ಪದಗಳ ಬಳಕೆ:   ಲೇಖಕರ ಎಚ್ಚರ ಅಗತ್ಯ

ಪದಗಳ ಬಳಕೆ: ಲೇಖಕರ ಎಚ್ಚರ ಅಗತ್ಯ

ಕಾರ್ಯಕ್ರಮಗಳು - 0 Comment
Issue Date : 03.06.2015

ವಿಕ್ರಮ ‘ಲೇಖಕರ ಮಿಲನ’ದಲ್ಲಿ  ಡಾ. ಮನಮೋಹನ ವೈದ್ಯ ಬೆಂಗಳೂರು: ಲೇಖನ ಕೃಷಿಯಲ್ಲಿ ನಿರತರಾಗಿರುವ ಲೇಖಕರು ಪದಗಳ ಸಮರ್ಪಕ ಬಳಕೆಯತ್ತ ತೀವ್ರ ಗಮನ ಹರಿಸಬೇಕು. ಎಲ್ಲರೂ ಬಳಸುತ್ತಾರೆಂದು ತಾವು ಅದೇ ರೀತಿ ಪದಗಳನ್ನು ಬಳಸುವುದು ಅನುಚಿತವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅ.ಭಾ. ಪ್ರಚಾರ ಪ್ರಮುಖ್ ಡಾ. ಮನಮೋಹನ ವೈದ್ಯ ಅವರು ಕಿವಿಮಾತು ಹೇಳಿದ್ದಾರೆ. ವಿಕ್ರಮ ವಾರಪತ್ರಿಕೆ ಮೇ 19ರಂದು ಏರ್ಪಡಿಸಿದ್ದ ‘ಲೇಖಕರ ಮಿಲನ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಇಂಗ್ಲಿಷಿನ ‘ಸೆಕ್ಯುಲರ್’ ಎಂಬ ಪದಕ್ಕೆ […]

ಶ್ರೀ ವಾಸವಿ ದಿವ್ಯ ದರ್ಶನ

ಶ್ರೀ ವಾಸವಿ ದಿವ್ಯ ದರ್ಶನ

ಕಾರ್ಯಕ್ರಮಗಳು - 0 Comment
Issue Date : 07.05.2015

ಜನಮನ ಸೂರೆಗೊಂಡ ಅನನ್ಯ ನೃತ್ಯ ರೂಪಕ ಬೆಂಗಳೂರು: ಇಲ್ಲಿನ ಗಿರಿನಗರದಲ್ಲಿರುವ ಶ್ರೀ ವಾಸವಿ ಕ್ಷೇತ್ರ ಟ್ರಸ್ಟ್ (ರಿ) ರವರು ವಾಸವಿ ಜಯಂತಿ ಪ್ರಯುಕ್ತ ದಿನಾಂಕ 25 ಏಪ್ರಿಲ್ 2015, ಶನಿವಾರ ದಂದು ಸಂಜೆ ಬೆಂಗಳೂರು ನಗರದ ಹೊಸೂರು ರಸ್ತೆಯ ನಿಮ್ಹಾನ್ಸ್ ಕನ್ವೆಂಷನ್ ಸೆಂಟರ್‌ನಲ್ಲಿ ಶ್ರೀ ವಾಸವಿ ದಿವ್ಯದರ್ಶನ ನೃತ್ಯರೂಪಕವನ್ನು ಆಯೋಜಿಸಿದ್ದರು. ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಆರ್ಯವೈಶ್ಯ ಕುಲದ ದೈವವಷ್ಟೇ ಅಲ್ಲ ಆಕೆ ಆದಿಶಕ್ತಿಸ್ವರೂಪಿಣಿ, ಮಹಾ ಮಹಿಮಾನ್ವಿತಳು. ಕಲಿಯುಗದಲ್ಲಿ ಜಗನ್ಮಾತೆಯು ಧರೆಯಲ್ಲಿ ಅವತರಿಸಿ ಸ್ತ್ರೀಶೀಲ ರಕ್ಷಣಾ ಮಹತ್ವವನ್ನು, ಧರ್ಮಶ್ರೀ […]

