ಗರ್ಜಿಸಿದ ಗುರು ಗೋವಿಂದ ಸಿಂಗ್

ಗರ್ಜಿಸಿದ ಗುರು ಗೋವಿಂದ ಸಿಂಗ್

ಭಾರತ ; ಲೇಖನಗಳು - 0 Comment
Issue Date : 27.03.2014

ಭಾರತದ ಮಧ್ಯಯುಗದ ಇತಿಹಾಸದಲ್ಲಿ ಸಿಖ್ಖರ ಧರ್ಮಗುರುಗಳ ಧರ್ಮನಿಷ್ಠೆ ಮತ್ತು ಕ್ಷಾತ್ರತೇಜ ವಿರಾಜಮಾನವಾಗಿದೆ. ಮುಸಲ್ಮಾನರ ಮತಾಂಧತೆಯ ರಕ್ತರಂಜಿತ ಅಧ್ಯಾಯದಲ್ಲಿ ಸಿಖ್ಖರ ರಕ್ತ ಹೆಪ್ಪುಗಟ್ಟಿಸುವ ಪ್ರತಿರೋಧ, ಪ್ರತಿದಾಳಿ ಜನಜನಿತವಾಗಿದೆ. ಗುರು ನಾನಕರಿಂದ (1469-1539) ಸ್ಥಾಪಿಸಲ್ಪಟ್ಟ ಸಿಖ್ಖರ ಧರ್ಮ, ಅಹಿಂಸೆ, ಶಾಂತಿ, ಸಾಮರಸ್ಯಗಳ ದ್ಯೋತಕವಾಗಿತ್ತು. ಕ್ರಿ.ಶ. 1469ರಿಂದ 1708ರ ತನಕದ ಅವಧಿಯಲ್ಲಿ ಆ ಧರ್ಮಕ್ಕೆ ಹತ್ತು ಜನ ಧರ್ಮಗುರುಗಳ ಇತಿಹಾಸವಿದೆ. ಮೊಗಲ್ (ಮೊಘಲ್) ಬಾದಷಹ ಔರಂಗಜೇಬನ (1658-1707) ದೌರ್ಜನ್ಯಪೂರಿತ ದುರಾಡಳಿತದಲ್ಲಿ ಮತಾಂಧತೆಯ ಪರಾಕಾಷ್ಠೆಯ ದಿನಗಳಲ್ಲಿ ಸಿಖ್ ಧರ್ಮವು ತನ್ನ ಶಾಂತಿ ಸ್ವರೂಪದಿಂದ […]

