ಒಳಸಂಚಿನ ಒಳನೋಟ

ಒಳಸಂಚಿನ ಒಳನೋಟ

ಚಂದ್ರಶೇಖರ ಭಂಡಾರಿ - 0 Comment
Issue Date : 05.08.2015

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಾ ಸಂಸ್ಥೆ ಎಂಬ  ಖ್ಯಾತಿ ಪಡೆದಿದ್ದರೂಅದು ಈ ಮಟ್ಟಕ್ಕೆ ಏರಲು ಪಟ್ಟಪಾಡು ಬಹಳಷ್ಟು. ಸಂಘ ಆರಂಭವಾಗಿ ಹಲವು ವರ್ಷಗಳ ಕಾಲ ಅದಕ್ಕಿದ್ದುದು ಕೇವಲ ಪ್ರತಿಕೂಲ ಸನ್ನಿವೇಶಗಳೇ. ಅಧಿಕಾರಸ್ಥರ  ಕೋಪದ ಅಗ್ನಿಪರೀಕ್ಷೆಯನ್ನು ಅದು ಪದೇ ಪದೇ ಎದುರಿಸಬೇಕಾಯಿತು. ಬ್ರಿಟಿಷರ ಆಡಳಿತ, ಅನಂತರ ಸ್ವದೇಶೀ ಆಡಳಿತವಿದ್ದಾಗಲೂ ಸಂಘವನ್ನು ತುಳಿಯಲು ಬಗೆ ಬಗೆಯ  ಹುನ್ನಾರಗಳು ನಡೆದವು. ಆದರೆ ಸಂಘ ಇವೆಲ್ಲ ಅಗ್ನಿಪರೀಕ್ಷೆಗಳನ್ನು ಎದುರಿಸಿ, ಯಶಸ್ವಿ ಯಾಗಿ ರಾಷ್ಟ್ರೀಯ ಚಾರಿತ್ರ್ಯ ನಿರ್ಮಾಣ […]

ಹಣದ ಗಳಿಕೆಯಲ್ಲ, ಪುಣ್ಯಸಂಚಯ ನಮ್ಮ ಜೀವನಾದರ್ಶ

ಹಣದ ಗಳಿಕೆಯಲ್ಲ, ಪುಣ್ಯಸಂಚಯ ನಮ್ಮ ಜೀವನಾದರ್ಶ

ಚಂದ್ರಶೇಖರ ಭಂಡಾರಿ ; ಲೇಖನಗಳು - 0 Comment
Issue Date : 21.10.2014

ಸುಮಾರು ಇಪ್ಪತ್ತೈದು ಶತಮಾನಗಳ ಪೂರ್ವದ ಒಂದು ಮಾಹಿತಿ. ಆಗ ಉತ್ತರ ಭಾರತದ ಮಗಧ ರಾಜ್ಯವನ್ನಾಳುತ್ತಿದ್ದವನು ಮಹಾಪದ್ಮನಂದನೆಂಬ ರಾಜ. ಇವನ ನಂತರ ಮಗಧದ ಪಟ್ಟಕ್ಕೇರಿದವನು ಧನನಂದನೆಂಬುವನು. ಇವನು ತುಂಬಾ ವಿಲಾಸಿ ಮತ್ತು ಪ್ರಜಾಪೀಡಕನೂ ಆಗಿ ಕುಖ್ಯಾತನಾಗಿದ್ದವನು; ದೇಶಹಿತದ ಕಾಳಜಿ ಅವನಿಗಿರಲಿಲ್ಲ. ಹೀಗಾಗಿ ಮುಂದೆ ಚಾಣಕ್ಯ ಮತ್ತು ಚಂದ್ರಗುಪ್ತರ ಜೋಡಿ ಇವನನ್ನು ಮತ್ತು ಸಂಪೂರ್ಣ ನಂದವಂಶವನ್ನೇ ನಾಶ ಮಾಡಿ ಪ್ರಬಲವಾದ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದುದು ಈಗ ಇತಿಹಾಸ. ನಂದವಂಶದ ರಾಜ ಮಹಾಪದ್ಮನಂದನಿಗೆ ಆ ಹೆಸರು ಬಂದಿದ್ದುದು ಒಂದು ವಿಶೇಷ ಕಾರಣಕ್ಕಾಗಿ. […]

"ಕಾಲನಿ ಅಲ್ಲ, 'ಹಿಂದು' ಪದ ಸರಿಯಲ್ಲ"

