ಸಂಘ ನಿಷೇಧ ರದ್ದತಿಗೆ ಪತ್ರಿಕೆಗಳ ಆಗ್ರಹ

ಸಂಘ ನಿಷೇಧ ರದ್ದತಿಗೆ ಪತ್ರಿಕೆಗಳ ಆಗ್ರಹ

ಚಂದ್ರಶೇಖರ ಭಂಡಾರಿ - 0 Comment
Issue Date : 08.01.2016

(ಕಳೆದ ಸಂಚಿಕೆಯಿಂದ) ಈ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ದಯಾಲ್ ಅವರು ತನ್ನ ತೀರ್ಪಿನಲ್ಲಿ ‘‘ಯಾವುದೇ ಸಂಸ್ಥೆಯನ್ನು ನಿಷೇಧಿತಗೊಳಿಸಿದುದರ ಕಾರಣಕ್ಕಾಗಿ, ಅದರ ಯಾವನೇ ಸದಸ್ಯನ ವ್ಯವಹಾರ ಚೆನ್ನಾಗಿಲ್ಲ ಎಂಬ ಕಾರಣವೊಡ್ಡಿ ಅವನ್ನು ಬಂಧಿಸಲು ಸಾಕಾಗುತ್ತದೆ ಎಂದೇನಲ್ಲ. ಅಷ್ಟು ಮಾತ್ರಕ್ಕೆ ಅವನ ವ್ಯವಹಾರ ಚೆನ್ನಾಗಿಲ್ಲ ಎನ್ನಲಾಗುವುದಿಲ್ಲ ಮತ್ತು ಅದೊಂದೇ ಅವನ ಬಂಧನಕ್ಕೆ ಸಮಂಜಸ ಕಾರಣವಾಗುವುದಿಲ್ಲ’’ ಎಂದು ಬರೆದಿದ್ದರು. ನ್ಯಾಯಾಲಯವು ಅವರೆಲ್ಲರನ್ನೂ ನಿರಪರಾಧಿಗಳೆಂದು ಸಾರಿ ಬಿಡುಗಡೆಗೊಳಿಸಿತು. (ಕ್ರೈಸಿಸ್ 8.7.48) ಪಟನಾ ಉಚ್ಚ ನ್ಯಾಯಾಲಯ ಬಿಹಾರಿನ ಕೆಲವು ಸ್ವಯಂಸೇವಕರನ್ನು ಅವರು ಜಾತೀಯವಾದಿ ಸಂಘಟನೆಯೊಂದರ ಸದಸ್ಯರು […]

