ಸ್ವಲ್ಪ ಸ್ನಾನ ಮಾಡಿ ಪ್ಲೀಸ್!

ಸ್ವಲ್ಪ ಸ್ನಾನ ಮಾಡಿ ಪ್ಲೀಸ್!

ಲೇಖನಗಳು - 0 Comment
Issue Date :

-ಡಾ. ಶ್ರೀವತ್ಸ ಭಾರದ್ವಾಜ್ ಇತ್ತೀಚಿನ ದಿನಗಳಲ್ಲಿ ಪರಿಸರ ಶುಚಿತ್ವಕ್ಕೆ ಮಹತ್ವ ಸಿಗುತ್ತಿದೆ. ಪರಿಸರ ಶುಚಿ ಇದ್ದಲ್ಲಿ ವಾತಾವರಣ ಶುದ್ಧವಿರುತ್ತದೆ. ಈ ಶುದ್ಧವಾದ ವಾತಾವರಣದಲ್ಲಿ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಇವತ್ತು ಪರಿಸರ ಶುದ್ಧಿಯಷ್ಟೇ ಪ್ರಾಮುಖ್ಯತೆ ನಮ್ಮ ಶರೀರ ಶುದ್ಧಿಗೆ ಕೊಡಬೇಕಾಗುತ್ತದೆ. ಶರೀರ ಶುದ್ಧಿಯು ಎರಡು ರೀತಿಯದ್ದಾಗಿದೆ. ಶರೀರದೊಳಗಿನ ಅವಯವಗಳ ಶುದ್ಧಿ ಮತ್ತು ಶರೀರವನ್ನು ಹೊರಗಿನಿಂದ ಶುದ್ಧವಾಗಿಡುವುದು. ಶರೀರದ ಒಳಗಿನ ಶುದ್ಧಿಯು ಆಹಾರ, ವಿಹಾರ, ವ್ಯಾಯಾಮ, ವಿರಾಮ ಹಾಗು ಚಿಂತನೆಗಳ ಬದಲಾವಣೆಯಿಂದ ಆಗುತ್ತದೆ. ಇವುಗಳ ಬಗ್ಗೆ ಈಗಾಗಲೆ ಹಲವಾರು ಲೇಖನಗಳಲ್ಲಿ […]

ಪೋಷಕರಿಗೊಂದು ಪತ್ರ

ಲೇಖನಗಳು - 0 Comment
Issue Date :

ಪ್ರೀತಿಯ ಪೋಷಕರೇ,  ಕುಟುಂಬ ಎನ್ನುವುದು ಯಾವುದೇ ಮಗುವಿಗೆ ಸದಾಕಾಲಕ್ಕೂ, ಅದರಲ್ಲೂ ಪರೀಕ್ಷಾ ಸಮಯದಲ್ಲಿ ದೊಡ್ಡ ಸಪೋರ್ಟ್ ಸಿಸ್ಟಮ್ ಆಗಿರುತ್ತದೆ. ಈ ಸಮಯ ಮಕ್ಕಳಿಗೆ ಹಾಗೂ ಪೋಷಕರಿಗೆ ಇಬ್ಬರಿಗೂ ಬಹಳ ಪ್ರಮುಖವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಮಕ್ಕಳನ್ನು ಹೆಚ್ಚು ಖುಷಿ ಪಡಿಸುವುದೆಂದರೆ ಅದು ನಿಮ್ಮ ಪ್ರೋತ್ಸಾಹವಾಗಿರುತ್ತದೆ.  ಮಕ್ಕಳಿಗೆ ಸಹಾಯವಾಗುವಂತೆ ನೀವು ಏನೇನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಿ. ಗಂಭೀರವಾಗಿರುವ ನಿಮ್ಮ ಮಕ್ಕಳ ಮನಸ್ಸನ್ನು ತಿಳಿಗೊಳಿಸುವುದು, ಪರೀಕ್ಷೆಯನ್ನು ಹೆಚ್ಚು ಒತ್ತಡವಿಲ್ಲದೇ ಸಂತಸದಿಂದ ಬರೆಯುವಂತೆ ಮಾಡುವುದು ಕೂಡ ಇದರಲ್ಲಿ ಸೇರಿಕೊಳ್ಳುತ್ತದೆ.  ನಿಮ್ಮ ಮಕ್ಕಳು […]