ಅಸ್ಪೃಶ್ಯತೆ ನಿವಾರಣೆ: ಡಾ.ಹೆಡ್ಗೇವಾರ್ ವಿಧಾನ

ಅಸ್ಪೃಶ್ಯತೆ ನಿವಾರಣೆ: ಡಾ.ಹೆಡ್ಗೇವಾರ್ ವಿಧಾನ

ಭಾರತ ; ರಮೇಶ್ ಪತಂಗೆ - 0 Comment
Issue Date : 25.03.2014

ಇಡೀ ಜಗತ್ತಿಗೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದರೆ ಆರೆಸ್ಸೆಸ್ ಹೆಸರು ಗೊತ್ತಿದೆ, ಆದರೆ ರಾ. ಸ್ವ. ಸಂಘದ ಸಂಸ್ಥಾಪಕರು ಯಾರು? ಭಾರತದ ನವನಿರ್ಮಾಣದಲ್ಲಿ ಅವರ ಯೋಗದಾನವೇನು? ಎಂಬ ಪ್ರಶ್ನೆಯನ್ನು ವಿದ್ವಾಂಸರಿಗೆ ಕೇಳಿದರೆ ಅವರಲ್ಲಿ ಶೇ. 90ರಷ್ಟು ಜನರಿಗೆ ಏನೂ ಗೊತ್ತಿರುವುದಿಲ್ಲ. ಉಳಿದ ಶೇ. 10 ಜನರಿಗೆ ಅರ್ಧರ್ಧ ಗೊತ್ತಿರುತ್ತದೆ, ಕೆಲವರಿಗೆ ವಿಕೃತ ಮಾಹಿತಿಯಿರುತ್ತದೆ. ಈ ವಿದ್ವಾಂಸರಿಗೆ ತಮ್ಮ ಅಜ್ಞಾನದ ಬಗ್ಗೆ ಲಜ್ಜೆಯೆನಿಸುತ್ತಿಲ್ಲ ಎಂಬುದೇ ಆಶ್ಚರ್ಯ. ಅಸ್ಪೃಶ್ಯತೆಯ ಉದಾಹರಣೆ ನೋಡಿ! ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಆಚರಿಸಲಾಗುತ್ತಿದೆ. ಮಹಾರಾಷ್ಟ್ರದ ಹಿರಿಯ […]

ಮೋದಿಯ ಚಿಂತನೆ ಈ ದೇಶದಲ್ಲಿ ಪರಿವರ್ತನೆಗೆ ಸಾಕ್ಷಿಯಾಗಲಿದೆ

ಮೋದಿಯ ಚಿಂತನೆ ಈ ದೇಶದಲ್ಲಿ ಪರಿವರ್ತನೆಗೆ ಸಾಕ್ಷಿಯಾಗಲಿದೆ

ಭಾರತ ; ಸಂದರ್ಶನಗಳು - 0 Comment
Issue Date : 17.03.2014

ಮುಂಬೈ ಮಹಾನಗರದ ಪೊಲೀಸ್ ಆಯುಕ್ತರಾಗಿದ್ದ ಡಾ. ಸತ್ಯಪಾಲ್‍ ಸಿಂಗ್ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಕೈಗಳನ್ನು ಬಲಪಡಿಸಲು ತಮ್ಮ ಹು‍ದ್ದೆಗೆ  ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಒಳ್ಳೆಯ ಜನರು ರಾಜಕೀಯಕ್ಕೆ  ಬರದಿದ್ದರೆ ರಾಜಕೀಯ ರಂಗದ  ಕೊಳೆ ತೊಳೆಯುವುದು  ಕಷ್ಟ ಎನ್ನುವುದು ಅವರ ನಿಲುವು. ನರೇಂದ್ರ ಮೋದಿ ದೇಶಕ್ಕೊಂದು ಅಭಿವೃದ್ಧಿ ಪಥದ ದಿಶಾ ದರ್ಶನ ಮಾಡಿಸಿದ್ದಾರೆ. ಹಾಗಾಗಿ ಎಲ್ಲ ದೇಶಭಕ್ತ ಜನರು ಅವರನ್ನು ಬೆಂಬಲಿಸಬೇಕು ಎನ್ನುತ್ತಾರೆ ಸತ್ಯಪಾಲ್ ಸಿಂಗ್. ದೆಹಲಿಯ ಆರ್ಗನೈಸರ್‍ ಪತ್ರಿಕೆಗೆ ಅವರು ನೀಡಿದ ಸಂದರ್ಶನ […]

ನಮ್ಮ ಸಾಂಸ್ಕೃತಿಕ ಹಬ್ಬ 'ಹೋಳಿ'

ನಮ್ಮ ಸಾಂಸ್ಕೃತಿಕ ಹಬ್ಬ ‘ಹೋಳಿ’