ಧರ್ಮಾಧಾರಿತ ಶಿಕ್ಷಣದಿಂದ ಭಾರತಕ್ಕೆ ವಿಶ್ವಮಾನ್ಯತೆ

ಧರ್ಮಾಧಾರಿತ ಶಿಕ್ಷಣದಿಂದ ಭಾರತಕ್ಕೆ ವಿಶ್ವಮಾನ್ಯತೆ

ಕಾರ್ಯಕ್ರಮಗಳು - 0 Comment
Issue Date : 07.05.2015

ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಕರೆ ಬೆಂಗಳೂರು: ನಮ್ಮ ಮಕ್ಕಳು ಹಾಗೂ ಯುವ ಪೀಳಿಗೆಗೆ ಧರ್ಮಾಧಾರಿತ ಶಿಕ್ಷಣ ನೀಡುವುದರಿಂದ ಭಾರತವು ವಿಶ್ವಮಾನ್ಯತೆ ಗಳಿಸಬಲ್ಲದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಕರೆ ನೀಡಿದರು. ಚನ್ನೇನಹಳ್ಳಿ ಜನಸೇವಾ ವಿಶ್ವಸ್ತ ಮಂಡಳಿ ವತಿಯಿಂದ ಏ. 30ರಂದು ಜನಸೇವಾ ವಿದ್ಯಾಕೇಂದ್ರ ಆವರಣದಲ್ಲಿ ನಡೆದ ವಸತಿ ಕಟ್ಟಡ ಸಮುಚ್ಚಯ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ವೈಜ್ಞಾನಿಕತೆಯ ಸೋಗಿನಲ್ಲಿ ಧರ್ಮದ ದಾರಿಯೇ ಸರಿಯಿಲ್ಲ ಎನ್ನುವ ಮಾತುಗಳುಕೇಳಿಬರುತ್ತಿವೆ. […]

ಭಾಷೆ ಎಂಬುದು ನಿಂತ ನೀರಲ್ಲ: ಅ.ರಾ. ಮಿತ್ರ

ಭಾಷೆ ಎಂಬುದು ನಿಂತ ನೀರಲ್ಲ: ಅ.ರಾ. ಮಿತ್ರ

ಬೆಂಗಳೂರಿನ ಸುದ್ದಿಗಳು - 0 Comment
Issue Date : 02.05.2015

ಬೆಂಗಳೂರು: ‘ಕನ್ನಡ ಮತ್ತು ತೆಲುಗು ಭಾಷೆಗಳು ಒಂದು ಕಾಲಕ್ಕೆ ಒಂದೇ ಎನ್ನುವಂತಿದ್ದವು. ಆಗಿನ ಜನಕ್ಕೆ ಕನ್ನಡ ಮತ್ತು ತೆಲುಗು ಎಂಬ ಭೇದವಿರಲಿಲ್ಲ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಜನರು ಎರಡೂ ಭಾಷೆಗಳನ್ನು ಮಾತನಾಡುತ್ತಿದ್ದರು. ಆದರೆ ಆಡಳಿತ ಭಾಷೆ ಮಾತ್ರ ಕನ್ನಡವಾಗಿತ್ತು. ಯಾವುದೇ ಭಾಷೆಯನ್ನು ದ್ವೇಷಿಸದೆ ತನ್ನ ಭಾಷೆಯನ್ನು ಪ್ರೀತಿಸುವುದನ್ನು ಕಲಿಸುವುದು ಕರ್ನಾಟಕ’ ಎಂದು ಸಾಹಿತಿ ಹಾಗೂ ಭಾಷಾಶಾಸ್ತ್ರಜ್ಞರಾದ ಅ.ರಾ. ಮಿತ್ರರವರು ಅಭಿಪ್ರಾಯಪಟ್ಟರು. ಕೇಶವ ಕೃಪಾ ಸಂವರ್ಧನ ಸಮಿತಿಯಿಂದ ಕೇಂದ್ರ ಕಾರ್ಯಾಲಯ ಕೇಶವ ಕೃಪಾದಲ್ಲಿ ಆಯೋಜಿಸಿದ್ದ ‘ಸ್ನೇಹ ಮಿಲನ’ ಕಾರ್ಯಕ್ರಮದಲ್ಲಿ ಸಂವಾದದಲ್ಲಿ […]