ಸಂಘ ನಿಷೇಧ ರದ್ಧತಿಗೆ ಒಂದೂವರೆ ಲಕ್ಷ ನಾಗರಿಕರ ಸಹಿ

ಸಂಘ ನಿಷೇಧ ರದ್ಧತಿಗೆ ಒಂದೂವರೆ ಲಕ್ಷ ನಾಗರಿಕರ ಸಹಿ

ಚಂದ್ರಶೇಖರ ಭಂಡಾರಿ - 0 Comment
Issue Date : 02.01.2016

ಕಳೆದ ಸಂಚಿಕೆಯಿಂದ) ಸುವಿಖ್ಯಾತ ಸಾಹಿತಿ ಮತ್ತು ಸಮಾಜಸೇವಕರೂ ಆಗಿದ್ದ ಪಂ. ಮೌಲಿಚಂದ್ರ ಶರ್ಮ ಅವರ ಅಧ್ಯಕ್ಷತೆಯಲ್ಲಿ ‘ಜನಾಧಿಕಾರ ಸಮಿತಿ’ ಎಂಬ ಒಂದು ಸಂಸ್ಥೆಯನ್ನು ಅವರು ಹುಟ್ಟುಹಾಕಿದರು. ಈ ಸಮಿತಿಯು ಹಲವಾರು ಸಭೆ ಮತ್ತು ವಿಚಾರಗೋಷ್ಠಿಗಳನ್ನು ನಡೆಸಿ, ಜನಜಾಗೃತಿಯ ಕಾರ್ಯ ಆರಂಭಿಸಿತು. ತಮ್ಮ ಮೂಲಭೂತ ಹಕ್ಕುಗಳನ್ನು ಯಾವ ರೀತಿಯಲ್ಲಿ ಸರಕಾರ ಕಸಿಯುತ್ತಿದೆ, ತಮ್ಮ ಮೇಲೆ ದಬಾವಣೆ ಚಲಾಯಿಸುತ್ತಿದೆ ಎಂಬ ಬಗ್ಗೆ ಜನರಿಗೆ ವಿವರಿಸಿ ತಿಳಿಸುವ ಪ್ರಕ್ರಿಯೆ ಅದರಿಂದ ಶುರುವಾಯ್ತು. ಈ ಅಭಿಯಾನದಿಂದಾಗಿ ಪ್ರತಿಯೊಂದು ಪ್ರಾಂತದಲ್ಲೂ ಜನಾಧಿಕಾರ ಸಮಿತಿಯ ಶಾಖೆಗಳು […]

ಸಮೂಹಸನ್ನಿಗೆ  ಬಲಿಯಾಗಿದ್ದ ಜನತೆಗೆ ಜ್ಞಾನೋದಯ

ಸಮೂಹಸನ್ನಿಗೆ ಬಲಿಯಾಗಿದ್ದ ಜನತೆಗೆ ಜ್ಞಾನೋದಯ

ಚಂದ್ರಶೇಖರ ಭಂಡಾರಿ - 0 Comment
Issue Date : 25.12.2015

(ಕಳೆದ ಸಂಚಿಕೆಯಿಂದ) ವಿಶ್ವದ ಜನರು ಗಾಂಧಿಜಿಯವರನ್ನು ಓರ್ವ ಅಜಾತಶತ್ರು, ಮಹಾತ್ಮ, ಭಾರತದಲ್ಲಿ ಸರ್ವಸಮ್ಮಾನಿತರು, ಅದರಲ್ಲೂ ಹಿಂದುಗಳಿಗೆಲ್ಲ ಆರಾಧ್ಯರು ಎಂಬಂತೆ ಕಾಣುತ್ತಿರಬೇಕಾದಲ್ಲಿ, ಇಲ್ಲೆ ಲಕ್ಷಾಂತರ ಜನರು ಅವರ ಕೊಲೆಗಾಗಿ ಹಪಹಪಿಸುತ್ತಿದ್ದರು, ಅವರನ್ನು ತಿರಸ್ಕರಿಸಿದ್ದರು ಎಂಬ ಪ್ರಚಾರ ಮಾಡುವುದರಿಂದ ಅವರಿಗೇನೋ ಪಕ್ಷದ ಸ್ವಾರ್ಥದ ನಿಟ್ಟಿನಲ್ಲಿ ಒಂದಿಷ್ಟು ಲಾಭವಾಗಬಹುದು; ಆದರೆ ಗಾಂಧಿಜಿಯ ವರಿಗಂತೂ ಅವರಿಂದ ಪೂರಾ ಅನ್ಯಾಯವೇ ಆಗುತ್ತದೆ ಎಂಬುದು ನಿಸ್ಸಂದೇಹ. ಬೆಳಗು ಆದರೂ ಉಳಿದ ನಿಶೆ 1 ಫೆಬ್ರವರಿ 1948ರಂದು ತಾವು ಬಂಧಿತರಾಗುವ ಮೊದಲು ಶ್ರೀ ಗುರೂಜಿಯವರು ಎಲ್ಲ ಸ್ವಯಂಸೇವಕರು […]

