ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ...

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ…

ಲೇಖನಗಳು - 0 Comment
Issue Date :

-ಮಲ್ಲಿಕಾರ್ಜುನ ಕೊಚ್ಚರಗಿ ನಾವು ಬಯಸುವುದೇ ಒಂದು – ವಿಧಿ ಕರುಣಿಸುವುದೇ ಮತ್ತೊಂದು. ಜೀವನ ಪೂರ್ತಿ ಕಷ್ಟದ ಸರಮಾಲೆಯನ್ನೇ ಹೊದ್ದುಕೊಂಡ 95ರ ಇಳಿವಯಸ್ಸಿನ ಅಜ್ಜಿಯ ಯಶೋಗಾಥೆಯಿದು. ಹೌದು, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುಗಳಿಹಾಳ ಎಂಬ ಗ್ರಾಮದ ಅಜ್ಜಿ ಗಂಗಮ್ಮ ಈ ಇಳಿ ವಯಸ್ಸಿನಲ್ಲಿ ಸ್ವತಃ ದುಡಿದು ಕುಟುಂಬದ ನೊಗ ಸಾಗಿಸುತ್ತಿದ್ದಾರೆ. ಎಷ್ಟಾದರೂ ಕಷ್ಟವಾಗಲಿ ನನ್ನ ಕುಟುಂಬ ಇತರರಿಗೆ ಶರಣಾಗಬಾರದರು. ತುತ್ತು ಅನ್ನಕ್ಕಾಗಿ ಯಾರ ಮುಂದೆಯೂ ಕೈಚಾಚಬಾರದೆಂದು ಪಣ ತೊಟ್ಟಿರುವ ಇವರು ಸಮೀಪದ ಊರೂರು ತಿರುಗಿ ಬದುಕು ರಥ […]

ಬಡ್ತಿ ಮೀಸಲಾತಿ ವಿವಾದ ದಲಿತಪರ ಎಂಬ ಹುಸಿ ಬಿರುದು ಏಕೆ?

ಬಡ್ತಿ ಮೀಸಲಾತಿ ವಿವಾದ ದಲಿತಪರ ಎಂಬ ಹುಸಿ ಬಿರುದು ಏಕೆ?

ಲೇಖನಗಳು - 0 Comment
Issue Date :

-ಶ್ರೀಧರ್ ಪ್ರಭು ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾಗಿದ್ದನ್ನು ಸಹಿಸದ ಮೇಲ್ಜಾತಿಯವರ ಹಿಡಿತದಲ್ಲಿರುವ ಮಾಧ್ಯಮಗಳು ಸಿದ್ದರಾಮಯ್ಯನವರ ನಿದ್ದೆಯ ವಿಚಾರವಾಗಿ ಅನಗತ್ಯ ಲೇವಡಿ ಮಾಡುತ್ತವೆ. ನನಗೆ ಗೊತ್ತಿರುವಂತೆ, ಸಿದ್ದರಾಮಯ್ಯನವರು ಸಮಯ ಸಿಕ್ಕಾಗಲೆಲ್ಲ ಬಾಬಾ ಸಾಹೇಬ ಅಂಬೇಡ್ಕರ ಬಗ್ಗೆ ಧ್ಯಾನ ಮಾಡುತ್ತಿರುತ್ತಾರೆ. ಇದನ್ನೇ ಕೆಲವರು ನಿದ್ದೆಯೆಂದುಕೊಂಡು ಅನಗತ್ಯವಾಗಿ ಟೀಕೆಗೆ ಬಳಸಿಕೊಳ್ಳುತ್ತಾರೆ. ಪರಿಶಿಷ್ಟರಿಗೆ ಸೇರಿದ ಯಾವುದೇ ಕಡತ ಅವರ ಮುಂದೆ ಬಂದರೂ ಧ್ಯಾನಾವಸ್ಥೆಯಲ್ಲೇ (ಕಣ್ಣು ಮುಚ್ಚಿಕೊಂಡೇ) ಅದನ್ನು ಅನುಮೋದಿಸಿ ಕಳುಹಿಸುತ್ತಾರೆ. ಪರಿಶಿಷ್ಟರು ಸಿದ್ದರಾಮಯ್ಯನವರ ಋಣವನ್ನು ಈ ಜನ್ಮದಲ್ಲಿ ತೀರಿಸಲಾಗದು’. ಸುಮಾರು ತಿಂಗಳುಗಳ […]

