‘ಹಿಂದೂ ಎನ್ನುವುದೊಂದು ಜೀವನ ತತ್ತ್ವ’

‘ಹಿಂದೂ ಎನ್ನುವುದೊಂದು ಜೀವನ ತತ್ತ್ವ’

ಬೆಂಗಳೂರಿನ ಸುದ್ದಿಗಳು - 0 Comment
Issue Date : 02.06.2014

ಬೆಂಗಳೂರು:  ಹಿಂದೂ ಎನ್ನುವುದು ಧರ್ಮವಲ್ಲ , ಅದೊಂದು ಜೀವನತತ್ತ್ವ. ಪ್ರತಿಯೊಬ್ಬ ಭಾರತೀಯನ ನಿತ್ಯ ಜೀವನದಲ್ಲಿ ಪ್ರಭಾವಿಸುವ ತತ್ತ್ವ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಚ್.ಎಲ್.ದತ್ತು ಅಭಿಪ್ರಾಯಪಟ್ಟರು. ಸ್ವಾಮಿ ಹರ್ಷಾನಂದ ಅವರ ‘ಹಿಂದುತ್ವದ ವಿಶ್ವಕೋಶ’ ಕೃತಿಯ ನಾಲ್ಕನೇ ಆವೃತ್ತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ‘ನ್ಯಾಯಾಲಯದಲ್ಲಿ ನನ್ನ ಮುಂದೆ ಬಂದ ಪ್ರಕರಣವೊಂದರಲ್ಲಿ ತೀರ್ಪು ಕೊಡಬೇಕಾದ ಸಂದರ್ಭಕ್ಕಾಗಿ ಹಿಂದುತ್ವದ ವಿಶ್ವಕೋಶ ಕೃತಿಯನ್ನು ಮೊದಲ ಬಾರಿಗೆ ಗಮನಿಸಿದೆ. ಅನಂತರ ಇಡೀ ಕೃತಿ ನನ್ನೊಳಗೆ ಕುಳಿತುಬಿಟ್ಟಿತು. ಈ ಕೃತಿ ಎರಡನೇ ಭಗವದ್ಗೀತೆಯಾಗಿದೆ. ಇದರಲ್ಲಿನ ಯಾವುದೇ […]

ಸಮಗ್ರ ವೈದ್ಯಕೀಯ ಪದ್ಧತಿ ಅಗತ್ಯ: ಭಾರದ್ವಾಜ್

ಬೆಂಗಳೂರಿನ ಸುದ್ದಿಗಳು - 0 Comment
Issue Date : 06.05.2014

  ಬೆಂಗಳೂರು: ಜನಸಾಮಾನ್ಯರ ಆರೋಗ್ಯವನ್ನು ಕೈಗೆಟುಕುವ ದರದಲ್ಲಿ ಕಾಪಾಡಲು ಸಮಗ್ರ ವೈದ್ಯಕೀಯ ಪದ್ಧತಿ ಅನುಸರಿಸಬೇಕೆಂದು ರಾಜ್ಯಪಾಲ ಹೆಚ್.ಆರ್.ಭಾರದ್ವಾಜ್ ಪ್ರತಿಪಾದಿಸಿದ್ದಾರೆ. ರಾಜೀವ್ ಗಾಂಧಿಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಏ. 30ರಂದು ಏರ್ಪಡಿಸಿದ್ದ ವಿಶ್ವ ಹೋಮಿಯೋಪತಿ ದಿನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ರಾಜಸ್ಥಾನದಲ್ಲಿ ಹೋಮಿಯೋಪತಿ ವೈದ್ಯ ವಿಧಾನದ ಮೂಲಕವೇ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ.ಅದೇ ರೀತಿ ರಾಜ್ಯದಲ್ಲೂ ಪ್ರಯೋಗಗಳು ನಡೆಯಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಅವರು ಸಲಹೆ ನೀಡಿದರು.ಹೋಮಿಯೋಪತಿ ಯಾವುದೇ ಅಡ್ಡ ಪರಿಣಾಮವಿಲ್ಲದ, ಪರಿಣಾಮಕಾರಿ ವೈದ್ಯ ಪದ್ಧತಿ. ಜೊತೆಗೆ ಕೈಗೆಟುಕುವ […]

ರಾತ್ರಿ 1ರತನಕ ಮೋಜು ಮಸ್ತಿ ಮಾಡುವವರಷ್ಟೇ ಬೆಂಗಳೂರಿನಲ್ಲಿದ್ದಾರಾ?

