ಏಳು, ಬೀಳು... ಎದ್ದು ಗುದ್ದು... ಮುನ್ನುಗ್ಗು

ಏಳು, ಬೀಳು… ಎದ್ದು ಗುದ್ದು… ಮುನ್ನುಗ್ಗು

ಭಾರತ - 1 Comment
Issue Date : 27.05.2014

1982 – ಆಗ ಗೋಕಾಕ್ ಚಳವಳಿಯು ತೀವ್ರ ರೂಪವನ್ನು ಪಡೆದು ಕರ್ನಾಟಕದಾದ್ಯಂತ ಮಿಂಚಿನ ಅಲೆಯನ್ನೇ ಎಬ್ಬಿಸಿ ಜನತೆಯನ್ನು ಎಚ್ಚರಿಸಿದ ಕಾಲ. ಆ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ನಾವು ಗೋಕಾಕ್ ಭಾಷಾ ಸೂತ್ರವನ್ನು ಕರ್ನಾಟಕ ಸರ್ಕಾರ ಒಪ್ಪಿದರೂ ಕನ್ನಡಕ್ಕಾಗಿ ಆಗಿರುವ, ಆಗುತ್ತಿದ್ದ, ಆಗಲಿರುವ ಆಘಾತಗಳನ್ನು ತಡೆಯುವ ಸಲುವಾಗಿ ಶಾಂತಿಯುತ ಚಳವಳಿಗಳನ್ನು, ಸಭೆಗಳನ್ನು, ಅನುಸರಣ ಕಾರ್ಯಗಳನ್ನು ತುಂಬಿದ ಉತ್ಸಾಹದಿಂದ ಮುಂದುವರಿಸಿದೆವು. ಸ್ವತಂತ್ರ ದೂರದರ್ಶನ, ಕನ್ನಡ ವಿಶ್ವ ವಿದ್ಯಾಲಯ ಸ್ಥಾಪನೆ, ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ, ಮಹಿಷಿ ಆಯೋಗದ ವರದಿ, ಆ […]

ಗುಜರಾತಿನಲ್ಲಿ ಮೋದಿ ಸುನಾಮಿ; ಕಾಂಗ್ರೆಸ್ ನಿರ್ನಾಮ

ಗುಜರಾತಿನಲ್ಲಿ ಮೋದಿ ಸುನಾಮಿ; ಕಾಂಗ್ರೆಸ್ ನಿರ್ನಾಮ

ಭಾರತ - 0 Comment
Issue Date : 21.05.2014

ವಿಶ್ವದಾದ್ಯಂತ ಎಲ್ಲರೂ ಕುತೂಹಲದಿಂದ ನಿರೀಕ್ಷಿಸುತ್ತಿದ್ದದ್ದು ಭಾರತದ ಲೋಕಸಭೆಯ ಚುನಾವಣಾ ಫಲಿತಾಂಶ. ಆ ಫಲಿತಾಂಶ ಇದೀಗ ಪ್ರಕಟವಾಗಿದ್ದು ಎಲ್ಲರೂ ಆನಂದತುಂದಿಲರಾಗಿದ್ದಾರೆ. ಗುಜರಾತಿನಲ್ಲಂತೂ ಬಿಜೆಪಿ ಅಭೂತಪೂರ್ವ ವಿಜಯ ಸಾಧಿಸಿದೆ. ದೇಶದ ಅತ್ಯಂತ ದಕ್ಷ, ಸಮರ್ಥ ಮುಖ್ಯಮಂತ್ರಿ ನರೇಂದ್ರ ಮೋದಿ ಮೇ 21ರಂದು ಪ್ರಧಾನಿ ಗದ್ದುಗೆಗೆ ಏರಲಿದ್ದಾರೆ. ಗಂಡುಮೆಟ್ಟಿನ ಗುಜರಾತಿನ ಧೀರ ಪುತ್ರ, ಜನಪ್ರಿಯ ನಾಯಕ ಮೋದಿ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸುವುದು ಗುಜರಾತಿಗಳಿಗೆ ಅಭಿಮಾನದ ಹಾಗೂ ಅತೀ ಸಂತೋಷದ ವಿಷಯವಾದರೂ ಗುಜರಾತನ್ನು ಅವರು ತೊರೆಯುತ್ತಾರಲ್ಲಾ ಎನ್ನುವುದು ಕೂಡ ಅಷ್ಟೇ ಯಾತನಾಮಯ ಪ್ರಸಂಗ. […]