ಪರೀಕ್ಷೆಗಳು ನಿಮ್ಮ ತಯಾರಿಯನ್ನು ಪರೀಕ್ಷಿಸುತ್ತದೆ ನಿಮ್ಮನ್ನಲ್ಲ. ಚಿಲ್!!

ಪರೀಕ್ಷೆಗಳು ನಿಮ್ಮ ತಯಾರಿಯನ್ನು ಪರೀಕ್ಷಿಸುತ್ತದೆ ನಿಮ್ಮನ್ನಲ್ಲ. ಚಿಲ್!!

ಲೇಖನಗಳು - 0 Comment
Issue Date :

ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಯುವ ಪೀಳಿಗೆಯಾಗಿದ್ದು, ನಮ್ಮದು ಜಗತ್ತಿನ ಅತಿಹೆಚ್ಚು ಯುವ ಜನರನ್ನು ಹೊಂದಿದ ರಾಷ್ಟ್ರವಾಗಿದೆ.  ನಮ್ಮ ದೇಶದ ಯುವಕರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಭಾರತದಲ್ಲಷ್ಟೇ ಅಲ್ಲದೆ ಸಮುದ್ರದಾಚೆಗೂ ಹರಡಿದ್ದಾರೆ. ಈ ಯುವಜನರ ಶಕ್ತಿ ಹಾಗೂ ಕೌಶಲಗಳೇ ನವಭಾರತದ ನಿರ್ಮಾಣಕ್ಕೆ ಅಡಿಪಾಯ. ಯುವ ಪೀಳಿಗೆಯೊಂದಿಗೆ ಮಾತುಕತೆ ನಡೆಸುವುದು ನನಗೆ ಪ್ರಿಯವಾದ ಕೆಲಸಗಳಲ್ಲೊಂದು. ಹಾಗಾಗಿಯೇ 2015ರ ಮನ್ ಕೀ ಬಾತ್‌ಅನ್ನು ಬೋರ್ಡ್ ಎಕ್ಸಾಮ್ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟೆ. ಭಾರತದಲ್ಲಿ ಈ ಪರೀಕ್ಷೆಗಳು ಸಾಮಾನ್ಯವಾಗಿ […]

ಯುದ್ಧಸನ್ನದ್ದ ವಿದ್ಯಾರ್ಥಿಗಳಿಗೆ ಎಕ್ಸಾಂ ವಾರಿಯರ್

ಯುದ್ಧಸನ್ನದ್ದ ವಿದ್ಯಾರ್ಥಿಗಳಿಗೆ ಎಕ್ಸಾಂ ವಾರಿಯರ್

ಲೇಖನಗಳು - 0 Comment
Issue Date :