ಯಾವುದು ಹಿಂದುತ್ವ?ಒಂದು ಚಿಂತನೆ

ಯಾವುದು ಹಿಂದುತ್ವ?ಒಂದು ಚಿಂತನೆ

ಚಂದ್ರಶೇಖರ ಭಂಡಾರಿ ; ಲೇಖನಗಳು - 0 Comment
Issue Date : 25.12.2015

‘ಕೋಮುವಾದ ಹೆಚ್ಚಲು ಹಿಂದುತ್ವವಾದವೇ ಕಾರಣವಂತೆ’-ರಾಜಕಾರಣಿಗಳ ಹೊಸ ಸಂಶೋಧನೆ!! ಹಿಂದುತ್ವವೇ ಅಸ್ಪೃಶ್ಯತೆಗೆ ಮೂಲ ಕಾರಣವಂತೆ!!! ಹಿಂದುತ್ವದ ಆಳ-ಅಗಲವನ್ನು ಅರಿಯದೆ ಹೀಗೆಲ್ಲಾ ಮಾತನಾಡುವುದರಿಂದ ಹಿಂದುತ್ವವು ತನ್ನ ಮಹತ್ವವನ್ನು ಕಳೆದುಕೊಳ್ಳುವುದಿಲ್ಲ, ಬದಲಿಗೆ ಹಿಂದುತ್ವದ ಮಹಾಪ್ರವಾಹದೊಳಗೆ ಸೇರಬಯಸುವ ಒಂದಿಷ್ಟು ಜನರ ಮನದಲ್ಲಿ ಸಂದೇಹವನ್ನು ಹುಟ್ಟಿಸುವ ಕೆಲಸವಂತೂ ಆಗುತ್ತದೆ. ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್ ॥ ಎಲ್ಲರೂ ಸುಖವಾಗಿ, ಆನಂದವಾಗಿ,ಆರೋಗ್ಯವಾಗಿರೋಣ, ಯಾರಿಗೂ ದುಃಖ ಬರುವುದು ಬೇಡ. ಎಲ್ಲರೂ ಅಂದರೆ ಯಾರು? ಕೇವಲ […]

ನ್ಯಾಯಾಲಯಗಳ ಸ್ಪಷ್ಟ ತೀರ್ಪು

ನ್ಯಾಯಾಲಯಗಳ ಸ್ಪಷ್ಟ ತೀರ್ಪು

ಚಂದ್ರಶೇಖರ ಭಂಡಾರಿ - 0 Comment
Issue Date : 10.12.2015

(ಕಳೆದ ಸಂಚಿಕೆಯಿಂದ) ಆದರೆ ನ್ಯಾಯಾಧೀಶರು ಈ ಎರಡೂ ವಾದಗಳನ್ನು ಒಪ್ಪದೆ, ಆಪಾದಿತರು ಸಂಚು ಹೂಡಿದ್ದರು ಎಂದು ತೀರ್ಪಿನಲ್ಲಿ ಹೇಳಿದ್ದಾರೆ. ಜತೆಯಲ್ಲಿ ಸಂಚು ದೇಶವ್ಯಾಪಿಯಾಗಿ ಇತ್ತು ಮತ್ತು ಅದರಲ್ಲಿ ಸಾವಿರಾರು ಮಂದಿ ಷಾಮೀಲಾಗಿದ್ದರು ಎಂಬ ಆರೋಪವನ್ನು ಪೂರಾ ತಿರಸ್ಕರಿಸಿದ್ದಾರೆ. ಆಪಾದಿತರು ಮಾಡಿರುವ ಸಂಚಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಬಂಧವೇನೂ ಇಲ್ಲ ಎಂಬುದನ್ನೂ ತಮ್ಮ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ಸಾಕ್ಷಿಗಳ ಹೇಳಿಕೆ ಮತ್ತು ಪರವಿರೋಧಿ ವಾದಗಳ ಸಂದರ್ಭದಲ್ಲಿ ಸರಕಾರಿ ವಕೀಲರು ಗಾಂಧಿಜಿಯವರ ಹತ್ಯೆಯಾಗಿ ದೇಶವ್ಯಾಪಿಯಾಗಿ ಸಂಘವು ಸಂಚು ಹೂಡಿತ್ತು […]

