ಕೇಶವಾಕೃಪಾಕ್ಕೆ ಆದಿಚುಂಚನಗಿರಿ ಶ್ರೀಗಳು

ಕೇಶವಾಕೃಪಾಕ್ಕೆ ಆದಿಚುಂಚನಗಿರಿ ಶ್ರೀಗಳು

ಬೆಂಗಳೂರಿನ ಸುದ್ದಿಗಳು - 0 Comment
Issue Date : 28.07.2014

ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಜು. 24ರಂದು ಸಂಘದ ಪ್ರಾಂತ ಕಾರ್ಯಾಲಯ ಕೇಶವಕೃಪಾಕ್ಕೆ ಭೇಟಿ ನೀಡಿ, ಅಲ್ಲಿ ಸೇರಿದ್ದ ಸಂಘ ಪರಿವಾರದ ವಿವಿಧ ಕ್ಷೇತ್ರಗಳ ಪ್ರಮುಖರ ಸಭೆಯಲ್ಲಿ ಆಶೀರ್ವಚನ ನೀಡಿದರು. ಚಿತ್ರದಲ್ಲಿ ಸಂಘದ ಹಿರಿಯ ಪ್ರಚಾರಕರಾದ ನ. ಕೃಷ್ಣಪ್ಪ, ಅ.ಭಾ. ಸಹವ್ಯವಸ್ಥಾ ಪ್ರಮುಖರಾದ ಮಂಗೇಶ್ ಭೇಂಡೆ ಹಾಗೂ ದಕ್ಷಿಣ ಪ್ರಾಂತ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರು ಸ್ವಾಮೀಜಿಯವರೊಂದಿಗೆ ಇರುವುದನ್ನು ಕಾಣಬಹುದು. ಇದಕ್ಕೂ ಮುನ್ನ ಸ್ವಾಮೀಜಿಯವರು ಹಿಂದೂ ಸೇವಾ ಪ್ರತಿಷ್ಠಾನದ ‘ನೆಲೆ’, ‘ಅಜಿತಶ್ರೀ’ ಮುಂತಾದ ಕೇಂದ್ರಗಳಿಗೆ […]

ಧರ್ಮದ ರಕ್ಷಣೆ ಪ್ರತಿಯೊಬ್ಬರ ಹೊಣೆ: ನ.ಕೃಷ್ಣಪ್ಪ

ಧರ್ಮದ ರಕ್ಷಣೆ ಪ್ರತಿಯೊಬ್ಬರ ಹೊಣೆ: ನ.ಕೃಷ್ಣಪ್ಪ

ಬೆಂಗಳೂರಿನ ಸುದ್ದಿಗಳು - 0 Comment
Issue Date : 21.07.2014

ಬೆಂಗಳೂರು: ಇಂದಿನ ದಿನಗಳಲ್ಲಿ ಧರ್ಮವನ್ನು ಕಾಪಾಡುವ ಕೆಲಸ ಆಗಬೇಕಾಗಿದೆ. ಜನತೆ ಧರ್ಮದಿಂದ ಅರ್ಥ-ಕಾಮ – ಮೋಕ್ಷವನ್ನು ಸಾಧಿಸಬೇಕು. ಶಕ್ತಿಯಿಂದ ಎಲ್ಲವನ್ನೂ ಗೆಲ್ಲುವೆ ಎಂಬ ಪ್ರಸ್ತುತ ಮನೋಭಾವನೆಯನ್ನು ತೊರೆದು ಸನ್ನಡತೆಯ ಸ್ವಭಾವದಿಂದ ಎಲ್ಲರನ್ನು ಸಮಾನತೆಯಿಂದ ಕಾಣುವ ಮನಸ್ಸನ್ನು ರೂಪಿಸಬೇಕಾಗಿದೆ. ವ್ಯಾಸರು ನೀಡಿದ ಅನೇಕ ವಿಚಾರಗಳನ್ನು ಮರೆಯದೆ ಜೀವನದಲ್ಲಿ ಅಳವಡಿಸಬೇಕಾಗಿದೆ ಎಂದು ಸಂಘದ ಹಿರಿಯ ಪ್ರಚಾರಕ ನ. ಕೃಷ್ಣಪ್ಪ ಅವರು ಅಭಿಪಾಯಪಟ್ಟರು.ನಗರದ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬೆಂಗಳೂರು ಘಟಕದ ಶುಭಾರಂಭ ಮತ್ತು ವ್ಯಾಸ ಜಯಂತಿ ಪ್ರಯುಕ್ತ ಉಪನ್ಯಾಸ ನೀಡುತ್ತಾ […]