“ಕಾಲನಿ ಅಲ್ಲ, ‘ಹಿಂದು’ ಪದ ಸರಿಯಲ್ಲ”

ಕರ್ನಾಟಕ ; ಚಂದ್ರಶೇಖರ ಭಂಡಾರಿ - 0 Comment
Issue Date : 25.03.2014

ಈ  ಶೀರ್ಷಿಕೆ ಕಂಡು ಇದೊಂದು ಸೆಕ್ಯುಲರ್ ಗಾದೆಯೋ ಒಗಟೋ ಇರಬೇಕೆಂದು ಅನಿಸಿರಬಹುದಲ್ಲವೇ? ಎರಡೂ ಅಲ್ಲ. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಹೆಡಗೇವಾರರು (ಡಾಕ್ಟರ್‌ಜೀ) ಹೇಳಿದ ಮಾತು. ಪ್ರಸಂಗ ಹೀಗಿದೆ: ಸಂಘದ ಶಾಖೆ ಆರಂಭಿಸಲು ಅವರು ಮಹಾರಾಷ್ಟ್ರದಲ್ಲಿನ ನಾಸಿಕಕ್ಕೆ ಬಂದಿದ್ದ ಸಂದರ್ಭ. ಆಗ ಅವರು ಉಳಿದುಕೊಂಡಿದ್ದುದು ಶ್ರೀ ರಾಜಾಭಾಊ ಸಾಠೇ ಎಂಬೋರ್ವ ವಕೀಲರ ಮನೆಯಲ್ಲಿ. ಅವರೊಮ್ಮೆ ಅಲ್ಲಿನ ರಸ್ತೆಯಲ್ಲಿ ಓಡಾಡುತ್ತಿದ್ದಾಗ ಒಂದು ಕಡೆ ಅವರಿಗೆ ‘ಹಿಂದು ಕಾಲನಿ’ ಎಂಬ ಬೋರ್ಡ್ ಕಾಣಿಸಿತು. ಖಾಲಿಯಾಗಿದ್ದ ಜಾಗದಲ್ಲಿ ನಿವೇಶನಗಳನ್ನು […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-14

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-14

ಚಂದ್ರಶೇಖರ ಭಂಡಾರಿ - 0 Comment
Issue Date : 07.03.2014

ಶಾಖೇತರ ಆಯಾಮಗಳು ಶಾಖಾ ರೂಪದ ಕಾರ್ಯವಿಸ್ತಾರ ಹಾಗು ಅಖಿಲ ಭಾರತ ಸ್ವರೂಪದ ವಿವಿಧ ಕ್ಷೇತ್ರಗಳ ಕಾರ್ಯವಲ್ಲದೆ ಕರ್ನಾಟಕವು ಸಂಘಕಾರ್ಯಕ್ಕೆ ತನ್ನದೇ ಕೆಲವು ವಿಶೇಷ ಉಲ್ಳೇಖನೀಯ ಆಯಾಮಗಳನ್ನು ಸಹ ಕೊಟ್ಟಿದೆ. ಪ್ರಾಂತದಲ್ಲಿ ಸಂಘ ಕಾರ್ಯದ ಪ್ರತಿಷ್ಠೆ ಮತ್ತು ಪ್ರಭಾವ ಇವೆರಡನ್ನೂ ಹೆಚ್ಚಿಸಿರುವಂತಹ ಈ ಎಲ್ಲ ಆಯಾಮಗಳನ್ನು ಪರಚಯಿಸುವುದು ಸಹ ಅಗತ್ಯವೇ. ಪ್ರಕಾಶನ ವಿಭಾಗಸಂಘದ ವಿಚಾರವನ್ನು, ಮುದ್ರಿತ ಸಾಹಿತ್ಯದ ಮೂಲಕ ಜನಸಾಮಾನ್ಯರವರೆಗೆ ಒಯ್ದು ಮುಟ್ಟಿಸುವುದರಲ್ಲಿ ಕರ್ನಾಟಕವು ಅಗ್ರ ಪಂಕ್ತಿಯಲ್ಲರುವ ಪ್ರಾಂತವೆನಿಸಿದೆ. ಸಂಘದಂತಹ ಒಂದು ಬೃಹತ್ ಸಂಘಟನೆಗೆ ಪ್ರೇರಕ ಶಕ್ತಿ ಯಾವುದು? […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-13