ಗಾಂಧಿ ಹತ್ಯೆಯ ಾರೋಪವನ್ನು ಸಂಘದ ತಲೆಗೆ ಕಟ್ಟಲು ವಿಫಲ ಸಾಹಸ

ಗಾಂಧಿ ಹತ್ಯೆಯ ಾರೋಪವನ್ನು ಸಂಘದ ತಲೆಗೆ ಕಟ್ಟಲು ವಿಫಲ ಸಾಹಸ

ಚಂದ್ರಶೇಖರ ಭಂಡಾರಿ - 0 Comment
Issue Date : 10.12.2015

(ಕಳೆದ ಸಂಚಿಕೆಯಿಂದ) ಪಾಹ್ವಾನಿಗೆ ಮುಂಬಯಿಯ ಓರ್ವ ಕಾಂಗ್ರೆಸ್ ನಾಯಕ ಡಾ॥ಜೆ.ಸಿ.ಜೈನ್ ಎಂಬುವರ ಜತೆ ನಿಕಟ ಸಂಬಂಧವಿತ್ತು. ಅವರಿಂದ ಅವನು ಅನೇಕ ರೀತಿಯಲ್ಲಿ ನೆರವು ಸಹ ಪಡೆಯುತ್ತಿದ್ದ. ಅವನು ಜನವರಿ 20ರ ಮೊದಲೇ ತಾನು ಮತ್ತು ತನ್ನ ಮಿತ್ರರು ಕೂಡಿ ಹೂಡಿದ ಸಂಚಿನ ಎಲ್ಲ ವಿವರಗಳನ್ನು ಅವರಿಗೆ ತಿಳಿಸಿದ್ದ. ಆಗ ಡಾ॥ಜೈನ್ ಅವರು ಅವನಿಗೆ ಚೆನ್ನಾಗಿ ಛೀಮಾರಿ ಹಾಕಿದ್ದರು. ಆದರೆ ಅವನು ಹೇಳಿದ್ದ ಸಂಗತಿಗಳ ಬಗ್ಗೆ ಅವರು ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅವನೋರ್ವ ನಿರಾಶ್ರಿತ ತರುಣ, ಪಂಜಾಬ್‌ನಿಂದ ಎಲ್ಲ ಕಳೆದುಕೊಂಡು […]

ಮೊದಲು ಬಂಧನ, ಅನಂತರ ಆರೋಪ!

ಮೊದಲು ಬಂಧನ, ಅನಂತರ ಆರೋಪ!

ಚಂದ್ರಶೇಖರ ಭಂಡಾರಿ - 0 Comment
Issue Date : 28.11.2015

(ಕಳೆದ ಸಂಚಿಕೆಯಿಂದ) ಇದೊಂದು ಭಾರೀ ಚರ್ಚೆಯ ವಿಷಯವಾಯ್ತು. ಜಿಲ್ಲೆಯ ಬಾರ್ ಅಸೋಸಿಯೇಷನ್ ವತಿಯಿಂದ ಪೊಲೀಸರ ಕ್ರಮವನ್ನು ಉಗ್ರವಾಗಿ ಖಂಡಿಸಿ ಠರಾವು ಸ್ವೀಕರಿಸಲಾಯಿತು. ನಂತರವಷ್ಟೇ ಮಧ್ಯಪ್ರದೇಶದ ಸರ್ಕಾರವು ಸಂಬಂಧಿತ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿತು. ವಾರೆಂಟ್‌ರಹಿತ ಬಂಧನ ಸರ್ಕಾರಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದ ರೀತಿಯ ಬಗ್ಗೆ ಪ್ರಶ್ನಿಸುವವರೇ ಇರಲಿಲ್ಲ. ಹೀಗಾಗಿ ಬಂಧನದ ಪೂರ್ವ ವಾರೆಂಟ್ ತೋರಿಸಬೇಕಾದ ಅಗತ್ಯವಿದೆ ಎಂಬುದನ್ನೂ ಪೊಲೀಸರು ಪರಿಗಣಿಸುತ್ತಿರಲಿಲ್ಲ . ಛಿಂದವಾಡಾದ ಸಂಘಚಾಲಕರನ್ನು ಕೈಕೋಳ ತೊಡಿಸಿ ಕರೆದೊಯ್ದಿದ್ದಂತೂ ಬೇರೆ ಮಾತು. ಆದರೆ ಸಂಬಂಧಿತ ವಾರೆಂಟ್ ಸಹ ಅವರಿಗೆ ತೋರಿಸಲಿಲ್ಲ. ಅಲ್ಲಿಗೆ […]

