ಹಿಂದೂಧರ್ಮವೂ ಮತಾಂತರವೂ

ಭಾರತ - 0 Comment
Issue Date : 23.09.2014

“ಕೃಣ್ವಂತೋ ವಿಶ್ವಮಾರ್ಯಂ”-  ಇದು ವೈದಿಕ ಯುಗದ ಸನಾತನ ಆರ್ಯರ  ಜಯಘೋಷವಾಗಿತ್ತು.  ಈ ನೀತಿಯನ್ನು ಅನುಸರಿಸಿ ಅವರು ಆಗಿನ ಕಾಲದಲ್ಲಿ  ಭಾರತದ  ಮೂಲೆ ಮೂಲೆಗಳಲ್ಲಿ  ವಾಸಿಸುತ್ತಿದ್ದ ಮೂಲ ನಿವಾಸಿ  ಗುಂಪುಗಳನ್ನೆಲ್ಲ  ಆರ್ಯರನ್ನಾಗಿ  ಮಾಡಿ ಕ್ರಮಶಃ  ತಮ್ಮ ಸಮಾಜದಲ್ಲಿ  ಸೇರಿಸಿಕೊಂಡರು.  ಈ ಸೇರುಹೋಗುವಿಕೆಯು  ಎಷ್ಟು  ಸಮಗ್ರವಾಗಿ  ಆಗಿದೆಯೆಂದರೆ  – ಇಂದು  ಆ ಮೂಲನಿವಾಸಿ  ಗುಂಪುಗಳೆಲ್ಲ ಹಿಂದೂ ಸಮಾಜದಲ್ಲಿ  ಅಂತರ್ಗತವಾಗಿದ್ದರೂ, ಅವರ ಪ್ರತ್ಯೇಕ ಸಂಸ್ಕೃತಿ ನಡವಳಿಕೆಗಳ ಚಿನ್ಹೆಗಳಾದರೂ ಉಳಿದಿಲ್ಲ ! ಇದು ಕೇವಲ ಆರ್ಯರು ಇತರರ ಮೇಲೆ ಮಾಡಿದ  ಬಲಾತ್ಕಾರದ  ಆಕ್ರಮಣವಲ್ಲ. […]

ಸಂಸ್ಕೃತಿಗೆ ವಿಮುಖವಾದ ಯುವಜನತೆ. ಮುಂದೇನು?

ಭಾರತ - 0 Comment
Issue Date : 20.09.2014

ಹಿಂದುಸ್ತಾನದಲ್ಲಿ ಸನಾತನ ಕಾಲದಿಂದಲೂ ವಿಚಾರ ಸಂಪ್ರದಾಯಗಳಿಗೆ ಮಹತ್ವ ನೀಡಲಾಗಿದೆ. ಅದಕ್ಕೆಂದೇ ಉನ್ನತ ನಾಗರಿಕತೆ ಹೊಂದಿದ ದೇಶ ಎಂದು ಕರೆಸಿಕೊಂಡಿದೆ. ನಮ್ಮ ದೇಶದಲ್ಲಿರುವ ಆಚರಣೆ, ಸಂಸ್ಕೃತಿಕ ಭಿನ್ನತೆ, ಸಾಮರಸ್ಯ ಜೊತೆಗೆ ಪರಿವರ್ತನೀಯತೆ ಎಲ್ಲ ಸಮಾಜಗಳಲ್ಲಿ ಕಾಣಲು ಸಿಗುವದಿಲ್ಲ ಎಂಬ ಮಾತಿದೆ ಆದರೇ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಂಡು ಸಂಸ್ಕೃತಿಯ ವಾಹಕರಾಗಬೇಕಾದ ಯುವಜನತೆ ಹಲವು ಪ್ರಕಾರದ ಮನೋವೈಜ್ಞಾನಿಕ ಸಂಗತಿಗಳಿಂದ ಬಳಲುತ್ತಿರುವದು ಕಂಡುಬಂದಿದೆ. ವಿವೇಕಾನಂದರ ಸಹವರ್ತಿಯಾಗಿದ್ದ ನಿವೇದಿತಾ ನಮ್ಮ ಇತಿಹಾಸದ ಬಗ್ಗೆ ಹೇಳುವಂತೆ ಬಾರತದಲ್ಲಿ ಅರಮನೆಗಳು, ಕೋಟೆ ಕೊತ್ತಲಗಳಿಗಿಂತ […]

ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ಪ್ರವಾಹ: ಸಮಾಜ ಬಾಂಧವರಲ್ಲಿ ಆರೆಸ್ಸೆಸ್ ಮನವಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ಪ್ರವಾಹ: ಸಮಾಜ ಬಾಂಧವರಲ್ಲಿ ಆರೆಸ್ಸೆಸ್ ಮನವಿ

ಭಾರತ - 0 Comment
Issue Date : 19.09.2014

 ಜಮ್ಮು-ಕಾಶ್ಮೀರದಲ್ಲಿ ಉಂಟಾದ ಭೀಕರ ಪ್ರಳಯದ ತರುವಾಯ ಅಲ್ಲಿನ ಸಂತ್ರಸ್ತರಿಗೆ ನೆರವಾಗಲು ಆರೆಸ್ಸೆಸ್  ಸಾರ್ವಜನಿಕ ಮನವಿ ಮಾಡಿತ್ತು. ’ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ-ಕರ್ನಾಟಕ’ದ ಮೂಲಕ ಮೊದಲ ಹಂತದಲ್ಲಿ ಸಂಗ್ರಹಿಸಲಾದ 25 ಲಕ್ಷ ರೂ.ಗಳನ್ನು ಜಮ್ಮು-ಕಾಶ್ಮೀರ ಘಟಕಕ್ಕೆ ನೀಡಲಾಗಿದೆ. ಅಲ್ಲಿ ರಸ್ತೆ-ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಈ ನಿಧಿ ಸದ್ಬಳಕೆಯಾಗಲಿದೆ. ಆರೆಸ್ಸೆಸ್ ಸ್ವಯಂಸೇವಕರು ಈಗಾಗಲೇ ಪರಿಹಾರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಸೇವಾಭಾರತಿ ಅಲ್ಲಲ್ಲಿ ಸಹಾಯಕೇಂದ್ರಗಳನ್ನು ಆರಂಭಿಸಿದೆ. ಸರಕಾರ ಮತ್ತು ಸೇನೆಗೆ ಸಹಕರಿಸುತ್ತಾ ಸಾವಿರಾರು ನೊಂದ ಜೀವಗಳಿಗೆ ಆಸರೆಯಾಗಿದ್ದಾರೆ. ಈ ಮುಂಚೆಯೇ ಪ್ರತ್ಯೇಕವಾದಿಗಳು, ಭಯೋತ್ಪಾದಕರ […]

ಚಿರಂಜೀವತೆಯಿಂದ ಚಿರವಿಜಯದೆಡಗೆ

ಭಾರತ - 0 Comment
Issue Date : 13.9.2014

ಇಂದು ಜಗತ್ತಿನ ಅನೇಕ ರಾಷ್ಟ್ರಗಳಿಗೆ ಕಾಲಪುರುಷನು ಅಳಿವು ಉಳಿವಿನ ಭೀಷಣ ಸವಾಲನ್ನು ಎಸೆದು ನಿಂತಿದ್ದಾನೆ. ಅದನ್ನೆದುರಿಸಲು ಅವೆಲ್ಲವುಗಳ ತಯಾರಿಯದಿಂದ ಸಾಗಿದೆ. ಸರ್ವದೂರ ತಮ್ಮ ರಾಜನೈತಿಕ, ಆರ್ಥಿಕ, ಸೈನಿಕ ಶಕ್ತಿ ಪ್ರಭಾವಗಳನ್ನು ಬೇರೂರಿಸುವ ಸಾಹಸವನ್ನೂ ಅವು ನಡೆಸಿವೆ. ಅದೇ ಆಹ್ವಾನ ನಮ್ಮ ರಾಷ್ಟ್ರಕ್ಕೂ ಎದುರಾಗಿದೆ. ನಮ್ಮ ರಾಷ್ಟ್ರಕ್ಕೆರಗಿರುವ ಅನೇಕ ಒಳ ಹೊರಗಿನ ವಿಪತ್ತುಗಳನ್ನು ಗೆದ್ದು ಸ್ವತಂತ್ರರಾಗಿ ಸಾರ್ವಭೌಮರಾಗಿ ನಿಲ್ಲಬೇಕಾದರೆಮ ನಮಗೂ ಸಾಕಷ್ಟು ಆರ್ಥಿಕಬಲ, ಸೇನಾಬಲ ಬೇಕು. ಇದಕ್ಕೆ ಯಾರು ತಾನೆ ಬೇಡ ಎಂದಾರು ? ಎಲ್ಲರೂ ಒಪ್ಪಲೇಬೇಕಾದ ಮಾತು. […]

