನ್ನಷ್ಟು ಅಖಿಲೆಯರು ಹಾದಿಯಾ ಆಗದಿರಲಿ

ಲವ್ ಜಿಹಾದ್ ಇನ್ನಷ್ಟು ಅಖಿಲೆಯರು ಹಾದಿಯಾ ಆಗದಿರಲಿ

ಲೇಖನಗಳು - 0 Comment
Issue Date :

-ರಾಧಾಕೃಷ್ಣ ಹೊಳ್ಳ ಕೇರಳದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಇಂತಹ ಒಂದು ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದು ಪ್ರೀತಿಯ ನಾಟಕವಾಡಿ ಹಿಂದು ಹೆಣ್ಣು ಮಕ್ಕಳನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳು ಪ್ರಯತ್ನಗಳು ಮುಸ್ಲಿಂ ಹುಡುಗರಿಂದ ನಡೆಯುತ್ತಲೇ ಇವೆ. ಹಿಂದು ಪೋಷಕರು ಎಚ್ಚರಗೊಳ್ಳದ ಹೊರತು ಇದಕ್ಕೆ ತಡೆ ಹಾಕುವುದು ಕಷ್ಟ ಸಾಧ್ಯ. ನಮ್ಮ ನಮ್ಮ ಮನೆಯ ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗದಂತೆ ತಡೆಯಲು ನಾವೇನು ಮಾಡಬಹುದೆಂಬ ಬಗ್ಗೆ ಕೆಲವು ಅಂಶಗಳೂ ಇಲ್ಲಿವೆ. ಲವ್ ಜಿಹಾದ್ ವಿಷಯದಲ್ಲಿ ಕೇರಳ ಮತ್ತೆ ಸುದ್ದಿ ಮಾಡಿದೆ. ಹಾದಿಯಾ […]

ನಾವೇಕೆ ಋಷಿಗಳನ್ನು ಮರೆಯುತ್ತಿದ್ದೇವೆ?

ನಾವೇಕೆ ಋಷಿಗಳನ್ನು ಮರೆಯುತ್ತಿದ್ದೇವೆ?

ಲೇಖನಗಳು - 0 Comment
Issue Date :

-ಪ್ರೊ. ರಾಮಚಂದ್ರ ಜಿ.ಭಟ್ಟ ವೈದಿಕಯೋಗ- ಯಜ್ಞಗಳು ವಿಶ್ವಜನೀನವಾಗುತ್ತಿರುವ ಸಂಧಿಕಾಲದಲ್ಲಿ ವೈದಿಕರು ಅಲ್ಪಸಂಖ್ಯಾತರಾಗಬೇಕಿಲ್ಲ ಒಂದೆಡೆ ವಿದ್ವಾಂಸರ ವಿದ್ವತ್‌ಸಂವಾದ, ಸಂಶೋಧನೆ ಇತ್ಯಾದಿ ನಡೆಯುತ್ತಿದ್ದರೆ ಇನ್ನೊಂದೆಡೆ ಕುಡಿದುಕುಣಿಯುತ್ತಿರುವವರ ವಿಕಟಾಟ್ಟಹಾಸ. ಒಂದೆಡೆ ಸುಮಧುರ ವೀಣಾನಾದವಾದರೆ ಇನ್ನೊಂದೆಡೆ ದುಃಖದುಮ್ಮಾನದ ಅಳಲು. ಒಂದೆಡೆ ವಿಶ್ವಸುಂದರಿಯರ ಪ್ರದರ್ಶನವಾದರೆ ಇನ್ನೊಂದೆಡೆ ಕೊಳಚೆ ಕುರೂಪದ ದೃಶ್ಯ. ಏನು ಹೇಳೋಣ? ಈ ಸಂಸಾರ ವಿಷಮಯವೇ? ಅಮೃತಮಯವೇ? ಎಂಬ ವಿರುದ್ಧ ದೃಶ್ಯದ ವರ್ಣನೆಯನ್ನು ಮುಂದಿಡುವ ಸುಭಾಷಿತ ಸಂಸ್ಕೃತದಲ್ಲಿ ಪ್ರಸಿದ್ಧವಿದೆ.  ನಮ್ಮ ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ಕೌಟುಂಬಿಕ ಮುಂತಾದ ಕ್ಷೇತ್ರಗಳಲ್ಲಿ ಈಗಿತ್ತ […]

ಅಪ್ರತಿಮ ಜೋಡಿ

ಅಪ್ರತಿಮ ಜೋಡಿ

ಲೇಖನಗಳು - 0 Comment
Issue Date :