ರಾಷ್ಟ್ರೀಯ ಸಮಗ್ರತೆ: ಯಾವುದೇ ರಾಜಿ ಇಲ್ಲ

ರಾಷ್ಟ್ರೀಯ ಸಮಗ್ರತೆ: ಯಾವುದೇ ರಾಜಿ ಇಲ್ಲ

ಬೆಂಗಳೂರಿನ ಸುದ್ದಿಗಳು - 0 Comment
Issue Date : 20.04.2015

ಬೆಂಗಳೂರು: ಜಮ್ಮು – ಕಾಶ್ಮೀರ ರಾಜ್ಯದಲ್ಲಿ ರಚನೆಯಾಗಿರುವ ಬಿಜೆಪಿ – ಪಿಡಿಪಿ ಮೈತ್ರಿಕೂಟ ಸರ್ಕಾರವು ರಾಜ್ಯದ ಆಡಳಿತ ಹಾಗೂ ಸಂವಿಧಾನದ ಆಶಯಗಳನ್ನು ಪೂರೈಸಲು ಬದ್ಧವಾಗಿದೆ. ಬಿಜೆಪಿಯು ಆ ರಾಜ್ಯದ ಜನಾದೇಶವನ್ನು ಗೌರವಿಸಿದೆ. ಅದಕ್ಕಾಗಿಯೇ ಅದು ಈಗ ಆ ರಾಜ್ಯ ಸರ್ಕಾರದ ಮೈತ್ರಿಕೂಟದ ಅಂಗ ಪಕ್ಷವಾಗಿದೆ. ಅಭಿವೃದ್ಧಿ ಪರವಾಗಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಆಧಾರದ ಮೇಲೆ ಸರ್ಕಾರ ರಚಿತವಾಗಿದ್ದು, ಜಮ್ಮು – ಕಾಶ್ಮೀರದ ವಿಷಯ ರಾಷ್ಟ್ರೀಯ ಹಿತಾಸಕ್ತಿ ವಿಷಯದಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿಯ ಪ್ರಧಾನ […]

2018ಕ್ಕೆ ಕರ್ನಾಟಕ ಬಯಲು ಬಹಿರ್ದೆಸೆಮುಕ್ತ : ಎಚ್.ಕೆ. ಪಾಟೀಲ್‍

ಬೆಂಗಳೂರು - 0 Comment
Issue Date : 26.11.2014

ಬೆಂಗಳೂರು: 2018ರ ಅಂತ್ಯಕ್ಕೆ ಕರ್ನಾಟಕ ಬಯಲು ಬಹಿರ್ದೆಸೆಮುಕ್ತವಾಗಲಿದೆ. 2015ರ ಜನವರಿ 26ರಂದು ಉಡುಪಿಯನ್ನು ಬಯಲು ಬಹಿರ್ದೆಸೆಮುಕ್ತ ಜಿಲ್ಲೆಯಾಗಿ ಘೋಷಿಸಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ. ನ. 19ರಂದು ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ, ಸಿಡಿಎಲ್ ಫೌಂಡೇಷನ್ ಮತ್ತು ಯುನಿಸೆಫ್ ಆಯೋಜಿಸಿದ್ದ ‘ವಿಶ್ವ ಶೌಚಾಯಲ ದಿನಾಚರಣೆ ಮತ್ತು ಮಾಧ್ಯಮ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು. ಎಲ್ಲರೂ ಶೌಚಾಲಯದ ಬಗ್ಗೆ ಮಾತ್ರ ಗಮನಹರಿಸಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಬಚ್ಚಲ ಮನೆ ಇಲ್ಲದೆ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ಕಡೆ […]

ದಕ್ಷಿಣ ಕರ್ನಾಟಕ ಪ್ರಾಂತ ಸಂಘಚಾಲಕರಾಗಿ ಮ. ವೆಂಕಟರಾಮು ಪುನರಾಯ್ಕೆ

ದಕ್ಷಿಣ ಕರ್ನಾಟಕ ಪ್ರಾಂತ ಸಂಘಚಾಲಕರಾಗಿ ಮ. ವೆಂಕಟರಾಮು ಪುನರಾಯ್ಕೆ

ಬೆಂಗಳೂರು - 0 Comment
Issue Date : 26.11.2014

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಹಾಗೂ ಸಾಮರಸ್ಯ ವೇದಿಕೆಯ ರಾಜ್ಯ ಸಂಚಾಲಕರಾಗಿರುವ ಮ.ವೆಂಕಟರಾಮು ಅವರು ಮತ್ತೊಂದು ಅವಧಿಗೆ ಸಂಘದ ದಕ್ಷಿಣ ಕರ್ನಾಟಕದ ಪ್ರಾಂತ ಸಂಘಚಾಲಕರಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ನ.16ರಂದು ಜರುಗಿದ ಪ್ರಾಂತದ ಜಿಲ್ಲಾಕಾರ್ಯವಾಹ ಮತ್ತು ಮೇಲ್ಪಟ್ಟ ಕಾರ್ಯಕರ್ತರ ಬೈಠಕ್ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ವೆಂಕಟರಾಮು ಅವರು ಅವಿರೋಧವಾಗಿ ನಾಲ್ಕನೇ ಬಾರಿಗೆ ಪ್ರಾಂತಸಂಘಚಾಲಕರಾಗಿ ಆಯ್ಕೆಯಾದರು. 2006ರಿಂದ ಅವರು ಸಂಘದ ದಕ್ಷಿಣ ಕರ್ನಾಟಕದ ಪ್ರಾಂತ ಸಂಘಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, […]