ಭಾರತೀಯ ಇತಿಹಾಸ: ಮತ್ತೆ ಬರೆಯುವ ಅನಿವಾರ್ಯತೆ

ಭಾರತ - 0 Comment
Issue Date : 18.9.2014

ಭಾರತೀಯ ಇತಿಹಾಸಕ್ಕಾದ ಅಪಚಾರ ಮತ್ತು ಅಪಮೌಲ್ಯ ಪ್ರಾಯಶಃ ಜಗತ್ತಿನ ಯಾವುದೇ ದೇಶದ ಇತಿಹಾಸಕ್ಕಾಗಿರಲಿಕ್ಕಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ನಮ್ಮ ಪ್ರಾಚೀನರು ‘‘ಇತಿಹಾಸ, ಪುರಾಣೇಭ್ಯೋ ನಮಃ’’ ಎಂದು ಇತಿಹಾಸ – ಪುರಾಣಿಗಳ ಪೂಜನೀಯ ಸ್ಥಾನವನ್ನು ಮನಗಂಡಿದ್ದರು. ಬರವಣಿೆಗೆಗಳಿಗಿಂತಲೂ ಮುಖ್ಯವಾಗಿ ಮೌಖಿಕವಾಗಿಯೇ ಇತಿಹಾಸದ ದಾಖಲೆಗಳನ್ನು ಅವರು ರಕ್ಷಿಸಿಕೊಂಡು ಬಂದಿದ್ದರು. ಆಧುನಿಕ ವೈಜ್ಞಾನಿಕ ಪದ್ಧತಿಗೆ ಅನುಗುಣವಾಗಿ ಇತಿಹಾಸವನ್ನು ಬರೆಯುವ ಪ್ರಯತ್ನ ಭಾರತದಲ್ಲಿ ಯುರೋಪಿಯನರ ಆಗಮನದೊಂದಿಗೆ ಪ್ರಾರಂಭವಾಯಿತು. ಭಾರತದ ಇತಿಹಾಸದ ಅಧ್ಯಯನ, ಬರವಣಿಗೆ, ಸಂಶೋಧನೆ ಮತ್ತು ಸಂರಕ್ಷಣೆಗೆ ಪಾಶ್ಚಾತ್ಯರ ಕೊಡುಗೆ ಅಪಾರ. ಅವರು ಭಾರತದ […]

ಹಿಂದುಸ್ಥಾನ ಹಿಂದುಗಳದ್ದು, ಇಲ್ಲಾಂದ್ರೆ ಯಾರದ್ದು?

ಭಾರತ - 0 Comment
Issue Date : 10.09.2014

ಕಟಕ್‌ನಲ್ಲಿ ಮೋಹನಜಿ ಭಾಗವತ್ ಮಾಡಿದ ಭಾಷಣದ ಬಗ್ಗೆ ಯದ್ವಾತದ್ವಾ ಪ್ರತಿಕ್ರಿಯೆಗಳು ಬರುತ್ತಿವೆ. ಇವೆಲ್ಲ ಪ್ರತಿಕ್ರಿಯೆಗಳು ಸ್ವಾಭಾವಿಕವೇ. ಮೋಹನಜಿ ಭಾಗವತ್ ಹೇಳಿದರು, ‘‘ಭಾರತವಾಸಿಗಳ ಸಾಂಸ್ಕೃತಿಕ ಪರಿಚಯ ಹಿಂದುತ್ವವೇ ಆಗಿದೆ. ಅಲ್ಲದೆ ಈಗಿನ ನಮ್ಮ ದೇಶದ ಪೀಳಿಗೆಯು ಈ ಮಹಾನ್ ಸಂಸ್ಕೃತಿಯ ವಂಶಜರೇ ಸರಿ. ಹಿಂದುತ್ವವು ಒಂದು ಜೀವನಪದ್ಧತಿಯಾಗಿದ್ದು, ದೇವರನ್ನು ನಂಬುವವ ಮತ್ತು ನಂಬದವನೂ ಹಿಂದುವೇ ಆಗಿದ್ದಾನೆ. ‘ದೇವರ ಮೇಲೆ ನಂಬಿಕೆಯಿಲ್ಲದವನು ನಾಸ್ತಿಕನಾಗಿರದೆ ತನ್ನ ಬಗ್ಗೆ ನಂಬಿಕೆಯಿಲ್ಲದವನನ್ನು ನಾಸ್ತಿಕನೆನ್ನಬೇಕು’ ಎಂದು ವಿವೇಕಾನಂದರು ಹೇಳಿದ್ದರು. ದೇಶವನ್ನು ಒಂದಾಗಿಡುವ ಸಾಮರ್ಥ್ಯ ಹಿಂದುತ್ವದಲ್ಲೇ ಇದೆ. […]