-ಶಶಾಂಕ ದ್ವಿವೇದಿ ಭಾರತವು ಸುಖೋಯಿ-30 ಎಂ ಕೆ ಐ ಯಿಂದ ಬ್ರಹ್ಮೋಸ್‌ನ ಯಶಸ್ವಿ ಪರೀಕ್ಷೆಮಾಡಿ ಜಗತ್ತನ್ನು ದಂಗಾಗಿಸಿದೆ. ಈ ಪ್ರಯೋಗಕ್ಕಾಗಿ ಸುಖೋಯಿನಲ್ಲಿ ವಿಶೇಷ ಬದಲಾವಣೆ ಮಾಡಲಾಯಿತು. ಸುಖೋಯಿ ಮತ್ತು ಬ್ರಹ್ಮೋಸ್‌ನ ಜುಗಲಬಂದಿಯು ಈಗ ಘಾತಕವಾಗಿಬಿಟ್ಟಿದೆ. ಈ ಕ್ಷಿಪಣಿಯ ಮಾರಕ ಕ್ಷಮತೆಯು 300 ಕಿ.ಮೀ.ಇದ್ದರೆ, ಸುಖೋಯಿಯಿಂದ ಹಾರಿಸಿದರೆ ಈ ಕ್ಷಮತೆಯು 400 ಕಿ.ಮೀ.ವರೆಗೆ ಅಧಿಕವಾಗುತ್ತದೆ.  ಭಾರತವು ಸುಖೋಯಿ ಯುದ್ಧವಿಮಾನದಿಂದ ಸೂಪರ್‌ಗಾನಿಕ್ ಕ್ರೂಜ್ ಕ್ಷಿಪಣಿ ‘ಬ್ರಹ್ಮೋಸ್’ನಾ ಯಶಸ್ವಿ ಪರೀಕ್ಷೆ ನಡೆಸಿ ಭಾರೀ ಸಾಮರಿಕ ದಾಖಲೆ ಸ್ಥಾಪಿಸಿದೆ. ಬ್ರಹ್ಮೋಸನ್ನು ಜಗತ್ತಿನ ಎಲ್ಲಕ್ಕೂ […]

ಚಳಿಗಾಲದ ಹಣ್ಣು ಮುಸಂಬಿ

ಚಳಿಗಾಲದ ಹಣ್ಣು ಮುಸಂಬಿ

ಲೇಖನಗಳು - 0 Comment
Issue Date :

ಡಾ. ಶ್ರೀವತ್ಸ ಭಾರದ್ವಾಜ್ ಮುಸಂಬಿ ಲಿಂಬೆಯ ಜಾತಿಗೆ ಸೇರಿದ ಹಣ್ಣು. ಇದು ಮೂಲ ಭಾರತದ್ದೇ ಆದ ಹಣ್ಣು. ಇದರ ರುಚಿ ಸಿಹಿ ಮಿಶ್ರಿತ ಹುಳಿ ಇರುವ ಕಾರಣ ಸಿಹಿ-ಲಿಂಬೆ ಎಂದೂ ಕರೆಯಲಾಗುತ್ತದೆ. ಈ ಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಚಳಿಗಾಲದಲ್ಲಿ ಇದರ ಬಳಕೆ ನಮ್ಮನ್ನು ಹಲವಾರು ಸಮಸ್ಯೆಗಳಿಂದ ಪಾರುಮಾಡುತ್ತದೆ. ಈ ಹಣ್ಣು ಸುಲಭವಾಗಿ ಜೀರ್ಣವಾಗುತ್ತದೆ. ಈ ಹಣ್ಣು ನಮ್ಮ ಜೀರ್ಣಾಳದ ಪಚನಕ್ರಿಯೆಯನ್ನು ಚುರುಕುಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗಾಗಿ ಈ ಹಣ್ಣನ್ನು ಜ್ವರ ಬಂದಾಗ ತಿಂದರೆ ಜ್ವರವು ಶೀಘ್ರ […]

ಪರಿಸರ ಉಳಿಸಲು ಇವಿಷ್ಟನ್ನು ಪಾಲಿಸಿ

ಪರಿಸರ ಉಳಿಸಲು ಇವಿಷ್ಟನ್ನು ಪಾಲಿಸಿ

ಲೇಖನಗಳು - 0 Comment
Issue Date :

-ಸತ್ಯನಾರಾಯಣ ಶಾನಭಾಗ ಪರಿಸರ ಹಾಳಾಗಲಿ ಎಂದು ಯಾರೂ ಬಯಸುವುದಿಲ್ಲ. ಆದರೂ ದಿನನಿತ್ಯದ ವ್ಯವಹಾರದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೂ ಪರಿಸರ ಕೆಡುವುದಕ್ಕೆ ಅಷ್ಟಿಷ್ಟು ವಂತಿಗೆ ಕೊಡುತ್ತಲೇ ಇರುತ್ತೇವೆ. ಇತ್ತೀಚೆಗೆ ಇಡೀ ನಗರವೇ ಗ್ಯಾಸ್‌ ಛೇಂಬರ್‌ನಂತಾದ ನವದೆಹಲಿಯ ಪರಿಸ್ಥಿತಿ ನಮ್ಮಲ್ಲಿಯೂ ಉಂಟಾಗುವ ಮೊದಲು ಎಚ್ಟೆತ್ತುಕೊಳ್ಳುವುದು ಅಗತ್ಯ. ಪರಿಸರ ರಕ್ಷಣೆ ಕೇವಲ ಸರ್ಕಾರದ ಅಥವಾ ಪರಿಸರ ಹೋರಾಟಗಾರರ ಕೆಲಸವಲ್ಲ. ಮತ್ತು ಇದು ಕ್ರಿಯಾತ್ಮಕವಾಗುವುದರಿಂದ ಸಾಧ್ಯವೇ ಹೊರತು ಕೇವಲ ಭಾಷಣ ಸೆಮಿನಾರುಗಳಿಂದಲ್ಲ. ಪರಿಸರ ಹಾಳಾಗದಂತೆ ಉಳಿಸುವ ಕೆಲಸದಲ್ಲಿ ನಾವೂ ಒಂದಿಷ್ಟು ಕೈಜೋಡಿಸಬೇಕಾದುದು ಇಂದಿನ […]