ದಲಿತರ ಏಳಿಗೆಗೆ ಮೇಲ್ವರ್ಗದವರ ಕೊಡುಗೆ ಅತ್ಯಮೂಲ್ಯ: ಡಾ. ಸಿದ್ದಲಿಂಗಯ್ಯ

ದಲಿತರ ಏಳಿಗೆಗೆ ಮೇಲ್ವರ್ಗದವರ ಕೊಡುಗೆ ಅತ್ಯಮೂಲ್ಯ: ಡಾ. ಸಿದ್ದಲಿಂಗಯ್ಯ

ಬೆಂಗಳೂರಿನ ಸುದ್ದಿಗಳು - 0 Comment
Issue Date : 16.07.2014
‘ವ್ಯಕ್ತಿ ಬದಲಾವಣೆ ಆದಾಗ ದೇಶದ ಅಭಿವೃದ್ಧಿ ಸಾಧ್ಯ’

‘ವ್ಯಕ್ತಿ ಬದಲಾವಣೆ ಆದಾಗ ದೇಶದ ಅಭಿವೃದ್ಧಿ ಸಾಧ್ಯ’

ಬೆಂಗಳೂರಿನ ಸುದ್ದಿಗಳು - 0 Comment
Issue Date : 07.07.2014

ಬೆಂಗಳೂರು: ಸರ್ಕಾರ, ಸರ್ಕಾರದ ವ್ಯವಸ್ಥೆ ಏನೇ ಬದಲಾವಣೆಯಾದರೂ ಅದರ ಉಪಯುಕ್ತತೆ ಸಮಾಜಕ್ಕೆ ದೊರಕುವುದು ಸಮಾಜದಲ್ಲಿನ ವ್ಯಕ್ತಿಗಳು ಬದಲಾವಣೆ ಆದಾಗ ಮಾತ್ರ. ವ್ಯಕ್ತಿಗಳ ಬೆಲೆ ನಿಗದಿ ಮಾಡುವುದು ಅವನ ಚಿಂತನೆ, ಯೋಜನೆಯ ರೀತಿ ಹಾಗೂ ವ್ಯಕ್ತಿತ್ವವೇ ಹೊರತು ಅವನ ಹೊರ ರೂಪದಿಂದಲ್ಲ. ಅಷ್ಟಾವಕ್ರ ಎಷ್ಟೇ ಕುರೂಪಿಯಾಗಿದ್ದರೂ ಅವನ ಪ್ರಚಂಡ ಬುದ್ಧಿವಂತನಾಗಿದ್ದ. ನಮ್ಮ ಓದಿನಿಂದ ತಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಬೇಕು. ತನ್ಮೂಲಕ ನಾವು ದೇಶಕ್ಕೆ ಉಪಯೋಗವಾಗುವ ರೀತಿಯಲ್ಲಿ ಬಾಳಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಕರ್ನಾಟಕ ಪ್ರಾಂತ ಪ್ರಚಾರಕ ಮುಕುಂದ್ […]

ಬೆಂಗಳೂರು ಸಾಹಿತ್ಯ ಪರಿಷತ್ ಘಟಕ ಅಸ್ತಿತ್ವಕ್ಕೆ

ಬೆಂಗಳೂರು ಸಾಹಿತ್ಯ ಪರಿಷತ್ ಘಟಕ ಅಸ್ತಿತ್ವಕ್ಕೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 07.07.2014