ಚಂದ್ರಶೇಖರ ಭಂಡಾರಿ - 0 Comment
Issue Date : 28.02.2014

ವಿಶ್ವಸಂಘ ಶಿಬಿರ 1990ರ ಡಿಸೆಂಬರ್‍ನಲ್ಲಿ ಬೆಂಗಳೂರಲ್ಲಿ ಒಂದು ವಿಶೇಷ ಕಾರ್ಯಕ್ರಮ. ವಿಶ್ವದ ವಿವಿಧ ದೇಶಗಳಲ್ಲಿನ ಸ್ವಯಂಸೇವಕರ ಶಿಬಿರ ಅದು. ವಿಶ್ವಮಟ್ಟದಲ್ಲಿ ಈ ವಿಧದ ಶಿಬಿರ ಅದೇ ಮೊಟ್ಟ ಮೊದಲನೆಯದು. ಈ ಶಿಬಿರಕ್ಕೆ ಅನೇಕ ಸ್ವಯಂಸೇವಕರು ತಮ್ಮ ಪರಿವಾರಸಹಿತ ಬರುವವರಿದ್ದರು. ಮತ್ತು ಬರುವಂತಹ ಮಹಿಳೆಯರು ಆಯಾ ದೇಶಗಳಲ್ಲಿ ರಾಷ್ಟ್ರಸೇವಿಕಾ ಸಮಿತಿಯ ಕಾರ್ಯಕರ್ತೆಯರೂ ಆಗಿರುವವರೇ. ಹೀಗಾಗಿ ಈ ಶಿಬಿರವು ಒಟ್ಟೊಟ್ಟಿಗೆ ಪುರುಷರು ಮತ್ತು ಮಹಿಳೆಯರಿಗೆ ಹೀಗೆ ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಎರಡು ಶಿಬಿರಗಳ ರೀತಿಯಲ್ಲಿ ನಡೆಯುವುದಿತ್ತು. ಬೆಂಗಳೂರು ಅರಮನೆಯ ಆವರಣದಲ್ಲಿ […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-12

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-12

ಚಂದ್ರಶೇಖರ ಭಂಡಾರಿ - 0 Comment
Issue Date : 21.02.2014

ಕಾರ್ಯಕ್ಕೆ ಸೇವೆಯ ಆಯಾಮಉಡುಪಿಯ ಸಮ್ಮೇಳನವು ಕರ್ನಾಟಕದ ಸಂಘಕಾರ್ಯಕ್ಕೆ ಸಾಮಾಜಿಕ ಸೇವೆಯ, ವಿಶೇಷವಾಗಿ ಅಸ್ಪೃಶ್ಯತಾ ನಿವಾರಣೆಯ ಕೆಲಸಗಳಿಗಾಗಿ ಹೊಸ ತಿರುವನ್ನು ನೀಡುವಂತಹದಾಯಿತು. ಆ ದಿನಗಳಲ್ಲಿ ದಕ್ಷಿಣ ಭಾರತದ ಕ್ಷೇತ್ರೀಯ ಪ್ರಚಾರಕರಾಗಿದ್ದ ಯಾದವರಾಯರು ಕರ್ನಾಟದಲ್ಲಿ ಸ್ವಯಂಸೇವಕರ ಮುಂದೆ ಒಂದು ಹೊಸ ಚಿಂತನೆಯನ್ನು ಮಂಡಿಸಲು ಆರಂಭಿಸಿದರು. ಸಂಘದ ಗುರಿ ಕೇವಲ ಶಾಖೆ ನಡೆಸುವುದಷ್ಟೇ ಅಲ್ಲ; ನಿತ್ಯ ಶಾಖೆಯ ಉದ್ದೇಶ ಚಾರಿತ್ರ್ಯಮಂತ ವ್ಯಕ್ತಿಗಳ ನಿರ್ಮಾಣ. ಒಂದು ಘಂಟೆ ಶಾಖೆಯಲ್ಲಿ ವಿವಿಧ ಸಂಸ್ಕಾರಗಳು ಇರುವುದು ದೇಶಹಿತ ಮತ್ತು ಸಮಾಜಹಿತ ಮನೋಭಾವವುಳ್ಳ ಚಾರಿತ್ರ್ಯವಂತ ವ್ಯಕ್ತಿಗಳ ನಿರ್ಮಾಣಕ್ಕಾಗಿ. […]