ಸೂರ್ಯನಾಥ - ನಾನು ಕಂಡಂತೆ

ಸೂರ್ಯನಾಥ – ನಾನು ಕಂಡಂತೆ

ಚಂದ್ರಶೇಖರ ಭಂಡಾರಿ ; ಸ್ಮರಣೆ - 0 Comment
Issue Date : 03.11.2015

ಇಸವಿ 1953. ಬಂಟ್ವಾಳದಲ್ಲಿ ತಮ್ಮ ಹೈಸ್ಕೂಲು ಶಿಕ್ಷಣ ಪೂರೈಸಿ ಸೂರ್ಯನಾಥರು ಅದೇ ವರ್ಷ ಮಂಗಳೂರಿಗೆ ಬಂದಿದ್ದರು. ಆ ದಿನಗಳಲ್ಲಿ ಅವರೊಂದಿಗೆ ನನಗೆ ಪರಿಚಯವಾಗಿ, ಕ್ರಮೇಣ ಸ್ನೇಹ ಬೆಸೆದುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ. ನಾನಾಗ ದ್ವಿತೀಯ ಇಂಟರ್‌ಮೀಡಿಯಟ್‌ನಲ್ಲಿದ್ದೆ. ಅವರಿಗಿಂತ ಒಂದು ವರ್ಷ ಮುಂದೆ. ನಾವಿಬ್ಬರೂ ಓದುತ್ತಿದ್ದುದು ಬೇರೆ ಬೇರೆ ಕಾಲೇಜುಗಳಲ್ಲಿ. ನಮ್ಮ ವಿಷಯಗಳೂ ಭಿನ್ನ. ಅವರ ಅಧ್ಯಯನವಿದ್ದುದು ಮಾನವಿಕಶಾಸ್ತ್ರದಲ್ಲಿ, ನಾನು ವಿಜ್ಞಾನದ ವಿದ್ಯಾರ್ಥಿ. ಆದರೆ ನಿತ್ಯವೂ ಸಂಜೆ ಸಂಘದ ವಿದ್ಯಾರಣ್ಯ ಶಾಖೆಯಲ್ಲಿ ನಮ್ಮಿಬ್ಬರದೂ ಪರಸ್ಪರ ಭೇಟಿ, ಜತೆಗೂಡಿ […]

ಗಲಭೆಕೋರರಿಗೆ ಸರ್ಕಾರದ ಬೆಂಬಲವಿತ್ತು!

ಗಲಭೆಕೋರರಿಗೆ ಸರ್ಕಾರದ ಬೆಂಬಲವಿತ್ತು!

