ಪದಗಳ ಬಳಕೆ:   ಲೇಖಕರ ಎಚ್ಚರ ಅಗತ್ಯ

ಪದಗಳ ಬಳಕೆ: ಲೇಖಕರ ಎಚ್ಚರ ಅಗತ್ಯ

ಕಾರ್ಯಕ್ರಮಗಳು - 0 Comment
Issue Date : 03.06.2015

ವಿಕ್ರಮ ‘ಲೇಖಕರ ಮಿಲನ’ದಲ್ಲಿ  ಡಾ. ಮನಮೋಹನ ವೈದ್ಯ ಬೆಂಗಳೂರು: ಲೇಖನ ಕೃಷಿಯಲ್ಲಿ ನಿರತರಾಗಿರುವ ಲೇಖಕರು ಪದಗಳ ಸಮರ್ಪಕ ಬಳಕೆಯತ್ತ ತೀವ್ರ ಗಮನ ಹರಿಸಬೇಕು. ಎಲ್ಲರೂ ಬಳಸುತ್ತಾರೆಂದು ತಾವು ಅದೇ ರೀತಿ ಪದಗಳನ್ನು ಬಳಸುವುದು ಅನುಚಿತವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅ.ಭಾ. ಪ್ರಚಾರ ಪ್ರಮುಖ್ ಡಾ. ಮನಮೋಹನ ವೈದ್ಯ ಅವರು ಕಿವಿಮಾತು ಹೇಳಿದ್ದಾರೆ. ವಿಕ್ರಮ ವಾರಪತ್ರಿಕೆ ಮೇ 19ರಂದು ಏರ್ಪಡಿಸಿದ್ದ ‘ಲೇಖಕರ ಮಿಲನ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಇಂಗ್ಲಿಷಿನ ‘ಸೆಕ್ಯುಲರ್’ ಎಂಬ ಪದಕ್ಕೆ […]

ಶ್ರೀ ವಾಸವಿ ದಿವ್ಯ ದರ್ಶನ

ಶ್ರೀ ವಾಸವಿ ದಿವ್ಯ ದರ್ಶನ

ಕಾರ್ಯಕ್ರಮಗಳು - 0 Comment
Issue Date : 07.05.2015

ಜನಮನ ಸೂರೆಗೊಂಡ ಅನನ್ಯ ನೃತ್ಯ ರೂಪಕ ಬೆಂಗಳೂರು: ಇಲ್ಲಿನ ಗಿರಿನಗರದಲ್ಲಿರುವ ಶ್ರೀ ವಾಸವಿ ಕ್ಷೇತ್ರ ಟ್ರಸ್ಟ್ (ರಿ) ರವರು ವಾಸವಿ ಜಯಂತಿ ಪ್ರಯುಕ್ತ ದಿನಾಂಕ 25 ಏಪ್ರಿಲ್ 2015, ಶನಿವಾರ ದಂದು ಸಂಜೆ ಬೆಂಗಳೂರು ನಗರದ ಹೊಸೂರು ರಸ್ತೆಯ ನಿಮ್ಹಾನ್ಸ್ ಕನ್ವೆಂಷನ್ ಸೆಂಟರ್‌ನಲ್ಲಿ ಶ್ರೀ ವಾಸವಿ ದಿವ್ಯದರ್ಶನ ನೃತ್ಯರೂಪಕವನ್ನು ಆಯೋಜಿಸಿದ್ದರು. ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಆರ್ಯವೈಶ್ಯ ಕುಲದ ದೈವವಷ್ಟೇ ಅಲ್ಲ ಆಕೆ ಆದಿಶಕ್ತಿಸ್ವರೂಪಿಣಿ, ಮಹಾ ಮಹಿಮಾನ್ವಿತಳು. ಕಲಿಯುಗದಲ್ಲಿ ಜಗನ್ಮಾತೆಯು ಧರೆಯಲ್ಲಿ ಅವತರಿಸಿ ಸ್ತ್ರೀಶೀಲ ರಕ್ಷಣಾ ಮಹತ್ವವನ್ನು, ಧರ್ಮಶ್ರೀ […]

