ಹೆಚ್ ಎನ್ ಆರ್ - 70: ಹಿರಿಯರ ಹಾರೈಕೆ

ಹೆಚ್ ಎನ್ ಆರ್ – 70: ಹಿರಿಯರ ಹಾರೈಕೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 29.01.2014

ಬೆಂಗಳೂರು: 70ನೇ ವರ್ಷಕ್ಕೆ ಕಾಲಿಟ್ಟ ಸಂಘದ ಹಿರಿಯ ಕಾರ್ಯಕರ್ತ ಹೆಚ್.ನಾಗಭೂಷಣ ರಾವ್ ಅವರಿಗೆ ಸಹೋದ್ಯೋಗಿಗಳು, ಬಂಧು ಮಿತ್ರರು, ಸಂಘ ಸಂಸ್ಥೆಯ ಪ್ರಮುಖರ ಉಪಸ್ಥಿತಿಯಲ್ಲಿ ಭೀಮರಥ ಶಾಂತಿಯನ್ನು ಇತ್ತೀಚೆಗೆ ನೆರವೇರಿಸಲಾಯಿತು. ಸಂಘದ ಹಿರಿಯ ಪ್ರಚಾರಕ ಕೃ.ಸೂರ್ಯನಾರಾಯಣ ರಾವ್ ಈ ಸಂದರ್ಭದಲ್ಲಿ ಮಾತನಾಡಿ, ಸಮಾಜ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡಿರುವ ನಾಗಭೂಷಣ ರಾವ್ ಅವರ ಸೇವೆ ಮುಂದುವರಿಯಲಿ ಎಂದು ಹಾರೈಸಿದರು. ಅತ್ಯುತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ನಾಗಭೂಷಣ ರಾವ್ ಶಿಕ್ಷಕರಿಗೆ ಮೇಲ್ಪಂಕ್ತಿಯಾಗಿದ್ದಾರೆ. ಅವರಿಗೆ ಪರಮಾತ್ಮ ಸನ್ಮಂಗಳವನ್ನುಂಟು ಮಾಡಲಿ ಎಂದು ತುಮಕೂರಿನ ರಾಮಕೃಷ್ಣ […]

ಬೆಂಗಳೂರಿನಲ್ಲಿ 'ವೈಫೈ' ಸೇವೆ ಆರಂಭ

ಬೆಂಗಳೂರಿನಲ್ಲಿ ‘ವೈಫೈ’ ಸೇವೆ ಆರಂಭ

ಬೆಂಗಳೂರಿನ ಸುದ್ದಿಗಳು - 0 Comment
Issue Date : 25.01.2014

ಸಿಲಿಕಾನ್‌ಸಿಟಿ ಎಂದೇ ಪ್ರಸಿದ್ದವಾಗಿರುವ ಬೆಂಗಳೂರಿಗೆ ಮತ್ತೊಂದು ಕಿರೀಟ ಸಿಕ್ಕಿದೆ. ನಗರದ ಬ್ರಿಗೇಡ್‌ ರೋಡ್‌ ಮತ್ತು ಎಂಜಿ ರೋಡ್‌ನಲ್ಲಿ ಫ್ರೀ ವೈಫೈ ಹಾಟ್‌ಸ್ಪಾಟ್‌ ನಿರ್ಮಿಸಲು ಯೋಜನೆ ರೂಪಿಸಿದ್ದು, ಈ ಮೂಲಕ ಉಚಿತ ವೈಫೈ ಹಾಟ್‌ಸ್ಪಾಟ್‌ ಸಂಪರ್ಕ ಪಡೆದ ದೇಶದ ಮೊದಲ ನಗರ ಎಂಬ ಪ್ರಖ್ಯಾತಿ ಬೆಂಗಳೂರಿಗೆ… ರಾಜ್ಯ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಐಸಿಟಿ ಸಂಸ್ಥೆಯು ಡಿ- ವೋಸ್ ಬ್ರಾಡ್‌ಬ್ಯಾಂಡ್ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಐಟಿ-ಬಿಟಿ ಖಾತೆ ಸಚಿವ ಎಸ್.ಆರ್.ಪಾಟೀಲ್ `ನಮ್ಮ ವೈಫೈ` ಎಂಬ ಉಚಿತ […]

