‘ಅಣ್ಣಾ ಹಜಾರೆಗೆ ಸ್ಫೂರ್ತಿಯಾಗಿದ್ದು ಸ್ವಾಮಿ ವಿವೇಕಾನಂದ’

‘ಅಣ್ಣಾ ಹಜಾರೆಗೆ ಸ್ಫೂರ್ತಿಯಾಗಿದ್ದು ಸ್ವಾಮಿ ವಿವೇಕಾನಂದ’

ಬಳ್ಳಾರಿ - 0 Comment
Issue Date : 06.12.2013

ಹಗರಿಬೊಮ್ಮನಹಳ್ಳಿ: ಡಿ. 29ರಂದು ಹಂಪಾಪಟ್ಟಣ ಗ್ರಾಮದಲ್ಲಿ ಮನೆ ಮನೆಗೆ ಸ್ವಾಮಿ ವಿವೇಕಾನಂದ ಎಂಬ ಗ್ರಾಮ ಅಭಿಯಾನವನ್ನು ಆಯೋಜಿಸಲಾಗಿತ್ತು. ಮುಖ್ಯ ವಕ್ತಾರರಾಗಿ ರಾಷ್ಟ್ರೋತ್ಥಾನ ಕಾಲೇಜಿನ ಉಪನ್ಯಾಸಕರಾದ ವೀರೇಶ್.ಎಸ್.ವಿ. ಕಾರ್ಯಕ್ರಮವನ್ನುದ್ದೇಶಿಸಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಅಧ್ಯಯನ ಮಾಡಬೇಕು. ಅವರ ಜೀವನ ಚರಿತ್ರೆಯನ್ನು ಕೇವಲ ಓದಿ-ಬಿಡುವುದಲ್ಲ. ವಿವೇಕಾನಂದರನ್ನು ಅಧ್ಯಯನ ಮಾಡುವುದೆಂದರೆ ಸಮಗ್ರ ಭಾರತವನ್ನು ಒಳಹೊಕ್ಕು ವೀಕ್ಷಿಸಿದಂತೆ. ಸಮಗ್ರ ಹಿಂದು ಧರ್ಮವನ್ನು ಅರಿತು ಮೈಗೂಡಿಸಿಕೊಂಡಂತೆ ಅಷ್ಟೇ ಅಲ್ಲ , ವಿಶ್ವ ಭ್ರಾತೃತ್ವದ ವಿಶಾಲ ಭಾವವನ್ನು ಅಭ್ಯಸಿಸಿದಂತೆ. ಮಾನವತೆಯ ಮರ್ಮವನ್ನು ಮಥಿಸಿ, ಮನನ ಮಾಡಿದಂತೆ […]