–ವೃಷಾಂಕ್ ಪ್ರಧಾನಿ ನರೇಂದ್ರ ಮೋದಿಯವರು ಬರೆದ ಎಕ್ಸಾಂ ವಾರಿಯರ್ಸ್‌ ಎಂಬ ಪುಸ್ತಕ ವಿದ್ಯಾರ್ಥಿಗಳಿಗಾಗಿ ಇರುವ ಪುಸ್ತಕಗಳಿಗಿಂತ ಭಿನ್ನವಾಗಿದೆ. ಭಿನ್ನವಾಗಿರುವಂತೆ ಮಾಡಿರುವುದು ಅದರಲ್ಲಿರುವ ಪ್ರಜಾಸತ್ತಾತ್ಮಕ ಮತ್ತು ಸ್ವಾವಲಂಬಿ ವ್ಯಕ್ತಿತ್ವದಿಂದ. ಮಕ್ಕಳಿಗೆ ಹೇಳುವ ಪಾಠದಲ್ಲಿ ಸ್ವಾವಲಂಬನೆ ಮತ್ತು ಪ್ರಜಾಪ್ರಭುತ್ವದ ಅಂಶಗಳನ್ನು ಪ್ರಧಾನಿ ತುಂಬಿಟ್ಟಿದ್ದಾರೆ. ಕೇವಲ ಮಕ್ಕಳು ಮಾತ್ರವಲ್ಲದೆ ತಿಳಿಯುವ ಮತ್ತು ಒಪ್ಪುವ ಮನಸ್ಸಿರುವ ಹಿರಿಯರೂ ಕಲಿಯುವಂತಿದೆ. ಒಂದು ಕಡೆ ಮೋದಿಯವರು ಹೇಳುತ್ತಾರೆ, ಪರೀಕ್ಷೆಗಳು ನಿಮ್ಮ ಆ ಹೊತ್ತಿನ ಸಿದ್ಧತೆಯನ್ನು ತಿಳಿಸುತ್ತದೆಯೇ ಹೊರತು ನಿಮ್ಮನ್ನು ಅಮೂಲಾಗ್ರವಾಗಿ ಅಳೆಯುವ ಮಾನದಂಡವಲ್ಲ! ಹೌದಲ್ಲವಾ, ಪರೀಕ್ಷೆಯಲ್ಲಿ […]

ಸ್ವಲ್ಪ ಕಹಿ ತಿನ್ನಿ ಸಾರ್!

ಸ್ವಲ್ಪ ಕಹಿ ತಿನ್ನಿ ಸಾರ್!

ಲೇಖನಗಳು - 0 Comment
Issue Date :

         -ಡಾ. ಶ್ರೀವತ್ಸ ಭಾರದ್ವಾಜ್ ಮಕ್ಕಳೆ ನಿಮಗೆ ಯಾವ ರುಚಿ ಇಷ್ಟ ? ಎಂದರೆ ಸಿಹಿ ಎಂದು ತಕ್ಷಣ ಉತ್ತರ ಸಿಗುತ್ತದೆ.ಯುವಕರಿಗೆ ಯಾವ ರುಚಿ ಇಷ್ಟ ಎಂದು ಕೇಳಿದರೆ ಹುಳಿ, ಖಾರ ಎಂದು ಸುಲಭವಾಗಿ ಉತ್ತರಿಸುತ್ತಾರೆ.ಅದೇ ವೃದ್ಧರಲ್ಲಿ ಕೇಳಿದರೆ ಸ್ವಾಮಿ ಯಾವುದನ್ನೂ ತಿನ್ನಲು ಭಯವಾಗುತ್ತದೆ. ಹಾಗಾಗಿ ಸಪ್ಪೆಯೇ ನಮಗೀಗ ರುಚಿ ಎನ್ನುತ್ತಾರೆ. ನಮ್ಮಲ್ಲಿ ಔಷಧಕ್ಕೆ ಬರುವ ಹಲವರು ಡಾಕ್ಟ್ರೇ ರುಚಿಯಾಗಿರುವ ಮದ್ದು ಕೊಡಿ ಪ್ಲೀಸ್ ಎಂದು ಕೇಳುತ್ತಾರೆ. ಕಹಿ ತಿನ್ನುವುದು ರೋಗಿಗಳು ಮಾತ್ರ […]

ವಿದ್ಯಾದಾನವೆಂಬ ದೀಪೋತ್ಸವ

ಲೇಖನಗಳು - 0 Comment
Issue Date :