ಹೀಗಿದ್ದರು ಅವರು - 11

ಹೀಗಿದ್ದರು ಅವರು – 11

ಚಂದ್ರಶೇಖರ ಭಂಡಾರಿ - 0 Comment
Issue Date : 18.02.2014

ಸದಾನಂದ ಕಾಕಡೆ ನಲ್ವತ್ತರ ದಶಕದಲ್ಲಿ ಸತತವಾಗಿ ಐದು ವರ್ಷ (1943ರಿಂದ 1947) ಪ್ರತಿ ಬೇಸಗೆಯಲ್ಲಿ ಸಂಘ ಶಿಕ್ಷಾ ವರ್ಗ ನಡೆಯುತ್ತಿದ್ದುದು ಬೆಳಗಾವಿಯಲ್ಲಿ. ದಕ್ಷಿಣ ಭಾರತದ ಎಲ್ಲ ಪ್ರಾಂತಗಳ ಸಂಯುಕ್ತ ವರ್ಗವಾಗಿತ್ತದು. ಪ್ರತಿ ವರ್ಷದ ಈ ವರ್ಗದಲ್ಲಿ ಸರ್ವಸಾಮಾನ್ಯ ಎಲ್ಲರಿಗೂ ತುಂಬ ಕಾಣಿಸಿಕೊಳ್ಳುತ್ತಿದ್ದ ಓರ್ವ ಕಾರ್ಯಕರ್ತರೆಂದರೆ ‘ಸದಾ ಕಾಕಡೆ’. ಆಗ ಇನ್ನೂ ಇಪ್ಪತ್ತೈದರ ಸಮೀಪದ ತುಂಬು ತಾರುಣ್ಯ ಅವರದು. ನಿತ್ಯ ವ್ಯಾಯಾಮದಿಂದ ದಷ್ಟಪುಷ್ಟವಾದ ಶರೀರ. ಎತ್ತರದ ಆಕರ್ಷಕ ನಿಲುವು. ಆಗಲೇ ಅವರು ಬೆಳಗಾವಿ ನಗರ ಕಾರ್ಯವಾಹರು. ಹೀಗಾಗಿ ವರ್ಗದ […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-11

ಚಂದ್ರಶೇಖರ ಭಂಡಾರಿ - 0 Comment
Issue Date : 14.02.2014

ಸಿಂಹ ಸನ್ಯಾಸಿಗೆ ಒಂದು ಸ್ಮಾರಕ ಭಾರತದ ದಕ್ಷಿಣದ ತುದಿ ಕನ್ಯಾಕುಮಾರಿಯಲ್ಲಿ ಮೂರು ಸಾಗರಗಳು ಸಂಗಮವಾಗುವಲ್ಲಿ ಸಮುದ್ರಗರ್ಭದಿಂದ ಎದ್ದು ನಿಂತ ಶಿಲಾಖಂಡವೊಂದಿದೆ. ವಿವೇಕಾನಂದ ಶಿಲೆ ಎಂದೇ ಅದರ ಖ್ಯಾತಿ. ಸ್ವಾಮಿ ವಿವೇಕಾನಂದರು ಅಮೆರಿಕಕ್ಕೆ ಹೋಗುವ ಮುನ್ನ ಪರಿವ್ರಾಜಕರಾಗಿ ಕನ್ಯಾಕುಮಾರಿಗೆ ಬಂದಿದ್ದಾಗ, ತುಸು ಕಾಲ ಅದರ ಮೇಲೆ ಧ್ಯಾನಸ್ಥರಾಗಿದ್ದರೆಂಬುದು ಸಾಮಾನ್ಯವಾಗಿ ಎಲ್ಲರೂ ನಂಬಿರುವ ಪ್ರತೀತಿ. ಅದರ ಮೇಲೊಂದು ಸ್ವಾಮೀಜಿಯವರ ಭೀಮಗಾತ್ರದ ಪ್ರತಿಮೆ ನಿಲ್ಲಿಸಿ ಅವರಿಗೆ ಭವ್ಯಸ್ಮಾರಕವನ್ನು ನಿರ್ಮಿಸಬೇಕೆಂಬ ವಿಚಾರ ಮೂಡಿದುದು 1962 ರಲ್ಲಿ ಸ್ವಾಮಿಜಿಯವರ ಜನ್ಮಶತಮಾನೋತ್ಸವ ವರ್ಷ. ಕನ್ಯಾಕುಮಾರಿ ದೇಶದ […]