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬೆಂಗಳೂರು ಘಟಕ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದ್ದು ಖ್ಯಾತ ಸಾಹಿತಿ ಬಾಬು ಕೃಷ್ಣಮೂರ್ತಿ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಜೂ. 29ರಂದು ನಡೆದ ಸಭೆಯಲ್ಲಿ ಹಿರಿಯ ಪ್ರಚಾರಕ ಹಾಗೂ ಲೇಖಕ ಚಂದ್ರಶೇಖರ ಭಂಡಾರಿ ಅವರು ಸಾಹಿತ್ಯ ಪರಿಷತ್ತಿನ ಉದ್ದೇಶ ಹಾಗೂ ವಿವರಗಳನ್ನು ನೀಡಿದರು. ಪ್ರಾಂತ ಕಾರ್ಯವಾಹ ಎನ್. ತಿಪ್ಪೇಸ್ವಾಮಿ ಅವರು ಮುಂದಿನ ಒಂದು ವರ್ಷಕ್ಕೆ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳನ್ನು ಘೋಷಿಸಿದರು. ಪದಾಧಿಕಾರಿಗಳ ವಿವರ: ಬಾಬು ಕೃಷ್ಣಮೂರ್ತಿ (ಅಧ್ಯಕ್ಷರು), ಕೋಟೇಶ್ವರ ಸೂರ್ಯನಾರಾಯಣ ರಾವ್ (ಉಪಾಧ್ಯಕ್ಷರು), ಎಸ್. […]

ಎಸ್ಸೆಸ್ಸೆಲ್ಸಿ: ಬಿಂದು ಮಾಧವ ಹೊಳ್ಳ ಶೇ. 96.80

ಬೆಂಗಳೂರಿನ ಸುದ್ದಿಗಳು - 0 Comment
Issue Date : 01.07.2014

ಬೆಂಗಳೂರು: ಈ ಬಾರಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಿಂದು ಮಾಧವ ಹೊಳ್ಳ ಶೇ. 96.80 ಅಂಕ ಪಡೆದು ಶಾಲೆಗೆ ಹಾಗೂ ಕುಟುಂಬಕ್ಕೆ ಕೀರ್ತಿ ತಂದಿದ್ದಾನೆ.ತಲಘಟ್ಟಪುರದ ಯಶಸ್ವಿ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಓದುತ್ತಿದ್ದ ಬಿಂದು ಮಾಧವ ಹೊಳ್ಳ ಚಿಕ್ಕಂದಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ. ಒಂದು ಶಾಖೆಯ ಮುಖ್ಯ ಶಿಕ್ಷಕನಾಗಿ, ಯಾವುದೇ ಟ್ಯೂಷನ್‌ಗೆ ಹೋಗದೆ ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಮೊದಲಿಗನಾಗಿ ಉತ್ತೀರ್ಣನಾಗಿದ್ದಾನೆ. ಈತ ಸಂಘದ ಬನಶಂಕರಿ ಭಾಗದ ಸಹಬೌದ್ಧಿಕ ಪ್ರಮುಖ್ ಪ್ರಕಾಶ್ ಹೊಳ್ಳ ಹಾಗೂ […]

ಕಬ್ಬು ಬೆಳೆಗಾರರಿಗೆ ನ್ಯಾಯ: ಕಿಸಾನ್ ಸಂಘ ಆಗ್ರಹ

ಬೆಂಗಳೂರಿನ ಸುದ್ದಿಗಳು - 0 Comment
Issue Date : 01.07.2014

ಬೆಂಗಳೂರು: ವಿಜಾಪುರ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ತಾರತಮ್ಯ ನಿವಾರಿಸಿ ಅವರಿಗೆ ನ್ಯಾಯ ಒದಗಿಸಬೇಕೆಂದು ಭಾರತೀಯ ಕಿಸಾನ್ ಸಂಘ ತನ್ನ ನಿರ್ಣಯದಲ್ಲಿ ತಿಳಿಸಿದೆ. ಜೂ. 22ರಂದು ಯಳಂದೂರು ರಂಗನಾಥ ಅವರ ಅಧ್ಯಕ್ಷತೆಯಲ್ಲಿ ಜರುಗಿದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ ಸ್ವೀಕರಿಸಲಾಯಿತು.ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆಗಾಗಿ ಡಾ. ಸ್ವಾಮಿನಾಥನ್ ವರದಿಯನ್ನು ಕೂಡಲೇ ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಕರ್ನಾಟಕದಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಹಣ ಒದಗಿಸಿ ಪೂರ್ಣಗೊಳಿಸಬೇಕು ಮುಂತಾದ ನಿರ್ಣಯಗಳನ್ನು ಸಭೆಯಲ್ಲಿ ಸ್ವೀಕರಿಸಲಾಗಿದೆ.ರಾಜ್ಯ ಪ್ರಧಾನ ಕಾರ್ಯದರ್ಶಿ […]