ಪದ್ಮವಿಭೂಷಣ ಪಿ.ಪರಮೇಶ್ವರನ್

ಪದ್ಮವಿಭೂಷಣ ಪಿ.ಪರಮೇಶ್ವರನ್

ಲೇಖನಗಳು - 0 Comment
Issue Date :

–ರಾಜೇಶ್ ಪದ್ಮಾರ್, ಉಪನ್ಯಾಸಕ ಭಾರತೀಯ ಚಿಂತನೆಗಳ ಬುನಾದಿಯ ಮೇಲೆ ಹೊಸ ತಲೆಮಾರಿನ ಸಾವಿರಾರು ಯುವ ಚಿಂತಕರನ್ನು ಯೋಗ್ಯವಾಗಿ ರೂಪಿಸಿದ ಹಿರಿಯ ವಿದ್ವಾಂಸ, ಲೇಖಕ, ಸಂಘದ ಜ್ಯೇಷ್ಠ ಪ್ರಚಾರಕ ಪಿ.ಪರಮೇಶ್ವರನ್ ರವರಿಗೆ 2018ನೇ ಸಾಲಿನ ‘ಪದ್ಮವಿಭೂಷಣ’ ಪ್ರಶಸ್ತಿಯ ಮನ್ನಣೆ ದೊರಕಿದೆ.  ಭಾರತೀಯ ವಿಚಾರ ಕೇಂದ್ರಂ ಎಂಬ ವಿನೂತನ ವೈಚಾರಿಕ ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿ ಕಳೆದ 36 ವರ್ಷಗಳಿಂದ ಅನನ್ಯ ಕೊಡುಗೆ ನೀಡಿರುವ ಪಿ.ಪರಮೇಶ್ವರನ್ ಇಂಟರ್‌ನ್ಯಾಷನಲ್ ಫೋರಂ ಫಾರ್ ಇಂಡಿಯನ್ ಹೆರಿಟೇಜ್ (IFIH) ಸಂಸ್ಥೆಯ ಸ್ಥಾಪಕ ಸದಸ್ಯರೂ ಹೌದು. ಹತ್ತಾರು […]

ಒಂದು ಸ್ಮಶಾನದ ಕಥೆ

ಒಂದು ಸ್ಮಶಾನದ ಕಥೆ

ಲೇಖನಗಳು - 0 Comment
Issue Date :

ರಾಜಕೀಯವಾಗಿ ಶಕ್ತಿಕೇಂದ್ರವಾದ ತಾಲ್ಲೂಕು ಒಂದರಲ್ಲಿ ತಹಸೀಲ್ದಾರನಾಗಿದ್ದ ಸಂದರ್ಭದ ಘಟನೆಯಿದು. ಒಂದು ದಿನ ಪಟ್ಟಣದ ಕ್ರಿಶ್ಚಿಯನ್ ಸಮಾಜದ ಕೆಲವರು ಪಾದ್ರಿಯನ್ನು ಮುಂದಿಟ್ಟುಕೊಂಡು ತಮ್ಮ ಸಮುದಾಯದ ಸ್ಮಶಾನಕ್ಕಾಗಿ ಪಟ್ಟಣದ ಹತ್ತಿರವಿದ್ದ ಒಂದು ಸರ್ಕಾರಿ ಜಾಗದಲ್ಲಿ ಸುಮಾರು ಎರಡು ಎಕರೆ ಪ್ರದೇಶವನ್ನು ಮಂಜೂರು ಮಾಡಲು ಮನವಿ ಸಲ್ಲಿಸಿದರು. ನಾನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಅವರಿಗೆ ಭರವಸೆ ಕೊಟ್ಟೆ. ಅವರು ಕೇಳಿದ್ದ ಜಾಗದ ಪರಿಶೀಲನೆಯನ್ನು ಅಂದು ಸಾಯಂಕಾಲವೇ ಯಾರಿಗೂ ಪೂರ್ವ ಸೂಚನೆ ಕೊಡದೆ ಮಾಡಿದೆ. ಅವರು ಕೇಳಿದ್ದ ಜಾಗದಲ್ಲಿ ಸುಮಾರು 2-3 ಗುಂಟೆಯಷ್ಟು […]