ಭಾರತ - 0 Comment
Issue Date : 12.03.2014

 ಹೋಳಿಯು ನಮ್ಮ ಸಾಂಸ್ಕೃತಿಕ ಪರಂಪರೆಯ ಒಂದು ಮಹತ್ವಪೂರ್ಣ ಹಬ್ಬವಾಗಿದೆ.  ಜಾತಿ-ಮತ-ವರ್ಗ ಮುಂತಾದ ಎಲ್ಲ ಭೇದಭಾವಗಳನ್ನು ದೂರಮಾಡಿ ಎಲ್ಲರೂ ಒಬ್ಬರಿಗೊಬ್ಬರು ಹೋಳಿಯ ಬಣ್ಣ ಎರೆದು ತಮ್ಮ ಪ್ರೀತಿ, ಸ್ನೇಹ, ಶ್ರದ್ಧೆ, ಸಹೋದರತ್ವದ ಸದ್ಭಾವನೆಗಳನ್ನು ಸಾರ್ವತ್ರಿಕವಾಗಿ ಪ್ರಕಟಿಸುವ ಉಲ್ಲಾಸದ ಹಬ್ಬ ಹೋಳಿ.  ಪುರಾಣಗಳಲ್ಲಿ  ಹೋಳಿ ಹಬ್ಬವು ಅತಿ ಪ್ರಾಚೀನವಾದುದು.  ವೈದಿಕ ಕಾಲದಿಂದ ಹಿಡಿದು ಪೌರಾಣಿಕ ಕಾಲದವರೆಗಿನ ಗ್ರಂಥಗಳಲ್ಲಿ ಇದರ ಉಲ್ಲೇಖವನ್ನು ನಾವು ಕಾಣುತ್ತೇವೆ.  ಹಿಂದೆ ಹೋಳಿಯಂದು ಅಗ್ನಿಯನ್ನು ಪ್ರಜ್ವಲಿಸುತ್ತ “ರಕ್ಷೋ ಹರಣ ಬಲಗ್ರಹಣಂ” ಮುಂತಾದ ರಾಕ್ಷಸ ವಿನಾಶಕ ಮಂತ್ರಗಳನ್ನು ಪಠಿಸುತ್ತಿದ್ದರು.  […]

ಧರ್ಮಸಂರಕ್ಷಣೆಗಾಗಿ ಅವಿಷ್ಕಾರಗೊಂಡ 'ಖಾಲಸಾ' ಪಂಥ

ಧರ್ಮಸಂರಕ್ಷಣೆಗಾಗಿ ಅವಿಷ್ಕಾರಗೊಂಡ ‘ಖಾಲಸಾ’ ಪಂಥ

ಭಾರತ - 1 Comment
Issue Date : 15.03.2014

ನಮ್ಮ ಇತಿಹಾಸನವನ್ನು ಅವಲೋಕಿಸಿದರೆ ಒಂದು ವಿಶೇಷ ಸಂಗತಿ ಗೋಚರವಾಗುತ್ತದೆ.  ಅದೆಂದರೆ ಇಲ್ಲಿನ ಪ್ರತಿಯೊಂದು ಸಾಮಾಜಿಕ ಮತ್ತು ರಾಜಕೀಯ ಪುನರುತ್ಥಾನಕ್ಕೆ ಪೂರ್ವಭಾವಿಯಾಗಿ ಆಧ್ಯಾತ್ಮಿಕ ಜಾಗೃತಿ ನಡೆದಿದೆ.  ಭಾರತದ ಪ್ರತಿಯೊಂದು ಪ್ರಾಂತದಲ್ಲಿ ಇದನ್ನು ಗಮನಿಸಬಹುದು.  ಉದಾಹರಣೆಗೆ ಮಹಾರಾಷ್ಟ್ರ, ಪಂಜಾಬ್ ಗಳನ್ನು ನೋಡೋಣ.  ಮಹಾರಾಷ್ಟ್ರದಲ್ಲಿ ಸಂತ ಜ್ಞಾನದೇವರಿಮದ ಹಿಡಿದು ತುಕಾರಾಮ, ರಾಮದಾಸರವರೆಗಿನ ಸಂತಶ್ರೇಷ್ಠರು ನಡೆಸಿದ ಧಾರ್ಮಿಕ-ಆಧ್ಯಾತ್ಮಕ ಪುನರ್ಜಾಗರಣದ ಅಂತಿಮ ಫಲಶ್ರುತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯ.  ಪಂಜಾಬಿನಲ್ಲಿ ಇದೇ ಕೆಲಸವನ್ನು ಶ್ರೀ ಗುರುನಾನಕದೇವರಿಂದ ಹಿಡಿದು ಶ್ರೀ ಗುರುಗೋವಿಂದಸಿಂಹರವರೆಗಿನ ಗುರುಪರಂಪರೆ ಮಾಡಿತು.  ಫಲಸ್ವರೂಪವಾಗಿ […]