ಸಂಘ ವಸ್ತುಭಂಡಾರದ ಉದ್ಘಾಟನಾ ಕಾರ್ಯಕ್ರಮ

ಸಂಘ ವಸ್ತುಭಂಡಾರದ ಉದ್ಘಾಟನಾ ಕಾರ್ಯಕ್ರಮ

ಬೆಂಗಳೂರಿನ ಸುದ್ದಿಗಳು - 0 Comment
Issue Date : 15.01.2014

ಸಂಘ ವಸ್ತುಭಂಡಾರದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ವಿಕ್ರಮ ಕಛೇರಿ ಕಟ್ಟಡದಲ್ಲಿ ಇಂದು ( ಜ. 15) ನಡೆಯಿತು. ಈ ಸಂದರ್ಭದಲ್ಲಿ ವಿಹೆಚ್‍ಪಿಯ ಕೇಶವ ಹೆಗ್ಗಡೆ,ಗೋಪಾಲ್, ಟಿ.ಎ.ಪಿ. ಶೆಣೈ, ಚಂದ್ರಶೇಖರ ಭಂಡಾರಿ, ಕಾ.ಶ್ರೀ. ನಾಗರಾಜ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ ಮುಕುಂದ, ಸ್ವದೇಶಿ ಜಾಗರಣ ಮಂಚ್ ನ ಜಗದೀಶ್, ನಟರಾಜ್, ನಾರಾಯಣ ಶೇವಿರೀ, ವಿಕ್ರಮ ಪತ್ರಿಕೆಯ ಸಂಪಾದಕರಾದ ದು.ಗು.ಲಕ್ಷ್ಮಣ ಹಾಗೂ  ಮತ್ತಿತರರು ಭಾಗವಹಿಸಿದ್ದರು.

ಇಮ್ಮಡಿ ಹಳ್ಳಿಯಲ್ಲಿ ಮೇಲೆದ್ದ ಸೇವಾ ಸಂಸ್ಥೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 15.01.2014

ಊರಿನ ಎಲ್ಲಾ ಯುವಕರು ಒಂದೆಡೆ ಖುಷಿಯಲ್ಲಿ ಮುಳುಗಿ ತೇಲಾಡುತ್ತಿದ್ದರೆ, ನಾಲ್ಕೈದು ಯುವಕರು ಮಾತ್ರಾ ಒಂದೆಡೆ ಮೌನವಾಗಿ ಕುಳಿತಿದ್ದಾರೆ. ಅವರ ಮನದಲ್ಲಿ ಏನೊ ಒಂದು ಕೊರಗು, ದೇಶಕ್ಕಾ ಗಿ, ಸಮಾಜಕ್ಕಾಗಿ ಏನಾದರು ಮಾಡಬೇಕೆಂಬ ಹಂಬಲ. ಆಗ ಆರಂಭವಾದ ಸಂಸ್ಥೆಯೇ ಮಾಧವ ಗೆಳೆಯರ ಬಳಗ (ರಿ).ಬೆಂಗಳೂರಿನ ವೈಟ್‌ಫೀಲ್‌‌ಡ ಬಳಿಯಿರುವ ಇಮ್ಮಡಿಹಳ್ಳಿಯಲ್ಲಿ ಮಾಧವ ಗೆಳೆಯರ ಬಳಗ 2005ರಲ್ಲಿ ಅಲ್ಲಿನ ಸ್ವಯಂಸೇವಕರಿಂದ ಪ್ರಾರಂಭವಾಯಿತು. ಇದರ ಉದ್ದೇಶ ನಾನು ನನ್ನ ಕೈಲಾದಷ್ಟು ಸೇವೆಯನ್ನು ಈ ಭರತಮಾತೆಗೆ ಮಾಡಬೇಕೆಂದು. ಮೊದಲು ಇವರು ಮಾಡಿದ ಕೆಲಸ ಊರಿನ […]

ನಿವೃತ್ತ ಶಿಕ್ಷಕರಿಗೆ ‘ಸೇವಾ ಸಿಂಧು’ ಸನ್ಮಾನ

ಬೆಂಗಳೂರಿನ ಸುದ್ದಿಗಳು - 0 Comment
Issue Date : 15.01.2014

ಬೆಂಗಳೂರು: ‘ಸೇವಾ ಸಿಂಧು’ ಗ್ರಾಮೀಣ ವಿಕಾಸ ಸಂಸ್ಥೆಯ ವತಿಯಿಂದ ಪ್ರತೀವರ್ಷದಂತೆ ಈ ವರ್ಷ ಕೂಡಾ ಜ. 4ರಂದು ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ತಾವರೇಕೆರೆ ಗ್ರಾಮದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ತರಬೇತಿ ಶಿಬಿರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ವಿಕ್ರಮ ವಾರಪತ್ರಿಕೆಯ ನ. ನಾಗರಾಜ ಅವರು ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಪರಮ್‌ ಫೌಂಡೇಶನ್‌ನ ಪ್ರಮುಖರಾದ ರಾಧಾಕೃಷ್ಣ ಹೊಳ್ಳ ಮತ್ತು ವಕೀಲ ಭೋಜರಾಜ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.ಪರಮ್‌ ಫೌಂಡೇಶನ್‌ ಮತ್ತು ಫಿಲಿಪ್‌‌ಸ ಕಂಪೆನಿಯ […]

ನಮಗೆ ಯಾವುದು ಹೊಸವರ್ಷ?