ರಾತ್ರಿ 1ರತನಕ ಮೋಜು ಮಸ್ತಿ ಮಾಡುವವರಷ್ಟೇ ಬೆಂಗಳೂರಿನಲ್ಲಿದ್ದಾರಾ?

ಬೆಂಗಳೂರಿನ ಸುದ್ದಿಗಳು - 0 Comment
Issue Date : 01.04.2014

ಬೆಂಗಳೂರು: ಇಲ್ಲಿ ಕೇವಲ ಐಟಿ ಬಿಟಿ ಕೆಲಸ ಮಾಡುವವರಷ್ಟೇ ಇಲ್ಲ. ಬೇರೆ ಎಲ್ಲ ವರ್ಗದ ಜನರು ವಾಸವಾಗಿದ್ದಾರೆ. ಕೇವಲ ತೆರಿಗೆ ಕೊಡ್ತಾ ಇದ್ದಾರೆ ಎನ್ನುವ ಕಾರಣಕ್ಕೆ ಉದ್ಯಮಿ ಕಿರಣ್ ಮುಜುಮ್‌ದಾರ್ ಮತ್ತು ಅವರ ಟೀಮ್ ಹೇಳಿದ್ದನ್ನು ಕೇಳಿದ ಈ ಸರ್ಕಾರಕ್ಕೆ ಬೇರೆ ಯಾರೂ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆಂದು ತಿಳಿಯಲಿಲ್ಲವೇ? ಅವರ ಅಭಿಪ್ರಾಯವನ್ನು ಕೇಳುವುದು ಸಹ ಬೇಡವಾಗಿತ್ತೇ? ಅಥವಾ ಉದ್ಯಮಿಗಳು ಕೊಡುವ ತೆರಿಗೆಗೆ ಬಾಯ್ಬಿಟ್ಟರೇ? ಈ ಆದೇಶವನ್ನು ತಕ್ಷಣವೇ ವಾಪಾಸ್ಸು ಪಡೆಯದಿದ್ದರೆ ಮಹಿಳೆಯರೆಲ್ಲ ಹಂತ ಹಂತವಾಗಿ ಹೋರಾಟ ಮಾಡಬೇಕಾಗುತ್ತದೆಂದು […]

ದೇಶಭಕ್ತಿ ಜಾಗೃತಿಗೊಳಿಸಿದ 'ಘೋಷ್' ವಾದನ

ದೇಶಭಕ್ತಿ ಜಾಗೃತಿಗೊಳಿಸಿದ ‘ಘೋಷ್’ ವಾದನ

ಬೆಂಗಳೂರಿನ ಸುದ್ದಿಗಳು - 0 Comment
Issue Date : 24.03.2014

ದೇಶಭಕ್ತಿ  ಜಾಗೃತಿಗೊಳಿಸುವ ‘ಘೋಷ್’ ವಾದನಕ್ಕೆ ನಾಡಿನ ಸಂಗೀತಗಾರರು ರಾಗ ಸಂಯೋಜನೆ ಮಾಡಿ  ಕೊಡುಗೆಯಾಗಿ ನೀಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ  ಅಖಿಲ ಭಾರತೀಯ ಸಹ ಶಾರೀರಿಕ ಪ್ರಮುಖ್ ಜಗದೀಶ ಪ್ರಸಾದ್ ಹೇಳಿದರು.  ‘ಸಂಸ್ಕಾರ ಭಾರತಿ – ಬೆಂಗಳೂರು’ ಅರವಿಂದೋ ಶಾಲೆಯಲ್ಲಿ  ಮಾ. 23ರಂದು ಏರ್ಪಡಿಸಿದ್ದ ‘ಘೋಷ್ ಸಂಗೀತ ಸಮ್ಮಿಲನ’ ಕಾರ್ಯಕ್ರಮದಲ್ಲಿ  ಮಾತನಾಡಿದರು.  ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಷ್ಟ್ರಭಕ್ತಿ ಜಾಗೃತಿಗೊಳಿಸುವ ಸಲುವಾಗಿ ‘ಘೋಷ್’ ವಾದನ ಏರ್ಪಡಿಸಿತು. ಆರ್‍ಎಸ್‍ಎಸ್‍ನಲ್ಲಿ ಅಂಥ 80 ಸಾವಿರ ಘೋಷ್ ವಾದಕರು ದೇಶಾದ್ಯಂತ ಇದ್ದಾರೆ. ಅವರಲ್ಲಿ […]