ಸಂಘ ಮತ್ತು ಸೇವಾಕಾರ್ಯ

ಭಾರತ ; ಲೇಖನಗಳು - 0 Comment
Issue Date : 14.03.2014

ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಹರಡಿರುವ ಮೂರು ಸಾವಿರ ಕಿಲೋಮೀಟರ್ ಉದ್ದಗಲದ ಈ ವಿಶಾಲ ಭಾರತ ಭೂಮಿ ವಿವಿಧತೆಯಿಂದ ತುಂಬಿರುವ ನಾಡು. ಈ ನೆಲದ ಜನತೆಯಲ್ಲಿ ಭಾಷೆ, ಸಂಪ್ರದಾಯ, ಜಾತಿ, ಆಹಾರ, ಉಡುಪು ಇತ್ಯಾದಿ ಅನೇಕ ವಿವಿಧತೆ ಇದ್ದರೂ ಸಹ, ಈಗಿನ ಸಂಪರ್ಕ ಸಾಧನಗಳಿಲ್ಲದ ಅನಾದಿ ಕಾಲದಿಂದ ಈ ವಿಸ್ತಾರವಾದ ದೇಶದ ಜನರನ್ನು ಒಂದೇ ಧರ್ಮ, ಸಂಸ್ಕ್ರತಿಯ ಭಾವನಾ ಸೂತ್ರದಲ್ಲಿ ಪೋಣಿಸಿ ಅದ್ಭುತ ಏಕತೆಯನ್ನು ನಮ್ಮ ಸಾಧು-ಸಂತರು, ಲೇಖಕ-ಕವಿಗಳು, ಜ್ಞಾನಿಗಳು ಈ ಎಲ್ಲರ ವಚನ-ಸಾಹಿತ್ಯಗಳಲ್ಲಿ ಈ ಪುಣ್ಯಭೂಮಿಯ ಭಾವಾತ್ಮಕ ಏಕತೆ […]

ಮಥುರಾದಲ್ಲಿ ವಿಶ‍್ವದ ಎತ್ತರದ ಧಾರ್ಮಿಕ ಕೇಂದ್ರ

ಮಥುರಾದಲ್ಲಿ ವಿಶ‍್ವದ ಎತ್ತರದ ಧಾರ್ಮಿಕ ಕೇಂದ್ರ

ಭಾರತ - 0 Comment
Issue Date : 13.03.2014

ಉತ್ತರ ಪ್ರದೇಶದ ಮಥುರಾ ಸಮೀಪದ ವೃಂದಾವನದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರವಾದ  (212 ಮೀ), 70 ಮಹಡಿಗಳನ್ನು ಹೊಂದಿದ ಶ್ರೀಕೃಷ್ಣ ದೇವಾಲಯದ ಶಂಕು ಸ್ಥಾಪನೆ ಕಾರ್ಯ ಮಾರ್ಚ್‌ 16ಕ್ಕೆ ನಡೆ­ಯ­ಲಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌  ಶಿಲಾನ್ಯಾಸ ನೆರವೇರಿಸಲಿದ್ದಾರೆ. ‘ವೃಂದಾವನ್‌ ಚಂದ್ರೋದಯ ಮಂದಿರ’ ಎಂದು ಕರೆಯಲಾಗುವ ದೇವ­ಸ್ಥಾನ ಸಂಕೀರ್ಣ ದೆಹಲಿ–ಆಗ್ರಾ ರಾಷ್ಟ್ರೀಯ ಹೆದ್ದಾರಿಯ ಛಾತಿಕರ ರಸ್ತೆಯಲ್ಲಿ 5.5 ಎಕರೆ ಜಾಗದಲ್ಲಿ  ಮುಂದಿನ 3 ವರ್ಷದಲ್ಲಿ ಪೂರ್ಣಗೊಳ್ಳಲಿದೆ. 700 ಅಡಿ ಎತ್ತರದ ಈ ದೇವಾಲಯವು ಇಸ್ಕಾನ್ ನಿಂದ 350 ಕೋಟಿ […]

ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ಕ್ಷೀಣಿಸಿದ ಇಂಡಸ್ ನಾಗರೀಕತೆ

ಭಾರತ - 0 Comment
Issue Date : 12.03.2014

ವಾಷಿಂಗ್ಟನ್ ವರದಿ:ಹೊಸ ಅಧ್ಯಯನದ ಪ್ರಕಾರ 4100 ವರ್ಷಗಳ ಹಿಂದೆಯೇ ಭಾರತ ಮತ್ತು ಪಾಕಿಸ್ಥಾನಗಳ ನಾಗರೀಕತೆಯನ್ನು ದುರ್ಬಲಗೊಳಿಸುವಲ್ಲಿ ಹವಾಮಾನ ವೈಪರೀತ್ಯದ ಕೊಡುಗೆ ಕಾರಣವಾಗಿದೆ ಎಂದು ಅಭಿಪ್ರಾಯಪಡಲಾಗಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಮ್ಮ ಪ್ರಾತ್ಯಕ್ಷಿಕೆಯಲ್ಲಿ 4100 ವರ್ಷಗಳ ಹಿಂದೆಯೇ ಭಾರತದ ಬೇಸಿಗೆಯ ಈಶಾನ್ಯ ಮಾರುತವು ಆಗಿಂದಾಗ್ಗೆ ದುರ್ಬಲಗೊಳ್ಳುತ್ತಿದೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ. ನಗರೀಕರಣಗೊಂಡ ಪ್ರಮುಖ ನಗರಗಳು ನಾಗರೀಕತೆಯ ಪ್ರಾರಂಭ ಹಂತದಲ್ಲಿ ಬರದ ಕಾರಣದಿಂ ಸ್ಥಗಿತಗೊಂಡವು ಎಂದು ತಿಳಿಯುತ್ತದೆಯಲ್ಲದೆ ಹವಾಮಾನ ವೈಪರೀತ್ಯದಿಂದಾಗಿ ಪ್ರಸ್ತುತ ಭಾರತ-ಪಾಕಿಸ್ತಾನದ ಪ್ರಮುಖ ನಗರಗಳ ನಾಗರೀಕತೆ ಏಕೆ ಸ್ಥಗಿತಗೊಂಡವು ಎಂಬುದರ […]