ಕೈತುಂಬ ಬರುತ್ತಿದ್ದ ಸಂಬಳಕ್ಕೆ ಗುಡ್ ಬೈ ಹೇಳಿ ಚಿತ್ರರಂಗಕ್ಕೆ ಬಂದ ಬಾಕ್ಸರ್

ಕೈತುಂಬ ಬರುತ್ತಿದ್ದ ಸಂಬಳಕ್ಕೆ ಗುಡ್ ಬೈ ಹೇಳಿ ಚಿತ್ರರಂಗಕ್ಕೆ ಬಂದ ಬಾಕ್ಸರ್

ಲೇಖನಗಳು - 0 Comment
Issue Date :

-ಮನೋಜ್ ಕುಮಾರ್ ಕೆ.ಬಿ. ಇದು ಧನಂಜಯ್ ಎಂದರೆ ನಮಗೆ ನೆನಪಾಗುವುದು ಜೆಸ್ಸಿ, ರಾಟೆ, ಹ್ಯಾಪಿ ನ್ಯೂ ಇಯರ್, ಬಾಕ್ಸರ್ ಹಾಗೂ ಅಲ್ಲಮ ಸಿನಿಮಾಗಳು. ಈ ಚಿತ್ರಗಳು ಅಷ್ಟೇನೂ ಹಿಟ್ ಆಗದಿದ್ದರೂ ನಿರ್ಮಾಪಕರ ಬಂಡವಾಳಕ್ಕಂತೂ ಮೋಸ ಮಾಡಿಲ್ಲ. ತಮ್ಮ ಮನೋಜ್ಞವಾದ ಅಭಿನಯದಿಂದ ಒಂದು ದೊಡ್ಡ ಅಭಿಮಾನಿಗಳ ಬಳಗವನ್ನೇ ಹೊಂದಿರುವ ನಟ, ಬಾಕ್ಸರ್ ಬಗ್ಗೆ  ಮತ್ತಷ್ಟು ತಿಳಿಯೋಣ. 1985 ಆಗಸ್ಟ್ 23 ರಂದು ತಂದೆ ಅಡವಿ ಸ್ವಾಮಿ ಹಾಗೂ ತಾಯಿ ಸಾವಿತ್ರಮ್ಮನವರ ಮಗನಾಗಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ […]

ಕೃಷಿರಂಗ ಸಬಲಗೊಳ್ಳಲಿ

ಕೃಷಿರಂಗ ಸಬಲಗೊಳ್ಳಲಿ

ಲೇಖನಗಳು - 0 Comment
Issue Date :

ಆನಂದ ಆ.ಶ್ರೀ ಕೃಷಿ ಸಮುದಾಯದ ಅನುಭವದಲ್ಲಿ ಗೆದ್ದು, ನಂಬಿಕೆ-ಶ್ರದ್ಧೆ ಎನಿಸಿಕೊಂಡಿರುವ ಜ್ಞಾನ ಪರಂಪರೆಯನ್ನು ಕೂಡಿ-ಕಾಪಿಟ್ಟು , ಬರುವ ಪೀಳಿಗೆಗೆ ಜತತನದಿಂದ  ದಾಟಿಸುವ ಮಹತ್ತರ ಪಾತ್ರಕ್ಕೆ ಸರಕಾರಗಳ ಸಹಭಾಗಿತ್ವ ಬೇಕು. ಮಣ್ಣಿನ ಸವಕಳಿಯ ಕುರಿತು ವಿಶ್ವವೇ ಗಂಭೀರ ಚಿಂತನೆ ನಡೆಸುತ್ತಿದೆ. ಅನುಭವಜನ್ಯ ಜ್ಞಾನದ ಸವಕಳಿ (Empherical knowledge erosion) ಕುರಿತು ಅಷ್ಟಾಗಿ ಒತ್ತು ಸಿಕ್ಕಂತೆ ಕಾಣದು. ಭವಿಷ್ಯದ ಪೀಳಿಗೆಯ ಕೈಮರ ಅದು. ಸರಕಾರದ ಗಮನ ದೊಡ್ಡ ರೀತಿಯಲ್ಲಿ ಇದಕ್ಕೆ ಬೇಕು. ದೊಡ್ಡ ಪ್ರಮಾಣದ ಜೀರಿಗೆ ಕೃಷಿಯನ್ನು ಹೊರತುಪಡಿಸಿದರೆ ಉಳಿದೆಲ್ಲಾ […]