ಸರಸಂಘಚಾಲಕರ ಹೇಳಿಕೆ: ಆರೆಸ್ಸೆಸ್ ಸ್ಪಷ್ಟನೆ

ಸರಸಂಘಚಾಲಕರ ಹೇಳಿಕೆ: ಆರೆಸ್ಸೆಸ್ ಸ್ಪಷ್ಟನೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 17.03.2014

ಬೆಂಗಳೂರು: ಸದೃಢ ಪ್ರಜಾಸತ್ತೆಗಾಗಿ ಲೋಕಸಭಾ ಚುನಾವಣೆ ವೇಳೆ ಶೇ.100ರಷ್ಟು ಮತದಾನ ಮಾಡುವಂತೆ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಜನರಿಗೆ ಮನವಿ ಮಾಡಿಕೊಂಡಿದ್ದಾರೆಯೇ ಹೊರತು, ಅವರು ಬಿಜೆಪಿ ಪರ ಪ್ರಚಾರ ನಡೆಸಿ ಎಂದು ಹೇಳಿಲ್ಲ ಎಂದು ಸಂಘದ ಅ.ಭಾ. ಪ್ರಚಾರ ಪ್ರಮುಖ್ ಡಾ.ಮನಮೋಹನ ವೈದ್ಯ ಸ್ಪಷ್ಟನೆ ನೀಡಿದ್ದಾರೆ.ದೇಶದ ಭದ್ರತೆ ದೃಷ್ಟಿಯಿಂದ ಈ ಬಾರಿಯ ಚುನಾವಣೆ ಮಹತ್ವ ಪಡೆದಿದೆ. ರಾಷ್ಟ್ರೀಯ ಹಿತಾಸಕ್ತಿ ವಿಷಯಗಳ ಚರ್ಚೆಯ ಆಧಾರದಲ್ಲಿ ಹೆಚ್ಚಿನ ಮತದಾನ ಆಗುವಂತೆ ಸಂಘದ ಕಾರ್ಯಕರ್ತರು ಜಾಗೃತಿ ಮೂಡಿಸಬೇಕಾಗಿದೆ. ಆರೆಸ್ಸೆಸ್ ಕಾರ್ಯಕರ್ತರು ರಾಜಕೀಯ […]

ಡಾ.ಬಿ.ಟಿ.ರುದ್ರೇಶ್‍ಗೆ ಭಾರತದ ಶ್ರೇಷ್ಠ ವೈದ್ಯ ಪ್ರಶಸ್ತಿ

ಡಾ.ಬಿ.ಟಿ.ರುದ್ರೇಶ್‍ಗೆ ಭಾರತದ ಶ್ರೇಷ್ಠ ವೈದ್ಯ ಪ್ರಶಸ್ತಿ

ಬೆಂಗಳೂರಿನ ಸುದ್ದಿಗಳು - 0 Comment
Issue Date : 12.03.2014

ಬೆಂಗಳೂರು: ಖ್ಯಾತ ಹೋಮಿಯೋಪತಿ ತಜ್ಞ ಡಾ.ಬಿ.ಟಿ.ರುದ್ರೇಶ್ ಅವರಿಗೆ ಹೋಮಿಯೋಪತಿಯ ಉನ್ನತ ಪ್ರಶಸ್ತಿಯಾದ ‘ಬೆಸ್ಟ್ ಪ್ರಾಕ್ಟೀಶನರ್ ಆಫ್ ಇಂಡಿಯಾ’ ಪುರಸ್ಕಾರ ದೊರೆತಿದೆ. ಹೋಮಿಯೋಪತಿಯ ಕಾಶಿ ಎಂದೇ ಪರಿಗಣಿಸಲಾಗುವ ಕೋಲ್ಕೊತ್ತಾದ ಡಾ.ಮಹೇಂದ್ರ ಸಿಂಗ್ ಟ್ರಸ್ಟ್‌ನ ಮೊದಲ ವಾರ್ಷಿಕ ಪ್ರಶಸ್ತಿ ಇದಾಗಿದೆ.ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ನಿರಂತರ 33 ವರ್ಷಗಳ ಸಾಧನೆ, 15 ಲಕ್ಷಕ್ಕೂ ಮಿಕ್ಕಿ ರೋಗಿಗಳ ಚಿಕಿತ್ಸೆ, 2 ಸಾವಿರ ಸಂತಾನಹೀನತೆಗೆ ಪರಿಹಾರದ ರಾಷ್ಟ್ರೀಯ ದಾಖಲೆ ಪರಿಗಣಿಸಿ, ರಾಷ್ಟ್ರದ ಖ್ಯಾತ 9 ಜನರ ಆಯ್ಕೆ ಸಮಿತಿ ಡಾ.ರುದ್ರೇಶರನ್ನು ಆಯ್ಕೆ ಮಾಡಿದ್ದು ವಿಶೇಷ. […]