-ಪ್ರಭಾ ಭಟ್ ಅಂದು ಕಾಲೇಜಿನ ಕೊನೆಯದಿನ.  ಬಿ.ಎಡ್ ಪ್ರಶಿಕ್ಷಣ ಕೇಂದ್ರ ಕಾಲೇಜಿನಿಂದ ಬೀಳ್ಕೊಡುಗೆಯನ್ನು ಹೊಂದಲು ನಿಗದಿಯಾದ ದಿನವದು. ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮ ಪರೀಕ್ಷೆಯನ್ನು ಎದುರಿಸಲು ಸಕಲಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವ ನಮ್ಮನ್ನು ಶುಭಹಾರೈಕೆಗಳೊಂದಿಗೆ ಬೀಳ್ಕೊಡಲು ನಮ್ಮೆಲ್ಲಾ ಶಿಕ್ಷಕರು ಸಕಲ ತಯಾರಿಗಳನ್ನು ಮಾಡಿದ್ದರು. ಅದೊಂದು ವಿಶೇಷವಾದ ಸಮಾರಂಭ. ಅದು ಕೇವಲ ಬೀಳ್ಕೊಡುಗೆಯಾಗಿರದೆ ದೀಪದಾನ’ ಎಂಬ ಹೆಸರಿನಿಂದ ರೂಪುಗೊಂಡಿದ್ದ ಕಾರ್ಯಕ್ರಮವಾಗಿತ್ತು. ಕಾರ್ಯಕ್ರಮದ ಹೆಸರೇ ಅತ್ಯಂತ ವಿನೂತನವಾದದ್ದು ಮತ್ತು ಕೇಳಲು ಕೂಡ ರೋಮಾಂಚನವಾಗುವಂತದ್ದು. ಪದವಿಯ ಪರೀಕ್ಷೆಯ ನಂತರ ಶಿಕ್ಷಕರಾಗಹೊರಟಿದ್ದ ನಾವುಗಳಿನ್ನೂ ಅಲ್ಲಿಯ ವಿದ್ಯಾರ್ಥಿಗಳೇ […]

ಅಧ್ಯಾತ್ಮದಿಂದ ಸಾಮರಸ್ಯ ಎಲ್ಲವೂ ಒಂದೇ ಎಂಬ ಸತ್ಯ

ಅಧ್ಯಾತ್ಮದಿಂದ ಸಾಮರಸ್ಯ ಎಲ್ಲವೂ ಒಂದೇ ಎಂಬ ಸತ್ಯ

ಲೇಖನಗಳು - 0 Comment
Issue Date :

-ಹನುಮಂತ ಮ ದೇಶಕುಲಕರ್ಣಿ ಗುರು ರಾಮಕೃಷ್ಣ ಪರಮಹಂಸರ ಜನ್ಮಾಚರಣೆ ಪ್ರಯುಕ್ತ ರಾಮಕೃಷ್ಣ ಪರಮಹಂಸರು 1836ನೇ ಫೆಬ್ರವರಿ 28ರಂದು ಬಂಗಾಳ ಪ್ರಾಂತದ ಹೂಗ್ಲಿ ಜಿಲ್ಲೆಯಲ್ಲಿನ ಕಾಮಾಪುಕುರ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಖೂದಿರಾಮ ಚಟ್ಟೋಪಾಧ್ಯಾಯ. ತಾಯಿ ಚಂದ್ರಮಣೀದೇವಿ. ಅವರು ಬಡವರಾದರೂ ಮಹಾ ದೈವಭಕ್ತರು: ಪರೋಪಕಾರಿಗಳು, ರಾಮಕೃಷ್ಣ ಅವರ ನಾಲ್ಕನೆಯ ಮಗ. ಹುಟ್ಟಿದ ಮಗನಿಗೆ ಗದಾಧರನೆಂದು ಹೆಸರಿಟ್ಟರು. ಗದಾಧರ ಊರಿನ ಜನರ ಸ್ನೇಹದಲ್ಲಿ ಬೆಳೆದ. ಆರು ವರ್ಷ ತುಂಬುವ ಹೊತ್ತಿಗೆ ನೆರೆಹೊರೆಯವರು ಹೇಳಿಕೊಡುತ್ತಿದ್ದ ಪುರಾಣ ಪುಣ್ಯಕಥೆಗಳನ್ನು ಕಲಿತುಕೊಂಡ. ಪಾಠಶಾಲೆಯೊಳಗೆ ಕುಳಿತು ಓದುವುದಕ್ಕಿಂತ […]

ಮತಾಂತರವಾಗುತ್ತಿದ್ದೀರಾ? ಸ್ವಲ್ಪ ತಾಳಿ !