ಅಧಿಕಾರ ನಡೆಸಲು ದೊರೆತ ಅವಕಾಶವಲ್ಲ ಸೇವೆ ಮಾಡಲು ದೊರೆತ ಅವಕಾಶ

ಅಧಿಕಾರ ನಡೆಸಲು ದೊರೆತ ಅವಕಾಶವಲ್ಲ ಸೇವೆ ಮಾಡಲು ದೊರೆತ ಅವಕಾಶ

ಭಾರತ - 0 Comment
Issue Date : 19.05.2014

ಬಿಜೆಪಿ ನಾಯಕರೇ ನಿರೀಕ್ಷಿಸಿರಲಿಕ್ಕಿಲ್ಲ, ಅಷ್ಟೊಂದು ಸ್ಥಾನಗಳನ್ನು ಭಾರತದ ಮತದಾರರು ಬಿಜೆಪಿಗೆ, ಎನ್‌ಡಿಎ ಮೈತ್ರಿಕೂಟಕ್ಕೆ ಕೊಟ್ಟುಬಿಟ್ಟಿದ್ದಾರೆ ಎಂದರೆ ಅದರ ಹಿಂದೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು, ಮತದಾರರು ಕಾಂಗ್ರೆಸ್ ಪಕ್ಷದ ಬಗ್ಗೆ ರೋಸಿಹೋಗಿರುವುದು. ಅಭಿವೃದ್ಧಿ ಶೂನ್ಯತೆ, ಭ್ರಷ್ಟಾಚಾರ, ಜಾತೀಯತೆ, ಕೋಮುವಾದ, ತುಷ್ಟೀಕರಣಗಳನ್ನು ಉದ್ದಕ್ಕೂ ಪೋಷಿಸುತ್ತ ಬಂದಿರುವ ಕಾಂಗ್ರೆಸ್ ಪಕ್ಷ ಅಷ್ಟನ್ನೇ ರಾಜಕೀಯ ಅಥವಾ ಆಡಳಿತ ಎಂದುಕೊಂಡಿದೆ. ಈ ಚಿಲ್ಲರೆ ಮನಸ್ಥಿತಿಗೆ ಹೊರತಾದ ಘನಿಷ್ಠ ಆಡಳಿತವೊಂದು ತನಗೆ ಬೇಕಾಗಿದೆ ಎಂಬ ಸಂಗತಿ ಭಾರತೀಯರಿಗೆ ಮನದಟ್ಟಾಗಿರುವುದು ಮೊದಲ ಸರಳ ಕಾರಣ. ಎರಡನೆಯ […]

ಮೋದಿ ಅಲೆಯೋ, ಜನ ಹೆದ್ದೆರೆಯೋ?

ಮೋದಿ ಅಲೆಯೋ, ಜನ ಹೆದ್ದೆರೆಯೋ?

ಭಾರತ - 1 Comment
Issue Date : 13.05.2014
ನೆಹರು ಅವರಿಗೆ ಡಾ. ಶ್ಯಾಮಪ್ರಸಾದ್ ಮುಖರ್ಜಿ ತಾಯಿಯ ಪತ್ರ