ನಾವು ನಿಜವಾಗಿ ಜಾತ್ಯತೀತರಾಗೋಣ

ನಾವು ನಿಜವಾಗಿ ಜಾತ್ಯತೀತರಾಗೋಣ

ಲೇಖನಗಳು - 0 Comment
Issue Date :

-ಆಚಾರ್ಯ ಉಮೇಶ ಜಾತಿ ಎಂಬ ಪದದಷ್ಟು ಚರ್ಚೆಗೆ ಗ್ರಾಸವಾಗಿರುವ ಪದ ಸದ್ಯದಲ್ಲಿ ಇನ್ನಾವುದು ಇರಲಿಕ್ಕಿಲ್ಲ. ಇದರರ್ಥವನ್ನು ಬಿಡಿಸಿದಷ್ಟೂ ಮತ್ತೆ ಮತ್ತೆ ಅನೇಕ ಒಳಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡುತ್ತಾ ಹೋಗುತ್ತದೆ. ಇಂದಿನ ಜಾತಿಪದ್ಧತಿ ಅನ್ನುವುದು ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ಮೂಲ ಬೀಜವಾಗಿದೆ. ಈ ಜಾತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳದೆ, ಜಾತಿಪದ್ಧತಿಯನ್ನು ಮೀರದೆ ಅಸ್ಪಶ್ಯತೆ ಮುಂತಾದ ಸಮಸ್ಯೆಗಳ ಸುಳಿಯಿಂದ ಬಿಡುಗಡೆಯಿಲ್ಲವೆಂಬುದು ಸರ್ವವಿದಿತ. ಆದರೂ ತಮ್ಮ ಸ್ವಾರ್ಥಸಾಧನೆಗಾಗಿ ಅಥವಾ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಸಮಾಜದ ಮುನ್ನೆಲೆಯಲ್ಲಿ ತಂದು ನಿಲ್ಲಿಸುವಂತಹ ಕೆಲಸವನ್ನು ಸ್ವಾರ್ಥಿಗಳು, ಅನೇಕ […]

ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳೋಣ ತ್ಯಾಗ - ಅಹಿಂಸೆಯ ಆಚರಿಸೋಣ

ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳೋಣ ತ್ಯಾಗ – ಅಹಿಂಸೆಯ ಆಚರಿಸೋಣ

ಲೇಖನಗಳು - 0 Comment
Issue Date :

ಜಗದ್ಗುರು ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಶ್ರವಣಬೆಳಗೊಳ ಮಠ ಬಾಹುಬಲಿಯ ಪಾದಪೂಜೆ ಪ್ರತಿನಿತ್ಯ ನಡೆಯುತ್ತದೆ. ಆದರೆ ಮಸ್ತಕಾಭಿಷೇಕವಾಗುವುದು 12 ವರ್ಷಗಳಿಗೊಮ್ಮೆ. ಅದರಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ದೊರಕುವುದಿಲ್ಲ! ಜೀವನದಲ್ಲಿ ಅದೊಂದು ದೊಡ್ಡ ಅವಕಾಶ. ಬಾಹುಬಲಿಗೆ ಮಸ್ತಕಾಭಿಷೇಕ ಮಾಡುವುದರಿಂದ ಅವರ ವ್ಯಕ್ತಿತ್ವ ಮತ್ತು ಕೃತಿತ್ವ ಎರಡರ ಪ್ರಭಾವ ಜನರ ಮೇಲೆ ಬೀರುತ್ತದೆ. ಅಹಿಂಸೆ ಮತ್ತು ತ್ಯಾಗದ ಕಡೆ ಜನರನ್ನು ಕೊಂಡೊಯ್ಯುತ್ತದೆ. 1925ನೇ ಇಸವಿಯ ನಂತರ ಜೈನ ಸಂಪ್ರದಾಯದಲ್ಲಿ ತ್ಯಾಗಿಗಳ ಸಂಖ್ಯೆ ಹೆಚ್ಚಿತು. ಅಲ್ಲಿಯವರೆಗೆ ಕೆಲವೇ ತ್ಯಾಗಿಗಳಿದ್ದರು. 1925ರಲ್ಲಿ ಬಂದ ಮುನಿಗಳೊಬ್ಬರ […]