ಶಶಿ ಕಪೂರ್ ಕೊನೆಗೆ ಉಳಿದಿದ್ದು ಆ ಮಂದಹಾಸ

ಶಶಿ ಕಪೂರ್ ಕೊನೆಗೆ ಉಳಿದಿದ್ದು ಆ ಮಂದಹಾಸ

ಲೇಖನಗಳು - 0 Comment
Issue Date :

-ಕ್ರಿಶ್ ಜೋಷಿ ಡಿಸೆಂಬರ್ 4, 2017 ರಂದು, 79ರ ವಯಸ್ಸಿನಲ್ಲಿ ಶಶಿ ಕಪೂರ್ ಇಹಲೋಕವನ್ನು ತ್ಯಜಿಸಿದರು. ಕೇಳಿದಾಗ ಜನರ ಮನಸ್ಸಿನಲ್ಲಿ ದುಗುಡವಿರಲಿಲ್ಲ. ಸಂತೃಪ್ತ ಜೀವನ ನಡೆಸಿ ಹೋದ ಮನುಷ್ಯನಿಗೆ ಪರಲೋಕದಲ್ಲಿ ಒಳ್ಳೆಯದಾಗಲಿ ಅನ್ನೋ ಮನೋಭಾವದಿಂದ ಇಡೀ ದಿನ ಟಿವಿ ಮುಂದೆ ಕುಳಿತು ನೋಡಿದಾಗ ಯಾವುದೋ ರಾಜಕಾರಣಿಯ ಸಾವಿನ ಅಬ್ಬರವಿರಲಿಲ್ಲ. ಸರಕಾರ, ಸಾವನ್ನು ಸಂಭ್ರಮಿಸಿದರು’ ಎಂದು ಜನರ ಮೇಲೆ ಕೇಸ್ ಹಾಕುವ ಪ್ರಮೇಯ ಬರಲಿಲ್ಲ. ಶಶಿ ಕಪೂರ್ ಬದುಕು ಅಂಥದ್ದಲ್ಲ. ಬದುಕು, ಬದುಕಲು ಬಿಡು ಅನ್ನುವ ಸರಳ ಮಂತ್ರವೊಂದನ್ನು […]

ಸೇವಾ ಸಂಗಮ 2017 - ಹುಬ್ಬಳ್ಳಿ

ಸೇವಾ ಸಂಗಮ 2017 – ಹುಬ್ಬಳ್ಳಿ

ಲೇಖನಗಳು - 0 Comment
Issue Date :

-ಅಮೃತ್ ಜೋಷಿ ರಾಷ್ಟ್ರೀಯ ಸೇವಾ ಭಾರತಿ ಹಾಗೂ ಸೇವಾ ಭಾರತಿ ಟ್ರಸ್ಟ್-ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಸೇವಾ ಸಂಗಮ 2017 (ಡಿ.1,2,3) ರಂದು ಹುಬ್ಬಳ್ಳಿಯ ಗೋಕುಲ್ ಗಾರ್ಡನ್‌ನಲ್ಲಿ ನಡೆಯಿತು. ಕರ್ನಾಟಕದಲ್ಲಿ ಸೇವಾ ಭಾರತಿ ಹಾಗೂ ಸಂಲಗ್ನಗೊಂಡ ಸೇವಾ ಸಂಸ್ಥೆಗಳ ಈ ಸಂಗಮದಲ್ಲಿ ಸೇವಾ ಪ್ರದರ್ಶನ, ಸೇವಾ ಚಿಂತನ, ಅನುಭವ ಹಂಚಿಕೆ, ಪ್ರಶಿಕ್ಷಣ, ಸಾಧಕರ ಸನ್ಮಾನ ಮುಂತಾದ ಕಾರ್ಯಕ್ರಮಗಳು ನಡೆದವು. ಸೇವಾ ಸಂಗಮವನ್ನು ಗಿಡಕ್ಕೆ ನೀರುಣಿಸಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಉದ್ಘಾಟಿಸಿದ ಪುದುಚೇರಿಯ ಲೆ. ಗವರ್ನರ್ […]