ಮತಾಂತರವಾಗುತ್ತಿದ್ದೀರಾ? ಸ್ವಲ್ಪ ತಾಳಿ !

ಲೇಖನಗಳು - 0 Comment
Issue Date :

-ಜಿ.ವಿ. ಗಣೇಶಯ್ಯ ಪ್ರಿಯ ಓದುಗರೇ ನಿಮ್ಮಲ್ಲಿ ಯಾರಿಗಾದರೂ ನಮ್ಮ ಮತಕ್ಕೆ ಸೇರಿಕೊಳ್ಳಿ ಅಂತ ಯಾವುದಾದರೂ ಮುಸ್ಲಿಂ ಮತಸ್ಥ ನಿಮ್ಮನ್ನು ಒತ್ತಾಯಿಸಿದರೆ, ನಿಮ್ಮ ತಲೆ ತಿಂದರೆ, ಅಂತಹ ವ್ಯಕ್ತಿಗೆ ಈ ಲೇಖನದಲ್ಲಿ ಹೇಳಿರುವ ಪ್ರಶ್ನೆಗಳನ್ನು ಕೇಳಿರಿ. ಹಿಂದು ಧರ್ಮದ ಹಿರಿಯಮೆಯನ್ನು ಆತನಿಗೆ ತಿಳಿಸಿರಿ. ನಿಮ್ಮ ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಈ ಲೇಖನವನ್ನು ಓದಲು ಕೊಡಿ ಅಥವಾ ಇಲ್ಲಿ ಚರ್ಚಿಸಲಾಗಿರುವ ವಿಚಾರವನ್ನು ಅವರಿಗೆ ತಿಳಿಸಿರಿ. ಒಬ್ಬ ಹಿಂದುವನ್ನು ಮತಾಂತರ ಮಾಡಲು ಕ್ರೈಸ್ತರು, ಮುಸ್ಲಿಮರು ತುದಿಗಾಲಲ್ಲಿ ನಿಂತಿರುತ್ತಾರೆ. ಹಿಂದು ಧರ್ಮದಲ್ಲಿ ಇಂತಿಂತಹ […]

ಆದಿತ್ಯ ಹೃದಯಕ್ಕೆ ಇಸ್ರೋ ಲಗ್ಗೆ

ಆದಿತ್ಯ ಹೃದಯಕ್ಕೆ ಇಸ್ರೋ ಲಗ್ಗೆ

ಲೇಖನಗಳು - 0 Comment
Issue Date :

-ರೋಹಿತ್ ಚಕ್ರತೀರ್ಥ ಜಗತ್ತು ಮಾಯೆ ಎಂದರು ಶಂಕರಾಚಾರ್ಯರು. ಅದರ ಅಧ್ಯಾತ್ಮಿಕ ಅರ್ಥಗಳೇನೇ ಇರಲಿ, ವಿಜ್ಞಾನದಲ್ಲಿ ಈ ಮಾತು ಒಂದು ಆಯಾಮದಲ್ಲಿ ಯೋಚಿಸಿದಾಗ ಸತ್ಯ ಎನ್ನಬಹುದು. ಯಾಕೆಂದರೆ, ಜಗತ್ತು ಮನುಷ್ಯನಿಗೆ ಆತನ ದೃಷ್ಟಿಯ ಸಾಮರ್ಥ್ಯಕ್ಕೆ ತಕ್ಕಂತೆ ಕಾಣುವ ಒಂದು ಮಾಯಾಜಾಲ. ನಾವು, ನರಮಾನವರು ವಿಕಿರಣಗಳ ಉದ್ದದೊಂದು ಪಟ್ಟಿಯಲ್ಲಿ ದೃಗ್ಗೋಚರ ಬೆಳಕು ಎಂಬ ಸಣ್ಣದೊಂದು ಪಟ್ಟಿಯನ್ನಷ್ಟೇ ಬರಿಗಣ್ಣಲ್ಲಿ ಕಾಣಲು ಶಕ್ತರು. ಅದರಾಚೆ-ಈಚೆಗಿರುವ ರೇಡಿಯೋ ತರಂಗಗಳು, ಗ್ಯಾಮಾ, ಎಕ್ಸ್ ಮುಂತಾದ ತರಂಗಗಳು ನಮ್ಮ ಕಣ್ಣಿಗೆ ಕಾಣವು, ಆದ್ದರಿಂದ ನಮ್ಮ ಅನುಭವಕ್ಕೆ ಅತೀತವಾಗಿ […]