ಮತಾಂತರ ಮುಕ್ತ ಭಾರತ

ಮತಾಂತರ ಮುಕ್ತ ಭಾರತ

Uncategorized ; ಭಾರತ - 0 Comment
Issue Date : 25.08.2014

ಬಡ  ಹಿಂದುಗಳಿಗೆ ವೈದ್ಯ ಸೇವೆ, ವನವಾಸಿ ಮಕ್ಕಳಿಗೆ ಶಿಕ್ಷಣ: ವಿಹಿಂಪ ಸಂಕಲ್ಪ ಮುಂಬಯಿ: ಮತಾಂತರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಮತಾಂತರ ಮುಕ್ತ ಭಾರತವನ್ನು ನಿರ್ಮಾಣ ಮಾಡಲಾಗುವುದು ಎಂದು ವಿ ಹಿಂ ಪ ಕಾರ್ಯಾಧ್ಯಕ್ಷ ಡಾ. ಪ್ರವೀಣ್ ತೋಗಾಡಿಯ ಹೇಳಿದರು. ಕೋಟ್ಯಾಂತರ ಬಡ ಹಿಂದುಗಳಿಗೆ ಉಚಿತ ವೈದ್ಯಕೀಯ ಸೇವೆ ಹಾಗೂ ಒಂದು ಲಕ್ಷ ವಿದ್ಯಾನಿಲಯಗಳ ಮೂಲಕ ವನವಾಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡಲಾಗುತ್ತದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.ಇಲ್ಲಿನ ಸಾಂದೀಪನಿ ಆಶ್ರಮದಲ್ಲಿ ಆ. 17ರಂದು […]

ಮೋದಿ ಮತ್ತು ಭಾರತದ ನವಯುಗ

ಮೋದಿ ಮತ್ತು ಭಾರತದ ನವಯುಗ

ಭಾರತ - 0 Comment
Issue Date : 18.09.2014

ಆಗಸ್ಟ್ 15 ರಂದು ಬೆಳಗ್ಗೆ ಕೆಂಪುಕೋಟೆಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಲು ಆಗಮಿಸುವಾಗ ತಾವು ಒಂದು ಹೊಸ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲು ಆಗಮಿಸುತ್ತಿದ್ದೇನೆ ಎನ್ನುವ ಭಾವವನ್ನು ಹೊಂದಿರುವರೆಂದು ನಾನು ಭಾವಿಸುತ್ತೇನೆ. (ಸ್ವಾತಂತ್ರ್ಯ ದಿನಕ್ಕೆ ಮುನ್ನ ಬರೆದ ಲೇಖನ) ಈ ಹೊಸ ರಾಷ್ಟ್ರ ಎಂಥದೆಂದರೆ ಅವರ ಆಶೋತ್ತರಗಳು ಭಾರತೀಯ ಸಂವಿಧಾನದಿಂದ ಬೆಳೆದಂಥವು. ಅವರ ಈಚಿನ ಭಾಷಣಗಳಿಂದ ಸ್ಪಷ್ಟವಾಗುವ ಅಂಶವೆಂದರೆ, ಮೋದಿ ಪ್ರಜಾಪ್ರಭುತ್ವದ ಶಕ್ತಿಯಲ್ಲಿ ನಂಬಿಕೆ ಉಳ್ಳವರು; ಪ್ರಜಾಪ್ರಭುತ್ವ ಶ್ರೀಸಾಮಾನ್ಯನನ್ನು ಅಧಿಕಾರದತ್ತ ಕೊಂಡೊಯ್ಯುತ್ತದೆ […]