ನಮಗೆ ಯಾವುದು ಹೊಸವರ್ಷ?

ಬೆಂಗಳೂರು - 0 Comment
Issue Date : 07.12.2013

ಕೆಲವರ ದೃಷ್ಟಿಯಲ್ಲಿ ಮತ್ತೊಂದು ಹೊಸ ವರ್ಷ ಬಂದಿದೆ. ವಿದಾಯ – ಸ್ವಾಗತ ಕಾರ್ಯಗಳು ಭಾರೀ ಶಬ್ದ ಮಾಡಿ ಮುಗಿಯಿತು. ಆಚರಣೆಯ ಹಿಂದಿನ ಅರ್ಥವರಿಯದೆ ಮಾಡಿದಲ್ಲಿ ‘ಕೋತಿ ಮೈಸೂರು ಪಾಕ್ ತಿಂದಂತೆ!’ (ಅದಕ್ಕೆ ಮೈಸೂರು ಪಾಕ್ ಆದರೇನು? ಅರ್ಧ ಕೊಳೆತ ಸೇಬು ಆದರೇನು? ರಾಜ್‌ಕುಮಾರ್ ಸಿನಿಮಾ ಪೋಸ್ಟರ್ ಆದರೇನು. ತಿನ್ನುತ್ತೆ, ಅಷ್ಟೆ!) ಹೊಸ ವರ್ಷದ ಹೆಸರಲ್ಲಿ ನಡೆವ ಮೋಜು – ಮಸ್ತಿ (ವಿಶೇಷವಾಗಿ ದುಡ್ಡಿದ್ದವರಿಗೆ ಸೀಮಿತ) ಕಂಡಾಗ ಯುವಕನಾದ ನನಗೆ ಆಶ್ಚರ್ಯವೂ – ದುಃಖವೂ – ವಿಷಾದವೂ ಆಗುತ್ತದೆ. […]

ಯುವ ಬರಹಗಾರರ ಕಾರ್ಯಾಗಾರ

ಯುವ ಬರಹಗಾರರ ಕಾರ್ಯಾಗಾರ

ಬೆಂಗಳೂರಿನ ಸುದ್ದಿಗಳು - 0 Comment
Issue Date : 05.01.2014

ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ  ವಿಕ್ರಮ ವಾರಪತ್ರಿಕೆ ಆಶ್ರಯದಲ್ಲಿ “ಯುವ ಬರಹಗಾರರ ಕಾರ್ಯಾಗಾರ”ವನ್ನು  ಜ. 5ರಂದು ಆದರ್ಶ ಕಾಲೇಜು ಸಭಾಂಗಣ (ವಿಕ್ರಮ ಕಛೇರಿ ಎದುರು), 5ನೇ ಮುಖ್ಯ ರಸ್ತೆ, ಚಾಮರಾಜಪೇಟೆ ಬೆಂಗಳೂರು ಇಲ್ಲಿ ನಡೆಯಿತು. ಬರವಣಿಗೆ ಕಲೆಯ ಕೌಶಲ್ಯ ಮತ್ತಿತರ ಉಪಯುಕ್ತ ಸಂಗತಿಗಳ ಬಗ್ಗೆ ಈ ಕಾರ್ಯಾಗಾರದಲ್ಲಿ ವಿಷಯತಜ್ಞರಾದ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಿಬಂತಿ ಪದ್ಮನಾಭ, ಹಿರಿಯ ಪತ್ರಕರ್ತ ಜಯರಾಂ ಅಡಿಗ ಹಾಗೂ ವಿಕ್ರಮ ಸಂಪಾದಕ ದು.ಗು. ಲಕ್ಷ್ಮಣ್  ತಿಳಿಸಿಕೊಟ್ಟರು. ಈ […]

 ಬೆನ್ನಿಹಿನ್ ವಿರುದ್ಧ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ

ಬೆನ್ನಿಹಿನ್ ವಿರುದ್ಧ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 03.01.2014

ಹಿಂದೂ ಜಾಗರಣ ವೇದಿಕೆ ವತಿಯಿಂದ ಇಂದು ಬೆಂಗಳೂರಿನ ಪುರಭವನದ ಮುಂದೆ ವಿವಾದಾತ್ಮಕ ಪವಾಡಪುರುಷ ಬೆನ್ನಿಹಿನ್ ವಿರುದ್ಧ  ಬೃಹತ್  ಪ್ರತಿಭಟನೆ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್  ಕಲ್ಲಡ್ಕ  ಪವಾಡದ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುವ ಬೆನ್ನಿಹಿನ್ ಪ್ರಾರ್ಥನಾ ಕೂಟದ ವಿರುದ್ಧ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. 