ನೆಹರು ಅವರಿಗೆ ಡಾ. ಶ್ಯಾಮಪ್ರಸಾದ್ ಮುಖರ್ಜಿ ತಾಯಿಯ ಪತ್ರ

ಭಾರತ - 0 Comment
Issue Date : 08.05.2014

  ಪ್ರಿಯ ನೆಹರು ಬಿಧಾನ್ ಚಂದ್ರರಾಯ್ ಮುಖಾಂತರ ಜೂನ್ 30 ರ ಪತ್ರ ಜುಲೈ 2ಕ್ಕೆ ತಲುಪಿತು. ತಮ್ಮ ಶೋಕ ಮತ್ತು ಸಾಂತ್ವನ ಸಂದೇಶಕ್ಕಾಗಿ ಧನ್ಯವಾದಗಳು. ನನ್ನ ಪರಮ ಪ್ರೀತಿಯ ಪುತ್ರನ ನಿಧನದಿಂದ, ಇಡೀ ದೇಶವೇ ದುಃಖ ಸಾಗರದಲ್ಲಿ ಮುಳುಗಿದೆ. ಅವನ ತಾಯಿಯಾದ ಕಾರಣ ನನ್ನ ಮನಸ್ಸಿನ ದುಃಖ, ಸಂಕಟ ಹೇಳಿಕೊಳ್ಳಲು ಶಬ್ದ ಬಳಕೆ ಕಠಿಣವಾಗುತ್ತಿದೆ. ನಾನು ತಮ್ಮಿಂದ ಯಾವ ಪ್ರಕಾರದಲ್ಲೂ ಸಹ ಸಾಂತ್ವ್ವನ, ಸಹಾನುಭೂತಿ ಅಪೇಕ್ಷಿಸಿ ಈ ಪತ್ರ ಬರೆಯುತ್ತಿಲ್ಲ. ನನ್ನ ಪುತ್ರನ ನಿಧನ ಸರಿಯಾದ […]

ಇಂಗ್ಲೆಂಡಿಗೂ ತಟ್ಟಿದ ಅಸ್ಮಿತೆಯ ಅಪಾಯ

ಇಂಗ್ಲೆಂಡಿಗೂ ತಟ್ಟಿದ ಅಸ್ಮಿತೆಯ ಅಪಾಯ

ಭಾರತ ; ರಮೇಶ್ ಪತಂಗೆ - 0 Comment
Issue Date : 05.05.2014

  ನಮ್ಮ ರಾಷ್ಟ್ರೀಯ ಅಸ್ಮಿತೆ ಯಾವುದು? ಈ ಪ್ರಶ್ನೆ ಕೇವಲ ಭಾರತಕ್ಕಷ್ಟೇ ಎದುರಾಗಿಲ್ಲ, ಈಗ ಇಂಗ್ಲೆಂಡಿಗೂ ಈ ಪ್ರಶ್ನೆ ಎದುರಾಗಿದೆ. ಭಾರತದ ಬಗ್ಗೆ ಯೋಚಿಸಿದರೆ ಇಲ್ಲಿಯ ಸಾಮಾನ್ಯ ವ್ಯಕ್ತಿಗೆ ತನ್ನ ಅಸ್ಮಿತೆ ಯಾವುದು? ಎಂಬ ಪ್ರಶ್ನೆ ಎಂದೂ ಎದುರಾಗಿಲ್ಲ. ಆತ ಒಮ್ಮೆ ತನ್ನನ್ನು ಮರಾಠಿ ಎನ್ನುವನು, ಒಮ್ಮೆ ಗುಜರಾತಿ ಎನ್ನುವನು, ಮತ್ತೆ ಜಾಟ್ ಎನ್ನುವನು, ಒಮ್ಮೆ ತಮಿಳಿಗ ಎಂದರೆ ಇನ್ನೊಮ್ಮೆ ದಲಿತ ಎನ್ನುವನು. ಇವೆಲ್ಲದರ ಅರ್ಥವೆಂದರೆ ಭಾರತೀಯ ಎಂದರೆ ಹಿಂದೂತನ- ಎರಡನೆ ಮೂರನೆಯದು ಯಾವುದೂ ಇಲ್ಲ. ಅಸ್ಮಿತೆ […]