ಸಾವರ್ಕರ್ ಸಾಗರ ಸಾಹಸ

ಸಾವರ್ಕರ್ ಸಾಗರ ಸಾಹಸ

ಭಾರತ - 0 Comment
Issue Date : 15.08.2014

ಇತಿಹಾಸಕ್ಕೆ ಆಗುವ ಅಪಚಾರಗಳು ಅದರ ಮೂಲ ಸ್ವರೂಪವನ್ನೇ ಕೆಡಿಸಿಬಿಡುತ್ತವೆ. ಭಾರತದ ಇತಿಹಾಸದಲ್ಲಿ ಅಂತಹ ಪ್ರಸಂಗಗಳು ಅನೇಕ. ಇಲ್ಲಿ ಇತಿಹಾಸಕ್ಕೆ ಆಗುವ ಅನ್ಯಾಯಕ್ಕೆ ಕಾರಣಗಳು ವಿಪರೀತ. ಭಾರತದ ಇತಿಹಾಸದಲ್ಲಿ ಓರ್ವ ಕಡೆಗಣಿಸಲ್ಪಟ್ಟ, ಅಪಾರ್ಥಕ್ಕೊಳಗಾದ, ಮಹಾ ದೇಶಭಕ್ತ, ರಾಷ್ಟ್ರಪ್ರೇಮಿ, ಆಜನ್ಮ ಹೋರಾಟಗಾರ, ಅಸಾಮಾನ್ಯ ಸಾಹಸಿ, ವೀರ ಸಾವರ್ಕರ್ ವಿದ್ಯಾರ್ಥಿಗಳು ಕಲಿಯುವ ಇತಿಹಾಸದಲ್ಲೂ ಸ್ವಸ್ಥಾನ ಕಳೆದುಕೊಂಡು ಅವಕಾಶವಂಚಿತರಾಗಿರುವುದು ದುರದೃಷ್ಟಕರ! ಹಿಂದೆ, ನಾನು ಸೇವೆಯಲ್ಲಿದ್ದಾಗ (2006ರ ಮೊದಲು) ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಸಾವರ್ಕರ್ ಮೇಲೆ ಪ್ರಶ್ನೆ ಕೇಳಬಾರದೆಂಬ ‘ಅಲಿಖಿತ ಆಜ್ಞೆ’ ಹಾಗೂ ‘ಅಘೋಷಿತ […]

ಸಾವರ್ಕರ್ ಎಂಬ ಸ್ವಾತಂತ್ರ್ಯ  ಹೋರಾಟಗಾರ

ಸಾವರ್ಕರ್ ಎಂಬ ಸ್ವಾತಂತ್ರ್ಯ ಹೋರಾಟಗಾರ

ಭಾರತ - 1 Comment
Issue Date : 12.08.2014

‘ದೇಶಭಕ್ತಿಯ ಅಪರಾಧ’ಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ; ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟ ಮೊದಲ ಸ್ವದೇಶಾಭಿಮಾನಿ;‘ಸ್ವರಾಜ್ಯ’ ಎಂದು ಉಚ್ಚರಿಸುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ ‘ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ’ ಎಂದು ಘೋಷಿಸಿದ ಮೊಟ್ಟ ಮೊದಲ ರಾಜಕೀಯ ಮುಂದಾಳು; ದಾಸ್ಯರಕ್ಕಸನ ಎದೆ ಮುಟ್ಟಲು ಪ್ರಯತ್ನ ಪಟ್ಟುದಕ್ಕಾಗಿ ತಾನು ಗಳಿಸಿದ್ದ ಬಿ.ಎ. ಪದವಿಯನ್ನು ಕಳೆದುಕೊಂಡ ಮೊಟ್ಟ ಮೊದಲ ಭಾರತೀಯ ಪದವೀಧರ; ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ ಕಾರಣಕ್ಕಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸ್ಪಟ್ಟ ಮೊಟ್ಟಮೊದಲ ಬ್ಯಾರಿಸ್ಟರ್; […]