'ಸಾರಕ್ಕಿ ಕೆರೆ' ಸ್ವಚ್ಚತಾ ಕಾರ್ಯಕ್ರಮ

‘ಸಾರಕ್ಕಿ ಕೆರೆ’ ಸ್ವಚ್ಚತಾ ಕಾರ್ಯಕ್ರಮ

ಬೆಂಗಳೂರಿನ ಸುದ್ದಿಗಳು - 0 Comment
Issue Date : 31.12.2013

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬನಶಂಕರಿ ಭಾಗದ ಸೇವಾ ಸಾಂಘಿಕ್ ನ ಅಡಿಯಲ್ಲಿ  “ಸಾರಕ್ಕಿ ಕೆರೆ” ಸ್ವಚ್ಚತಾ ಕಾರ್ಯಕ್ರಮವು ನಡೆಯಿತು.   ಸಾಂಘಿಕ್ ನಲ್ಲಿ  ಪ್ರಾಂತ ಸೇವಾ ಪ್ರಮುಖರಾದ ಶ್ರೀ ಸದಾಶಿವ್ ಮಾತನಾಡಿ  ಸೇವೆಯ ಮಹತ್ವವನ್ನು  ತಿಳಿಸಿದರು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಂಘದ ಸ್ವಯಂ ಸೇವಕರ ಜೊತೆ ಬೆಂಗಳೂರು ಮಹಾನಗರಪಾಲಿಕೆ ಕಾರ್ಮಿಕರು, ಅಧಿಕಾರಿಗಳು, ಬಿ.ಜೆ.ಪಿ ಯ ಕಾರ್ಯಕರ್ತರು, ಎನ್.ಸಿ.ಸಿ ಸ್ವಯಂ ಸೇವಕರು ಭಾಗವಹಿಸಿದ್ದರು. 600 ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಸ್ಥಳೀಯರಲ್ಲಿ ಮತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ಜನರಲ್ಲಿ ವಿಶೇಷ ಆಸಕ್ತಿ […]

ವಿವೇಕಾನಂದರ ತತ್ತ್ವ, ಸಂದೇಶ ಸಂಜೀವಿನಿ: ಶಿವರಾಜ್ ಪಾಟೀಲ್

ವಿವೇಕಾನಂದರ ತತ್ತ್ವ, ಸಂದೇಶ ಸಂಜೀವಿನಿ: ಶಿವರಾಜ್ ಪಾಟೀಲ್

ಬೆಂಗಳೂರು - 0 Comment
Issue Date : 30.12.2013

ದೇಶದ ಸಮಸ್ಯೆಗಳ ಪರಿಹಾರಕ್ಕೆ ಸ್ವಾಮಿ ವಿವೇಕಾನಂದರ ತತ್ತ್ವ, ಸಂದೇಶಗಳು ಸಂಜೀವಿನಿ ಇದ್ದಂತೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಪ್ರತಿಪಾದಿಸಿದ್ದಾರೆ. ಗಾಂಧಿಬಜಾರಿನ ದಿ ನ್ಯಾಶನಲ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಡಿ.25ರಂದು ನಡೆದ ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶ ನೆಮ್ಮದಿ ಹಾಗೂ ಆನಂದಮಯ ಆಗಬೇಕಾದರೆ ಮೊದಲು ವಿವೇಕಾನಂದಮಯ ಆಗಬೇಕು. ರಾಷ್ಟ್ರದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹಾಗೂ ರೋಗಗ್ರಸ್ತ ಸಮಾಜದ ಸ್ವಾಸ್ಥ್ಯಕ್ಕೆ ವಿವೇಕಾನಂದರ ಸಂದೇಶಗಳು ಸಂಜೀವಿನಿ. ಶ್ರದ್ಧೆ, ಬದ್ಧತೆಯಿಂದ ದೇಶಭಕ್ತಿ ಮೈಗೂಡಿಸಿಕೊಂಡು […]