ಯೋಗವನ ಬೆಟ್ಟ ದ ಔಷಧಿ ನನಗೆ ಸಂಜೀವಿನಿಯಾಯಿತು

ಯೋಗವನ ಬೆಟ್ಟ ದ ಔಷಧಿ ನನಗೆ ಸಂಜೀವಿನಿಯಾಯಿತು

ಭಾರತ - 0 Comment
Issue Date : 03.05.2014

ವಿಕ್ರಮದ ಏಪ್ರಿಲ್ 14ರ ಸಂಚಿಕೆಯಲ್ಲಿ ಸವಿತಾ ಮಹೇಶ್ ಎನ್ನುವವರು ತೋಡಿಕೊಂಡ ಮನದಾಳದ ಮಾತುಗಳು ನನಗೂ ಬರೆಯಬೇಕೆಂಬ ಸ್ಫೂರ್ತಿ ನೀಡಿದೆ. ಮಾನಸಿಕ ರೋಗಕ್ಕೆ ಯೋಗವನ ಬೆಟ್ಟದ ವನಮೂಲಿಕಾ ಚಿಕಿತ್ಸೆ ಪಡೆದ ಅವರ ಕರುಣಾಜನಕ ಹಿನ್ನೆಲೆಯ ಕಥೆ ಓದಿ ನನ್ನ ಅನುಭವವನ್ನೂ ಬರೆಯುತ್ತಿರುವೆ. ಮಧುಮೇಹಿಗಳು, ಮಧುಮೇಹಿಗಳಲ್ಲದವರಿಗೂ ಕಾಡುವ ಭಯಾನಕ ಖಾಯಿಲೆಯೆಂದರೆ ವಾಸಿಯಾಗದ ಗಾಯ. ಮಾಂಸಖಂಡ ಕೊಳೆತು ಹುಳು ಬೀಳುವಂತಹ ಸಂದರ್ಭ ನಿಜಕ್ಕೂ ಭಯಾನಕ. ಆಂಗ್ಲ ಭಾಷೆಯಲ್ಲಿ ಇದನ್ನು ಗ್ರಾಂಗ್ರೀನ್ ಎನ್ನುತ್ತಾರೆ. ದೇಹದಲ್ಲಿ ಯಾವುದೇ ಗಾಯ 15 ದಿನದೊಳಗೆ ವಾಸಿಯಾಗಲೇಬೇಕು. ಹಾಗೆ […]

ಮೋದಿ ಭಾರತದ ರೇಗನ್ ಆಗ್ತಾರಾ?

ಮೋದಿ ಭಾರತದ ರೇಗನ್ ಆಗ್ತಾರಾ?

ಭಾರತ - 1 Comment
Issue Date : 28.04.2014

ಈ ಚೆಗೆ ನಾನು ಅಮೆರಿಕದ ಓದುಗರಿಗೆ ಭಾರತದ ಚುನಾವಣೆ ಬಗೆಗಿನ ನನ್ನ ಅಭಿಪ್ರಾಯವನ್ನು ತಿಳಿಸಿದೆ. ಟಿವಿ ಪತ್ರಕರ್ತ ಟಕರ್ ಕಾರ್ಲ್‌ಸನ್ ಸಾರಥ್ಯದ ಜನಪ್ರಿಯ ಆನ್‌ಲೈನ್ ವರ್ತಮಾನ ಪತ್ರಿಕೆ The Daily Caller (http://dailycaller.com)ನಲ್ಲಿ ಬರೆದ ನಾನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್‌ರನ್ನು ಹೋಲಿಸಿದೆ. ಸಾಮಾಜಿಕ ಮಾಧ್ಯಮದ ಮ್ಯಾಜಿಕ್‌ನ ಮೂಲಕ ನನ್ನ ಲೇಖನ ಭಾರತದ ವಿಷಯದಲ್ಲಿ ಆಸಕ್ತರಾದವರ ನಡುವೆ ಬಹುಬೇಗ ಪ್ರಚಾರಗೊಂಡು ಭಾರತದೊಳಗೆ ಕೂಡ ದಾಂಗುಡಿಯಿಟ್ಟಿತು. ಅದು ಹಲವರ ಮನ […]