ನಾನು ಬಯಸಿದ್ದೇನೂ ಸಿಗಲಿಲ್ಲ, ಆದರೆ ದೊರಕಿದ್ದೆಲ್ಲ ಶ್ರೇಷ್ಠವಾಗಿತ್ತು!  ಅತೀ ಸಣ್ಣ ಕೆಲಸವನ್ನೂ ಶ್ರದ್ಧೆಯಿಂದ ಮಾಡಿ ಮುಗಿಸುವುದೇ ಯಶಸ್ಸಿನ ಗುಟ್ಟು

ನಾನು ಬಯಸಿದ್ದೇನೂ ಸಿಗಲಿಲ್ಲ, ಆದರೆ ದೊರಕಿದ್ದೆಲ್ಲ ಶ್ರೇಷ್ಠವಾಗಿತ್ತು! ಅತೀ ಸಣ್ಣ ಕೆಲಸವನ್ನೂ ಶ್ರದ್ಧೆಯಿಂದ ಮಾಡಿ ಮುಗಿಸುವುದೇ ಯಶಸ್ಸಿನ ಗುಟ್ಟು

ಲೇಖನಗಳು - 0 Comment
Issue Date :

-ವೃಷಾಂಕ ಭಟ್ ನಿವಣೆ ಹುಟ್ಟಿದ್ದು ತಮಿಳುನಾಡಿನ ಹಳ್ಳಿಯೊಂದರಲ್ಲಿ. ಶಿಕ್ಷಕನಾಗಬೇಕೆಂದು ಕನಸುಕಂಡಿದ್ದ ಯುವಕ ಮುಂದೆ ಎಮ್‌ಐಟಿ ಮುಗಿಸಿ ದೇಶವೇ ಹೆಮ್ಮೆ ಪಡುವಂತಹ ವಿಜ್ಞಾನಿಯಾಗಿ ಬೆಳೆಯುತ್ತಾರೆ. ಸಂಶೋಧನೆ ಬಿಟ್ಟು ಜೀವನದಲ್ಲಿ ಇಲ್ಲ ಎಂಬಂತೆ ಬದುಕುತ್ತಿರುವ  ಕೆ.ಸಿವನ್ ಅವರು ಇಸ್ರೋದ ಈಗಿನ ಅಧ್ಯಕ್ಷರು. ಹಿಂದುಳಿದ ಸಮುದಾಯದಿಂದ ಬಂದ ಇವರಿಗೆ ಬಾಹ್ಯಾಕಾಶ ತಂತ್ರಜ್ಞಾನದಿಂದ ಜನಸಾಮಾನ್ಯರ ಬದುಕನ್ನು ಹೇಗೆ ಸಲೀಸು ಮಾಡಬಹುದು ಎಂಬುದರಲ್ಲೇ ಹೆಚ್ಚು ಆಸಕ್ತಿ. ಕೃಷಿ ಕ್ಷೇತ್ರಕ್ಕೆ ಇಸ್ರೋ ನೆರವಾಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಗೆ ಜೊತೆಯಾಗಿರುವವರೂ ಇದೇ ಸಿವನ್.  ಇಸ್ರೋದ […]