ಚಂದ್ರಶೇಖರ ಭಂಡಾರಿ ; ಲೇಖನಗಳು - 0 Comment
Issue Date :

ಒಟ್ಟಿನಲ್ಲಿ ಗಲಭೆಗಳು ದೇಶಾದ್ಯಂತ ನಡೆದುದು ನಿಜವೇ. ಅದರಲ್ಲಿ ಈ ಮೊದಲೇ ಹೇಳಿದಂತೆ ಅತ್ಯಧಿಕ ಪ್ರಮಾಣದಲ್ಲಿ ನಡೆದಿದ್ದುದು ಮಹಾರಾಷ್ಟ್ರ ಮತ್ತು ಬರಾರ್‌ನಲ್ಲಿ. ಉಳಿದ ಕಡೆಗಳಲ್ಲಾದ ಗಲಭೆ, ದೊಂಬಿ ಒಂದೇ ಪ್ರಮಾಣದಲ್ಲೆಂದಲ್ಲ. ಕೆಲವು ಕಡೆ ಹೆಚ್ಚು, ಕೆಲವು ಕಡೆ ಕಡಿಮೆ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಗಲಭೆಕೋರರಿಗೆ ಸರ್ಕಾರದ ಬೆಂಬಲವಿತ್ತು.  (ಕಳೆದ ಸಂಚಿಕೆಯಿಂದ) ಅಸ್ಸಾಮಿನಲ್ಲಿ ಕಮ್ಯುನಿಸ್ಟರ ಆಟ ಅಸ್ಸಾಂನಲ್ಲಿ ಆಗ ಸಂಘದ ಕೆಲಸ ಪೂರಾ ಹೊಸತು. ಹೀಗಾಗಿ ಕಾಂಗ್ರೆಸ್ಸಿನವರು ಸಂಘವನ್ನು ಗಣನೆಗೆ ತೆೆದುಕೊಂಡೇ ಇರಲಿಲ್ಲ. ಅದೇ ಕಾರಣಕ್ಕಾಗಿ ಅವರಿಗೆ ಸಂಘದ ಬಗ್ಗೆ ಯಾವುದೇ ಕೋಪ, […]

ಸಂಘ ವಿರೋಧಿಗಳ ಪೂರ್ವಯೋಜಿತ ಗೂಂಡಾಗಿರಿ

ಸಂಘ ವಿರೋಧಿಗಳ ಪೂರ್ವಯೋಜಿತ ಗೂಂಡಾಗಿರಿ

ಚಂದ್ರಶೇಖರ ಭಂಡಾರಿ - 0 Comment
Issue Date : 30.10.2015

(ಕಳೆದ ಸಂಚಿಕೆಯಿಂದ) ಅಗ್ನಿಕಾಂಡ ಮತ್ತು ಲೂಟಿಯಲ್ಲಿ ನಿರತವಾಗಿದ್ದ ಈ ಲಂಗುಲ ಗಾಮಿಲ್ಲದ ಗುಂಪು ಎಲ್ಲೆಲ್ಲೂ ವಿಧ್ವಂಸ ಕೃತ್ಯಗಳನ್ನು ನಡೆಸುತ್ತ ಮುಂದು ವರಿಯಿತು. ಸಂಘದ ಸಂಸ್ಥಾಪಕ ಡಾ. ಹೆಡಗೆವಾರರ ಪರಮ ಆಪ್ತ ಸ್ನೇಹಿತ ಒಂದು ಸಾರ್ವಜನಿಕ ಶಾಲೆಯ ಮುಖ್ಯೋಪಾಧ್ಯಾಯರೂ ಆಗಿದ್ದ ಅಣ್ಣಾಜಿ ಲಾಂಬೆ ಅವರ ಮೇಲೆ ಆ ಗುಂಪು ಲಾಠಿ ಪ್ರಹಾರ ನಡೆಸಿತು. ಏಟುಗಳನ್ನು ತಡೆಯಲು ಮಾಡಿದ ತಮ್ಮ ಪ್ರಯತ್ನದಲ್ಲಿ ಅವರ ಒಂದು ಬೆರಳು ಮುರಿಯಿತು. ಅವರು ಮೂರ್ಛೆ ತಪ್ಪಿ ಬಿದ್ದರು. ಒಂದು ತಿಂಗಳು ಪೂರ್ತಿ ಅವರು ಹಾಸಿಗೆ ಹಿಡಿದರು. […]