ಹೊ.ವೆ.ಶೇಷಾದ್ರಿ ಸ್ಮಾರಕ ಕ್ರೀಡಾಂಗಣ ಉದ್ಘಾಟನೆ

ಹೊ.ವೆ.ಶೇಷಾದ್ರಿ ಸ್ಮಾರಕ ಕ್ರೀಡಾಂಗಣ ಉದ್ಘಾಟನೆ

ಬೆಂಗಳೂರು - 0 Comment
Issue Date : 26.11.2014

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ನ.17ರಂದು ಇಲ್ಲಿಗೆ ಸಮೀಪದ ಜಿಗಣಿಯಲ್ಲಿರುವ ಪ್ರಶಾಂತಿ ಕುಟೀರಂ ಆವರಣದಲ್ಲಿ ನೂತನವಾಗಿ ನಿರ್ಮಿತವಾಗಿರುವ ಹೊ.ವೆ.ಶೇಷಾದ್ರಿ ಸ್ಮಾರಕ ಕ್ರೀಡಾಂಗಣವನ್ನು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು, ‘ಹೊ.ವೆ.ಶೇಷಾದ್ರಿಯವರು ಸಂಘದ ಹಿರಿಯ ಪ್ರಚಾರಕರಾಗಿದ್ದರು. ಸಂಘದ ಸರಕಾರ್ಯವಾಹರಾಗಿ ಕಾರ್ಯನಿರ್ವಹಿಸಿದ ಅವರು, ವಿಶೇಷವಾಗಿ ಬುದ್ಧಿಜೀವಿಗಳ ವಲಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಜೊತೆಗೆ ಸ್ವಯಂಸೇವಕರಿಗೆ ತಮ್ಮ ಕೌಶಲ್ಯವನ್ನು ಸುಧಾರಿಸಿಕೊಳ್ಳಲು ಉತ್ತಮ ಮಾರ್ಗದರ್ಶಕರಾಗಿದ್ದರು. ಸಂಘದಲ್ಲಿ ಯೋಗವನ್ನು ತನ್ನ ಶಾರೀರಿಕ ಚಟುವಟಿಕೆಯ ಭಾಗವಾಗಿ ಅಳವಡಿಸಿಕೊಳ್ಳುವಲ್ಲಿ ಶೇಷಾದ್ರಿಗಳ ಕೊಡುಗೆ […]

ಸಾಹಿತ್ಯ ಪರಿಷತ್ ವತಿಯಿಂದ ವಾಲ್ಮೀಕಿ ಜಯಂತಿ

ಕಾರ್ಯಕ್ರಮಗಳು - 0 Comment
Issue Date : 12.11.2014

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬೆಂಗಳೂರು ಘಟಕದ ವತಿಯಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಬೆಂಗಳೂರಿನ ರಾಮಾಯಣ ಪ್ರಸರಣ ಕೇಂದ್ರದ ಸುರೇಶ್‌ಕುಮಾರ್ ‘ಕಾವ್ಯವಾಯಿತು ಶಾಪ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಶೇಷಾದ್ರಿಪುರಂನ ಯಾದವಸ್ಮೃತಿಯ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಹಾಗೂ ಸಾಹಿತ್ಯ ಪರಿಷತ್‌ನ ಮಾರ್ಗದರ್ಶಕ ಚಂದ್ರಶೇಖರ ಭಂಡಾರಿ, ಪರಿಷತ್‌ನ ಬೆಂಗಳೂರು ಘಟಕದ ಅಧ್ಯಕ್ಷ ಬಾಬುಕೃಷ್ಣ ಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಐಟಿ ಮಿಲನ್ ಸ್ವಯಂಸೇವಕರಿಂದ ಗೋಶಾಲೆ ಸ್ವಚ್ಛತೆ

ಕಾರ್ಯಕ್ರಮಗಳು - 0 Comment
Issue Date : 12.11.2014

ಬೆಂಗಳೂರು: ಆರೆಸ್ಸೆಸ್‌ನ ಐಟಿ ಮಿಲನ್ ಸ್ವಯಂಸೇವಕರು (ಸಾಫ್ಟ್‌ವೇರ್ ಇಂಜಿನಿಯರ್‌ಗಳ ಯುವತಂಡ) ಇಲ್ಲಿನ ಗೋಶಾಲೆಯೊಂದರ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸೇವಾ ಚಟುವಟಿಕೆಗೆ ಚಾಲನೆ ನೀಡಿದರು. ಭಾನುವಾರ ಬೆಳಿಗ್ಗೆ ಸ್ವಯಂಸೇವಕರು ಬೆಂಗಳೂರು ಹೊರವಲಯದಲ್ಲಿರುವ ಮಾಲೂರು ರಸ್ತೆಯ ರಾಘವೇಂದ್ರ ಗೋಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.