ರಾಷ್ಟ್ರದ ವೈಭವಕ್ಕೆ ತ್ಯಾಗ, ಸೇವೆ ಅಗತ್ಯ

ಬಾಗಲಕೋಟೆ - 0 Comment
Issue Date : 11.08.2014

ಬಾಗಲಕೋಟೆ: ಸಮಾಜದ ಹಿತಕ್ಕಾಗಿ ತ್ಯಾಗ, ಸಮರ್ಪಣೆ ಮಾಡಬೇಕು. ಆಗ ಮಾತ್ರ ಸಮಾಜ ಮತ್ತು ರಾಷ್ಟ್ರದ ಉನ್ನತಿ ಸಾಧ್ಯ ಎಂದು ರಾ.ಸ್ವ. ಸಂಘದ ಮಧ್ಯ ಕ್ಷೇತ್ರೀಯ ಕಾರ್ಯವಾಹ ರಾಮಕೃಷ್ಣರಾವ್ ಅವರು ಪ್ರತಿಪಾದಿಸಿದರು. ಇಲ್ಲಿ ಇತ್ತೀಚೆಗೆ ನಡೆದ ನಗರ ಶಾಖೆಯ ಗುರುಪೂಜಾ ಉತ್ಸವದಲ್ಲಿ ಅವರು ಮಾತನಾಡಿದರು. ಸಂಘವು ಕಳೆದ 86 ವರ್ಷಗಳಿಂದ ವ್ಯಕ್ತಿನಿರ್ಮಾಣದ ಸಮಾಜ ಸಂಘಟನೆಯ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಸಮಯದಾನ, ಧನದಾನ ಮೀಸಲಿಡಬೇಕು ಎಂದು ಕರೆ ನೀಡಿದರು. ಮುಧೋಳ ಸಕ್ಕರೆ ಕಾರ್ಖಾನೆಯ ಉತ್ಪಾದನಾ ವಿಭಾಗದ ಪ್ರಮುಖರಾದ ಡಾ. […]

ಹೊಸದಿಗಂತ ಪತ್ರಿಕೆಯ ಓದುಗರ ಸಮಾವೇಶ

ಹೊಸದಿಗಂತ ಪತ್ರಿಕೆಯ ಓದುಗರ ಸಮಾವೇಶ

ಬಾಗಲಕೋಟೆ - 0 Comment
Issue Date : 05.08.2014

ಮುಧೋಳದಲ್ಲಿ ಜು.27ರಂದು ನಡೆದ ಹೊಸದಿಗಂತ ಪತ್ರಿಕೆಯ ಓದುಗರ ಸಮಾವೇಶ ಸಂದರ್ಭದಲ್ಲಿ ಕಾರ್ಗಿಲ್ ವಲಯದಲ್ಲಿ ಹುತಾತ್ಮರಾದ ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ರಾಮಣ್ಣ ರುದ್ರಪ್ಪ ಪೂಜಾರಿ ಅವರ ಪತ್ನಿ ಕಸ್ತೂರಿ ಮತ್ತು ಪುತ್ರಿ ವೈಷ್ಣವಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾ.ಸ್ವ.ಸಂಘದ ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕ್ ಶಂಕರಾನಂದ, ಲೋಕಸಭಾ ಸದಸ್ಯ ಪಿ.ಸಿ. ಗದ್ದೀಗೌಡರ್, ಮಾಜಿ ಸಚಿವ ಮುರುಗೇಶ ನಿರಾಣಿ, ಹೊಸದಿಗಂತದ ನಿರ್ದೇಶಕ ನಿರ್ಮಲ್ ಕುಮಾರ್ ಸುರಾನ ಹಾಗೂ ಪತ್ರಿಕೆಯ ಸಮೂಹ ಸಂಪಾದಕ ಶಿವಸುಬ್ರಹ್ಮಣ್ಯ ಹಾಜರಿದ್ದರು.  

ಡಾ. ಮುಖರ್ಜಿ ಬಲಿದಾನ ದಿನಾಚರಣೆ

ಬಾಗಲಕೋಟೆ - 0 Comment
Issue Date : 05.08.2014

ಬಾಗಲಕೋಟೆ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರಬೇಕೆಂದು ಹೋರಾಡಿ, ಕಾಶ್ಮೀರದ ಜೈಲಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಧನರಾದ ಜನಸಂಘದ ಸಂಸ್ಥಾಪಕ ಡಾ. ಶಾಮ ಪ್ರಸಾದ ಮುಖರ್ಜಿಯವರ ಬಲಿದಾನ ದಿನವನ್ನು ಇಲ್ಲಿ ಆಚರಿಸಲಾಯಿತು. ಮುಖರ್ಜಿಯವರ ಕುರಿತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಸವರಾಜ ಯಂಕಂಚಿಯವರು ಮಾತನಾಡಿದರು. ಬಿಜೆಪಿ ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶ್ರೀಮತಿ ಕಲಾವತಿ ರಾಜೂರ ಅವರು ಮುಖರ್ಜಿಯವರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ಕಿರಣ್ ಕೋರಿ ಸ್ವಾಗತಿಸಿದರು. ಬಸವರಾಜ ಭಜಂತ್ರಿ ವಂದಿಸಿದರು. ಕಾರ್ಯಕ್ರಮದಲ್ಲಿ ಗುಂಡೂರಾವ್ ಶಿಂಧೆ, ಸುಭಾಸ್ ಕೊಟಾರಿ, ವಿರೂಪಾಕ್ಷ, ಅಮೃತಕರ ರಾಜುಗೌಳಿ, […]