ಅದ್ದೂರಿ ಮಹಾಮಸ್ತಕಾಭಿಷೇಕ ಮಹೋತ್ಸವ

ಅದ್ದೂರಿ ಮಹಾಮಸ್ತಕಾಭಿಷೇಕ ಮಹೋತ್ಸವ

ಲೇಖನಗಳು - 0 Comment
Issue Date :

–  ಶೃತಿ ಬಿ.ಎಸ್. ಜೈನರಿಗೆ ಅತ್ಯಂತ ಪ್ರಮುಖ ತೀರ್ಥಕ್ಷೇತ್ರವಾಗಿರುವ ಶ್ರವಣಬೆಳಗೊಳ ಅದ್ದೂರಿ ಮಹಾಮಸ್ತಕಾಭಿಷೇಕಕ್ಕೆ ಸಜ್ಜುಗೊಳ್ಳುತ್ತಿದೆ. ಏಕಶಿಲೆಯಿಂದ ಮಾಡಲ್ಪಟ್ಟಿರುವ ಬಾಹುಬಲಿಯ ಮೂರ್ತಿಗೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಈ ಬಾರಿ ಸ್ವಸ್ತಿ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮಿಜಿಯವರ ನೇತೃತ್ವದಲ್ಲಿ ನಡೆಯಲಿದೆ. ಸುಮಾರು 40 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.  ಬಾಹುಬಲಿ ರಾಜ್ಯಕ್ಕಾಗಿ ಭರತನೊಂದಿಗೆ ಹೋರಾಡಿ ಗೆದ್ದ ಮರುಕ್ಷಣ ಜಗತ್ತಿನ ಕ್ಷಣಿಕತೆಯ ಅರಿವಾಗಿ, ಎಲ್ಲವನ್ನು ತ್ಯಜಿಸಿ ಒಂದು ವರ್ಷದವರೆಗೆ ಹೊರ ಜಗತ್ತಿನ ಅರಿವೇ […]

ಅಭಿವೃದ್ಧಿಯ ಸಂಕೇತ ಮಹಾಮಸ್ತಕಾಭಿಷೇಕ

ಅಭಿವೃದ್ಧಿಯ ಸಂಕೇತ ಮಹಾಮಸ್ತಕಾಭಿಷೇಕ

ಲೇಖನಗಳು - 0 Comment
Issue Date :

-ಇಂದಿರಾ ಜಯಕುಮಾರ್ ಇಡೀ ವಿಶ್ವದ ಗಮನವನ್ನು ತನ್ನಡೆಗೆ ಸೆಳೆದುಕೊಳ್ಳುತ್ತಿರುವ ಶ್ರವಣಬೆಳಗೊಳ ಕ್ಷೇತ್ರವು 2300 ವರ್ಷಗಳ ಪ್ರಾಚೀನ ಇತಿಹಾಸವನ್ನು ಹೊಂದಿರುವ ಐತಿಹಾಸಿಕ ಕ್ಷೇತ್ರ. ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ಯಿಕ ಮತ್ತು  ಐತಿಹಾಸಿಕವಾಗಿ ನಿರಂತರವಾಗಿ ಚಟುವಟಿಕೆಯಿಂದಿರುವ ಈ ಪವಿತ್ರ ಕ್ಷೇತ್ರವು ದೇಶದ ಮತ್ತೆ ಇನ್ಯಾವ ಸ್ಥಳದಲ್ಲೂ ಇರದಂತಹ ಅತಿಹೆಚ್ಚು ಶಾಸನಗಳನ್ನು ತನ್ನೊಡಲಿನಲ್ಲಿಟ್ಟುಕೊಂಡಿದೆ.  ಇಲ್ಲಿಯ ಜಗದ್ವಿಖ್ಯಾತ, ತ್ಯಾಗ ಮೂರ್ತಿ ಭಗವಾನ್ ಬಾಹುಬಲಿಯ 58.8 ಅಡಿಯ ಏಕಶಿಲಾ ಮೂರ್ತಿಯು ತನ್ನ ಎತ್ತರ, ಸೌಂದರ್ಯ, ಅತಿಶಯಗಳಿಂದ ಎಲ್ಲರನ್ನೂ ಅಯಸ್ಕಾಂತದಂತೆ ಸೆಳೆಯುತ್ತಾ, ತನ್ನೆಡೆಗೆ ಆಕರ್ಷಿಸಿಕೊಳ್ಳುತ್ತಿದೆ. ಕ್ರಿ.ಶ.981ರಲ್ಲಿ ಗಂಗರ […]