ಧರ್ಮಾಧಾರಿತ ಶಿಕ್ಷಣದಿಂದ ಭಾರತಕ್ಕೆ ವಿಶ್ವಮಾನ್ಯತೆ

ಧರ್ಮಾಧಾರಿತ ಶಿಕ್ಷಣದಿಂದ ಭಾರತಕ್ಕೆ ವಿಶ್ವಮಾನ್ಯತೆ

ಕಾರ್ಯಕ್ರಮಗಳು - 0 Comment
Issue Date : 07.05.2015

ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಕರೆ ಬೆಂಗಳೂರು: ನಮ್ಮ ಮಕ್ಕಳು ಹಾಗೂ ಯುವ ಪೀಳಿಗೆಗೆ ಧರ್ಮಾಧಾರಿತ ಶಿಕ್ಷಣ ನೀಡುವುದರಿಂದ ಭಾರತವು ವಿಶ್ವಮಾನ್ಯತೆ ಗಳಿಸಬಲ್ಲದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಕರೆ ನೀಡಿದರು. ಚನ್ನೇನಹಳ್ಳಿ ಜನಸೇವಾ ವಿಶ್ವಸ್ತ ಮಂಡಳಿ ವತಿಯಿಂದ ಏ. 30ರಂದು ಜನಸೇವಾ ವಿದ್ಯಾಕೇಂದ್ರ ಆವರಣದಲ್ಲಿ ನಡೆದ ವಸತಿ ಕಟ್ಟಡ ಸಮುಚ್ಚಯ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ವೈಜ್ಞಾನಿಕತೆಯ ಸೋಗಿನಲ್ಲಿ ಧರ್ಮದ ದಾರಿಯೇ ಸರಿಯಿಲ್ಲ ಎನ್ನುವ ಮಾತುಗಳುಕೇಳಿಬರುತ್ತಿವೆ. […]

ಸಾಹಿತ್ಯ ಪರಿಷತ್ ವತಿಯಿಂದ ವಾಲ್ಮೀಕಿ ಜಯಂತಿ

ಕಾರ್ಯಕ್ರಮಗಳು - 0 Comment
Issue Date : 12.11.2014

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬೆಂಗಳೂರು ಘಟಕದ ವತಿಯಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಬೆಂಗಳೂರಿನ ರಾಮಾಯಣ ಪ್ರಸರಣ ಕೇಂದ್ರದ ಸುರೇಶ್‌ಕುಮಾರ್ ‘ಕಾವ್ಯವಾಯಿತು ಶಾಪ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಶೇಷಾದ್ರಿಪುರಂನ ಯಾದವಸ್ಮೃತಿಯ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಹಾಗೂ ಸಾಹಿತ್ಯ ಪರಿಷತ್‌ನ ಮಾರ್ಗದರ್ಶಕ ಚಂದ್ರಶೇಖರ ಭಂಡಾರಿ, ಪರಿಷತ್‌ನ ಬೆಂಗಳೂರು ಘಟಕದ ಅಧ್ಯಕ್ಷ ಬಾಬುಕೃಷ್ಣ ಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಐಟಿ ಮಿಲನ್ ಸ್ವಯಂಸೇವಕರಿಂದ ಗೋಶಾಲೆ ಸ್ವಚ್ಛತೆ

ಕಾರ್ಯಕ್ರಮಗಳು - 0 Comment
Issue Date : 12.11.2014

ಬೆಂಗಳೂರು: ಆರೆಸ್ಸೆಸ್‌ನ ಐಟಿ ಮಿಲನ್ ಸ್ವಯಂಸೇವಕರು (ಸಾಫ್ಟ್‌ವೇರ್ ಇಂಜಿನಿಯರ್‌ಗಳ ಯುವತಂಡ) ಇಲ್ಲಿನ ಗೋಶಾಲೆಯೊಂದರ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸೇವಾ ಚಟುವಟಿಕೆಗೆ ಚಾಲನೆ ನೀಡಿದರು. ಭಾನುವಾರ ಬೆಳಿಗ್ಗೆ ಸ್ವಯಂಸೇವಕರು ಬೆಂಗಳೂರು ಹೊರವಲಯದಲ್ಲಿರುವ ಮಾಲೂರು ರಸ್ತೆಯ ರಾಘವೇಂದ್ರ ಗೋಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.