ಪ್ರಶಸ್ತಿ ಪ್ರದಾನ ಸಮಾರಂಭ

ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರಿನ ಸುದ್ದಿಗಳು - 0 Comment
Issue Date : 23.06.2014

ಸಂಸ್ಕೃತ ಸಂಭಾಷಣಾ ಸಂದೇಶ ಪತ್ರಿಕೆಯ ಸಂಪಾದಕ, ವಿದ್ವಾಂಸ ಹಾಗೂ ಲೇಖಕ ಡಾ. ಜನಾರ್ದನ ಹೆಗಡೆ ಅವರಿಗೆ ಅನುವಾದ ಕ್ಷೇತ್ರದಲ್ಲಿ ಮಾಡಿರುವ ಅಪೂರ್ವ ಸಾಧನೆಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 2011-12ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಚಿವೆ ಉಮಾಶ್ರೀ ಜೂ. 19ರಂದು ಕಲಾಗ್ರಾಮದ ಸುವರ್ಣ ಸಂಸ್ಕೃತಿ ಸಮುಚ್ಚಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಪ್ರಶಸ್ತಿ ಪ್ರದಾನ ಸಮಾರಂಭ

ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರಿನ ಸುದ್ದಿಗಳು - 0 Comment
Issue Date : 23.06.2014

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಹಾಗೂ ಲೇಖಕ ಚಂದ್ರಶೇಖರ ಭಂಡಾರಿ ಅವರು ಅನುವಾದಿಸಿರುವ ‘ಸಾಮಾಜಿಕ ಕ್ರಾಂತಿ ಸೂರ್ಯ’ ಕೃತಿಯ ಅನುವಾದಕ್ಕೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2011ನೇ ಸಾಲಿನ ಅನುವಾದ ಪುರಸ್ಕಾರವನ್ನು ಜೂ. 19ರಂದು ಬೆಂಗಳೂರಿನ ಕಲಾಗ್ರಾಮದ ಸುವರ್ಣ ಸಂಸ್ಕೃತಿ ಸಮುಚ್ಚಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಪ್ರದಾನ ಮಾಡಿದರು.  

ಸಾಮಾಜಿಕ ಕ್ರಾಂತಿ ಸೂರ್ಯ ಕೃತಿಗೆ ರಾಜ್ಯಸರ್ಕಾರ ಪ್ರಶಸ್ತಿ

ಸಾಮಾಜಿಕ ಕ್ರಾಂತಿ ಸೂರ್ಯ ಕೃತಿಗೆ ರಾಜ್ಯಸರ್ಕಾರ ಪ್ರಶಸ್ತಿ

ಬೆಂಗಳೂರಿನ ಸುದ್ದಿಗಳು - 0 Comment
Issue Date : 12.06.2014

ಬೆಂಗಳೂರು.:  ಖ್ಯಾತ ಲೇಖಕ, ಸಂಘದ ಹಿರಿಯ ಪ್ರಚಾರಕ ಚಂದ್ರಶೇಖರ ಭಂಡಾರಿ ಅವರು ಅನುವಾದಿಸಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕುರಿತ ‘ ಸಾಮಾಜಿಕ ಕ್ರಾಂತಿ ಸೂರ್ಯ’ ಎಂಬ ಕೃತಿಗೆ ಕರ್ನಾಟಕದ ಸರ್ಕಾರದ ಪ್ರತಿಷ್ಠಿತ ಕುವೆಂಪು ಭಾಷಾ ಭಾರತಿ ಪ್ರಶಸ್ತಿ ಲಭಿಸಿದೆ. 2011ರಲ್ಲಿ ಅವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ದತ್ತೋಪಂತ ಠೇಂಗಡಿ ಅವರ ‘ಸಾಮಾಜಿಕ ಕ್ರಾಂತಿಸೂರ್ಯ ಡಾ.ಬಿ.ಆರ್. ಅಂಬೇಡ್ಕರ್’ ಕೃತಿಗೆ ಈ ಪ್ರಶಸ್ತಿ ನೀಡಲಾಗಿದೆ. ಚಂದ್ರಶೇಖರ ಭಂಡಾರಿ 79 ವರ್ಷ ವಯಸ್ಸಿನ ಚಂದ್ರಶೇಖರ ಭಂಡಾರಿ ಅವರು ಸಂಘಕ್ಕೆ ಸಂಬಂಧಿಸಿದ ಹಾಗೂ ಇತರೆ […]