ಈಗ ಬೇಕಿದೆ - ಶುದ್ಧ , ಪಾರದರ್ಶಕ ಆಡಳಿತ

ಈಗ ಬೇಕಿದೆ – ಶುದ್ಧ , ಪಾರದರ್ಶಕ ಆಡಳಿತ

ಭಾರತ ; ಲೇಖನಗಳು - 0 Comment
Issue Date : 24.04.2014

ನಮ್ಮ ದೇಶಕ್ಕೆ ಈಗ ಶುದ್ಧ – ಪಾರದರ್ಶಕ ಆಡಳಿತ ವ್ಯವಸ್ಥೆ ಅನಿವಾರ್ಯವಾಗಿದೆ. ಹತ್ತು ವರ್ಷಗಳ ಸೋನಿಯಾ ನೇತೃತ್ವದ ಯುಪಿಎ ಕೇಂದ್ರ ಸರ್ಕಾರವು ದೇಶದ ಸಂಪತ್ತನ್ನು ಲೂಟಿ ಮಾಡಿದ ಕುರಿತು ಮೊಕದ್ದಮೆಗಳಿವೆ. ಕೇವಲ ಆರೋಪ ಅಲ್ಲ! ಹತ್ತು ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ಹಗರಣಗಳಿಂದ ಕಾಂಗ್ರೆಸ್ಸು ಅಧಿನಾಯಕಿ ಕಿಂಚಿತ್ತೂ ವಿಚಲಿತರಾದಂತಿಲ್ಲ! ಆದರೆ ಲೋಕಸಭೆಗೆ ನಡೆಯುವ ಚುನಾವಣೆ ಸಂದರ್ಭದಲ್ಲಿ ಎಲ್ಲ ಭ್ರಷ್ಟ ಹಗರಣಗಳನ್ನು ಮತ್ತು ಅಕ್ರಮ ಆಡಳಿತ ಪ್ರಕರಣಗಳನ್ನು ಬಯಲಿಗೆಳೆದ ಭಾರತೀಯ ಜನತಾ ಪಕ್ಷದ ವಿರುದ್ಧ ‘ವಾಗ್ದಾಳಿ’ ಮಾಡುತ್ತಿರುವುದು ಎಂತಹ […]

ತೆರೆದಿದೆ ಬಿಜೆಪಿ ಒಂದು ಬಾಗಿಲನ್ನು ತೆರೆಯಬೇಕು ಮುಸ್ಲಿಮರು ಇನ್ನೊಂದನ್ನು

ತೆರೆದಿದೆ ಬಿಜೆಪಿ ಒಂದು ಬಾಗಿಲನ್ನು ತೆರೆಯಬೇಕು ಮುಸ್ಲಿಮರು ಇನ್ನೊಂದನ್ನು

ಭಾರತ ; ಸಂದರ್ಶನಗಳು - 0 Comment
Issue Date : 23.04.2014

ಜಮ್ಮು ಕಾಶ್ಮೀರದ ಮಾಜಿ ಐಜಿಪಿ ಫರೂಕ್‌ಖಾನ್ ಇತ್ತೀಚೆಗೆ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಕಾಶ್ಮೀರ ಕಣಿವೆಯ ಇತಿಹಾಸದಲ್ಲಿ ಇದೊಂದು ಚರಿತ್ರಾರ್ಹ ಪ್ರಸಂಗ. ಕಣಿವೆಯಲ್ಲಿ ರಾಷ್ಟ್ರೀಯತೆಯ ಧ್ವನಿಗೆ ಇದು ಬಲ ನೀಡಿದೆ. ಸಾಹಸಿ ಪೊಲೀಸ್ ಅಧಿಕಾರಿ ಎಂದೇ ಹೆಸರಾಗಿರುವ ಖಾನ್ ಪ್ರಸಿದ್ಧ ಹಜರತ್‌ಬಾಲ್ ಮಸೀದಿಯಲ್ಲಡಗಿದ್ದ ಉಗ್ರಗಾಮಿಗಳನ್ನು 1996ರ ಮಾರ್ಚ್‌ನಲ್ಲಿ ತೆರವುಗೊಳಿಸಿದ್ದು, 2003ರಲ್ಲಿ ಜಮ್ಮುವಿನ ಪ್ರಸಿದ್ಧ ರಘುನಾಥ ಮಂದಿರದಿಂದ ಉಗ್ರರನ್ನು ಹೊಡೆದೋಡಿಸಿದ್ದು ಅವರ ಸಾಹಸಕ್ಕೆ ನಿದರ್ಶನಗಳು. ಈ ಕಾರಣಕ್ಕಾಗಿ ಅವರಿಗೆ ರಾಷ್ಟ್ರಪತಿ ಪದಕ ಕೂಡ ನೀಡಿ ಗೌರವಿಸಲಾಗಿತ್ತು. ‘ಆರ್ಗನೈಸರ್’ […]