ಹೀಗಿದ್ದರು ಅವರು - 10

ಹೀಗಿದ್ದರು ಅವರು – 10

ಚಂದ್ರಶೇಖರ ಭಂಡಾರಿ - 0 Comment
Issue Date : 11.02.2014

ಸುಬ್ರಾಯ ಮಲ್ಯ ಒಂದೆರಡಲ್ಲ, ಬರೋಬ್ಬರಿ ನಲ್ವತ್ತಮೂರು ವರ್ಷಗಳ ಕಾಲ, 1953ರಿಂದ ಆರಂಭಿಸಿ 1996ರವರೆಗೆ, ಒಂದೇ ಪತ್ರಿಕೆಯ ಸಂಪಾದಕತ್ವ – ಇದು ‘ವಿಕ್ರಮ ಮಲ್ಯ’ರ ವಿಕ್ರಮ. ಅವರ ಪೂರ್ಣ ಹೆಸರು ಬೆಳ್ವಾಯಿ ಸುಬ್ರಾಯ ನಾರಾಯಣ ಮಲ್ಯ – ಸಂಕ್ಷಿಪ್ತವಾಗಿ ಬೆ.ಸು.ನಾ.ಮಲ್ಯ – ಎಂದಿದ್ದರೂ ಸಾಮಾನ್ಯವಾಗಿ ಎಲ್ಲರಿಗೂ ಅವರು ‘ವಿಕ್ರಮದ ಮಲ್ಯ’ ಆಗಿದ್ದವರು. ತೀರ ಸಮೀಪದವರಿಗಂತೂ ಅವರು ‘ಮಲ್ಯರು’ ಅಷ್ಟೆ.ಕರ್ನಾಟಕದ ಪತ್ರಿಕಾ ರಂಗದಲ್ಲಿ ಇಷ್ಟು ದೀರ್ಘ ಕಾಲದ ಅವರ ಈ ದಾಖಲೆ ಒಂದು ತಪಸ್ಸು ಎಂದರೂ ತಪ್ಪಾಗಲಾರದು. ಇಸವಿ 2003ರಲ್ಲಿ […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ – 10

ಚಂದ್ರಶೇಖರ ಭಂಡಾರಿ - 0 Comment
Issue Date : 07.02.2014

ವಿಸ್ತಾರ ಯೋಜನೆ1963ರ ಸಂಘಶಿಕ್ಷಾವರ್ಗದ ನಂತರ ಹೊಸ ವರ್ಷದಲ್ಲಿ ಶಾಖಾವಿಸ್ತಾರದ ವಿನೂತನ ಯೋಜನೆಯೊಂದನ್ನು ಕೈಗೊಳ್ಳಲಾಯಿತು. ಕರ್ನಾಟಕದಲ್ಲಿ ಸಂಘಕಾರ್ಯ ಆರಂಭವಾಗಿ ಎರಡು ದಶಕಗಳು ಕಳೆದಿದ್ದರೂ ಶಾಖೆಗಳ ಸಂಖ್ಯೆ ಇದ್ದುದ ಇನ್ನೂರರ ಸಮೀಪವೇ. ಆಗ ಪ್ರಾಂತದಲ್ಲಿ ಇದ್ದ ಪ್ರಚಾರಕರ ಸಂಖ್ಯೆಯೂ 40-50ರ ಒಳಗೆ. ಅವರೆಲ್ಲರ ಪ್ರಯತ್ನದಿಂದಾಗಿ ಪ್ರತಿ ವರ್ಷವೂ ನಡುವೆ ಕೆಲವು ತಿಂಗಳ ಕಾಲ ಶಾಖೆಗಳ ಸಂಖ್ಯೆ ಏರುತ್ತಿದ್ದರೂ ವರ್ಷಾಂತ್ಯದಲ್ಲಿ ಅದು ಪುನಃ ಇಳಿಯುತ್ತಲೂ ಇತ್ತು. ಹೀಗಾಗಿ ಆ ದಿನಗಳಲ್ಲಿ ಕಾರ್ಯದ ಲೋಲಕ ಓಲಾಡುತ್ತಿದ್ದುದು ಇನ್ನೂರರ ಆಜುಬಾಜುವಿನಲ್ಲಿ. ಈ ಸ್ಥಿತಿಯಲ್ಲಿ ಒಂದು […]