ಚುನಾವಣೆ: ಕೇವಲ ಸಾಂದರ್ಭಿಕ ಜ್ವರ ಆಗದಿರಲಿ

ಚುನಾವಣೆ: ಕೇವಲ ಸಾಂದರ್ಭಿಕ ಜ್ವರ ಆಗದಿರಲಿ

ಭಾರತ - 0 Comment
Issue Date : 11.03.2014

ಭಾರತದ ಕೆಲವು ಭಾಗಗಳಲ್ಲಿ ಚಳಿಗಾಲ ಇನ್ನೂ ಥಂಡಿಯಾಗಿದ್ದರೂ ಹಲವು ಭಾಗಗಳಲ್ಲಿ ವಾತಾವರಣ ಸ್ವಲ್ಪ ಬೆಚ್ಚಗಾಗುತ್ತಿದೆ; ಆದರೂ ಸೂರ್ಯೋದಯಕ್ಕೆ ಮುನ್ನ ಮುಂಜಾನೆ ಹಿತಕರವಾಗಿ ತಂಪಾಗಿದೆ. ಮರಗಳು ಸಾಕಷ್ಟು ಹಿಂದೆಯೇ ತಮ್ಮ ಎಲೆಗಳನ್ನು ಉದುರಿಸಲು ಆರಂಭಿಸಿವೆ. ವಸಂತ ಪಂಚಮಿ ಈಗಷ್ಟೇ ಕಳೆದಿದೆ; ಮಾವಿನ ಮರಗಳು ಮೈತುಂಬ ಹೂಬಿಟ್ಟಿವೆ. ಇವು ನಿಧಾನವಾಗಿ ಸಿಹಿಯಾದ ಮತ್ತು ಅಷ್ಟೊಂದು ಸಿಹಿಯಲ್ಲದ ಹಣ್ಣುಗಳನ್ನು ನಮಗೆ ನೀಡಲಿವೆ. ದಪ್ಪ ಚರ್ಮದ ಹಲಸಿನ ಹಣ್ಣು ತನ್ನ ರುಚಿಯಾದ ತೊಳೆಗಳನ್ನು ನೀಡಲಾರಂಭಿಸಿದೆ. ವರ್ಷವಿಡೀ ವೌನವಿದ್ದ ಕೋಗಿಲೆಯಂತಹ ಹಕ್ಕಿಗಳು ತಮ್ಮ ಋತುವಿನ […]

ವಿಶಾಲ ಭಾರತ

ಭಾರತ - 0 Comment
Issue Date : 09.03.2014

ಅದೊಂದು ಕಾಲ! ಭಾರತೀಯರು ಇಲ್ಲಿಂದ ಹೊರಟು ವಿಶ್ವದ ನಾನಾ ಭಾಗಗಳಿಗೆ ತಲುಪ್ಪುತ್ತಿದ್ದರು. ಅನೇಕ  ದೇಶಗಳೊಡನೆ ವ್ಯಾಪಾರ ಬೆಳೆಸುತ್ತಿದ್ದರು. ನಿಕಟ ಸಾಂಸ್ಕೃತಿಕ ಸಂಬಂಧವನ್ನೂ ಸ್ಥಾಪಿಸುತ್ತಿದ್ದರು. ಉತ್ತರದಲ್ಲಿನ ಉನ್ನತ ಹಿಮಾಲಯವಾಗಲಿ, ಪೂರ್ವ-ಪಶ್ಚಿಮ-ದಕ್ಷಿಣ ದಿಕ್ಕುಗಳಲ್ಲಿನ ಅಪಾರ ಸಾಗರವಾಗಲಿ ಅವರ ಮಾರ್ಗದಲ್ಲಿ ಅಡಚಣೆಯಾಗಲಿಲ್ಲ. ವಿಶಾಲ, ಉನ್ನತ ಹಾಗೂ ವಿಸ್ತಾರವಾದ ಹಿಮಾಲಯ ಪರ್ವತದಲ್ಲಿ ಅವರು ಹಲವಾರು ದಾರಿಗಳನ್ನು ಮಾಡಿದ್ದರು. ಅಸ್ಸಾಂನಿಂದ ಬ್ರಹ್ಮಪುತ್ರದ ಮೂಲಕ ಚೈನಾಕ್ಕೆ, ಸಿಕ್ಕಿಂ ಮಾರ್ಗವಾಗಿ ಟಿಬೆಟ್ಟಿಗೆ, ಕಾಶ್ಮೀರದಿಂದ ತುರ್ಕಸ್ಥಾನಕ್ಕೆ ಹೋಗಲು ದಾರಿಗಳಿದ್ದವು. ಇದಲ್ಲದೆ ಚರಿತ್ರೆಯಲ್ಲಿ ವಿಖ್ಯಾತವಾದ ವಾಯುವ್ಯ ಗಡಿಯಲ್ಲಿನ ಕಣಿವೆ ಮಾರ್ಗಗಳು. […]