ನಾಟ್ಯಾಂಜನದ ಆಕರ್ಷಕ ನೃತ್ಯ ರೂಪಕಗಳ ಪ್ರದರ್ಶನ

ನಾಟ್ಯಾಂಜನದ ಆಕರ್ಷಕ ನೃತ್ಯ ರೂಪಕಗಳ ಪ್ರದರ್ಶನ

ಬೆಂಗಳೂರಿನ ಸುದ್ದಿಗಳು - 0 Comment
Issue Date : 11.03.2014

ಬೆಂಗಳೂರು: ಮಕ್ಕಳ ಪ್ರತಿಭಾ ವಿಕಸನಕ್ಕೆ ಒಂದು ಉತ್ತಮ ವೇದಿಕೆಯಾಗಿರುವ ನಾಟ್ಯಾಂಜನದ ವೈವಿಧ್ಯಪೂರ್ಣ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯ ಉಜ್ವಲ ಮುಖವಾಗಿದ್ದು, ನೃತ್ಯ ಪ್ರಕಾರ ಕೇವಲ ಮನಸ್ಸಿಗೆ ಮುದ ನೀಡುವುದಷ್ಟೇ ಅಲ್ಲ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲೂ ಸಹಕಾರಿ ಎಂದು ನಿವೃತ್ತ ಹಿರಿಯ ಐ.ಎ.ಎಸ್. ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಅವರು ಅಭಿಪ್ರಾಯಪಟ್ಟರು. ಅವರು ನಗರದ ಎ.ಡಿ.ಎ. ರಂಗಮಂದಿರದಲ್ಲಿ ನಡೆದ ನಾಟ್ಯಾಂಜನ ಸಂಸ್ಥೆಯ ದಶಮಾನೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ರಾಜ್ಯಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರು […]

ವಿಹಿಂಪ ಭಜನಾ ಕೇಸರಿ ಸ್ಪರ್ಧೆ

ವಿಹಿಂಪ ಭಜನಾ ಕೇಸರಿ ಸ್ಪರ್ಧೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 11.03.2014

ಬೆಂಗಳೂರು: ವಿಶ್ವ ಹಿಂದು ಪರಿಷತ್ತಿನ ಹನುಮಂತನಗರ ಪ್ರಖಂಡ ಸಮಿತಿ ಮತ್ತು ಸತ್ಸಂಗ ಭಜನಾ ಮಹಾಮಂಡಳಿ ಸಭಾ ವತಿಯಿಂದ ಮಾ. 1 ಮತ್ತು 2ರಂದು ‘ಭಜನಾ ಕೇಸರಿ ಸ್ಪರ್ಧೆ’ ನಡೆಯಿತು. ಶ್ರೀ ವಿದ್ಯಾ ಆಶ್ರಮದ ಸಾಧ್ವಿ ಯೋಗಿನಿ ಅಹಲ್ಯಾಜಿ ಜ್ಯೋತಿ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು.ಎರಡು ದಿನಗಳ ಕಾಲ ಚಿಕ್ಕಲಸಂದ್ರ, ಕುಮಾರಸ್ವಾಮಿ ಲೇಔಟ್ ಭಾಗಗಳ ಹತ್ತು ಭಜನಾ ಮಂಡಳಿಗಳಿಂದ 121 ಜನ ಭಜನಾರ್ಥಿಗಳು ಪಾಲ್ಗೊಂಡಿದ್ದರು. ಸುಶ್ರಾವ್ಯವಾಗಿ, ಭಕ್ತಿಯಿಂದ ಹಾಡಿದ ದೇವರ ನಾಮಗಳು ನೆರೆದಿದ್ದ ಭಕ್ತರಲ್ಲಿ ಭಕ್ತಿ ಭಾವದ ಸಂಚಲನ ಉಂಟು […]

ರಾಮ್ ಮಾಧವ್ ಅವರ ಹೊಸ ಕೃತಿ ‘ಅನ್‌ ಈಸಿ ನೇಬರ್ಸ್‌’

ರಾಮ್ ಮಾಧವ್ ಅವರ ಹೊಸ ಕೃತಿ ‘ಅನ್‌ ಈಸಿ ನೇಬರ್ಸ್‌’

ಬೆಂಗಳೂರಿನ ಸುದ್ದಿಗಳು - 0 Comment
Issue Date : 04.03.2014

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅ.ಭಾ. ಸಹಸಂಪರ್ಕ ಪ್ರಮುಖ್ ರಾಮ್ ಮಾಧವ್ ಅವರು ರಚಿಸಿದ ‘Uneasy Neighbours’ ಕೃತಿ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. 50 ವರ್ಷಗಳ ಯುದ್ಧದ ಬಳಿಕ ಭಾರತ ಮತ್ತು ಚೀನಾ ನಡುವಿನ ಬಾಂಧವ್ಯದ ಕುರಿತು ರಾಮ್ ಮಾಧವ್ ಈ ಪುಸ್ತಕದಲ್ಲಿ ಬೆಳಕು ಚೆಲ್ಲಿದ್ದಾರೆ. ಆಸಕ್ತರು ಇಂಡಿಯಾ ಫೌಂಡೇಶನ್ ಕಚೇರಿಯಿಂದ ರಿಯಾಯಿತಿ ದರದಲ್ಲಿ ಪುಸ್ತಕ ಖರೀದಿಸಬಹುದು. ಸಂಪರ್ಕಿಸಿ: ಇ-ಮೇಲ್  : mail@indiafoundation.in  ಭಾರತ, ಚೀನಾ – ಎರಡೂ ದೇಶಗಳು ಸಮಾನ ಸ್ಪರ್ಧಿಗಳಾಗಿದ್ದು , ಭಾರತ ಚೀನಾದ ಕುರಿತು ವಿಶೇಷ […]

'ಆವರಣ' ಕಾದಂಬರಿ  ಇಂಗ್ಲಿಷ್‍ಗೆ ಅನುವಾದ

‘ಆವರಣ’ ಕಾದಂಬರಿ ಇಂಗ್ಲಿಷ್‍ಗೆ ಅನುವಾದ

ಬೆಂಗಳೂರಿನ ಸುದ್ದಿಗಳು - 0 Comment
Issue Date : 28.02.2014

‘ಆವರಣ’ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರ ಕಾದಂಬರಿ. ಪ್ರಕಟಗೊಳ್ಳುತ್ತಲೇ ಬಹಳ ಜನರ ಗಮನವನ್ನು ಸೆಳೆದ ಕಾದಂಬರಿ ‘ಆವರಣ’. ಭೈರಪ್ಪನವರ ಜನಪ್ರಿಯತೆ ಇನ್ನೂ ಜೀವಂತ ಎನ್ನುವುದಕ್ಕೆ ಈ ಕಾದಂಬರಿ ಸಾಕ್ಷಿಯಾಗಿದೆ. ಅವರ ‘ಆವರಣ’ ಕಾದಂಬರಿಯನ್ನು ಸಂದೀಪ್ ಬಾಲಕೃಷ್ಣ ಇಂಗ್ಲಿಷ್‌ಗೆ ಅನುವಾದಿಸಿದ್ದು, ರೂಪಾ ಪಬ್ಲಿಕೇಷನ್ ಈ ಕೃತಿಯನ್ನು ಪ್ರಕಟಿಸುತ್ತಿದೆ. ಇದು ಇಂಗ್ಲಿಷ್‌ಗೆ ಹೋಗುತ್ತಿರುವ ಭೈರಪ್ಪನವರ ಆರನೇ ಕಾದಂಬರಿ.  ‘ಆವರಣ’ ಕಾದಂಬರಿಯನ್ನು ಇಂಗ್ಲಿಷ್‍ಗೆ ಭಾಷಾಂತರಿಸಿರುವ ಸಂದೀಪ್ ಬಾಲಕೃಷ್ಣ  ಅವರು ಐಟಿ ಉದ್ಯೋಗಿ, ಬರಹಗಾರ, ಅಂಕಣಕಾರ.  ಟಿಪ್ಪು ಸುಲ್ತಾನ್: ‘ದಿ ಟೈರಂಟ್ ಆಫ‍್ ಮೈಸೂರ್ ‘ ಇವರ […]